RCB Owner: ಆರ್‌ಸಿಬಿ ಫ್ರಾಂಚೈಸಿ ಯಾರ ಮಾಲೀಕತ್ವದಲ್ಲಿದೆ, ಮಲ್ಯ ಬಳಿಕ ಖರೀದಿಸಿದ್ದು ಯಾರು, ವರ್ಷದ ಆದಾಯವೆಷ್ಟು?
Nov 28, 2024 08:45 AM IST
RCB Owner: ಆರ್‌ಸಿಬಿ ಫ್ರಾಂಚೈಸಿ ಯಾರ ಮಾಲೀಕತ್ವದಲ್ಲಿದೆ, ಮಲ್ಯ ಬಳಿಕ ಖರೀದಿಸಿದ್ದು ಯಾರು, ವರ್ಷದ ಆದಾಯವೆಷ್ಟು?
- Royal Challengers Bengaluru: ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಯಾರ ಮಾಲೀಕತ್ವದಲ್ಲಿದೆ, ವಿಜಯ್ ಮಲ್ಯ ಬಳಿಕ ತಂಡವನ್ನು ಖರೀದಿಸಿದ್ದು ಯಾರು, ಕಳೆದ ಎರಡು ವರ್ಷಗಳ ಆದಾಯವೆಷ್ಟು? ಇಲ್ಲಿದೆ ವಿವರ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (Royal Challengers Bengaluru) 2025ರ ಐಪಿಎಲ್‌ನಲ್ಲಿ ಚೊಚ್ಚಲ ಟ್ರೋಫಿ ಗೆಲುವಿನ ಕನಸಿನಲ್ಲಿದೆ. ಕಳೆದ ಆವೃತ್ತಿಗಳಲ್ಲಿ ಕಳಪೆ ಪ್ರದರ್ಶನದೊಂದಿಗೆ ಚಾಂಪಿಯನ್ ಪಟ್ಟಕ್ಕೇರಲು ಸಾಧ್ಯವಾಗದ ಆರ್‌ಸಿಬಿ, ಈ ಬಾರಿ ಸಮತೋಲಿತ ತಂಡದೊಂದಿಗೆ ಕಪ್ ಗೆಲ್ಲುವ ವಿಶ್ವಾಸ ಹೊಂದಿದೆ. ಉಳಿಸಿಕೊಂಡ ಆಟಗಾರರ ಹೊರತುಪಡಿಸಿ ಉಳಿದ 83 ಕೋಟಿ ರೂಪಾಯಿ ಪರ್ಸ್ ಮೊತ್ತದಲ್ಲಿ 8 ವಿದೇಶಿ ಆಟಗಾರರು ಸೇರಿ 19 ಮಂದಿಯನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ. ಹರಾಜು ಮುಗಿದ ನಂತರ ಬೆಂಗಳೂರು ತಂಡದ ಮಾಲೀಕತ್ವ ಯಾರದ್ದು? 120 ಕೋಟಿ ಖರ್ಚು ಮಾಡುವ ರಾಯಲ್ ಚಾಲೆಂಜರ್ಸ್ ವರ್ಷದ ಆದಾಯ ಎಷ್ಟಿದೆ? ಇಲ್ಲಿದೆ.
ಅತ್ಯಂತ ನಿಷ್ಠಾವಂತ ಅಭಿಮಾನಿಗಳನ್ನು ಹೊಂದಿರುವ ತಂಡ ಅಂದರೆ ಆರ್‌ಸಿಬಿ ಮಾತ್ರ. ಆದರೆ, 17 ವರ್ಷಗಳಿಂದ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿದೆ ಎಂಬುದು ಬೇಸರದ ಸಂಗತಿ. ಇಷ್ಟಾದರೂ ಫ್ಯಾನ್ಸ್ ತಂಡವನ್ನು ಎಂದಿಗೂ ಬಿಟ್ಟುಕೊಟ್ಟವರೇ ಅಲ್ಲ. ಸೋತರೂ ಗೆದ್ದರೂ ಆರ್ಸಿಬಿಯೇ ನಮ್ಮ ಉಸಿರು ಎನ್ನುತ್ತಾರೆ. ಆರ್‌ಸಿಬಿ.. ಆರ್‌ಸಿಬಿ.. ಆರ್‌ಸಿಬಿ.. ಎಂದು ಸ್ಟೇಡಿಯಂ ರೂಫ್ ಕಿತ್ತೋಗುವಂತೆ ಕೂಗುತ್ತಾರೆ. ಆದರೆ, ಇದೇ ಅಭಿಮಾನಿಗಳ ನಿಷ್ಠೆಯನ್ನೇ ಫ್ರಾಂಚೈಸಿ ಬಂಡವಾಳ ಮಾಡಿಕೊಳ್ಳುತ್ತಿರುವುದು ಬೇಸರದ ಸಂಗತಿ. ಇದು ಆರ್ಸಿಬಿಗೆ ಮಾತ್ರವಲ್ಲ, 10 ತಂಡಗಳಿಗೂ ಅನ್ವಯವಾಗುತ್ತದೆ.
ಕರ್ನಾಟಕವನ್ನು ಪ್ರತಿನಿಧಿಸುವ ಆರ್‌ಸಿಬಿ, 2008ರಲ್ಲಿ ಸ್ಥಾಪನೆಯಾಯಿತು. ಉದ್ಘಾಟನಾ ಐಪಿಎಲ್‌ನಲ್ಲಿ ಚೊಚ್ಚಲ ಪ್ರವೇಶ ಮಾಡಿದ ಫ್ರಾಂಚೈಸಿ, 2008 ರಿಂದ ಆರಂಭದಿಂದ ಟ್ರೋಫಿ ಗೆಲ್ಲದ ಆಡುತ್ತಿರುವ ತಂಡಗಳಲ್ಲಿ ಇದು ಕೂಡ ಒಂದಾಗಿದೆ. ಆರ್‌ಸಿಬಿ 2009, 2011, 2016ರ ಐಪಿಎಲ್‌ನಲ್ಲಿ ಫೈನಲ್ ತಲುಪಿತ್ತಾದರೂ ರನ್ನರ್ಅಪ್ ಆಗಿದೆ. 2020, 2021 ಮತ್ತು 2020ರ ಸೀಸನ್‌ಗಳಲ್ಲಿ ಪ್ಲೇಆಫ್ ಪ್ರವೇಶಿಸಿತ್ತು. ಆರ್‌ಸಿಬಿ ತಂಡವನ್ನು ಕಿಂಗ್‌ಫಿಶರ್ ಏರ್‌ಲೈನ್ಸ್ ಅಂದಿನ ಅಧ್ಯಕ್ಷ ವಿಜಯ್ ಮಲ್ಯ 111.6 ಮಿಲಿಯನ್ ಡಾಲರ್ಗೆ (942 ಕೋಟಿ) ಖರೀದಿಸಿದ್ದರು. ಇದು ಐಪಿಎಲ್ನ 2ನೇ ಅತಿ ಹೆಚ್ಚು ಬಿಡ್ ಆಗಿದೆ.
2016ರಲ್ಲಿ ಮಲ್ಯ ಸಾಲವನ್ನು ಮರುಪಾವತಿಸದ ಕಾರಣ ಮತ್ತೊಬ್ಬರು, ಮಾರಾಟ ಮಾಡಬೇಕಾಯಿತು. ಪ್ರಸ್ತುತ ಈ ತಂಡ ಡಿಯಾಜಿಯೊದ ಅಂಗಸಂಸ್ಥೆಯಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್‌ನ ಮಾಲೀಕತ್ವದಲ್ಲಿದೆ. 2022ರ ಹೊತ್ತಿಗೆ ರಾಯಲ್ ಚಾಲೆಂಜರ್ಸ್ 3ನೇ ಶ್ರೀಮಂತ ಫ್ರಾಂಚೈಸ್ ಆಗಿ ಹೊರಹೊಮ್ಮಿದೆ. ಆರ್‌ಸಿಬಿ ನಿವ್ವಳ ಮೌಲ್ಯ 697 ಕೋಟಿ. ಫ್ರಾಂಚೈಸಿ ಅಧ್ಯಕ್ಷ ಪ್ರಥಮೇಶ್ ಮಿಶ್ರಾ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಓನರ್ ಯಾರು?
ಆರ್‌ಸಿಬಿ ತಂಡ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (USL) ಒಡೆತನದಲ್ಲಿದೆ. ಆದರೆ ಈ ಹಿಂದೆ ಯುನೈಟೆಡ್ ಬ್ರೂವರೀಸ್ ಮಾಲೀಕತ್ವದಲ್ಲಿತ್ತು. ಇದು ಭಾರತದ ಆಲ್ಕೊಹಾಲ್ಯುಕ್ತ ಪಾನೀಯ (ಮದ್ಯಸಾರಯುಕ್ತ ಪಾನೀಯ) ಕಂಪನಿ. ಅತಿ ಹೆಚ್ಚು ಪ್ರಮಾಣದ ಸ್ಪಿರಿಟ್ ಉತ್ಪಾದಿಸುವ ವಿಶ್ವದ 2ನೇ ಕಂಪನಿ. ಇಂಗ್ಲಿಷ್ ಬಹುರಾಷ್ಟ್ರೀಯ ಆಲ್ಕೊಹಾಲ್ಯುಕ್ತ ಪಾನೀಯ ದೈತ್ಯ ಮತ್ತು ವಿಶ್ವದ ಪ್ರಮುಖ ಮದ್ಯದ ಕಂಪನಿಗಳಲ್ಲಿ ಒಂದು. ಯುನೈಟೆಡ್ ಸ್ಪಿರಿಟ್ಸ್‌ನ ಪ್ರಸ್ತುತ ಸಿಇಒ, ವ್ಯವಸ್ಥಾಪಕ ನಿರ್ದೇಶಕಿ ಹಿನಾ ನಾಗರಾಜನ್.
2023 ಮತ್ತು 2024ರ ಆದಾಯ ಎಷ್ಟಿದೆ?
ಆರ್‌ಸಿಬಿ ಆದಾಯ 2023ಕ್ಕೆ ಹೋಲಿಸಿದರೆ 2024ರಲ್ಲಿ ಶೇ 163 ರಷ್ಟು ಏರಿಕೆ ಕಂಡಿದೆ. 2023-24ರಲ್ಲಿ ಆದಾಯ 650 ಕೋಟಿಗೆ ತಲುಪಿದೆ. ಆದರೆ 2023ರ ಐಪಿಎಲ್‌ನಲ್ಲಿ 247 ಕೋಟಿ ರೂಪಾಯಿ ಹರಿದು ಬಂದಿತ್ತು. ಇದು 222 ಕೋಟಿ ನಿವ್ವಳ ಲಾಭಕ್ಕೆ ಕಾರಣ. 2025ರ ಐಪಿಎಲ್‌ನಲ್ಲಿ ಈ ಆದಾಯ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಫ್ರಾಂಚೈಸ್ಗಳಿಗೆ ಆದಾಯದ ಮೂಲಗಳು - ಜಾಹೀರಾತು, ಮಾಧ್ಯಮ ಹಕ್ಕು, ಟಿಕೆಟ್ ಪ್ರೈಸ್ ಸೇರಿ ಹಲವು ಮೂಲಗಳು. ಪ್ರತಿ ವರ್ಷವೂ ಕೋಟಿಗಟ್ಟಲೇ ದುಡಿಯುವ ಫ್ರಾಂಚೈಸಿ ಟ್ರೋಫಿ ಗೆಲ್ಲದಿದ್ದರೂ ಜಗತ್ತಿನಲ್ಲೆಡೆ ಸಂಪಾದಿಸಿದೆ. ನಿಷ್ಠಾವಂತ ಅಭಿಮಾನಿಗಳ ಅಭಿಮಾನವೇ ಆರ್ಸಿಬಿಗೆ ಬಂಡವಾಳವಾಗುತ್ತಿದೆ ಎಂದರೂ ತಪ್ಪಿಲ್ಲ.