logo
ಕನ್ನಡ ಸುದ್ದಿ  /  ಕ್ರಿಕೆಟ್  /  ಇದು ಭಾರತದ ಅತ್ಯಂತ ಸುಂದರ ಕ್ರೀಡಾಂಗಣ; ಧರ್ಮಶಾಲಾ ಮೈದಾನದಲ್ಲಿ 5 ವಿಶ್ವಕಪ್‌ ಪಂದ್ಯಗಳು

ಇದು ಭಾರತದ ಅತ್ಯಂತ ಸುಂದರ ಕ್ರೀಡಾಂಗಣ; ಧರ್ಮಶಾಲಾ ಮೈದಾನದಲ್ಲಿ 5 ವಿಶ್ವಕಪ್‌ ಪಂದ್ಯಗಳು

Jayaraj HT Kannada

Sep 30, 2023 06:00 AM IST

ಹಿಮಾಚಲ ಪ್ರದೇಶ ಕ್ರಿಕೆಟ್‌ ಅಸೋಸಿಯೇಶನ್‌ ಸ್ಟೇಡಿಯಂ, ಧರ್ಮಶಾಲಾ

    • Dharamsala Cricket Stadium: ಹಿಮಪರ್ವತಗಳ ತಪ್ಪಲಲ್ಲಿರುವ ಸುಂದರ ಕ್ರೀಡಾಂಗಣವು ಏಕದಿನ ವಿಶ್ವಕಪ್‌ ಪಂದ್ಯಗಳ ಆತಿಥ್ಯಕ್ಕೆ ಸಜ್ಜುಗೊಂಡಿದೆ. ಮನಮೋಹಕ ಕ್ರೀಡಾಂಗಣದ ವೈಶಿಷ್ಟ್ಯಗಳ ಕುರಿತು ನೋಡಿಕೊಂಡು ಬರೋಣ.
ಹಿಮಾಚಲ ಪ್ರದೇಶ ಕ್ರಿಕೆಟ್‌ ಅಸೋಸಿಯೇಶನ್‌ ಸ್ಟೇಡಿಯಂ, ಧರ್ಮಶಾಲಾ
ಹಿಮಾಚಲ ಪ್ರದೇಶ ಕ್ರಿಕೆಟ್‌ ಅಸೋಸಿಯೇಶನ್‌ ಸ್ಟೇಡಿಯಂ, ಧರ್ಮಶಾಲಾ (Twitter)

ಪ್ರವಾಸಿ ತಾಣಗಳಿಗೆ ಹೆಸರುವಾಸಿಯಾಗಿರುವ ಭಾರತದ ಸುಂದರ ರಾಜ್ಯ ಹಿಮಾಚಲ ಪ್ರದೇಶ. ಇಲ್ಲಿನ ಅಂತಾರಾಷ್ಟ್ರೀಯ ಕ್ರಿಕೆಟ್‌ ಮೈದಾನ ಕೂಡಾ ಅಷ್ಟೇ ಸುಂದರ. ಧರ್ಮಶಾಲಾ (Dharamsala) ಅಥವಾ ಹಿಮಾಚಲ ಪ್ರದೇಶ ಕ್ರಿಕೆಟ್‌ ಅಸೋಸಿಯೇಶನ್‌ ಸ್ಟೇಡಿಯಂ (Himachal Pradesh Cricket Association Stadium) ಎಂದು ಕರೆಸಿಕೊಳ್ಳುವ ಈ ಕ್ರೀಡಾಂಗಣವು, ಭಾರತದ ಅತ್ಯಂದ ಸುಂದರವಾದ ಕ್ರೀಡಾಂಗಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲದೆ ವಿಶ್ವದ ಅಗ್ರ ಹತ್ತು ಸುಂದರ ಕ್ರಿಕೆಟ್‌ ಮೈದಾನಗಳ ಪಟ್ಟಿಯಲ್ಲಿಯೂ ಈ ಸ್ಟೇಡಿಯಂ ಸ್ಥಾನ ಪಡೆದಿದೆ.

ಟ್ರೆಂಡಿಂಗ್​ ಸುದ್ದಿ

RCB Hosa Adhyaya: ಸಿಎಸ್​ಕೆ ವಿರುದ್ಧ ಪರಾಕ್ರಮ ಮೆರೆದು ಪ್ಲೇಆಫ್ ಹೆಬ್ಬಾಗಿಲು ದಾಟಲು ಪ್ರಮುಖ 6 ಕಾರಣಗಳು

ಬೆಂಗಳೂರು ಬೀದಿಗಳಲ್ಲಿ ರಾತ್ರಿ 1.30ಕ್ಕೂ ವಿರಾಟ್‌ ಫ್ಯಾನ್ಸ್‌ ಹರ್ಷೋದ್ಘಾರ; ವಿಡಿಯೋ ಹಂಚಿಕೊಂಡು ನೀವೇ ಬೆಸ್ಟ್‌ ಎಂದ ಆರ್‌ಸಿಬಿ

ಐಪಿಎಲ್‌ 2024: ಇಂದು ಲೀಗ್‌ ಹಂತದ ಕೊನೆಯ 2 ಪಂದ್ಯಗಳು; ಎಲಿಮನೇಟರ್‌ನಲ್ಲಿ ಆರ್‌ಸಿಬಿ ಎದುರಾಳಿಯಾಗೋರು ಯಾರು?

Video: ಜಿನುಗುತ್ತಿದ್ದ ಕಣ್ಣೀರು ಅದುಮಿಟ್ಟ ವಿರಾಟ್‌-ಅನುಷ್ಕಾ; ಆರ್‌ಸಿಬಿ ಪ್ಲೇಆಫ್‌ ಪ್ರವೇಶಿಸುತ್ತಿದ್ದಂತೆ ವಿರುಷ್ಕಾ ಭಾವುಕ

ಸಮುದ್ರ ಮಟ್ಟದಿಂದ ಬರೋಬ್ಬರಿ 1457 ಮೀಟರ್‌ಗಳಷ್ಟು ಎತ್ತರದಲ್ಲಿರುವ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (HPCA) ಕ್ರೀಡಾಂಗಣದ ಸುತ್ತಲೂ ಶಿಖರಗಳನ್ನು ಕಾಣಬಹುದು. ಸುಂದರವಾದ ಧೌಲಾಧರ್ ಪರ್ವತ ಶ್ರೇಣಿಯು ಮೈದಾನದ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ನೀಡುತ್ತದೆ. ಈ ಶಿಖರಗಳು ಹಿಮದಿಂದ ಆವೃತವಾದಾಗ ಇಲ್ಲಿ ನಡೆಯಯವ ಪಂದ್ಯಗಳನ್ನು ಸವಿಯುವುದೇ ಹಬ್ಬ. ಇಂಥ ಸುಂದರ ಕ್ರೀಡಾಂಗಣವು ವಿಶ್ವಕಪ್‌ ಪಂದ್ಯಗಳ ಆತಿಥ್ಯಕ್ಕೆ ಸಜ್ಜಾಗಿದೆ.

  • ಹೆಸರು: ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್
  • ಆರಂಭ: 2003
  • ಪ್ರೇಕ್ಷಕರ ಸಾಮರ್ಥ್ಯ : 23000
  • ಪೆವಿಲಿಯನ್‌ ಎಂಡ್‌ಗಳು: ರಿವರ್ ಎಂಡ್, ಕಾಲೇಜ್ ಎಂಡ್
  • ಸ್ಥಳ : ಧರ್ಮಶಾಲಾ, ಹಿಮಾಚಲ ಪ್ರದೇಶ

ಧರ್ಮಶಾಲಾ ಮೈದಾನವು ವಿಶ್ವಕಪ್‌ನ ಐದು ಪಂದ್ಯಗಳ ಆತಿಥ್ಯಕ್ಕೆ ಸಜ್ಜಾಗಿದೆ. ಅಕ್ಟೋಬರ್ 22ರಂದು ಗಮನ ಭಾರತ ಮತ್ತು ನ್ಯೂಜಿಲೆಂಡ್ ಪಂದ್ಯವು ಇಲ್ಲಿ ನಡೆಯಲಿದೆ.

  • ಅಕ್ಟೋಬರ್ 7 : ಬಾಂಗ್ಲಾದೇಶ vs ಅಫ್ಘಾನಿಸ್ತಾನ
  • ಅಕ್ಟೋಬರ್ 10 : ಇಂಗ್ಲೆಂಡ್ vs ಬಾಂಗ್ಲಾದೇಶ
  • ಅಕ್ಟೋಬರ್ 17 : ದಕ್ಷಿಣ ಆಫ್ರಿಕಾ vs ನೆದರ್ಲ್ಯಾಂಡ್ಸ್
  • ಅಕ್ಟೋಬರ್ 22 : ಭಾರತ vs ನ್ಯೂಜಿಲ್ಯಾಂಡ್
  • ಅಕ್ಟೋಬರ್ 28 : ಆಸ್ಟ್ರೇಲಿಯಾ vs ನ್ಯೂಜಿಲೆಂಡ್

ವಿಶ್ವಕಪ್‌ ಹಿನ್ನೆಲೆಯಲ್ಲಿ ಇತ್ತೀಚೆಗೆ ಈ ಮೈದಾನವನ್ನು ದೊಡ್ಡ ಮಟ್ಟದಲ್ಲಿ ನವೀಕರಿಸಲಾಗಿದೆ. ಉತ್ತಮ ಒಳಚರಂಡಿ ವ್ಯವಸ್ಥೆ, ಮತ್ತು ಎಲ್ಲಾ ರೀತಿಯ ಹವಾಮಾನ ಪರಿಸ್ಥಿತಿಗಳಿಗೆ ಸೂಕ್ತವಾದ ಹುಲ್ಲುಹಾಸನ್ನು ಮೈದಾನದ ಮೇಲ್ಮೈಗೆ ಅಳವಡಿಸಲಾಗಿದೆ. ಅತ್ಯಾಧುನಿಕ ಒಳಚರಂಡಿ ವ್ಯವಸ್ಥೆಯಿಂದಾಗಿ, ಮಳೆ ಬಂದರೆ ಪಂದ್ಯವು ತಡವಾಗುವ ಆತಂಕ ಇಲ್ಲಿಲ್ಲ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಂತೆಯೇ, ಇಲ್ಲಿಯ ಔಟ್‌ಫೀಲ್ಡ್ ಕೂಡಾ ಮಳೆಯನ್ನು ನಿಭಾಯಿಸಬಲ್ಲದು. ಅಂದರೆ, ಮಳೆ ನೀರು ಸುಲಭವಾಗಿ ಇಂಗಿ ಒಳಚರಂಡಿಯ ಕೊಳವೆಗಳ ಮೂಲಕ ನೀರನ್ನು ಹೊರಹಾಕುವ ವ್ಯವಸ್ಥೆ ಇದೆ. ಮಳೆ ನಿಂತ 15 ನಿಮಿಷಗಳಲ್ಲಿ ಪಂದ್ಯವು ಪುನರಾರಂಭವಾಗುವಂತೆ ವ್ಯವಸ್ಥೆ ಮಾಡಲಾಗಿದೆ.

ಮೈದಾನಕ್ಕೆ ಹೊಸ ಎಲ್ಇಡಿ ದೀಪಗಳನ್ನು ಸಹ ಅಳವಡಿಸಲಾಗಿದೆ. ಪಂದ್ಯ ವೀಕ್ಷಿಸಲು ಬರುವ ಅಭಿಮಾನಿಗಳಿಗೆ ವಿಶ್ವದರ್ಜೆಯ ಅನುಭವ ನೀಡಲು ಕ್ರೀಡಾಂಗಣದಲ್ಲಿ ಹಲವಾರು ಕೆಲಸಗಳು ನಡೆದಿವೆ. ಮೈದಾನದಲ್ಲಿ ಸ್ಟ್ಯಾಂಡ್‌ಗಳನ್ನು ಕೂಡಾ ನವೀಕರಿಸಲಾಗಿದೆ. ಮೈದಾನಲ್ಲಿ ಐಪಿಎಲ್‌ ಪಂದ್ಯಗಳು ಸೇರಿದಂತೆ ಈಗಾಗಲೇ ಒಂದು ಟೆಸ್ಟ್‌, ನಾಲ್ಕು ಏಕದಿನ ಹಾಗೂ 11 ಟಿ20 ಪಂದ್ಯಗಳು ನಡೆದಿವೆ. ಇದೀಗ ವಿಶ್ವಕಪ್‌ ಪಂದ್ಯಗಳ ಆತಿಥ್ಯಕ್ಕೂ ಸುಂದರ ಕ್ರೀಡಾಂಗಣ ಸಜ್ಜಾಗಿದೆ.

ಪಿಚ್‌ ಹೇಗಿದೆ

ಮೈದಾನವು ಎತ್ತರದಲ್ಲಿರುವುದರಿಂದ, ಚೆಂಡು ವೇಗವಾಗಿ ಚಲಿಸುತ್ತದೆ. ಸೆಪ್ಟೆಂಬರ್‌ನಿಂದ ಮಾರ್ಚ್ ಅವಧಿಯಲ್ಲಿ ಪಂದ್ಯಗಳಿದ್ದಾಗ ಸಂಜೆಯ ಅವಧಿಯಲ್ಲಿ ಇಬ್ಬನಿ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ತಂಡಗಳು ಈ ಮೈದಾನದಲ್ಲಿ ಚೇಸ್ ಮಾಡಲು ಆದ್ಯತೆ ನೀಡುತ್ತವೆ. ಭಾರತದ ಸಾಮಾನ್ಯ ಪಿಚ್‌ಗಳಂತೆ ಇಲ್ಲಿಯೂ ಹೆಚ್ಚು ರನ್‌ ಹರಿದು ಬರುತ್ತದೆ.

IPL, 2024

Live

PBKS

5/0

0.5 Overs

VS

SRH

YTB

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ