logo
ಕನ್ನಡ ಸುದ್ದಿ  /  ಕ್ರಿಕೆಟ್  /  ಮೂಲ ಬೆಲೆ 30 ಲಕ್ಷದಿಂದ 6 ಕೋಟಿ ಜಾಕ್​ಪಾಟ್​ನೊಂದಿಗೆ ಆರ್​ಸಿಬಿ ಪಾಲಾದ ರಸಿಖ್ ಸಲಾಮ್ ದಾರ್ ಯಾರು?

ಮೂಲ ಬೆಲೆ 30 ಲಕ್ಷದಿಂದ 6 ಕೋಟಿ ಜಾಕ್​ಪಾಟ್​ನೊಂದಿಗೆ ಆರ್​ಸಿಬಿ ಪಾಲಾದ ರಸಿಖ್ ಸಲಾಮ್ ದಾರ್ ಯಾರು?

Prasanna Kumar P N HT Kannada

Nov 25, 2024 06:13 AM IST

google News

ಮೂಲ ಬೆಲೆ 30 ಲಕ್ಷದಿಂದ 6 ಕೋಟಿ ಜಾಕ್​ಪಾಟ್​ನೊಂದಿಗೆ ಆರ್​ಸಿಬಿ ಪಾಲಾದ ರಸಿಖ್ ಸಲಾಮ್ ದಾರ್ ಯಾರು?

    • Rasikh Salam Dar: ಮೂಲ ಬೆಲೆ 30 ಲಕ್ಷ ರೂಪಾಯಿದಿಂದ 6 ಕೋಟಿ ರೂಪಾಯಿ ಜಾಕ್​ಪಾಟ್​ ಹೊಡೆದು ಆರ್​ಸಿಬಿ ತಂಡದ ಪಾಲಾಗಿರುವ ಯುವ ವೇಗಿ ರಸಿಖ್ ಸಲಾಮ್ ದಾರ್ ಯಾರು? ಇಲ್ಲಿದೆ ವಿವರ.
ಮೂಲ ಬೆಲೆ 30 ಲಕ್ಷದಿಂದ 6 ಕೋಟಿ ಜಾಕ್​ಪಾಟ್​ನೊಂದಿಗೆ ಆರ್​ಸಿಬಿ ಪಾಲಾದ ರಸಿಖ್ ಸಲಾಮ್ ದಾರ್ ಯಾರು?
ಮೂಲ ಬೆಲೆ 30 ಲಕ್ಷದಿಂದ 6 ಕೋಟಿ ಜಾಕ್​ಪಾಟ್​ನೊಂದಿಗೆ ಆರ್​ಸಿಬಿ ಪಾಲಾದ ರಸಿಖ್ ಸಲಾಮ್ ದಾರ್ ಯಾರು?

ಇಂಡಿಯನ್ ಪ್ರೀಮಿಯರ್ ಲೀಗ್​ 2025 ಮೆಗಾ ಹರಾಜಿನಲ್ಲಿ ಜಮ್ಮು ಮತ್ತು ಕಾಶ್ಮೀರದ ಯುವ ವೇಗಿ ರಸಿಖ್ ಸಲಾಮ್ ದಾರ್​ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಬರೋಬ್ಬರಿ 6 ಕೋಟಿ ರೂಪಾಯಿಗೆ ಖರೀದಿಸಿದೆ.​ 30 ಲಕ್ಷ ರೂಪಾಯಿ ಮೂಲ ಬೆಲೆಯಲ್ಲಿ ಆಕ್ಷನ್ ಪೂಲ್ ಪ್ರವೇಶಿಸಿದ 24 ವರ್ಷದ ಅನ್​ಕ್ಯಾಪ್ಡ್​ ಪ್ಲೇಯರ್ ಖರೀದಿಗೆ ಆರ್​ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಜಿದ್ದಿಗೆ ಬಿದ್ದು ಪೈಪೋಟಿ ನಡೆಸಿದವು. ಉಭಯ ಫ್ರಾಂಚೈಸಿಗಳು ರಸಿಖ್ ದಾರ್​ ಖರೀದಿಗೆ ಪ್ರಬಲ ಪೈಪೋಟಿ ನೀಡಿದವು. ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ರೈಟ್-ಟು ಮ್ಯಾಚ್ (ಆರ್‌ಟಿಎಂ) ಬಳಸಲು ನಿರ್ಧರಿಸಿತು. ಆದರೆ, ಆರ್​ಸಿಬಿ ರಸಿಖ್​ ಬೆಲೆ 6 ಕೋಟಿಗೆ ನಿಗದಿಪಡಿಸಿದ ಕಾರಣ ಡೆಲ್ಲಿ ಹಿಂದೆ ಸರಿಯಿತು.

ರಸಿಖ್ ದಾರ್​ ಮೊದಲ ಬಾರಿಗೆ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡಿದ್ದು 2019ರಲ್ಲಿ. ಆಗ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಜಮ್ಮು ಮತ್ತು ಕಾಶ್ಮೀರದ ಸ್ಪೀಡ್​ಸ್ಟರ್​​ಗೆ ಮಣೆ ಹಾಕಿತ್ತು. ಭಾರತದ ಉತ್ತರದ ರಾಜ್ಯದಿಂದ ಮೂರನೇ ಕ್ರಿಕೆಟಿಗರಾಗಿದ್ದ ರಸಿಖ್, ಆ ವರ್ಷ ವಾಂಖೆಡೆ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪದಾರ್ಪಣೆ ಮಾಡಿದ್ದರು. ಮುಂಬೈ ತಂಡದ ಪರ ಆಡಿದ ಅತ್ಯಂತ ಕಿರಿಯ ಆಟಗಾರರಾಗಿದ್ದರು. ಇದರೊಂದಿಗೆ ಸಾಕಷ್ಟು ಖ್ಯಾತಿಯನ್ನು ಪಡೆದಿದ್ದರು. ನಂತರ 2024ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಸೇರುವ ಮೊದಲು ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡದ ಪರ ಆಡಿದ್ದರು. ಈಗ ಡಿಸಿ ಪರ ಎಂಟು ಪಂದ್ಯಗಳಲ್ಲಿ ಕಣಕ್ಕಿಳಿದು ಒಂಬತ್ತು ವಿಕೆಟ್​ ಪಡೆದಿದ್ದರು.

ರಸಿಖ್ ಸಲಾಮ್ ದಾರ್​ ಯಾರು?

ರಸಿಖ್ ಸಲಾಮ್ ಜಮ್ಮು ಮತ್ತು ಕಾಶ್ಮೀರದ ಬಲಗೈ ವೇಗದ ಬೌಲರ್. ದೇಶೀಯ ಕ್ರಿಕೆಟ್‌ನಲ್ಲಿ ಪ್ರಭಾವಶಾಲಿ ಬೌಲಿಂಗ್​ ಮೂಲಕ ಗಮನ ಸೆಳೆದಿದ್ದರು. ಇದರ ಪರಿಣಾಮ ಮುಂಬೈ 2019ರಲ್ಲಿ ಖರೀದಿಸಿತ್ತು. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು. ವಯಸ್ಸಿನ ವ್ಯತ್ಯಾಸದ ಸಮಸ್ಯೆ ಕಾರಣ ಅಲ್ಪಾವಧಿ ಅಮಾನತಿನ ಶಿಕ್ಷೆ ಎದುರಿಸಿದ್ದರು. 2022ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡಕ್ಕೆ ಪುನರಾಗಮನ ಮಾಡಿದರು. ಸಲಾಮ್ 2018ರಲ್ಲಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಪರ ತಮ್ಮ ಲಿಸ್ಟ್ ಎ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. 2018ರ ಡಿಸೆಂಬರ್​​ನಲ್ಲಿ ರಣಜಿ ಟ್ರೋಫಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಪರ ಪ್ರಥಮ ದರ್ಜೆ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು.

ಐಪಿಎಲ್​ನಲ್ಲಿ ರಸಿಖ್ ಸಲಾಮ್ ದಾರ್​ ಪ್ರದರ್ಶನ

ಪಂದ್ಯ - 11

ವಿಕೆಟ್ - 09

ಬೆಸ್ಟ್ ಬೌಲಿಂಗ್ - 3/34

ಎಕಾನಮಿ - 10.43

ಸರಾಸರಿ - 37.66

ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ  ರಸಿಖ್ ಪ್ರದರ್ಶನ

ಪಂದ್ಯ - 04

ವಿಕೆಟ್ - 13

ಬೆಸ್ಟ್ ಬೌಲಿಂಗ್ - 4/97

ಎಕಾನಮಿ - 3.39

ಲಿಸ್ಟ್​​ ಎ​ನಲ್ಲಿ ರಸಿಖ್ ಸಲಾಮ್ ದಾರ್ ಪ್ರದರ್ಶನ

ಪಂದ್ಯ - 07

ವಿಕೆಟ್ - 12

ಬೆಸ್ಟ್ ಬೌಲಿಂಗ್ - 4/23

ಎಕಾನಮಿ - 5.63

ಟಿ20 ಕ್ರಿಕೆಟ್​ನಲ್ಲಿ ರಸಿಖ್ ಸಲಾಮ್ ದಾರ್ ಪ್ರದರ್ಶನ

ಪಂದ್ಯ - 28

ವಿಕೆಟ್ - 35

ಬೆಸ್ಟ್ ಬೌಲಿಂಗ್ - 6/31

ಎಕಾನಮಿ - 8.64

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ