logo
ಕನ್ನಡ ಸುದ್ದಿ  /  ಕ್ರಿಕೆಟ್  /  ವೆಲ್‌ ಡನ್‌; ಕೇಂದ್ರ ಗುತ್ತಿಗೆಯಿಂದ ಕಿಶನ್-ಅಯ್ಯರ್ ಕೈಬಿಟ್ಟ ಬಿಸಿಸಿಐ ನಿರ್ಧಾರ ಸ್ವಾಗತಿಸಿದ ಕಪಿಲ್ ದೇವ್

ವೆಲ್‌ ಡನ್‌; ಕೇಂದ್ರ ಗುತ್ತಿಗೆಯಿಂದ ಕಿಶನ್-ಅಯ್ಯರ್ ಕೈಬಿಟ್ಟ ಬಿಸಿಸಿಐ ನಿರ್ಧಾರ ಸ್ವಾಗತಿಸಿದ ಕಪಿಲ್ ದೇವ್

Jayaraj HT Kannada

Mar 01, 2024 06:26 PM IST

ಕೇಂದ್ರ ಗುತ್ತಿಗೆಯಿಂದ ಕಿಶನ್-ಅಯ್ಯರ್ ಕೈಬಿಟ್ಟ ಬಿಸಿಸಿಐ ನಿರ್ಧಾರ ಸ್ವಾಗತಿಸಿದ ಕಪಿಲ್ ದೇವ್

    • Kapil Dev:‌ ದೇಶೀಯ ಕ್ರಿಕೆಟ್‌ಗೆ ಆದ್ಯತೆ ನೀಡದ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರ ಕೇಂದ್ರ ಗುತ್ತಿಗೆಯನ್ನು ರದ್ದುಪಡಿಸಿದ ಬಿಸಿಸಿಐ ನಿರ್ಧಾರದ ಕುರಿತು, ಭಾರತದ ಮಾಜಿ ನಾಯಕ ಕಪಿಲ್ ದೇವ್ ಪ್ರತಿಕ್ರಿಯೆ ನೀಡಿದ್ದಾರೆ. ಕ್ರಿಕೆಟ್‌ ಮಂಡಳಿಯ ನಿರ್ಧಾರವನ್ನು ಸ್ವಾಗತಿಸಿದ ಅವರು, ವೆಲ್‌ ಡನ್‌ ಎಂದಿದ್ದಾರೆ.
 ಕೇಂದ್ರ ಗುತ್ತಿಗೆಯಿಂದ ಕಿಶನ್-ಅಯ್ಯರ್ ಕೈಬಿಟ್ಟ ಬಿಸಿಸಿಐ ನಿರ್ಧಾರ ಸ್ವಾಗತಿಸಿದ ಕಪಿಲ್ ದೇವ್
ಕೇಂದ್ರ ಗುತ್ತಿಗೆಯಿಂದ ಕಿಶನ್-ಅಯ್ಯರ್ ಕೈಬಿಟ್ಟ ಬಿಸಿಸಿಐ ನಿರ್ಧಾರ ಸ್ವಾಗತಿಸಿದ ಕಪಿಲ್ ದೇವ್ (Getty/PTI)

ಐಪಿಎಲ್‌ಗಿಂತ ದೇಶೀಯ ಕ್ರಿಕೆಟ್‌ಗೆ ಆದ್ಯತೆ ನೀಡುವ ಬಿಸಿಸಿಐ ನಿರ್ಧಾರವನ್ನು ಭಾರತದ ಮಾಜಿ ನಾಯಕ ಹಾಗೂ ವಿಶ್ವಕಪ್‌ ಹೀರೋ ಕಪಿಲ್ ದೇವ್ (Kapil Dev) ಸ್ವಾಗತಿಸಿದ್ದಾರೆ. ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯು ಇತ್ತೀಚೆಗಷ್ಟೇ ಶ್ರೇಯಸ್‌ ಅಯ್ಯರ್‌ ಹಾಗೂ ಇಶಾನ್‌ ಕಿಶನ್‌ ಅವರನ್ನು ಕೇಂದ್ರೀಯ ಒಪ್ಪಂದಿಂದ ಕೈಬಿಟ್ಟಿತು. ಹೀಗಾಗಿ ಕಪಿಲ್‌ ದೇವ್ ಅವರ‌ ಹೇಳಿಕೆಯು ಈ ಇಬ್ಬರು ಕ್ರಿಕೆಟಿಗರನ್ನು ಉಲ್ಲೇಖಿಸಿ ಬಂದಿರುವುದರಲ್ಲಿ ಅನುಮಾನವಿಲ್ಲ. ಉಭಯ ಆಟಗಾರರ ಹೆಸರನ್ನು ಕಪಿಲ್ ಉಲ್ಲೇಖಿಸದಿದ್ದರೂ, ರಣಜಿ ಟ್ರೋಫಿ ಆಡುವಂತೆ ಬಿಸಿಸಿಐ ಸಲಹೆಯನ್ನು ಅನುಸರಿಸದೆ ಗುತ್ತಿಗೆಯಿಂದ ಹೊರಬಿದ್ದ ಅಯ್ಯರ್ ಮತ್ತು ಇಶಾನ್ ಗುರಿಯಾಗಿಸಿಕೊಂಡು ಈ ಮಾತು ಹೇಳಿದ್ದಾರೆ ಎಂಬುದಂತೂ ಸ್ಪಷ್ಟ.

ಟ್ರೆಂಡಿಂಗ್​ ಸುದ್ದಿ

ಈ ಥರ ಆಡಿದ್ರೆ ಈ ಸಲ ಕಪ್ ನಮ್ದೇ; ಆರ್‌ಸಿಬಿ ತಂಡದ ಸಾಮರ್ಥ್ಯ, ದೌರ್ಬಲ್ಯ ಹಾಗೂ ಗೆಲುವಿನ ಎಕ್ಸ್-ಫ್ಯಾಕ್ಟರ್‌ಗಳಿವು

ಭಾರತ ತಂಡದ ಮುಖ್ಯ ಕೋಚ್ ಆಯ್ಕೆಗೆ ಸಿಎಸ್‌ಕೆ ನೆಚ್ಚಿಕೊಂಡ ಬಿಸಿಸಿಐ; ಮನವೊಲಿಕೆ ಜವಾಬ್ದಾರಿ ಎಂಎಸ್ ಧೋನಿ ಹೆಗಲಿಗೆ

ಇಂಪ್ಯಾಕ್ಟ್‌ ಪ್ಲೇಯರ್ ನಿಯಮ ಪಂದ್ಯದ ಸಮತೋಲನವನ್ನೇ ಹಾಳು ಮಾಡುತ್ತೆ; ರೋಹಿತ್‌ ಬಳಿಕ ವಿರಾಟ್ ಕೊಹ್ಲಿ ವಿರೋಧ

ಫಿಲ್‌ ಸಾಲ್ಟ್‌ ಔಟ್‌, ರಹಮಾನುಲ್ಲಾ ಗುರ್ಬಾಜ್ ಇನ್‌; ಎಸ್‌ಆರ್‌ಎಚ್ ವಿರುದ್ಧದ ಕ್ವಾಲಿಫೈಯರ್‌ ಪಂದ್ಯಕ್ಕೆ ಕೆಕೆಆರ್‌ ಸಂಭಾವ್ಯ ತಂಡ

ಬಿಸಿಸಿಐ ತೆಗೆದುಕೊಂಡ ಖಡಕ್‌ ನಿರ್ಧಾರಕ್ಕೆ ಕಪಿಲ್‌ ದೇವ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.‌ “ಹೌದು, ಕೆಲವು ಆಟಗಾರರು ತೊಂದರೆ ಅನುಭವಿಸುತ್ತಾರೆ ಎಂಬುದು ನಿಜ. ಆಗಲಿ ಬಿಡಿ. ಆದರೆ ದೇಶಕ್ಕಿಂತ ದೊಡ್ಡವರು ಯಾರೂ ಅಲ್ಲ. ವೆಲ್‌ ಡನ್,” ಎಂದು ಅವರು ಸುದ್ದಿಸಂಸ್ಥೆ ಪಿಟಿಐಗೆ ಹೇಳಿದ್ದಾರೆ.

“ದೇಶೀಯ ಕ್ರಿಕೆಟ್‌ಗೆ ಇರುವ ಸ್ಥಾನಮಾನವನ್ನು ರಕ್ಷಿಸಲು ಅಗತ್ಯ ಕ್ರಮ ಕೈಗೊಂಡಿದ್ದಕ್ಕಾಗಿ ಬಿಸಿಸಿಐಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡ ನಂತರ ದೇಶೀಯ ಕ್ರಿಕೆಟ್‌ ಪಂದ್ಯಗಳನ್ನು ಆಟಗಾರರು ನಿರ್ಲಕ್ಷಿಸುವುದನ್ನು ನೋಡಿ ನನಗೆ ಬೇಸರವಾಗಿತ್ತು” ಎಂದು ಕಪಿಲ್ ದೇವ್ ತಿಳಿಸಿದ್ದಾರೆ.

ಇದನ್ನೂ ಓದಿ | ಆಟಗಾರರಿಗೆ ಬಿಸಿಸಿಐ ಬಂಪರ್ ಆಫರ್; ವರ್ಷಪೂರ್ತಿ ಟೆಸ್ಟ್ ಆಡಿದರೆ ದೊಡ್ಡ ಮೊತ್ತದ ಪ್ರೋತ್ಸಾಹ ನೀಡಲು ಮುಂದಾದ ಮಂಡಳಿ

ದೇಶೀಯ ಕ್ರಿಕೆಟ್‌ಗೆ ಆದ್ಯತೆ ನೀಡಬೇಕು ಎನ್ನುವ ಬಿಸಿಸಿಐ ಮಾರ್ಗಸೂಚಿಗಳನ್ನು ಕಿಶನ್ ಮತ್ತು ಅಯ್ಯರ್ ಪದೇ ಪದೇ ನಿರ್ಲಕ್ಷಿಸಿದರು. ಹೀಗಾಗಿ ತಮ್ಮ ತಪ್ಪಿಗೆ ಅವರು ಬೆಲೆ ತೆರಬೇಕಾಯಿತು. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು, ಐಪಿಎಲ್ ಕಡೆಗೆ ಮಾತ್ರ ಗಮನ ಹರಿಸಿದರೆ ಸಾಲದು, ರಣಜಿ ಟ್ರೋಫಿಯಲ್ಲಿ ಆಡುವುದಕ್ಕೆ ಆಟಗಾರರು ಪ್ರಾಮುಖ್ಯತೆ ನೀಡಬೇಕು ಎಂದು ಸ್ಪಷ್ಟಪಡಿಸಿದ್ದರು. ಆದರೂ, ಕಿಶನ್ ಮತ್ತು ಅಯ್ಯರ್ ಇಬ್ಬರೂ ಇದನ್ನು ನಿರ್ಲಕ್ಷಿಸಿದರು. ಜಾರ್ಖಂಡ್ ಪರ ಇಶಾನ್‌ ರಣಜಿ ಟ್ರೋಫಿ ಪಂದ್ಯ ಆಡಲಿಲ್ಲ. ಅತ್ತ ಅಯ್ಯರ್‌ ಮುಂಬೈ ತಂಡವನ್ನು ಸೇರಿಕೊಳ್ಳಲಿಲ್ಲ. ತಮ್ಮ ಫಿಟ್‌ನೆಸ್‌ ಕಾರಣ ನೀಡಿ ಆಟಗಾರರು ರಣಜಿಯಿಂದ ಹಿಂದೆ ಸರಿದರು. ಸೆಮಿಫೈನಲ್‌ ಪಂದ್ಯದಲ್ಲಿ ಆಡಲು ಸಯ್ಯರ್‌ ಮುಂದೆ ಬಂದರೂ, ಅಷ್ಟರಲ್ಲೇ ಬಿಸಿಸಿಐ ಕಾಂಟ್ಯಾಕ್ಟ್‌ನಿಂದ ಹೊರಬಿದ್ದರು.

ಇದನ್ನೂ ಓದಿ | 6 ತಿಂಗಳು ಕ್ರಿಕೆಟ್ಟೇ ಆಡದ ಹಾರ್ದಿಕ್ ಪಾಂಡ್ಯ ಗುತ್ತಿಗೆ ಒಪ್ಪಂದ ಪಡೆದಿದ್ದೇಗೆ; ಬಿಸಿಸಿಐ ವಿಧಿಸಿದ ಷರತ್ತುಗಳೇನು?

“ಬಿಸಿಸಿಐನ ಈ ಕ್ರಮವು ದೇಶೀಯ ಕ್ರಿಕೆಟ್‌ಗೆ ಇರುವ ಪ್ರತಿಷ್ಠೆಯನ್ನು ಮತ್ತೆ ಪುನಃಸ್ಥಾಪಿಸಲು ನೆರವಾಗುತ್ತದೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡುವ ಆಟಗಾರರು ಆಯಾ ರಾಜ್ಯಗಳ ಪರ ಆಡಲು ಲಭ್ಯರಿರಬೇಕು. ಇದು ಸಾಧ್ಯವಾದರೆ, ಆಗ ದೇಶೀಯ ಆಟಗಾರರಿಗೂ ಅವರು ಬೆಂಬಲ ನೀಡಿದಂತಾಗುತ್ತದೆ. ಅಲ್ಲದೆ, ಒಬ್ಬ ಆಟಗಾರನನ್ನು ಸಜ್ಜುಗೊಳಿಸುವಲ್ಲಿ ಅವರ ರಾಜ್ಯದ ಕ್ರಿಕೆಟ್ ಅಸೋಸಿಯೇಷನ್‌ಗಳು ನೀಡಿರುವ ನೆರವಿಗೆ ಪ್ರತಿಯಾಗಿ ಏನಾದರೂ ಕೊಡುಗೆ ನೀಡಲು ಉತ್ತಮ ಮಾರ್ಗವಾಗಿದೆ” ಎಂದು ಭಾರತಕ್ಕೆ ಮೊದಲ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಹೇಳಿದ್ದಾರೆ.

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ