logo
ಕನ್ನಡ ಸುದ್ದಿ  /  ಕ್ರಿಕೆಟ್  /  Explainer: ಅಯ್ಯರ್-ಇಶಾನ್‌ಗೆ ಆರ್ಥಿಕ ಹೊಡೆತ; ಬಿಸಿಸಿಐ ಒಪ್ಪಂದದಿಂದ ಹೊರಬಿದ್ದ ಆಟಗಾರರು ಕಳೆದುಕೊಳ್ಳುವುದು ಏನೇನು?

Explainer: ಅಯ್ಯರ್-ಇಶಾನ್‌ಗೆ ಆರ್ಥಿಕ ಹೊಡೆತ; ಬಿಸಿಸಿಐ ಒಪ್ಪಂದದಿಂದ ಹೊರಬಿದ್ದ ಆಟಗಾರರು ಕಳೆದುಕೊಳ್ಳುವುದು ಏನೇನು?

Jayaraj HT Kannada

Feb 29, 2024 02:43 PM IST

ಬಿಸಿಸಿಐ ಒಪ್ಪಂದದಿಂದ ಹೊರಬಿದ್ದ ಅಯ್ಯರ್-ಇಶಾನ್‌ ಕಳೆದುಕೊಳ್ಳುವುದು ಏನೇನು?

    • ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಅವರನ್ನು ಬಿಸಿಸಿಐ ಕೇಂದ್ರ ಗುತ್ತಿಗೆ ಪಟ್ಟಿಯಿಂದ ಕೈಬಿಡಲಾಗಿದೆ. ಇದು ಆಟಗಾರರಿಗೆ ಭಾರಿ ನಷ್ಟವಾಗಿದೆ. ಭಾರತೀಯ ಕ್ರಿಕೆಟ್‌ ತಂಡದಲ್ಲಿ ಆಡುವ ಅವಕಾಶದಿಂದ ವಂಚಿತರಾಗುವುದು ಮಾತ್ರವಲ್ಲದೆ, ಆರ್ಥಿಕ ಹೊಡೆತವೂ ಆಟಗಾರರಿಗೆ ಬೀಳಲಿದೆ. ಜೊತೆಗೆ ಬಿಸಿಸಿಐ ಕೊಡುವ ಸೌಲಭ್ಯಗಳನ್ನು ಬಳಸಿಕೊಳ್ಳಲು ಕಷ್ಟವಾಗಲಿದೆ.
ಬಿಸಿಸಿಐ ಒಪ್ಪಂದದಿಂದ ಹೊರಬಿದ್ದ ಅಯ್ಯರ್-ಇಶಾನ್‌ ಕಳೆದುಕೊಳ್ಳುವುದು ಏನೇನು?
ಬಿಸಿಸಿಐ ಒಪ್ಪಂದದಿಂದ ಹೊರಬಿದ್ದ ಅಯ್ಯರ್-ಇಶಾನ್‌ ಕಳೆದುಕೊಳ್ಳುವುದು ಏನೇನು? (Getty Images)

ಬಿಸಿಸಿಐ ಕೇಂದ್ರೀಯ ಒಪ್ಪಂದಗಳನ್ನು ಕಳೆದುಕೊಳ್ಳುವ ಮೂಲಕ, ಭಾರತ ಕ್ರಿಕೆಟ್‌ ತಂಡದ ಇಬ್ಬರು ಪ್ರಮುಖ ಆಟಗಾರರಾದ ಇಶಾನ್ ಕಿಶನ್ (Ishan Kishan) ಮತ್ತು ಶ್ರೇಯಸ್ ಅಯ್ಯರ್ (Shreyas Iyer) ಭಾರಿ ಹಿನ್ನಡೆ ಅನುಭವಿಸಿದ್ದಾರೆ. ಭಾರತ ತಂಡದಲ್ಲಿ ನಿರಂತರವಾಗಿ ಆಡುವ ಅವಕಾಶ ಕಳೆದುಕೊಳ್ಳುವುದು ಮಾತ್ರವಲ್ಲದೆ, ಗುತ್ತಿಗೆಯಿಂದ ಹೊರಗುಳಿಯುವ ಆಟಗಾರರು ಹಲವು ಆರ್ಥಿಕ ಪ್ರಯೋಜನಗಳನ್ನು ಕೂಡಾ ಕಳೆದುಕೊಳ್ಳಲಿದ್ದಾರೆ. ಇದರೊಂದಿಗೆ ಕೇಂದ್ರೀಯ ಒಪ್ಪಂದದ ಭಾಗವಾಗದ ಕಾರಣದಿಂದಾಗಿ ಬಿಸಿಸಿಐ ಕೊಡಮಾಡುವ ಅನೇಕ ಸವಲತ್ತುಗಳಿಂದ ಇಬ್ಬರು ಕ್ರಿಕೆಟಿಗರು ವಂಚಿತರಾಗಿದ್ದಾರೆ. ಅಲ್ಲದೆ ಮುಂದೆ ನಡೆಯಲಿರುವ ಮಹತ್ವದ ಟೂರ್ನಿಗಳಲ್ಲಿಯೂ ಆಡುವ ಅವಕಾಶವನ್ನು ಕೈಚೆಲ್ಲಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ವಿಲ್ ಜಾಕ್ಸ್ ಔಟ್, ಮ್ಯಾಕ್ಸ್​ವೆಲ್ ಇನ್; ಸಿಎಸ್​ಕೆ ವಿರುದ್ಧದ ಬ್ಲಾಕ್​ಬಸ್ಟರ್ ಕದನಕ್ಕೆ​ ಆರ್​ಸಿಬಿ ಪ್ಲೇಯಿಂಗ್ XI

ಕಪ್ ಗೆಲ್ಲೋಕೆ ಆರ್​ಸಿಬಿಗೆ ಸಿಕ್ಕಿದೆ ಸಕ್ಸಸ್ ಸೂತ್ರ; ಬೆಂಗಳೂರು ಸತತ ಗೆಲುವಿನ ಹಿಂದಿದೆ ಈ ಯಶಸ್ಸಿನ ಮಂತ್ರ!

ಎಚ್ಚರ.. ಎಚ್ಚರ..; ಆರ್​ಸಿಬಿ vs ಸಿಎಸ್​ಕೆ ಟಿಕೆಟ್ ಖರೀದಿಗೆ ಮುಂದಾಗಿ 3 ಲಕ್ಷ ಕಳ್ಕೊಂಡ ಬೆಂಗಳೂರಿನ ಯುವಕ

ಆರ್‌ಸಿಬಿ-ಡೆಲ್ಲಿ ಪಂದ್ಯದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನ ಕ್ಯಾಂಟಿನ್ ಆಹಾರ ಸೇವಿಸಿ ವ್ಯಕ್ತಿ ಅಸ್ವಸ್ಥ; ಎಫ್‌ಐಆರ್ ದಾಖಲು

ಈವರೆಗೆ ಗುತ್ತಿಗೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಕಿಶನ್ ಮತ್ತು ಅಯ್ಯರ್, ಆಗಾಗ ಟೀಮ್‌ ಇಂಡಿಯಾದಲ್ಲಿ ಅವಕಾಶ ಪಡೆಯುತ್ತಿದ್ದರು. ಅಲ್ಲದೆ ತಂಡಕ್ಕೆ ಆಯ್ಕೆಯಾಗದೇ ಇದ್ದಾಗ, ಆಯ್ಕೆದಾರರ ಗಮನ ಸೆಳೆದು ಭಾರತದ ತಂಡದ ಬಾಗಿಲು ತಟ್ಟುವ ಅವಕಾಶ ಪಡೆಯುತ್ತಿದ್ದರು. ಮುಂದಕ್ಕೆ ಈ ಅವಕಾಶಕ್ಕೂ ಧಕ್ಕೆಯಾಗಲಿದೆ.

ಬಿಸಿಸಿಐನ ಕ್ರಿಕೆಟ್‌ ಯೋಜನೆಯಲ್ಲಿ ಇಲ್ಲ ಎಂಬ ಅಂಶವು, ಈ ಇಬ್ಬರ ವೃತ್ತಿಜೀವನಕ್ಕೆ ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಉಂಟುಮಾಡಿದೆ. ಈ ನಿರ್ಧಾರವು ಕಿಶನ್ ಮತ್ತು ಅಯ್ಯರ್ ಅವರ ವೃತ್ತಿಜೀವನದ ಅಂತ್ಯವಂತೂ ಅಲ್ಲ. ಸದ್ಯ ಐಪಿಎಲ್‌ನ 2024ರ ಆವೃತ್ತಿಯಲ್ಲಿ ತಮ್ಮ ತಮ್ಮ ಫ್ರಾಂಚೈಸಿಗಳ ಪರ ಕಣಕ್ಕಿಳಿಯಲು ಸಜ್ಜಾಗಿರುವ ಇಬ್ಬರು ಆಟಗಾರರು, ಬಿಸಿಸಿಐ ಗುತ್ತಿಗೆ ಪಟ್ಟಿಯಿಂದ ಹೊರಬಿದ್ದ ಕಾರಣದಿಂದ ಎದುರಿಸುವ ನಷ್ಟಗಳೇನು ಎಂಬುದನ್ನು ನೋಡೋಣ.

ಇದನ್ನೂ ಓದಿ | ಇಂಗ್ಲೆಂಡ್‌ ವಿರುದ್ಧದ ಐದನೇ ಟೆಸ್ಟ್‌ನಿಂದ ಕೆಎಲ್‌ ರಾಹುಲ್‌ ಔಟ್; ಕನ್ನಡಿಗ ದೇವದತ್‌ ಪಡಿಕ್ಕಲ್‌ ಪದಾರ್ಪಣೆ

ಆರ್ಥಿಕ ಹೊಡೆತ

ಬಿಸಿಸಿಐ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಎಂಬುದು ಗೊತ್ತಿರುವ ವಿಚಾರ. ಇದರಡಿಯಲ್ಲಿ ಆಡಿದರೆ, ಆಟಗಾರನಿಗೆ ಖಂಡಿತವಾಗಿಯೂ ಉತ್ತಮ ಸಂಭಾವನೆಯೊಂದಿಗೆ ಸಾಕಷ್ಟು ಅನುಕೂಲಗಳು ಇರುತ್ತವೆ. ದುರದೃಷ್ಟವಶಾತ್, ಕಿಶನ್ ಅಥವಾ ಅಯ್ಯರ್ ಈಗ ಬಿಸಿಸಿಐನ ಕೇಂದ್ರೀಯ ಒಪ್ಪಂದಗಳ ಭಾಗವಾಗಿಲ್ಲದ ಕಾರಣ ಅಂಥಾ ಯಾವುದೇ ಪ್ರಯೋಜನಗಳನ್ನು ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಗುತ್ತಿಗೆಯ ಪ್ರಕಾರ, ಎ+ ದರ್ಜೆಯ ಆಟಗಾರರು ವರ್ಷಕ್ಕೆ 7 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಎ ದರ್ಜೆ ಆಟಗಾರನಿಗೆ 5 ಕೋಟಿ ರೂ, ಬಿ ದರ್ಜೆ ಆಟಗಾರನಿಗೆ 3 ಕೋಟಿ, ಸಿ ದರ್ಜೆ ಆಟಗಾರನಿಗೆ 1 ಕೋಟಿ ರೂಪಾಯಿ ಕೊಡಲಾಗುತ್ತದೆ. ಈ ಹಿಂದೆ ಕಿಶನ್ ಸಿ ಗ್ರೇಡ್‌ನಲ್ಲಿದ್ದರೆ, ಅಯ್ಯರ್ ಬಿ ಗ್ರೇಡ್‌ನಲ್ಲಿದ್ದರು. ಇದೀಗ ಈ ಸಂಭಾವನೆ ಅವರಿಗೆ ಸಿಗುವುದಿಲ್ಲ.

ಬಿಸಿಸಿಐ ನೀಡುವ ಸೌಲಭ್ಯಗಳ ಬಳಕೆಗೂ ಕಡಿವಾಣ

ಬಿಸಿಸಿಐ ಒಪ್ಪಂದದ ಭಾಗವಾಗಿರುವ ಆಟಗಾರರು ಹಲವಾರು ಪ್ರಯೋಜನ ಪಡೆಯುತ್ತಾರೆ. ಆಟಗಾರರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಯಾವುದೇ ಸಮಯದಲ್ಲಿಯೂ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಭೇಟಿ ನೀಡಬಹುದು. ಕಳಫೆ ಫಾರ್ಮ್‌ನಿಂದ ಹೊರಬರುವುದು, ಪುನರ್ವಸತಿಗೆ ಒಳಗಾಗುವುದು ಅಥವಾ ಗಾಯದಿಂದ ಚೇತರಿಸಿಕೊಳ್ಳುವ ಸಂದರ್ಭದಲ್ಲಿಯೂ ಆಟಗಾರರು ಎನ್‌ಸಿಎಗೆ ಹೋಗಬಹುದು. ಅಲ್ಲಿರುವ ಸೌಲಭ್ಯಗಳನ್ನು ಬಳಸಬಹುದು. ಆದರೆ ಈಗ ಕಿಶನ್ ಮತ್ತು ಅಯ್ಯರ್ ಒಪ್ಪಂದದಿಂದ ಬಿಡುಗಡೆಯಾಗಿರುವುದರಿಂದ, ಅವರು ಇನ್ನು ಮುಂದೆ ಎನ್‌ಸಿಎ ಸೌಲಭ್ಯಗಳನ್ನು ತಮ್ಮಿಚ್ಛೆಯಂತೆ ಪಡೆಯುವಂತಿಲ್ಲ. ಒಂದು ವೇಳೆ ಎನ್‌ಸಿಎಗೆ ತೆರಳಬೇಕೆಂದರೂ, ತಮ್ಮ ತಮ್ಮ ರಾಜ್ಯದ ಕ್ರಿಕೆಟ್‌ ಅಸೋಸಿಯೇಷನ್‌ನಿಂದ ಅನುಮತಿ ಪಡೆಯಬೇಕಾಗುತ್ತದೆ.

ಇದನ್ನೂ ಓದಿ | ಕೆಲವರಿಗೆ ಟೆಸ್ಟ್ ಕ್ರಿಕೆಟ್ ಆಡುವ ಸಾಮರ್ಥ್ಯವಿಲ್ಲ: ಐಪಿಎಲ್​ಗೆ ಗಮನ ಹರಿಸಿದ ಇಶಾನ್​ ವಿರುದ್ಧ ಸುನಿಲ್ ಗವಾಸ್ಕರ್ ಟೀಕೆ

ಟಿ20 ವಿಶ್ವಕಪ್‌ ತಂಡದಲ್ಲೂ ಸ್ಥಾನ ಸಿಗಲ್ಲ

ಐಪಿಎಲ್‌ಗಿಂತ ರಣಜಿ ಮತ್ತು ಟೆಸ್ಟ್ ಕ್ರಿಕೆಟ್‌ಗೆ ಪ್ರಾಮುಖ್ಯತೆ ನೀಡಬೇಕೆಂದು ಬಿಸಿಸಿಐ ಕಟುವಾಗಿ ನುಡಿದಿದೆ. ಆದರೆ, ದೇಶಿಯ ಕ್ರಿಕೆಟ್‌ನಲ್ಲಿ ಆಡಲು ಕಿಶನ್ ಮತ್ತು ಅಯ್ಯರ್ ಸಿದ್ಧರಿದ್ದಂತೆ ತೋರುತ್ತಿಲ್ಲ. ಹೀಗಾಗಿ ಮುಂದೆ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಆಡುವ ಅವಕಾಶವನ್ನು ಇಬ್ಬರು ಆಟಗಾರರು ಕಳೆದುಕೊಳ್ಳಲಿದ್ದಾರೆ. ಏಕೆಂದರೆ ಐಪಿಎಲ್‌ನಲ್ಲಿ ನೀಡುವ ಪ್ರದರ್ಶನವು ಭಾರತ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಸಾಕಾಗುವುದಿಲ್ಲ.

ಇನ್ನಷ್ಟು ಕ್ರಿಕೆಟ್‌ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ