ಏಷ್ಯಾಕಪ್ ಉದ್ಘಾಟನಾ ಪಂದ್ಯಕ್ಕಿಂತ ಹೆಚ್ಚು ಸದ್ದು ಮಾಡಿದ್ದೇ ಈ ಸುಂದರಿ; ಅಪ್ಸರೆಯಂಥಾ ಚೆಲುವೆ ಡಾಕ್ಟರ್ ತ್ರಿಶಾಲಾ ಗುರುಂಗ್
Aug 31, 2023 07:00 AM IST
ತ್ರಿಶಾಲಾ ಗುರುಂಗ್
- ಏಷ್ಯಾಕಪ್ ಉದ್ಘಾಟನಾ ಸಮಾರಂಭದಲ್ಲಿ ಬಿಳಿ ಸೀರೆ ಉಟ್ಟು ಅಪ್ಸರೆಯಂತೆ ಕಾಣುತ್ತಿದ್ದ ಈ ಗಾಯಕಿಯ ಸೌಂದರ್ಯ ಹಾಗೂ ಕಂಠಕ್ಕೆ ಕ್ರಿಕೆಟ್ ಅಭಿಮಾನಿಗಳು ಮನಸೋತರು. ಕಾರ್ಯಕ್ರಮ ಮೆರುಗು ಹೆಚ್ಚಿಸಿದ ಈ ಗಾಯಕಿ ಯಾರು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
2023ರ ಏಷ್ಯಾಕಪ್ (Asia Cup 2023) ಟೂರ್ನಿಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಪಾಕಿಸ್ತಾನ ಮತ್ತು ನೇಪಾಳ ತಂಡಗಳ ನಡುವಿನ ಟೂರ್ನಿಯ ಮೊದಲ ಪಂದ್ಯಕ್ಕೂ ಮುನ್ನ ಉದ್ಘಾಟನಾ ಸಮಾರಂಭದ ಮೂಲಕ ಟೂರ್ನಿಗೆ ಚಾಲನೆ ನೀಡಲಾಯ್ತು. ಪಾಕಿಸ್ತಾನದ ಮುಲ್ತಾನ್ ಸ್ಟೇಡಿಯಂನಲ್ಲಿ ಏಷ್ಯಾಕಪ್ 2023ರ ಉದ್ಘಾಟನಾ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಖ್ಯಾತ ಗಾಯಕಿ ಹಾಗೂ ಸೆಲೆಬ್ರಿಟಿ ತ್ರಿಶಾಲಾ ಗುರುಂಗ್ (Trishala Gurung) ಹಾಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು.
ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ತ್ರಿಶಾಲಾ ಗಾಯನ ಆರಂಭವಾಗುತ್ತಿದ್ದಂತೆ ಅಭಿಮಾನಿಗಳ ಕಣ್ಣು ಅವರತ್ತ ಸರಿಯಿತು. ಅದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲೂ ಅವರ ಫೋಟೋಗಳು ಹರಿದಾಡಿದವು. ಬಿಳಿಯ ಸೀರೆ ಉಟ್ಟು ಅಪ್ಪಟ ಅಪ್ಸರೆಯಂತೆ ಕಾಣುತ್ತಿದ್ದ ತ್ರಿಶಾಲ ಸೌಂದರ್ಯಕ್ಕೆ ಫ್ಯಾನ್ಸ್ ಮಾರುಹೋದ್ರು. ನೋಡಲು ಮಾತ್ರ ಸುಂದರವಾಗಿರುವುದಲ್ಲದೆ, ತ್ರಿಶಾಲ ಅವರ ಕೋಗಿಲೆಯ ಕಂಠಕ್ಕೆ ಏಷ್ಯಾದ ಕ್ರಿಕೆಟ್ ಅಭಿಮಾನಿಗಳು ಮನಸೋತರು. ಹಾಗಿದ್ರೆ, ಏಷ್ಯಾಕಪ್ ಉದ್ಘಾಟನಾ ಸಮಾರಂಭದ ಮೆರುಗು ಹೆಚ್ಚಿಸಿದ ತ್ರಿಶಾಲಾ ಗುರುಂಗ್ ಯಾರು? ಅವರ ಹಿನ್ನೆಲೆ ಏನು ಎಂಬುದನ್ನು ತಿಳಿಯೋಣ.
ನೇಪಾಳ ವೈದ್ಯಕೀಯ ಕಾಲೇಜಿನಲ್ಲಿ ಪದವಿ ಪಡೆದಿರುವ ತ್ರಿಶಾಲಾ ಗಾಯಕಿ ಮಾತ್ರವಲ್ಲದೆ ಡಾಕ್ಟರ್ ಕೂಡಾ ಹೌದು. ಸುಮಧುರ ಕಂಠದಿಂದ ಅಭಿಮಾನಿಗಳಿಗೆ ಹತ್ತಿರವಾಗಿರುವ ಇವರಿಗೆ ನೇಪಾಳದಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಅಲ್ಲದೆ ಜಾಗತಿಕ ಅಭಿಮಾನಿಗಳನ್ನು ಕೂಡಾ ಸಂಪಾದಿಸಿದ್ದಾರೆ. ಈಗಾಗಲೇ ತಮ್ಮ ಗಾಯನದ ಮೂಲಕ ಜಾಗತಿಕ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅಲ್ಲದೆ ಇವರ ಸೌಂದರ್ಯಕ್ಕೆ ನೋಡುಗರು ಕಳೆದುಹೋಗಿದ್ದಾರೆ.
28 ವರ್ಷದ ಗಾಯಕಿ 4 ವರ್ಷಗಳ ಹಿಂದೆ 'ಯೋ ಮನ್' ಎಂಬ ತಮ್ಮ ಮೊದಲ ಹಾಡನ್ನು ಬಿಡುಗಡೆ ಮಾಡಿದರು. ಇದರ ನಂತರ ಅವರ ಖ್ಯಾತಿ ದಿನೇ ದಿನೆ ಹೆಚ್ಚಾಗುತ್ತಿದೆ. ತಾವು ಹಾಡಿದ ಹಲವು ಭಿನ್ನ ಶೈಲಿಯ ಹಾಡುಗಳನ್ನು ತ್ರಿಶಾಲಾ ಸೋಷಿಯಲ್ ಮೀಡಿಯದಲ್ಲಿ ಶೇರ್ ಮಾಡುತ್ತಾರೆ. ಹೀಗಾಗಿ ಇವರಿಗೆ ಇನ್ಸ್ಟಾಗ್ರಾಮ್‌ನಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದಾರೆ.
ಅವರ ಧ್ವನಿ ಮತ್ತು ಸೌಂದರ್ಯದಿಂದಲೇ ಹೆಚ್ಚು ವೈರಲ್ ಆಗುತ್ತಿದ್ದಾರೆ. ಇಂದಿನ ಉದ್ಘಾಟನಾ ಸಮಾರಂಭದ ಬಳಿಕ ಭಾರತೀಯರು ಕೂಡಾ ಇವರ ಕುರಿತಾಗಿ ಗೂಗಲ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ತ್ರಿಶಾಲಾ ಅವರು ಕಳೆದ ಫೆಬ್ರವರಿ ತಿಂಗಳಲ್ಲಿ ನೇಪಾಳದ ಖ್ಯಾತ ಸಂಗೀತ ಗಾಯಕ ರೋಹಿತ್ ಶಾಕ್ಯಾ ಅವರನ್ನು ಮದುವೆಯಾಗಿದ್ದಾರೆ.