4 ರಣಜಿ ಪಂದ್ಯಗಳಲ್ಲಿ 535 ರನ್ ಸಿಡಿಸಿದ ಚೇತೇಶ್ವರ ಪೂಜಾರ; ಆದರೂ ಭಾರತ ಟೆಸ್ಟ್ ತಂಡದಿಂದ ಕಡೆಗಣನೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  4 ರಣಜಿ ಪಂದ್ಯಗಳಲ್ಲಿ 535 ರನ್ ಸಿಡಿಸಿದ ಚೇತೇಶ್ವರ ಪೂಜಾರ; ಆದರೂ ಭಾರತ ಟೆಸ್ಟ್ ತಂಡದಿಂದ ಕಡೆಗಣನೆ

4 ರಣಜಿ ಪಂದ್ಯಗಳಲ್ಲಿ 535 ರನ್ ಸಿಡಿಸಿದ ಚೇತೇಶ್ವರ ಪೂಜಾರ; ಆದರೂ ಭಾರತ ಟೆಸ್ಟ್ ತಂಡದಿಂದ ಕಡೆಗಣನೆ

  • Ranji Trophy: ಅತ್ತ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಿಂದ ಹೊರಬಿದ್ದ ರವೀಂದ್ರ ಜಡೇಜಾ ಮತ್ತು ಕೆಎಲ್ ರಾಹುಲ್ ಅವರಿಗೆ ಬದಲಿ ಆಟಗಾರರನ್ನು ಬಿಸಿಸಿಐ ಹೆಸರಿಸಿದೆ. ಈ ಬಾರಿಯೂ ಚೇತೇಶ್ವರ ಪೂಜಾರ ಅವರನ್ನು ಕಡೆಗಣಿಸಲಾಗಿದೆ. ಅತ್ತ ಪೂಜಾರ ಮಾತ್ರ ರಣಜಿ ಕ್ರಿಕೆಟ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ.

ಚೇತೇಶ್ವರ ಪೂಜಾರ ಅವರನ್ನು ಸದ್ಯ ರಾಷ್ಟ್ರೀಯ ತಂಡದಿಂದ ಕೈಬಿಡಲಾಗಿದೆ. ಆದರೆ, ರಣಜಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ಮುಂದುವರೆಸಿದ್ದಾರೆ. ಆ ಮೂಲಕ ಮತ್ತೆ ರಾಷ್ಟ್ರೀಯ ಆಯ್ಕೆದಾರರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ರಣಜಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಪೂಜಾರ ಮಾತ್ರ ಭಾರತ ಟೆಸ್ಟ್ ತಂಡಕ್ಕೆ ಮರಳಿಲ್ಲ.
icon

(1 / 5)

ಚೇತೇಶ್ವರ ಪೂಜಾರ ಅವರನ್ನು ಸದ್ಯ ರಾಷ್ಟ್ರೀಯ ತಂಡದಿಂದ ಕೈಬಿಡಲಾಗಿದೆ. ಆದರೆ, ರಣಜಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ಮುಂದುವರೆಸಿದ್ದಾರೆ. ಆ ಮೂಲಕ ಮತ್ತೆ ರಾಷ್ಟ್ರೀಯ ಆಯ್ಕೆದಾರರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ರಣಜಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಪೂಜಾರ ಮಾತ್ರ ಭಾರತ ಟೆಸ್ಟ್ ತಂಡಕ್ಕೆ ಮರಳಿಲ್ಲ.(BCCI)

ಇಂಗ್ಲೆಂಡ್ ವಿರುದ್ಧದ ಸರಣಿಯ ಮೊದಲ 2 ಟೆಸ್ಟ್‌ಗಳಿಗೆ ಪೂಜಾರ ಅವರನ್ನು ಆಯ್ಕೆ ಮಾಡಿರಲಿಲ್ಲ. ಆ ಬಳಿಕ ರವೀಂದ್ರ ಜಡೇಜಾ ಮತ್ತು ರಾಹುಲ್ ಎರಡನೇ ಟೆಸ್ಟ್‌ನಿಂದ ಹೊರಗುಳಿದ ಬಳಿಕ, ರಾಷ್ಟ್ರೀಯ ಆಯ್ಕೆದಾರರಿಗೆ ಚೇತೇಶ್ವರ್ ಅವರನ್ನು ಮತ್ತೆ ಟೆಸ್ಟ್ ತಂಡಕ್ಕೆ ಕರೆತರುವ ಅವಕಾಶವಿತ್ತು. ವಿರಾಟ್ ಕೊಹ್ಲಿ, ರಾಹುಲ್, ರವೀಂದ್ರ ಜಡೇಜಾ ಅವರಂತಹ ಅಗ್ರ ಮೂರು ಆಟಗಾರರ ಅನುಪಸ್ಥಿತಿಯಲ್ಲಿ, ಭಾರತದ ಟೆಸ್ಟ್ ತಂಡಕ್ಕೆ ಪೂಜಾರ ಅವರಂಥ ಅನುಭವಿ ಆಟಗಾರರ ಅಗತ್ಯವಿತ್ತು. ಅತ್ತ ಪೂಜಾರ ಕೂಡ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಆದರೆ ಆಯ್ಕೆದಾರರು ಸರ್ಫರಾಜ್ ಖಾನ್ ಅವರಂಥ ಯುವ ಆಟಗಾರರಿಗೆ ಮಣೆ ಹಾಕಿದೆ. ಕೊಹ್ಲಿ ಅಥವಾ ರಾಹುಲ್ ಬದಲಿಗೆ ಪೂಜಾರ ಅವರನ್ನು ತಂಡಕ್ಕೆ ಕರೆತರುವ ಅವಕಾಶವಿತ್ತು.
icon

(2 / 5)

ಇಂಗ್ಲೆಂಡ್ ವಿರುದ್ಧದ ಸರಣಿಯ ಮೊದಲ 2 ಟೆಸ್ಟ್‌ಗಳಿಗೆ ಪೂಜಾರ ಅವರನ್ನು ಆಯ್ಕೆ ಮಾಡಿರಲಿಲ್ಲ. ಆ ಬಳಿಕ ರವೀಂದ್ರ ಜಡೇಜಾ ಮತ್ತು ರಾಹುಲ್ ಎರಡನೇ ಟೆಸ್ಟ್‌ನಿಂದ ಹೊರಗುಳಿದ ಬಳಿಕ, ರಾಷ್ಟ್ರೀಯ ಆಯ್ಕೆದಾರರಿಗೆ ಚೇತೇಶ್ವರ್ ಅವರನ್ನು ಮತ್ತೆ ಟೆಸ್ಟ್ ತಂಡಕ್ಕೆ ಕರೆತರುವ ಅವಕಾಶವಿತ್ತು. ವಿರಾಟ್ ಕೊಹ್ಲಿ, ರಾಹುಲ್, ರವೀಂದ್ರ ಜಡೇಜಾ ಅವರಂತಹ ಅಗ್ರ ಮೂರು ಆಟಗಾರರ ಅನುಪಸ್ಥಿತಿಯಲ್ಲಿ, ಭಾರತದ ಟೆಸ್ಟ್ ತಂಡಕ್ಕೆ ಪೂಜಾರ ಅವರಂಥ ಅನುಭವಿ ಆಟಗಾರರ ಅಗತ್ಯವಿತ್ತು. ಅತ್ತ ಪೂಜಾರ ಕೂಡ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಆದರೆ ಆಯ್ಕೆದಾರರು ಸರ್ಫರಾಜ್ ಖಾನ್ ಅವರಂಥ ಯುವ ಆಟಗಾರರಿಗೆ ಮಣೆ ಹಾಕಿದೆ. ಕೊಹ್ಲಿ ಅಥವಾ ರಾಹುಲ್ ಬದಲಿಗೆ ಪೂಜಾರ ಅವರನ್ನು ತಂಡಕ್ಕೆ ಕರೆತರುವ ಅವಕಾಶವಿತ್ತು.(PTI)

ಸದ್ಯ, ಚೇತೇಶ್ವರ ಪೂಜಾರ ರಣಜಿಯಲ್ಲಿ ತೋರುತ್ತಿರುವ ಪ್ರದರ್ಶನ ನೋಡಿದರೆ, ಅವರು ರಾಷ್ಟ್ರೀಯ ತಂಡಕ್ಕೆ ಮರಳುವುದನ್ನು ಸಂಪೂರ್ಣವಾಗಿ ತಳ್ಳಿಹಾಕುವಂತಿಲ್ಲ. ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ ಫಲಿತಾಂಶವು ಭಾರತದ ಪರವಾಗಿ ಬರದಿದ್ದರೆ, ಸರಣಿಯ ಅಂತಿಮ 3 ಟೆಸ್ಟ್‌ಗಳಿಗೆ ತಂಡವನ್ನು ಪ್ರಕಟಿಸುವಾಗ ರಾಷ್ಟ್ರೀಯ ಆಯ್ಕೆಗಾರರು ಚೇತೇಶ್ವರ್ ಅವರನ್ನು ಪರಿಗಣಿಸಬಹುದು.
icon

(3 / 5)

ಸದ್ಯ, ಚೇತೇಶ್ವರ ಪೂಜಾರ ರಣಜಿಯಲ್ಲಿ ತೋರುತ್ತಿರುವ ಪ್ರದರ್ಶನ ನೋಡಿದರೆ, ಅವರು ರಾಷ್ಟ್ರೀಯ ತಂಡಕ್ಕೆ ಮರಳುವುದನ್ನು ಸಂಪೂರ್ಣವಾಗಿ ತಳ್ಳಿಹಾಕುವಂತಿಲ್ಲ. ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ ಫಲಿತಾಂಶವು ಭಾರತದ ಪರವಾಗಿ ಬರದಿದ್ದರೆ, ಸರಣಿಯ ಅಂತಿಮ 3 ಟೆಸ್ಟ್‌ಗಳಿಗೆ ತಂಡವನ್ನು ಪ್ರಕಟಿಸುವಾಗ ರಾಷ್ಟ್ರೀಯ ಆಯ್ಕೆಗಾರರು ಚೇತೇಶ್ವರ್ ಅವರನ್ನು ಪರಿಗಣಿಸಬಹುದು.(Action Images via Reuters)

ಪೂಜಾರ ಪ್ರಸಕ್ತ ರಣಜಿ ಟ್ರೋಫಿಯ 4 ಪಂದ್ಯಗಳ 6 ಇನ್ನಿಂಗ್ಸ್‌ಗಳಲ್ಲಿ 107ರ ಭರ್ಜರಿ ಸರಾಸರಿಯಲ್ಲಿ 535 ರನ್ ಕಲೆಹಾಕಿದ್ದಾರೆ. ಅದರಲ್ಲಿ 1 ದ್ವಿಶತಕ ಕೂಡಾ ಸೇರಿದೆ. 2 ಅರ್ಧಶತಕ ಗಳಿಸಿದ್ದಾರೆ. ರಾಹುಲ್ ಮತ್ತು ರವೀಂದ್ರ ಜಡೇಜಾ ಅವರ ಬದಲಿ ಕ್ರಿಕೆಟಿಗರ ಹೆಸರನ್ನು ಆಯ್ಕೆಗಾರರು ಘೋಷಿಸಿದ ದಿನವೂ ಪೂಜಾರ ಸರ್ವಿಸಸ್ ವಿರುದ್ಧ 91 ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡಿದರು.
icon

(4 / 5)

ಪೂಜಾರ ಪ್ರಸಕ್ತ ರಣಜಿ ಟ್ರೋಫಿಯ 4 ಪಂದ್ಯಗಳ 6 ಇನ್ನಿಂಗ್ಸ್‌ಗಳಲ್ಲಿ 107ರ ಭರ್ಜರಿ ಸರಾಸರಿಯಲ್ಲಿ 535 ರನ್ ಕಲೆಹಾಕಿದ್ದಾರೆ. ಅದರಲ್ಲಿ 1 ದ್ವಿಶತಕ ಕೂಡಾ ಸೇರಿದೆ. 2 ಅರ್ಧಶತಕ ಗಳಿಸಿದ್ದಾರೆ. ರಾಹುಲ್ ಮತ್ತು ರವೀಂದ್ರ ಜಡೇಜಾ ಅವರ ಬದಲಿ ಕ್ರಿಕೆಟಿಗರ ಹೆಸರನ್ನು ಆಯ್ಕೆಗಾರರು ಘೋಷಿಸಿದ ದಿನವೂ ಪೂಜಾರ ಸರ್ವಿಸಸ್ ವಿರುದ್ಧ 91 ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡಿದರು.(PTI)

ಜಾರ್ಖಂಡ್ ವಿರುದ್ಧದ ಮೊದಲ ರಣಜಿ ಪಂದ್ಯದಲ್ಲಿ ಚೇತೇಶ್ವರ ಪೂಜಾರ 243 ರನ್ ಗಳಿಸಿ ಅಜೇಯರಾಗಿ ಉಳಿದರು. ಹರಿಯಾಣ ವಿರುದ್ಧದ ಎರಡನೇ ಪಂದ್ಯದ ಎರಡು ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 49 ಮತ್ತು 43 ರನ್ ಗಳಿಸಿದರು. ಆ ಬಳಿಕ ವಿದರ್ಭ ವಿರುದ್ಧದ ಮೂರನೇ ಪಂದ್ಯದಲ್ಲಿ ಎರಡು ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 43 ಮತ್ತು 66 ರನ್ ಗಳಿಸಿದ್ದರು. ಸರ್ವಿಸಸ್ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ ಪೂಜಾರ 91 ರನ್ ಗಳಿಸಿ ಔಟಾದರು.
icon

(5 / 5)

ಜಾರ್ಖಂಡ್ ವಿರುದ್ಧದ ಮೊದಲ ರಣಜಿ ಪಂದ್ಯದಲ್ಲಿ ಚೇತೇಶ್ವರ ಪೂಜಾರ 243 ರನ್ ಗಳಿಸಿ ಅಜೇಯರಾಗಿ ಉಳಿದರು. ಹರಿಯಾಣ ವಿರುದ್ಧದ ಎರಡನೇ ಪಂದ್ಯದ ಎರಡು ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 49 ಮತ್ತು 43 ರನ್ ಗಳಿಸಿದರು. ಆ ಬಳಿಕ ವಿದರ್ಭ ವಿರುದ್ಧದ ಮೂರನೇ ಪಂದ್ಯದಲ್ಲಿ ಎರಡು ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 43 ಮತ್ತು 66 ರನ್ ಗಳಿಸಿದ್ದರು. ಸರ್ವಿಸಸ್ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ ಪೂಜಾರ 91 ರನ್ ಗಳಿಸಿ ಔಟಾದರು.(PTI)


ಇತರ ಗ್ಯಾಲರಿಗಳು