ವಿರಾಟ್ ಕೊಹ್ಲಿ ಸೂಪರ್ಮ್ಯಾನ್ ರನೌಟ್ಗೆ ಡಗೌಟ್ ಸೇರಿದ ಶಾರುಖ್ ಖಾನ್; ವಾರೆವ್ಹಾ ಎನ್ನುವ ಎವರ್‘ಗ್ರೀನ್’ ರಿಯಾಕ್ಷನ್ ವೈರಲ್
May 05, 2024 12:20 AM IST
ವಿರಾಟ್ ಕೊಹ್ಲಿ ಸೂಪರ್ಮ್ಯಾನ್ ರನೌಟ್ಗೆ ಡಗೌಟ್ ಸೇರಿದ ಶಾರುಖ್ ಖಾನ್; ವಾರೆವ್ಹಾ ಎನ್ನುವ ಗ್ರೀನ್ ರಿಯಾಕ್ಷನ್ ವೈರಲ್
- Virat Kohli : ಗುಜರಾತ್ ಟೈಟಾನ್ಸ್ ತಂಡದ ಬ್ಯಾಟರ್ ಶಾರುಖ್ ಖಾನ್ ಅವರನ್ನು ಸೂಪರ್ಮ್ಯಾನ್ ಶೈಲಿಯಲ್ಲಿ ಆರ್‌ಸಿಬಿ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ರನೌಟ್ ಮಾಡಿದ್ದಾರೆ. ಕ್ಯಾಮರೂನ್ ಗ್ರೀನ್ ಸಖತ್ ರಿಯಾಕ್ಷನ್ ಕೊಟ್ಟಿದ್ದು ವೈರಲ್ ಆಗಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ (ಮೇ 4) ನಡೆದ ಐಪಿಎಲ್ನ 52ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಆರ್‌ಸಿಬಿ (RCB vs GT) ಭರ್ಜರಿ 4 ರನ್ಗಳಿಂದ ಗೆದ್ದು ಬೀಗಿತು. ಅದ್ಭುತ ಬೌಲಿಂಗ್ ಪ್ರದರ್ಶಿಸಿದ ಆರ್‌ಸಿಬಿ, ಶುಭ್ಮನ್ ಗಿಲ್ ನೇತೃತ್ವದ ತಂಡವನ್ನು 147 ರನ್ಗಳಿಗೆ ಕಟ್ಟಿ ಹಾಕಿತು. ಆದರೆ ಗಮನ ಸೆಳೆದಿದ್ದು ಮಾತ್ರ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಅವರ ಸೂಪರ್ಮ್ಯಾನ್ ಶೈಲಿಯ ರನೌಟ್. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾಗುತ್ತಿದ್ದ ಜಿಟಿ ತಂಡದ ಶಾರುಖ್ ಖಾನ್ ಅವರನ್ನು ವಿರಾಟ್ ಕೊಹ್ಲಿ ಮಿಂಚಿನ ರನೌಟ್ ಮಾಡಿದ್ದು ಅದ್ಭುತವಾಗಿತ್ತು. ಟಾಸ್ ಸೋತು ಗುಜರಾತ್ ಮೊದಲು ಬ್ಯಾಟಿಂಗ್ ನಡೆಸಿತು. ಪವರ್ಪ್ಲೇನಲ್ಲಿ 3 ವಿಕೆಟ್ ನಷ್ಟಕ್ಕೆ 23 ರನ್ ಗಳಿಸಿದ್ದ ಗುಜರಾತ್ಗೆ, ಡೇವಿಡ್ ಮಿಲ್ಲರ್ ಮತ್ತು ಶಾರುಖ್ ಖಾನ್ 4ನೇ ವಿಕೆಟ್‌ಗೆ 61 ರನ್ ಸೇರಿಸಿ ಅಲ್ಪಮೊತ್ತಕ್ಕೆ ಕುಸಿಯುವುದರಿಂದ ಪಾರು ಮಾಡಿದರು. ಇಬ್ಬರು ಸಹ 30 ಪ್ಲಸ್ ಸ್ಕೋರ್ ಮಾಡಿ ಆರ್‌ಸಿಬಿ ಬೌಲರ್ಗಳ ಮೇಲೆ ಹಿಡಿತ ಸಾಧಿಸುತ್ತಿದ್ದರು.
ಆದರೆ ಕರಣ್ ಶರ್ಮಾ 12ನೇ ಓವರ್‌ನಲ್ಲಿ ಮಿಲ್ಲರ್ ವಿಕೆಟ್ ಉರುಳಿಸಿ ಆರ್ಸಿಬಿಗೆ ಮೇಲುಗೈ ತಂದುಕೊಟ್ಟರು. ಮರು ಓವರ್ನಲ್ಲೇ ಶಾರೂಖ್ ಖಾನ್ ಅಚ್ಚರಿಯ ರನೌಟ್ಗೆ ಬಲಿಯಾದರು. ವಿಜಯ್ ಕುಮಾರ್ ವೈಶಾಕ್ ಎಸೆದ 13ನೇ ಓವರ್‌ನ 4ನೇ ಎಸೆತವನ್ನು ಸ್ಟ್ರೈಕ್ನಲ್ಲಿದ್ದ ರಾಹುಲ್ ತೆವಾಟಿಯಾ, ಡಿಫೆಂಡ್ ಮಾಡುವಲ್ಲಿ ಯಶಸ್ವಿಯಾದರು. ಆಗ ನಾನ್ಸ್ಟ್ರೈಕ್ನಲ್ಲಿ ಶಾರುಖ್, ರನ್ಗಾಗಿ ಕ್ರೀಸ್ನ ಅರ್ಧಭಾಗಕ್ಕೆ ಓಡಿದರು. ಆಗ ಶರ ವೇಗದಲ್ಲಿ ನುಗ್ಗಿದ ಕೊಹ್ಲಿ, ಸೆಕೆಂಡ್ಗಳಲ್ಲಿ ನಾನ್ಸ್ಟ್ರೈಕರ್ ವಿಕೆಟ್ ಬೇಲ್ಸ್ ಎಗಿರಿದ್ದರು.
ಸೂಪರ್ಮ್ಯಾನ್ ಶೈಲಿಯಲ್ಲಿ ಮಿಂಚಿನ ರನೌಟ್ ಮಾಡಿದ ವಿರಾಟ್, ತಮ್ಮ ಪ್ರಸಿದ್ಧ ಫೀಲ್ಡಿಂಗ್ ಕೌಶಲ್ಯವನ್ನು ಜಗತ್ತಿಗೆ ತೋರಿಸಿದರು. ವಿರಾಟ್ ಕೊಹ್ಲಿ ಎಸೆದ ಚೆಂಡು ವಿಕೆಟ್ ಬೇಲ್ಸ್ ಎಗರಿಸುತ್ತಿದ್ದಂತೆ ಕ್ಯಾಮರೂನ್ ಗ್ರೀನ್ ಒಂದು ಕ್ಷಣ ದಂಗಾಗಿ ವಾರೆವ್ಹಾ ಎನ್ನುವ ರಿಯಾಕ್ಷನ್ ಕೊಟ್ಟರು. 24 ಎಸೆತಗಳಲ್ಲಿ 37 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದ ಶಾರುಖ್, ಜಿಟಿ ಪರ ಗರಿಷ್ಠ ಸ್ಕೋರರ್ ಆದರು. ಟೈಟಾನ್ಸ್ 19.3 ಓವರ್‌ಗಳಲ್ಲಿ 147ಕ್ಕೆ ಆಲೌಟ್ ಆಯಿತು. ಈ ರನೌಟ್ ವಿಡಿಯೋ ಟಾಪ್ ಟ್ರೆಂಡ್ನಲ್ಲಿದೆ.
ವಿರಾಟ್ ಕೊಹ್ಲಿ ಬ್ಯಾಟಿಂಗ್ನಲ್ಲೂ ಅಬ್ಬರ
148 ರನ್ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ವಿರಾಟ್ ಕೊಹ್ಲಿ, ಮೊದಲ ಓವರ್ನಲ್ಲೇ ಭರ್ಜರಿ 2 ಸಿಕ್ಸರ್ ಬಾರಿಸಿ ಸ್ಪೋಟಕ ಆರಂಭ ಒದಗಿಸಿದರು. ಕೊಹ್ಲಿ, ಫಾಫ್ ಡು ಪ್ಲೆಸಿಸ್ ಬೌಂಡರಿ-ಸಿಕ್ಸರ್ಗಳ ಸುರಿಮಳೆಗೈದರು. ಫಾಫ್ ಬೆಂಡೆತ್ತಲು ಶುರುವಿಟ್ಟ ಕಾರಣ ಕೊಹ್ಲಿ ರನ್ ವೇಗವನ್ನು ನಿಧಾನಗೊಳಿಸಿದರು. ಬಳಿಕ 5ನೇ ಓವರ್‌ನಲ್ಲಿ ಮತ್ತೆ ಚಾರ್ಜ್ ಮಾಡಿದ ವಿರಾಟ್, ಆಗಲೂ 2 ಸಿಕ್ಸರ್ ಚಚ್ಚಿದರು. 27 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ ಸಹಿತ 42 ರನ್ ಬಾರಿಸಿದರು. ಆದರೆ ನೂರ್ ಅಹ್ಮದ್ ಬೌಲಿಂಗ್ನಲ್ಲಿ ಕೀಪರ್ಗೆ ಕ್ಯಾಚ್ ಔಟಾದರು. ಫಾಫ್ 23 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್ ಸಹಿತ 64 ರನ್ ಚಚ್ಚಿದರು.
ಆರ್ಸಿಬಿಗೆ ಹ್ಯಾಟ್ರಿಕ್ ಗೆಲುವು
ಸತತ ಸೋಲುಗಳಿಂದ ಕಂಗೆಟ್ಟಿದ್ದ ಆರ್‌ಸಿಬಿ ಇದೀಗ ಹ್ಯಾಟ್ರಿಕ್ ಜಯ ಸಾಧಿಸಿದೆ. ಗೆದ್ದಿರುವ ಕಳೆದ 3 ಪಂದ್ಯಗಳ ಪೈಕಿ ಗುಜರಾತ್ ವಿರುದ್ಧವೇ ಎರಡು ಸಲ ಜಯಿಸಿದೆ. ಸನ್ರೈಸರ್ಸ್ ಹೈದರಾಬಾದ್ ವಿರುದ್ಧವೂ ಅಮೋಘ ಗೆಲುವು ಸಾಧಿಸಿತ್ತು. ಗುಜರಾತ್ 20 ಓವರ್‌ಗಳಲ್ಲಿ 147 ರನ್ಗಳಿಗೆ ಆಲೌಟ್ ಆಗಿತ್ತು. ಈ ಗುರಿ ಬೆನ್ನಟ್ಟಿದ ಆರ್‌ಸಿಬಿ, 13.4 ಓವರ್ಗಳಲ್ಲೇ 148 ರನ್ ಗಳಿಸಿ ಎದುರಾಳಿ ತಂಡ ಮಣಿಸಿತು. ಇದರೊಂದಿಗೆ ಆರ್‌ಸಿಬಿ ಪ್ಲೇಆಫ್ ಪ್ರವೇಶಿಸುವ ಕನಸು ಇನ್ನೂ ಜೀವಂತವಾಗಿದೆ. ಅಂಕಪಟ್ಟಿಯಲ್ಲಿ 10ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಜಿಗಿದಿದೆ. ಒಟ್ಟು 11 ಪಂದ್ಯಗಳಲ್ಲಿ 7 ಸೋಲು, 4 ಗೆಲುವು ಸಾಧಿಸಿದೆ. 8 ಅಂಕ ಸಂಪಾದಿಸಿದೆ.
IPL, 2024
RCB
0/0
0.0 Overs
CSK
YTB
VIEW FULL SCORECARD