logo
ಕನ್ನಡ ಸುದ್ದಿ  /  ಕ್ರಿಕೆಟ್  /  ವಿಡಿಯೋ ಕಾಲ್ ಮೂಲಕ ಸ್ಮೃತಿ ಮಂಧಾನ ಮತ್ತು ತಂಡಕ್ಕೆ ಅಭಿನಂದನೆ ಸಲ್ಲಿಸಿದ ವಿರಾಟ್ ಕೊಹ್ಲಿ; ಸೂಪರ್​ವುಮೆನ್ ಎಂದ ಕಿಂಗ್

ವಿಡಿಯೋ ಕಾಲ್ ಮೂಲಕ ಸ್ಮೃತಿ ಮಂಧಾನ ಮತ್ತು ತಂಡಕ್ಕೆ ಅಭಿನಂದನೆ ಸಲ್ಲಿಸಿದ ವಿರಾಟ್ ಕೊಹ್ಲಿ; ಸೂಪರ್​ವುಮೆನ್ ಎಂದ ಕಿಂಗ್

Prasanna Kumar P N HT Kannada

Mar 18, 2024 06:10 AM IST

ವಿಡಿಯೋ ಕಾಲ್ ಮೂಲಕ ಸ್ಮೃತಿ ಮಂಧಾನ ಮತ್ತು ತಂಡಕ್ಕೆ ಅಭಿನಂದನೆ ಸಲ್ಲಿಸಿದ ವಿರಾಟ್ ಕೊಹ್ಲಿ

    • Virat Kohli: ರಾಯಲ್ ಚಾಲೆಂಜರ್ಸ್ ಬೆಂಗಳೂರು ಟ್ರೋಫಿ ಗೆದ್ದ ನಂತರ ವಿಡಿಯೋ ಕಾಲ್​ ಮೂಲಕ ವಿರಾಟ್ ಕೊಹ್ಲಿ ಅವರು ಸ್ಮೃತಿ ಮಂಧಾನ ಮತ್ತು ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ವಿಡಿಯೋ ಕಾಲ್ ಮೂಲಕ ಸ್ಮೃತಿ ಮಂಧಾನ ಮತ್ತು ತಂಡಕ್ಕೆ ಅಭಿನಂದನೆ ಸಲ್ಲಿಸಿದ ವಿರಾಟ್ ಕೊಹ್ಲಿ
ವಿಡಿಯೋ ಕಾಲ್ ಮೂಲಕ ಸ್ಮೃತಿ ಮಂಧಾನ ಮತ್ತು ತಂಡಕ್ಕೆ ಅಭಿನಂದನೆ ಸಲ್ಲಿಸಿದ ವಿರಾಟ್ ಕೊಹ್ಲಿ

ವುಮೆನ್ಸ್ ಪ್ರೀಮಿಯರ್​ ಲೀಗ್ (WPL 2024 Final)​ ಫೈನಲ್​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ ರೋಚಕ ಗೆಲುವು ದಾಖಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ರಣರೋಚಕ ಪಂದ್ಯದಲ್ಲಿ 8 ವಿಕೆಟ್​ಗಳಿಂದ ಗೆದ್ದ ಆರ್​ಸಿಬಿ ಮಹಿಳಾ ತಂಡಕ್ಕೆ ಬ್ಯಾಟಿಂಗ್ ಸೂಪರ್ ಸ್ಟಾರ್​ ವಿರಾಟ್​ ಕೊಹ್ಲಿ (Virat Kohli) ಅಭಿನಂದನೆ ಸಲ್ಲಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಫಾಫ್ ಡು ಪ್ಲೆಸಿಸ್ ವಿವಾದಾತ್ಮಕ ರನೌಟ್, ವಿರಾಟ್ ಕೊಹ್ಲಿ ಅಚ್ಚರಿ; ಅಂಪೈರ್ಸ್ ವಿರುದ್ಧ ನೆಟ್ಟಿಗರ ಆಕ್ರೋಶ

IPL 2024: ನಿರ್ಣಾಯಕ ಪಂದ್ಯದಲ್ಲಿ ಕೊಹ್ಲಿ, ಫಾಫ್, ಪಾಟಿದಾರ್, ಗ್ರೀನ್ ಅಬ್ಬರ; ಸಿಎಸ್‌ಕೆಗೆ 219 ರನ್‌ಗಳ ಬೃಹತ್ ಗುರಿ ನೀಡಿದ ಆರ್‌ಸಿಬಿ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೂಪರ್‌ ಸಾಪರ್ಸ್‌ಗೆ ಕೆಲಸವಿಲ್ಲ; ಮಳೆ ಬಂದಾಗ ಪಿಚ್‌ಗೆ ಮಾತ್ರ ಟಾರ್ಪಲ್ ಹೊದಿಸುವ ಹಿಂದಿನ ಕಾರಣವಿದು

ನೋಡದೆಯೇ 98 ಮೀಟರ್​ ದೂರ ಸಿಕ್ಸರ್​ ಬಾರಿಸಿದ ವಿರಾಟ್ ಕೊಹ್ಲಿ; ಕಣ್ ಕಣ್ ಬಿಟ್ಟು ನೋಡಿದ ಎಂಎಸ್ ಧೋನಿ, VIDEO

ಫೈನಲ್​​ನಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್, ಆರ್​​ಸಿಬಿ ಸ್ಪಿನ್ನರ್​​ಗಳಾದ ಶ್ರೇಯಾಂಕಾ ಪಾಟೀಲ್ (12/4), ಸೋಫಿ ಮೊಲಿನೆಕ್ಸ್ (20/3), ಆಶಾ ಶೋಭನಾ (14/2) ಅವರ ದಾಳಿಗೆ ತತ್ತರಿಸಿತು. ಉತ್ತಮ ಆರಂಭದ ನಡುವೆಯೂ 18.3 ಓವರ್​​ಗಳಲ್ಲಿ 113 ರನ್​ಗಳಿಗೆ ಕುಸಿತ ಕಂಡಿತು. 44 ರನ್ ಗಳಿಸಿದ ಶಫಾಲಿ ವರ್ಮಾ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ಉಳಿದವರಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ.

114 ರನ್​ಗಳ ಅಲ್ಪಮೊತ್ತವನ್ನು ಬೆನ್ನಟ್ಟಿದ ಆರ್​​ಸಿಬಿ, ಒತ್ತಡಕ್ಕೆ ಒಳಗಾಗದೆ ನಿಧಾನವಾಗಿ ರನ್ ಕಲೆ ಹಾಕಿತು. 2ನೇ ಬ್ಯಾಟಿಂಗ್ ನಡೆಸಲು ಕಷ್ಟವಾದ ಪಿಚ್​​ನಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್​ ನಡೆಸಿತು. ಸ್ಮೃತಿ ಮಂಧಾನ 31 ಮತ್ತು ಎಲ್ಲಿಸ್ ಪೆರ್ರಿ ಅಜೇಯ 35 ರನ್​ ಗಳಿಸಿ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಆ ಮೂಲಕ ಈವರೆಗೂ ಪುರುಷರ ಕೈಯಲ್ಲಿ ಆಗದಿರುವುದು ಹೆಣ್ಮಕ್ಕಳು ಸಾಧಿಸಿ ತೋರಿಸಿದರು.

ವಿಡಿಯೋ ಕಾಲ್​ನಲ್ಲಿ ಸ್ಮೃತಿ ಜೊತೆ ಮಾತು

ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಚಾಂಪಿಯನ್ ತಂಡದ ಫೋಟೋ ಪೋಸ್ಟ್ ಮಾಡಿರುವ ವಿರಾಟ್ ಕೊಹ್ಲಿ ಸೂಪರ್​ವುಮೆನ್ ಎಂದು ಬರೆದಿದ್ದಾರೆ. ಅಲ್ಲದೆ, ಗೆಲುವು ಸಾಧಿಸಿದ ಬೆನ್ನಲ್ಲೇ ನಾಯಕಿ ಸ್ಮೃತಿ ಮಂಧಾನಗೆ ಆರ್​ಸಿಬಿ ಪುರುಷರ ತಂಡದ ಬ್ಯಾಟಿಂಗ್ ಸ್ಟಾರ್​ ವಿರಾಟ್ ಕೊಹ್ಲಿ ಅವರು ವಿಡಿಯೋ ಕಾಲ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಇದರ ಫೋಟೋವನ್ನು ಆರ್​ಸಿಬಿ ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದೆ.

ಇತಿಹಾಸ ಪುಟಕ್ಕೆ ಸೇರಲಿದೆ ಮಾರ್ಚ್​ 17

ಚೊಚ್ಚಲ ಟ್ರೋಫಿಯನ್ನು ಗೆಲ್ಲುವ ಮೂಲಕ 16 ವರ್ಷಗಳ ಕಾಯುವಿಕೆ ಕೊನೆಗೂ ಅಂತ್ಯಗೊಂಡಿದೆ. ಕಪ್ ಯಾವಾಗ, ಕಪ್ ಯಾವಾಗ ಎಂದು ಕೇಳುತ್ತಿದ್ದವರ ಪ್ರಶ್ನೆಗೆ ಅಭಿಮಾನಿಗಳು ತಲೆ ಎತ್ತಿ ಉತ್ತರಿಸುವ ದಿನ ಬಂದೇ ಬಿಟ್ಟಿದೆ. 2008ರಲ್ಲಿ ಆರ್​ಸಿಬಿ ಫ್ರಾಂಚೈಸಿ ಹುಟ್ಟಿದಾಗಿನಿಂದಲೂ ಗೆದ್ದ ಮೊಟ್ಟ ಮೊದಲ ಟ್ರೋಫಿ ಇದಾಗಿದೆ. ಹಾಗಾಗಿ ಫ್ರಾಂಚೈಸಿ ಮತ್ತು ಅಭಿಮಾನಿಗಳ ಪಾಲಿಗೆ ಮಾರ್ಚ್ 17 ಐತಿಹಾಸಿಕ ದಿನವಾಗಿದೆ.

ಪುರುಷರ ತಂಡ 3 ಬಾರಿ ಫೈನಲ್​ಗೆ, ಆದರೆ ಕಪ್ ಗೆದ್ದಿಲ್ಲ

ಆರ್​​ಸಿಬಿ ಪುರುಷರ ತಂಡವು ಐಪಿಎಲ್​​ನಲ್ಲಿ 16 ವರ್ಷಗಳಿಂದ ಕಪ್ ಗೆದ್ದಿಲ್ಲ. 16 ಆವೃತ್ತಿಗಳಲ್ಲಿ 3 ಬಾರಿ ಫೈನಲ್​ಗೇರಿದರೂ ಕೋಟ್ಯಂತರ ಅಭಿಮಾನಿಗಳ ಕನಸು ಈಡೇರಿಸಲು ಸಾಧ್ಯವಾಗಿರಲಿಲ್ಲ. 2009, 2011 ಮತ್ತು 2016ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೈನಲ್​ಗೇರಿತ್ತು. ಆದರೆ ರನ್ನರ್​ಅಪ್​ಗೆ ತೃಪ್ತಿಯಾಗಿತ್ತು. ಆದರೆ ಆರ್​ಸಿಬಿ ಮಹಿಳೆಯರ ತಂಡ 2ನೇ ಆವೃತ್ತಿಯಲ್ಲೇ ಕಿರೀಟಕ್ಕೆ ಮುತ್ತಿಕ್ಕಿದೆ.

ಮಾರ್ಚ್​ 22ರಿಂದ ಐಪಿಎಲ್ ಆರಂಭ

ಡಬ್ಲ್ಯುಪಿಎಲ್​ ಮುಕ್ತಾಯಗೊಂಡಿದೆ. ಈಗ ಐಪಿಎಲ್​ ಆರಂಭಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಮಾರ್ಚ್​ 22ರಿಂದ ಐಪಿಎಲ್ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ತಂಡಗಳು ಸೆಣಸಾಟ ನಡೆಸಲಿವೆ. ಚೆನ್ನೈ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಆರಂಭಿಕ ಪಂದ್ಯ ನಡೆಯಲಿದೆ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ