logo
ಕನ್ನಡ ಸುದ್ದಿ  /  ಕ್ರಿಕೆಟ್  /  2021ರಲ್ಲಿ ಸಾಧ್ಯವಾಗದ್ದನ್ನು ಕೊನೆಗೂ ಸಾಧಿಸಿದ ವೆಂಕಟೇಶ್ ಅಯ್ಯರ್; ಕೆಕೆಆರ್ ಆಪದ್ಬಾಂಧವನ ಕ್ರಿಕೆಟ್ ಜರ್ನಿ ಹೇಗಿದೆ?

2021ರಲ್ಲಿ ಸಾಧ್ಯವಾಗದ್ದನ್ನು ಕೊನೆಗೂ ಸಾಧಿಸಿದ ವೆಂಕಟೇಶ್ ಅಯ್ಯರ್; ಕೆಕೆಆರ್ ಆಪದ್ಬಾಂಧವನ ಕ್ರಿಕೆಟ್ ಜರ್ನಿ ಹೇಗಿದೆ?

Prasanna Kumar P N HT Kannada

May 27, 2024 07:00 AM IST

google News

2021ರಲ್ಲಿ ಸಾಧ್ಯವಾಗದ್ದನ್ನು ಕೊನೆಗೂ ಸಾಧಿಸಿದ ವೆಂಕಟೇಶ್ ಅಯ್ಯರ್; ಕೆಕೆಆರ್ ಆಪದ್ಬಾಂಧವನ ಕ್ರಿಕೆಟ್ ಜರ್ನಿ ಹೇಗಿದೆ?

    • Who is Venkatesh Iyer: 2021ರ ಐಪಿಎಲ್​ ಫೈನಲ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದರೂ ಟ್ರೋಫಿ ಜಯಿಸಲು ಸಾಧ್ಯವಾಗದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಎಡಗೈ ಬ್ಯಾಟರ್​ ವೆಂಕಟೇಶ್ ಅಯ್ಯರ್, ಕೊನೆಗೂ 2024ರಲ್ಲಿ ಸಾಧಿಸಿದ್ದಾರೆ.
2021ರಲ್ಲಿ ಸಾಧ್ಯವಾಗದ್ದನ್ನು ಕೊನೆಗೂ ಸಾಧಿಸಿದ ವೆಂಕಟೇಶ್ ಅಯ್ಯರ್; ಕೆಕೆಆರ್ ಆಪದ್ಬಾಂಧವನ ಕ್ರಿಕೆಟ್ ಜರ್ನಿ ಹೇಗಿದೆ?
2021ರಲ್ಲಿ ಸಾಧ್ಯವಾಗದ್ದನ್ನು ಕೊನೆಗೂ ಸಾಧಿಸಿದ ವೆಂಕಟೇಶ್ ಅಯ್ಯರ್; ಕೆಕೆಆರ್ ಆಪದ್ಬಾಂಧವನ ಕ್ರಿಕೆಟ್ ಜರ್ನಿ ಹೇಗಿದೆ?

Venkatesh Iyer: 17ನೇ ಆವೃತ್ತಿಯ ಐಪಿಎಲ್​ ಫೈನಲ್​ ಪಂದ್ಯವನ್ನು ಸನ್​ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಚಾಂಪಿಯನ್ ಮಾಡುವಲ್ಲಿ ವೆಂಕಟೇಶ್ ಅಯ್ಯರ್ ಪ್ರಮುಖ ಪಾತ್ರವಹಿಸಿದರು. ಕೆಕೆಆರ್​ ಟ್ರೋಫಿ ಗೆಲುವಿನ ಹೀರೋ ಹಾಗೂ ಯುವ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಯಾರು? ಟೀಮ್ ಇಂಡಿಯಾ ಪರ ಎಷ್ಟು ಪಂದ್ಯ ಆಡಿದ್ದಾರೆ. ದೇಶೀಯ ಕ್ರಿಕೆಟ್​ನಲ್ಲಿ ಆತನ ಸಾಧನೆ ಹೇಗಿದೆ? ಇಲ್ಲಿದೆ ವಿವರ.

ಈ ನಿರ್ಣಾಯಕ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದು ಮಾತ್ರವಲ್ಲ, ಈ ಹಿಂದೆಯೂ ಪ್ಲೇಆಫ್​ ಪಂದ್ಯಗಳಲ್ಲಿ ಅತ್ಯಮೋಘ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಅವರನ್ನು ಪ್ಲೇಆಫ್​ ಹೀರೋ ಎಂದರೂ ತಪ್ಪಾಗಲ್ಲ. ಒಟ್ಟು 5 ಪ್ಲೇಆಫ್ ಪಂದ್ಯಗಳಲ್ಲಿ 4 ಫಿಫ್ಟಿ ಬಾರಿಸಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಿರುವ ವೆಂಕಿ, ಐಪಿಎಲ್ ಪ್ಲೇಆಫ್ ಇತಿಹಾಸಲ್ಲಿ ಸತತ 4ನೇ ಅರ್ಧಶತಕ ದಾಖಲಿಸಿದ ಮೊದಲ ಆಟಗಾರ.

ಚೆನ್ನೈನ ಎಂಎ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಫೈಟ್​ನಲ್ಲಿ ಎಸ್​ಆರ್​ಹೆಚ್ ಅನ್ನು 8 ವಿಕೆಟ್​ಗಳಿಂದ ಮಣಿಸಿದ ಕೆಕೆಆರ್​, 3ನೇ ಬಾರಿಗೆ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿತು. ಮೊದಲು ಬ್ಯಾಟಿಂಗ್ ಮಾಡಿದ ಆರೆಂಜ್ ಆರ್ಮಿ, 18.3 ಓವರ್​ಗಳಲ್ಲಿ 113 ರನ್​ಗಳಿಸಿ ಆಲೌಟ್ ಆಯಿತು. ಸಾಧಾರಣ ಬೆನ್ನಟ್ಟಿದ ಪರ್ಪಲ್ ಆರ್ಮಿ, ವೆಂಕಟೇಶ್ ಅವರ ಅದ್ಭುತ ಪ್ರದರ್ಶನದಿಂದ 57 ಎಸೆತಗಳು ಬಾಕಿ ಇರುವಂತೆಯೇ ಗೆದ್ದು ಬೀಗಿತು. ಕೆಕೆಆರ್​ 2014ರ ನಂತರ ಅಂದರೆ, 10 ವರ್ಷಗಳ ಚಾಂಪಿಯನ್​ ಆಯಿತು.

ಐಪಿಎಲ್ ಪ್ಲೇಆಫ್​ಗಳಲ್ಲಿ ವೆಂಕಟೇಶ್ ಅಯ್ಯರ್ ಪ್ರದರ್ಶನ

ಐಪಿಎಲ್​ ಪ್ಲೇಆಫ್ ಪಂದ್ಯಗಳಲ್ಲಿ ಎಡಗೈ ಬ್ಯಾಟರ್ ವೆಂಕಟೇಶ್ ಅಯ್ಯರ್, ಅದ್ಭುತ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. 2021ರ ಐಪಿಎಲ್​ನಲ್ಲಿ ಕೆಕೆಆರ್​ ಫೈನಲ್​ ಪ್ರವೇಶಿಸಿದಾಗಲೂ ಗಮನಾರ್ಹ ಪ್ರದರ್ಶನ ನೀಡಿದ್ದರು. ಅಂದು ಎಲಿಮಿನೇಟರ್​​ನಲ್ಲಿ ಆರ್​​ಸಿಬಿ ವಿರುದ್ಧ 26 ರನ್ ಗಳಿಸಿದ್ದ ವೆಂಕಿ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ 2ನೇ ಕ್ವಾಲಿಫೈಯರ್​ನಲ್ಲಿ 55 ರನ್ ಸಿಡಿಸಿ ತಂಡವನ್ನು ಫೈನಲ್​ಗೇರಿಸಿದ್ದರು. ಫೈನಲ್​ನಲ್ಲೂ ಸಿಎಸ್​ಕೆ ವಿರುದ್ಧ 50 ರನ್ ಬಾರಿಸಿದ್ದರೂ ಕೆಕೆಆರ್​ ರನ್ನರ್​​ಅಪ್​ಗೆ ತೃಪ್ತಿಯಾಗಿತ್ತು. ಇದೀಗ ಆ ಲೋಪದೋಷ ಸರಿಪಡಿಸಿ ಇದೀಗ ಕೆಕೆಆರ್​ಗೆ ಟ್ರೋಫಿ ಗೆದ್ದುಕೊಟ್ಟಿದ್ದಾರೆ.

ಅಂದು ತಾನು ಉತ್ತಮ ಪ್ರದರ್ಶನ ನೀಡಿದರೂ ಟ್ರೋಫಿ ಗೆಲ್ಲಲು ಸಾಧ್ಯವಾಗಿರಲಿಲ್ಲ. 2024ರ ಐಪಿಎಲ್​ ಪ್ಲೇಆಫ್​​ಗಳನ್ನೂ ಅತ್ಯುತ್ತಮ ಪ್ರದರ್ಶನ ತೋರಿರುವ ಮಧ್ಯ ಪ್ರವೇಶದ ಆಟಗಾರ, ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ಎಸ್​ಆರ್​ಹೆಚ್ ವಿರುದ್ಧ ಅಜೇಯ 51 ರನ್ ಬಾರಿಸಿದ್ದರು. ಇದೀಗ ಫೈನಲ್ ಪಂದ್ಯದಲ್ಲೂ ಅದೇ ತಂಡದ ಎದುರು ಅಜೇಯ 52 ರನ್ ಗಳಿಸಿದ್ದಾರೆ. ತಾನು ಎದುರಿಸಿದ 26 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್​ ಸಹಿತ 52 ಚಚ್ಚಿದ್ದಾರೆ. ಅವರ ಸ್ಟ್ರೈಕ್​ರೇಟ್ 200.

ಫೈನಲ್​ನಲ್ಲಿ ಅತಿವೇಗದ ಅರ್ಧಶತಕ

ವೆಂಕಟೇಶ್ ಅಯ್ಯರ್ ಐಪಿಎಲ್ ಫೈನಲ್‌ನಲ್ಲಿ ಜಂಟಿ-ವೇಗದ ಅರ್ಧಶತಕ ಗಳಿಸಿ ದಾಖಲೆ ಬರೆದರು. ಎದುರಿಸಿದ 24ನೇ ಎಸೆತದಲ್ಲಿ ಎಸ್​ಆರ್​ಹೆಚ್​ ವಿರುದ್ಧ ಅರ್ಧಶತಕ ಪೂರ್ಣಗೊಳಿಸಿದರು. ಈ ಹಿಂದೆ ಸುರೇಶ್ ರೈನಾ (CSK) ಮತ್ತು ಡೇವಿಡ್ ವಾರ್ನರ್ (SRH) ಜಂಟಿಯಾಗಿ ಹೊಂದಿದ್ದ 24-ಬಾಲ್ ಮಾರ್ಕ್ ಅನ್ನು ಸಮಗೊಳಿಸಿದರು. ಅಲ್ಲದೆ, ಪ್ಲೇಆಫ್​​ನಲ್ಲಿ ದಾಖಲಿಸಿದ ಸತತ ನಾಲ್ಕನೇ ಅರ್ಧಶತಕ ಇದಾಗಿದೆ.

2024ರ ಐಪಿಎಲ್​ನಲ್ಲಿ ವೆಂಕಟೇಶ್ ಅಯ್ಯರ್ ಪ್ರದರ್ಶನ

ಪ್ರಸಕ್ತ ಐಪಿಎಲ್​ನಲ್ಲಿ ವೆಂಕಟೇಶ್ ಅಯ್ಯರ್ ಅಮೇಜಿಂಕ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ಆಡಿದ 14 ಪಂದ್ಯಗಳ ಪೈಕಿ 13 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿದ್ದು, 46.25ರ ಬ್ಯಾಟಿಂಗ್ ಸರಾಸರಿಯಲ್ಲಿ 370 ರನ್ ಚಚ್ಚಿದ್ದಾರೆ.

ಮಧ್ಯಪ್ರದೇಶದ ಇಂದೋರ್​ ಮೂಲದ ಆಲ್​ರೌಂಡರ್​

29 ವರ್ಷದ ಎಡಗೈ ಬ್ಯಾಟ್ಸ್‌ಮನ್ ಮತ್ತು ಬಲಗೈ ಮಧ್ಯಮ ವೇಗಿ ವೆಂಕಟೇಶ್ ರಾಜಶೇಖರನ್ ಅಯ್ಯರ್ ಜನಿಸಿದ್ದು ಡಿಸೆಂಬರ್ 25, 1994ರಲ್ಲಿ ಮಧ್ಯಪ್ರದೇಶದ ಇಂದೋರ್‌ನಲ್ಲಿ. ಬಾಲ್ಯದಿಂದಲೂ ಕ್ರಿಕೆಟ್​ ಹುಚ್ಚು ಹೆಚ್ಚಿಸಿಕೊಂಡಿದ್ದ ವೆಂಕಿ, ತಂದೆ-ತಾಯಿ ಅವರ ಬೆಂಬಲದಿಂದ ಓದಿನೊಂದಿಗೆ ಕ್ರಿಕೆಟ್‌ ಕಡೆಯೂ ಹೆಚ್ಚಿನ ಗಮನ ಹರಿಸಿದರು. ಕ್ರಿಕೆಟ್​​ನಲ್ಲಿ ಸತತ ಪರಿಶ್ರಮ ಹಾಕಿದ ವೆಂಕಿ, ಮಧ್ಯಪ್ರದೇಶ ಅಂಡರ್-16 ತಂಡದಲ್ಲಿ ಸ್ಥಾನ ಪಡೆದರು.

ಆ ಬಳಿಕ ತಿರುಗಿ ನೋಡಿದ್ದೇ ಇಲ್ಲ. ಪವರ್‌ಫುಲ್ ಬ್ಯಾಟಿಂಗ್ ಮತ್ತು ಖಡಕ್ ಬೌಲಿಂಗ್ ಕೌಶಲ್ಯದಿಂದ ಐಪಿಎಲ್‌ನಲ್ಲಿ ಕೆಕೆಆರ್‌ ಫ್ರಾಂಚೈಸಿ ಸೇರಿದ ಎಡಗೈ ಬ್ಯಾಟರ್​, ಸಿಕ್ಕ ಅವಕಾಶವನ್ನ ಎರಡೂ ಕೈಗಳಲ್ಲಿ ಬಾಚಿಕೊಂಡರು. ಆರಂಭಿಕನಾಗಿ ಬೆಂಕಿ-ಬಿರುಗಾಳಿ ಪ್ರದರ್ಶನ ನೀಡಿದರು. 2018ರ ಡಿಸೆಂಬರ್ 6 ರಂದು ಹೈದ್ರಾಬಾದ್ ವಿರುದ್ಧ ಪ್ರಥಮ ದರ್ಜೆ ಕ್ರಿಕೆಟ್‌ಗೆ ಕಾಲಿಟ್ಟ ಅಯ್ಯರ್, ಸೌರಾಷ್ಟ್ರ ವಿರುದ್ಧ 2015ರಲ್ಲೇ ದೇಶೀಯ ಏಕದಿನ ಕ್ರಿಕೆಟ್ ಆಡಿದರು. ಅದೇ ವರ್ಷ ರೈಲ್ವೇಸ್ ವಿರುದ್ಧ ಟಿ20ಗೂ ಕಾಲಿಟ್ಟರು.

ಟೀಮ್ ಇಂಡಿಯಾ ಪರ 2 ಏಕದಿನ, 9 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿರುವ 157 ರನ್ ಗಳಿಸಿದ್ದಾರೆ. ಬೌಲಿಂಗ್​ನಲ್ಲಿ 5 ವಿಕೆಟ್ ಉರುಳಿಸಿದ್ದಾರೆ. 20 ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 1132 ರನ್, 43 ಲೀಸ್ಟ್​ ಎ ಪಂದ್ಯಗಳಲ್ಲಿ 1458 ರನ್ ಕಲೆ ಹಾಕಿದ್ದಾರೆ. 50 ಐಪಿಎಲ್ ಪಂದ್ಯಗಳಲ್ಲಿ 1326 ರನ್ ಗಳಿಸಿದ್ದಾರೆ.

 

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ