logo
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್ ಫೈನಲ್ ಗೆಲ್ಲೋದ್ಯಾರು, ಚೆಪಾಕ್​ ಪಿಚ್​ ಯಾರಿಗೆ ನೆರವು; ಟಾಸ್ ಗೆದ್ದವರು ಯಾವುದು ಆಯ್ಕೆ ಮಾಡಬೇಕು? ಇಲ್ಲಿದೆ ಉತ್ತರ

ಐಪಿಎಲ್ ಫೈನಲ್ ಗೆಲ್ಲೋದ್ಯಾರು, ಚೆಪಾಕ್​ ಪಿಚ್​ ಯಾರಿಗೆ ನೆರವು; ಟಾಸ್ ಗೆದ್ದವರು ಯಾವುದು ಆಯ್ಕೆ ಮಾಡಬೇಕು? ಇಲ್ಲಿದೆ ಉತ್ತರ

Prasanna Kumar P N HT Kannada

May 26, 2024 07:00 AM IST

google News

ಐಪಿಎಲ್ ಫೈನಲ್ ಗೆಲ್ಲೋದ್ಯಾರು, ಚೆಪಾಕ್​ ಪಿಚ್​ ಯಾರಿಗೆ ನೆರವು; ಟಾಸ್ ಗೆದ್ದವರು ಯಾವುದು ಆಯ್ಕೆ ಮಾಡಬೇಕು? ಇಲ್ಲಿದೆ ಉತ್ತರ

    • KKR vs SRH Final Pitch Report: 17ನೇ ಆವೃತ್ತಿಯ ಐಪಿಎಲ್​ ಫೈನಲ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಚೆನ್ನೈನ ಎಂಎ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ಮುಖಾಮುಖಿಯಾಗುತ್ತಿವೆ. ಫೈನಲ್ ಗೆಲ್ಲೋದ್ಯಾರು? ಚೆಪಾಕ್ ಪಿಚ್ ಯಾರಿಗೆ ನೆರವು? ಇಲ್ಲಿದೆ ವಿವರ.
ಐಪಿಎಲ್ ಫೈನಲ್ ಗೆಲ್ಲೋದ್ಯಾರು, ಚೆಪಾಕ್​ ಪಿಚ್​ ಯಾರಿಗೆ ನೆರವು; ಟಾಸ್ ಗೆದ್ದವರು ಯಾವುದು ಆಯ್ಕೆ ಮಾಡಬೇಕು? ಇಲ್ಲಿದೆ ಉತ್ತರ
ಐಪಿಎಲ್ ಫೈನಲ್ ಗೆಲ್ಲೋದ್ಯಾರು, ಚೆಪಾಕ್​ ಪಿಚ್​ ಯಾರಿಗೆ ನೆರವು; ಟಾಸ್ ಗೆದ್ದವರು ಯಾವುದು ಆಯ್ಕೆ ಮಾಡಬೇಕು? ಇಲ್ಲಿದೆ ಉತ್ತರ

KKR vs SRH Final Pitch Report: ಐಪಿಎಲ್​-2024ರ ಫೈನಲ್​ ಪಂದ್ಯವು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ನಡೆಯಲಿದೆ. ಎರಡು ತಿಂಗಳಿಗೂ ಹೆಚ್ಚು ಕಾಲ ನಡೆದ ಈ ಟೂರ್ನಿಯ ಅಂತಿಮ ಪಂದ್ಯ ಮೇ 26ರ ಭಾನುವಾರ ನಡೆಯಲಿದೆ. ಚೆನ್ನೈನ ಎಂಎ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಈ ಪ್ರಶಸ್ತಿ ಸುತ್ತಿನ ಪಂದ್ಯಕ್ಕಾಗಿ ಇತ್ತಂಡಗಳು ಸಂಪೂರ್ಣ ಸಜ್ಜಾಗಿವೆ. ಅದೇ ರೀತಿ ಅಭಿಮಾನಿಗಳು ಸಹ ಇಂತಹ ಪರಿಸ್ಥಿತಿಯಲ್ಲಿ ರೋಚಕ ಪಂದ್ಯದ ನಿರೀಕ್ಷೆಯಲ್ಲಿದ್ದಾರೆ. ಆದರೆ, ಈ ಹೈವೋಲ್ಟೇಜ್​ ಪಂದ್ಯಕ್ಕೆ ಪಿಚ್ ಪಾತ್ರ ಪ್ರಮುಖವಾಗಿರಲಿದೆ. ಈ ಪಂದ್ಯದಲ್ಲಿ ಚೆನ್ನೈ ಪಿಚ್‌ನಿಂದ ಯಾರಿಗೆ ಲಾಭವಾಗಲಿದೆ ಎಂದು ತಿಳಿಯೋಣ.

ಎಂಎ ಚಿದಂಬರಂ ಸ್ಟೇಡಿಯಂ ಪಿಚ್ ವರದಿ

ಎಂಎ ಚಿದಂಬರಂ ಸ್ಟೇಡಿಯಂನ ಪಿಚ್ ಸ್ಪಿನ್ ಸ್ನೇಹಿಯಾಗಿದ್ದು, ನಿಧಾನವಾಗಿರಲಿದೆ. ಕಳೆದ ಪಂದ್ಯದಲ್ಲೂ ಸ್ಪಿನ್ ಬೌಲರ್​​ಗಳ ಪ್ರಾಬಲ್ಯ ಕಂಡು ಬಂದಿದೆ. ಬ್ಯಾಟ್ಸ್​​ಮನ್​​ಗಳು ಎಚ್ಚರಿಕೆಯಿಂದ ಆಡಿದರೆ ರನ್ ಗಳಿಸಲು ಸಾಕಷ್ಟು ಅವಕಾಶ ಲಭಿಸಿದರೂ ಸ್ಪಿನ್ನರ್​ಗಳಿಂದ ದೂರ ಉಳಿಯುವುದು ಉತ್ತಮ. ಇಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 164 ರನ್ ಆಗಿದ್ದರೆ, ಎರಡನೇ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 151 ರನ್ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಟಾಸ್ ಗೆದ್ದ ನಾಯಕ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಬಹುದು.

ಕಳೆದ ಪಂದ್ಯದಲ್ಲೂ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಇಲ್ಲಿ 176 ರನ್ ಗಳ ಗುರಿ ಬೆನ್ನತ್ತಲು ಸಾಧ್ಯವಾಗಲಿಲ್ಲ. ಎರಡನೇ ಇನಿಂಗ್ಸ್‌ನಲ್ಲಿ ಇಬ್ಬನಿಯ ಅಬ್ಬರ ಹೆಚ್ಚಿದ್ದರೂ, ಫೈನಲ್‌ ದಿನದಂದು ಸ್ಥಳವು ಮೋಡ ಕವಿದ ವಾತಾವರಣವಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಇಬ್ಬನಿ ಬರುವುದು ಕಷ್ಟ ಎಂದು ತೋರುತ್ತದೆ. ಆದರೆ ಕೆಕೆಆರ್ ತಂಡದಲ್ಲಿ ಸ್ಪೆಷಲಿಸ್ಟ್​ ಸ್ಪಿನ್ನರ್​ಗಳ ದಂಡೇ ಇದ್ದು, ಅವರ ಸವಾಲಿಗೆ ಸನ್​ರೈಸರ್ಸ್​ ಹೈದರಾಬಾದ್ ಸಜ್ಜಾಗಬೇಕಿದೆ. ಆದರೂ ಈ ಆವೃತ್ತಿಯಲ್ಲಿ ಇದೇ ಪಿಚ್​​ನಲ್ಲಿ ಕೆಲ ತಂಡಗಳು 200ರ ಗಡಿ ದಾಟಿರುವುದು ವಿಶೇಷ.

ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿದರೆ ಉತ್ತಮ

ಚೆಪಾಕ್ ಮೈದಾನದಲ್ಲಿ ನಡೆಯುವ ಈ ಪಂದ್ಯದಲ್ಲಿ ಟಾಸ್ ಗೆದ್ದವರು ಬೌಲಿಂಗ್ ಆಯ್ಕೆ ಮಾಡಿಕೊಂಡರೆ ಉತ್ತಮ. ಅಂಕಿ-ಅಂಶಗಳು ಸಹ ಇದನ್ನೇ ಹೇಳುತ್ತಿವೆ. ಈ ಸ್ಟೇಡಿಯಂನಲ್ಲಿ ಈವರೆಗೂ ಒಟ್ಟು 8 ಪ್ಲೇಆಫ್ ಪಂದ್ಯಗಳು ನಡೆದಿವೆ. ಈ ಪೈಕಿ ಮೊದಲು ಬ್ಯಾಟಿಂಗ್​ ನಡೆಸಿದವರೇ 6 ಬಾರಿ ಗೆದ್ದಿರುವುದು ವಿಶೇಷ. ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ನಡೆದಿದ್ದು ಕೂಡ ಇದೆ. ಲೀಗ್​ ಪಂದ್ಯಗಳಲ್ಲೂ ಮೊದಲು ಬ್ಯಾಟಿಂಗ್​ ತಂಡಗಳೇ ಬಹುತೇಕ ಗೆದ್ದಿವೆ. ಆರಂಭದಲ್ಲಿ ವೇಗಿಗಳು ಮಿಂಚಿದರೆ, ಪಂದ್ಯ ಮುಂದುವರೆದಂತೆ ಸ್ಪಿನ್ನರ್​ಗಳು ಮಿಂಚಲಿದ್ದಾರೆ.

KKR vs SRH ಚೆನ್ನೈನಲ್ಲಿ ಮುಖಾಮುಖಿ

ಈ ಋತುವಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ಲೀಗ್ ಹಂತದ ಒಂದು ಪಂದ್ಯ ಮಾತ್ರ ನಡೆದಿತ್ತು. ನಂತರ ಪ್ಲೇ ಆಫ್‌ನಲ್ಲಿ ಎರಡು ತಂಡಗಳ ನಡುವೆ ಪಂದ್ಯ ನಡೆಯಿತು. ಎರಡೂ ಪಂದ್ಯಗಳಲ್ಲಿ ಕೆಕೆಆರ್ ತಂಡವೇ ಗೆದ್ದಿದೆ. ಚೆನ್ನೈ ಮೈದಾನದಲ್ಲಿ ಉಭಯ ತಂಡಗಳು 2ನೇ ಬಾರಿಗೆ ಸೆಣಸಾಟಕ್ಕೆ ಸಜ್ಜಾಗಿದ್ದು, ಕೆಕೆಆರ್, ಎಸ್‌ಆರ್‌ಎಚ್ ತಂಡವನ್ನು 10 ರನ್‌ಗಳಿಂದ ಸೋಲಿಸಿತ್ತು. ಇದೀಗ ಮತ್ತೊಂದು ಗೆಲುವಿನ ಕನಸಿನಲ್ಲಿದೆ ಶ್ರೇಯಸ್ ಅಯ್ಯರ್ ಪಡೆ.

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಕೆಕೆಆರ್ ದಾಖಲೆ

ಪಂದ್ಯಗಳು - 14

ಗೆಲುವು - 4

ಸೋಲು - 10

ಮೊದಲು ಬ್ಯಾಟಿಂಗ್ ನಡೆಸಿ ಗೆಲುವು - 1

ಚೇಸಿಂಗ್​ನಲ್ಲಿ ಗೆಲುವು - 3

ಅತ್ಯಧಿಕ ಸ್ಕೋರ್ - 202

ಕಡಿಮೆ ಸ್ಕೋರ್ - 108

ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ಎಸ್​ಆರ್​ಹೆಚ್ ದಾಖಲೆ

ಪಂದ್ಯ - 11

ಗೆಲುವು - 2

ಸೋಲು - 8

ಟೈ - 1 (ಸೂಪರ್ ಓವರ್​ನಲ್ಲಿ ಸೋಲು)

ಮೊದಲು ಬ್ಯಾಟಿಂಗ್ ನಡೆಸಿ ಗೆಲುವು - 1

ಚೇಸಿಂಗ್​ನಲ್ಲಿ ಗೆಲುವು - 1

ಅತ್ಯಧಿಕ ಸ್ಕೋರ್ - 177

ಕಡಿಮೆ ಮೊತ್ತ - 134

ಎಸ್​ಆರ್​ಹೆಚ್​ vs ಕೆಕೆಆರ್ ಮುಖಾಮುಖಿ ದಾಖಲೆ

ಪಂದ್ಯಗಳು - 27

ಕೆಕೆಆರ್ ಗೆಲುವು - 18

ಎಸ್​ಆರ್​ಹೆಚ್ ಗೆಲುವು - 09

 

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ