logo
ಕನ್ನಡ ಸುದ್ದಿ  /  ಕ್ರಿಕೆಟ್  /  Explainer: ಟಿ20 ವಿಶ್ವಕಪ್‌ನಿಂದ ಹೊಸ ನಿಯಮ; ಪ್ರತಿ ಪಂದ್ಯಕ್ಕೂ ಸ್ಟಾಪ್ ಕ್ಲಾಕ್ ಕಡ್ಡಾಯ, ಏನಿದು ಸ್ಟಾಪ್ ಕ್ಲಾಕ್ ರೂಲ್?

Explainer: ಟಿ20 ವಿಶ್ವಕಪ್‌ನಿಂದ ಹೊಸ ನಿಯಮ; ಪ್ರತಿ ಪಂದ್ಯಕ್ಕೂ ಸ್ಟಾಪ್ ಕ್ಲಾಕ್ ಕಡ್ಡಾಯ, ಏನಿದು ಸ್ಟಾಪ್ ಕ್ಲಾಕ್ ರೂಲ್?

Jayaraj HT Kannada

Mar 15, 2024 06:50 PM IST

ಟಿ20 ವಿಶ್ವಕಪ್‌ನಿಂದ ಹೊಸ ನಿಯಮ; ಪ್ರತಿ ಪಂದ್ಯಕ್ಕೂ ಸ್ಟಾಪ್ ಕ್ಲಾಕ್ ಕಡ್ಡಾಯ

    • What is Stop Clock Rule: ಜೂನ್‌ ತೀಂಗಳಿಂದ ಎಲ್ಲಾ ಏಕದಿನ ಮತ್ತು ಟಿ 20 ಪಂದ್ಯಗಳಲ್ಲಿ ಸ್ಟಾಪ್ ಕ್ಲಾಕ್‌ ನಿಯಮವನ್ನು ಜಾರಿಗಳಿಸಲಾಗುತ್ತಿದೆ. ಟಿ20 ವಿಶ್ವಕಪ್ 2024 ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಕ್ರಿಕೆಟ್‌ನಲ್ಲಿ ಈ ನಿಯಮವನ್ನು ಕಾಣಬಹುದು.
ಟಿ20 ವಿಶ್ವಕಪ್‌ನಿಂದ ಹೊಸ ನಿಯಮ; ಪ್ರತಿ ಪಂದ್ಯಕ್ಕೂ ಸ್ಟಾಪ್ ಕ್ಲಾಕ್ ಕಡ್ಡಾಯ
ಟಿ20 ವಿಶ್ವಕಪ್‌ನಿಂದ ಹೊಸ ನಿಯಮ; ಪ್ರತಿ ಪಂದ್ಯಕ್ಕೂ ಸ್ಟಾಪ್ ಕ್ಲಾಕ್ ಕಡ್ಡಾಯ

ಐಸಿಸಿಯು ಕ್ರಿಕೆಟ್‌ನಲ್ಲಿ ಹೊಸ ನಿಯಮಗಳನ್ನು ಪರಿಚಯಿಸಿದೆ. ಈ ಹೊಸ ನಿಯಮಗಳು ಮುಂಬರುವ ಟಿ20 ವಿಶ್ವಕಪ್‌ ಪಂದ್ಯಾವಳಿಯಿಂದಲೇ ಜಾರಿಗೆ ಬರಲಿವೆ. 2024ರ ಜೂನ್ 1ರಿಂದ ಜಾರಿಗೆ ಬರುವಂತೆ ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ 60 ಸೆಕೆಂಡುಗಳ ಸ್ಟಾಪ್ ಕ್ಲಾಕ್‌ (stopclock) ನಿಯಮವು ಕಾಯಂ ಆಗಲಿದೆ ಎಂದು ಐಸಿಸಿ ತಿಳಿಸಿದೆ. ಈ ಬಾರಿಯ ಜೂನ್‌ ತಿಂಗಳಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಪಂದ್ಯಾವಳಿಯಿಂದಲೇ ಈ ನಿಯಮ ಜಾರಿಗೆ ಬರಲಿದ್ದು, ದುಬೈನಲ್ಲಿ ನಡೆದ ಐಸಿಸಿ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಆರ್‌ಸಿಬಿ vs ಸಿಎಸ್‌ಕೆ ಪಂದ್ಯದ ಟಿಕೆಟ್‌ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್;‌ 1500 ರೂ ಟಿಕೆಟ್‌ ಬೆಲೆ ಐದಂಕಿಗೆ ಏರಿಕೆ!

ರಾಹುಲ್ ದ್ರಾವಿಡ್ ಸ್ಥಾನಕ್ಕೆ ಕೆಕೆಆರ್ ಮೆಂಟರ್‌ಗೆ ಗಾಳ ಹಾಕಲು ಮುಂದಾದ ಬಿಸಿಸಿಐ; ಆಫರ್‌ ಒಪ್ತಾರಾ 2011ರ ವಿಶ್ವಕಪ್ ವಿಜೇತ?

ಆರ್​ಸಿಬಿ vs ಸಿಎಸ್​ಕೆ ಪಂದ್ಯ; ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಸಂಚಾರ ಬದಲಾವಣೆ, ಇಲ್ಲಿ ಪಾರ್ಕಿಂಗ್ ಮಾಡಂಗಿಲ್ಲ

Bengaluru Weather: ಐಪಿಎಲ್‌ ಕ್ರಿಕೆಟ್‌ನ ಆರ್‌ಸಿಬಿ vs ಸಿಎಸ್‌ಕೆ ಪಂದ್ಯ ಇಂದು, ಬೆಂಗಳೂರನ್ನಾವರಿಸಿದೆ ಮಳೆ ಮೋಡ, ಇವತ್ತಿನ ಮಳೆ ಕಥೆ ಏನು

ಪಂದ್ಯಗಳಲ್ಲಿ ಸಮಯ ವ್ಯರ್ಥವಾಗುವುದನ್ನು ತಡೆಯಲು ಸ್ಟಾಪ್ ಕ್ಲಾಕ್ ಪ್ರಯೋಗದ ಕುರಿತಾಗಿ ಮುಖ್ಯ ಕಾರ್ಯನಿರ್ವಾಹಕರ ಸಮಿತಿಗೆ (ಸಿಇಸಿ) ನಿಯಮದ ಕುರಿತಾಗಿ ಪ್ರಸ್ತುತಪಡಿಸಲಾಯಿತು. ಈ ನಿಯಮ ಜಾರಿಗೆ ತಂದರೆ, ಪ್ರತಿ ಏಕದಿನ ಪಂದ್ಯದಲ್ಲಿ ಸುಮಾರು 20 ನಿಮಿಷ ಉಳಿಯುತ್ತದೆ ಎಂಬುದಾಗಿ ತಿಳಿದು ಬಂತು. ಹೀಗಾಗಿ ಪ್ರತಿ ಪಂದ್ಯಗಳು ಸುಗಮವಾಗಿ ಸಮಯಕ್ಕೆ ಸರಿಯಾಗಿ ಮುಗಿಯಬೇಕು ಎಂಬ ಅಂಶವನ್ನು ಗಮನದಲ್ಲಿ ಇಟ್ಟುಕೊಂಡು ಈ ನಿಯವನ್ನು ಜಾರಿಗೆ ತರುವ ನಿರ್ಧಾರಕ್ಕೆ ಬರಲಾಗಿದೆ.

ಐಸಿಸಿ ಪುರುಷರ ಟಿ20 ವಿಶ್ವಕಪ್ 2024 ಸೇರಿದಂತೆ 2024ರ ಜೂನ್ 1ರಿಂದಲೇ ಸ್ಟಾಪ್ ಕ್ಲಾಕ್‌ ನಿಯಮ ಕಡ್ಡಾಯವಾಗಿಸಲು ಸಿಇಸಿ ಅನುಮೋದನೆ ನೀಡಿದೆ. ಪೂರ್ಣ ಸದಸ್ಯ ರಾಷ್ಟ್ರಗಳ ನಡುವೆ ನಡೆಯುವ ಪುರುಷರ ಎಲ್ಲಾ ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಸ್ಟಾಪ್‌ ಕ್ಲಾಕ್‌ ಕಾರ್ಯನಿರ್ವಹಿಸಲಿದೆ.

ಏನಿದು ಸ್ಟಾಪ್ ಕ್ಲಾಕ್ ನಿಯಮ?

ಇದು ಹೊಸ ಪದವೇನಲ್ಲ. ಸಮಯದ ಬಳಕೆಯನ್ನು ಲೆಕ್ಕಹಾಕುವ ವಿಧಾನವೇ ಸ್ಟಾಪ್‌ ಕ್ಲಾಕ್. ಇದೀಗ ಪುರುಷರ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಪರಿಚಯಸಲಾದ ಸ್ಟಾಪ್ ಕ್ಲಾಕ್ ನಿಯಮದ ಪ್ರಕಾರ, ಫೀಲ್ಡಿಂಗ್ ಮಾಡುತ್ತಿರುವ ತಂಡವು ಒಂದು ಓವರ್ ಪೂರ್ಣಗೊಳಿಸಿದ ತಕ್ಷಣವೇ ಈ ಸ್ಟಾಪ್‌ ಕ್ಲಾಕ್‌ ಆನ್‌ ಆಗುತ್ತದೆ. 60 ಸೆಕೆಂಡುಗಳ ಒಳಗೆ ಮುಂದಿನ ಓವರ್ ಪ್ರಾರಂಭಿಸಬೇಕು ಎನ್ನುವ ಸಲುವಾಗಿ ಇದನ್ನು ಜಾರಿಗೆ ತರಲಾಗುತ್ತಿದೆ. ಮೈದಾನದ ದೊಡ್ಡ ಪರದೆಯಲ್ಲಿ 60ರಿಂದ 0ಯವರೆಗೆ ಸೆಕೆಂಡ್‌ಗಳನ್ನು ಎಣಿಸುವ ಎಲೆಕ್ಟ್ರಾನಿಕ್ ಗಡಿಯಾರವನ್ನು ಪ್ರದರ್ಶಿಸಲಾಗುತ್ತದೆ. ಅದು 60ರಿಂದ 0ಗೆ ಬರುವ ಒಳಗೆ ಮುಂದಿನ ಓವರ್‌ ಆರಂಭವಾಗಬೇಕು. ಪ್ರತಿ ಓವರ್‌ ಮುಗಿದ ತಕ್ಷಣ ಈ ಸ್ಟಾಪ್‌ ಕ್ಲಾಕ್ ಆರಂಭಿಸುವ ಜವಾಬ್ದಾರಿ ಪಂದ್ಯದ ಮೂರನೇ ಅಂಪೈರ್ ಮೇಲಿರುತ್ತದೆ.

ಇದನ್ನೂ ಓದಿ | 2024ರ ಟಿ20 ವಿಶ್ವಕಪ್ ಪಂದ್ಯಗಳ ಟಿಕೆಟ್ ಈ ದಿನಾಂಕದಿಂದ ಮಾರಾಟ; ಭಾರತದ ಪಂದ್ಯಗಳ ಟಿಕೆಟ್‌ಗೆ ಭಾರಿ ಬೇಡಿಕೆ

ಹಿಂದಿನ ಓವರ್ ಪೂರ್ಣಗೊಂಡ ನಿಗದಿತ 60 ಸೆಕೆಂಡುಗಳ ಒಳಗೆ ಮುಂದಿನ ಓವರ್‌ನ ಮೊದಲ ಎಸೆತವನ್ನು ಎಸೆಯಲು ಫೀಲ್ಡಿಂಗ್ ತಂಡವೇನಾದರೂ ವಿಫಲವಾದರೆ, ಎರಡು ಬಾರಿ ಎಚ್ಚರಿಕೆ ನೀಡಲಾಗುತ್ತದೆ. ಮತ್ತೆ ನಿಯಮ ಮೀರಿದ ಪ್ರತಿ ಸಂದರ್ಭಕ್ಕೂ ಐದು ರನ್ ದಂಡ ವಿಧಿಸಲಾಗುತ್ತದೆ. ಅಂದರೆ, ಎರಡು ಬಾರಿ ಓವರ್‌ ಆರಂಭಿಸುವುದು ತಡವಾದರೆ, ಬ್ಯಾಟಿಂಗ್‌ 10 ರನ್‌ ಪೆನಾಲ್ಟಿ ಬೀಳುತ್ತದೆ.

ಯಾವ ಸಂದರ್ಭದಲ್ಲಿ ನಿಯಮ ಅನ್ವಯಿಸುವುದಿಲ್ಲ?

ಕೆಲವು ಕೈಮೀರಿದ ಸಂದರ್ಭಗಳಲ್ಲಿ ಸ್ಟಾಪ್‌ ಕ್ಲಾಕ್‌ ನಿಯಮ ಅನ್ವಯವಾಗುವುದಿಲ್ಲ. ಅವುಗಳೆಂದರೆ...

  • ಓವರ್‌ಗಳ ನಡುವೆ ಹೊಸ ಬ್ಯಾಟರ್‌ ಮೈದಾನಕ್ಕೆ ಬಂದಾಗ
  • ಅಧಿಕೃತ ಪಾನೀಯ ವಿರಾಮಸ ಸಮಯದಲ್ಲಿ
  • ಬ್ಯಾಟರ್‌ ಅಥವಾ ಫೀಲ್ಡರ್‌ಗೆ ಗಾಯವಾಗಿ, ಆನ್‌ಫೀಲ್ಡ್ ಅಂಪೈರ್‌ಗಳು ಚಿಕಿತ್ಸೆಗೆ ಅನುಮೋದನೆ ನೀಡಿದಾಗ
  • ಫೀಲ್ಡಿಂಗ್ ತಂಡದ ಕೈಮೀರಿ ಯಾವುದೇ ಸಂದರ್ಭಗಳು ಘಟಿಸಿದಾಗ

ಇದನ್ನೂ ಓದಿ | ಜೋಪ್ರಾ ಆರ್ಚರ್​ ಆರ್​​ಸಿಬಿ ಪರ ಕಣಕ್ಕಿಳಿಯಲ್ಲ; ಇಂಗ್ಲೆಂಡ್ ವೇಗಿ ಬೆಂಗಳೂರಿಗೆ ಬಂದಿರುವುದೇ ಬೇರೆ ಉದ್ದೇಶಕ್ಕೆ!

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more Cricket stories please logon to kannada.hindustantimes.com)

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ