logo
ಕನ್ನಡ ಸುದ್ದಿ  /  ಕ್ರಿಕೆಟ್  /  ಮಹಿಳಾ ಪ್ರೀಮಿಯರ್ ಲೀಗ್​ ಯಾವ ಚಾನೆಲ್​ನಲ್ಲಿ ನೇರಪ್ರಸಾರ; ರೂಪಾಯಿ ಖರ್ಚಿಲ್ಲದೆ ಉಚಿತ ವೀಕ್ಷಣೆ ಹೇಗೆ? ಇಲ್ಲಿದೆ ವಿವರ

ಮಹಿಳಾ ಪ್ರೀಮಿಯರ್ ಲೀಗ್​ ಯಾವ ಚಾನೆಲ್​ನಲ್ಲಿ ನೇರಪ್ರಸಾರ; ರೂಪಾಯಿ ಖರ್ಚಿಲ್ಲದೆ ಉಚಿತ ವೀಕ್ಷಣೆ ಹೇಗೆ? ಇಲ್ಲಿದೆ ವಿವರ

Prasanna Kumar P N HT Kannada

Feb 18, 2024 11:22 AM IST

google News

ಮಹಿಳಾ ಪ್ರೀಮಿಯರ್ ಲೀಗ್​ ಯಾವ ಚಾನೆಲ್​ನಲ್ಲಿ ನೇರಪ್ರಸಾರ

    • WPL 2024 livestream : ಎರಡನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್​ ಅನ್ನು ನೇರ ಪ್ರಸಾರ ಯಾವ ಚಾನೆಲ್​ನಲ್ಲಿ​? ಉಚಿತವಾಗಿ ನೋಡುವುದೇಗೆ? ಇಲ್ಲಿದೆ ಸಂಪೂರ್ಣ ವಿವರ.
ಮಹಿಳಾ ಪ್ರೀಮಿಯರ್ ಲೀಗ್​ ಯಾವ ಚಾನೆಲ್​ನಲ್ಲಿ ನೇರಪ್ರಸಾರ
ಮಹಿಳಾ ಪ್ರೀಮಿಯರ್ ಲೀಗ್​ ಯಾವ ಚಾನೆಲ್​ನಲ್ಲಿ ನೇರಪ್ರಸಾರ

ಎರಡನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್​ಗೆ (WPL 2024) ದಿನಗಣನೆ ಆರಂಭವಾಗಿದೆ. ಡಬ್ಲ್ಯುಪಿಎಲ್ 23ರಿಂದ ಆರಂಭವಾಗಲಿದ್ದು, ಮಾರ್ಚ್ 17ರವರೆಗೆ ಜರುಗಲಿದೆ. ಈ ಬಾರಿ ಸೀಸನ್​ 2 ಹಂತಗಳಲ್ಲಿ ಬೆಂಗಳೂರು ಮತ್ತು ದೆಹಲಿಯ ಕ್ರಿಕೆಟ್ ಮೈದಾನಗಳಲ್ಲಿ ನಡೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ರನ್ನರ್​ಅಪ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಾಟ ನಡೆಸಲಿವೆ.

ಫೆಬ್ರವರಿ 23 ರಿಂದ ಮಾರ್ಚ್​ 4ರ ತನಕ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಮೊದಲ ಹಂತದ ಪಂದ್ಯಗಳು ನಡೆಯಲಿವೆ. ಮಾರ್ಚ್ 5ರಿಂದ 17ರವರೆಗೆ ಉಳಿದ ಲೀಗ್​, ಎಲಿಮಿನೇಟರ್​, ಫೈನಲ್​ ಪಂದ್ಯಗಳು ನಡೆಯಲಿವೆ. ಒಟ್ಟು 22 ಪಂದ್ಯಗಳು ನಡೆಯಲಿವೆ. ಚೊಚ್ಚಲ ಆವೃತ್ತಿ ಮುಂಬೈನ ಬ್ರಬೋರ್ನ್ ಸ್ಟೇಡಿಯಂ, ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಮೈದಾನದಲ್ಲಿ ನಡೆದಿತ್ತು. ಹಾಗಾದರೆ, ಡಬ್ಲ್ಯುಪಿಎಲ್​ ವೀಕ್ಷಿಸುವುದಲ್ಲಿ? ಉಚಿತವಾಗಿ ನೋಡುವುದೇಗೆ? ಇಲ್ಲಿದೆ ವಿವರ.

ನೇರ ಪ್ರಸಾರ ಎಲ್ಲಿ ವೀಕ್ಷಿಸಬಹುದು?

ಡಬ್ಲ್ಯುಪಿಎಲ್ 2024ರ ಪಂದ್ಯಗಳು ರಾತ್ರಿ 7.30ಕ್ಕೆ ಆರಂಭಗೊಳ್ಳಲಿದೆ. 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಸ್ಪೋರ್ಟ್ಸ್​ 18 HD/SD ಚಾನೆಲ್​​​ನಲ್ಲಿ ಪಂದ್ಯದ ನೇರ ಪ್ರಸಾರ ಮಾಡಲಾಗುತ್ತದೆ. ಬಹು ಭಾಷೆಗಳಲ್ಲಿ ಜಿಯೋ ಸಿನಿಮಾದಲ್ಲಿ ಲೈವ್-ಸ್ಟ್ರೀಮ್ ಮಾಡಬಹುದು. ಇದು ಸಂಪೂರ್ಣ ಉಚಿತವಾಗಿರಲಿದೆ. ಒಂದೇ ಒಂದು ರೂಪಾಯಿ ಇಲ್ಲದೆ ಇಡೀ ಟೂರ್ನಿಯನ್ನು ಕಣ್ತುಂಬಿಕೊಳ್ಳಬಹುದು. ಜಿಯೋ ಸಿನಿಮಾ ಮತ್ತು ಸ್ಪೋರ್ಟ್ಸ್​ 18 ನೇರ ಪ್ರಸಾರದ ಹಕ್ಕುಗಳನ್ನು ಪಡೆದುಕೊಂಡಿವೆ.

ಮುಂಬೈ ಚಾಂಪಿಯನ್

2023ರಲ್ಲಿ ನಡೆದ ಮೊದಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್​ ಸೀಸನ್​​ ಫೈನಲ್​ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಉಭಯ ತಂಡಗಳು ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ್ದವು. ಆದರೆ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿದ್ದ ಮುಂಬೈ ಚೊಚ್ಚಲ ಕಿರೀಟಕ್ಕೆ ಮುತ್ತಿಕ್ಕಿತು. ಹರ್ಮನ್​ಪ್ರೀತ್ ಕೌರ್ ನೇತೃತ್ವದ ಡೆಲ್ಲಿಯನ್ನು 7 ವಿಕೆಟ್​ಗಳಿಂದ ಗೆದ್ದುಕೊಂಡಿತು.

ಐದು ತಂಡಗಳ ನಾಯಕಿಯರು ಯಾರು?

ರಾಯಲ್ ಚಾಲೆಂಜರ್ಸ್ ಬೆಂಗಳೂರು - ಸ್ಮೃತಿ ಮಂಧಾನ

ಮುಂಬೈ ಇಂಡಿಯನ್ಸ್ - ಹರ್ಮನ್​ಪ್ರೀತ್ ಕೌರ್

ಡೆಲ್ಲಿ ಕ್ಯಾಪಿಟಲ್ಸ್ - ಮೆಗ್ ​ಲ್ಯಾನಿಂಗ್

ಗುಜರಾತ್ ಜೈಂಟ್ಸ್ - ಬೆತ್​ ಮೂನಿ

ಯುಪಿ ವಾರಿಯರ್ಸ್ - ಅಲಿಸಾ ಹೀಲಿ

ವುಮೆನ್ಸ್ ಪ್ರೀಮಿಯರ್‌ ಲೀಗ್ 2024ರ ವೇಳಾಪಟ್ಟಿ

ಫೆಬ್ರವರಿ 23- ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್ -ಬೆಂಗಳೂರು

ಫೆಬ್ರವರಿ 24- ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಯುಪಿ ವಾರಿಯರ್ಸ್ -ಬೆಂಗಳೂರು

ಫೆಬ್ರವರಿ 25- ಗುಜರಾತ್ ಜೈಂಟ್ಸ್ vs ಮುಂಬೈ ಇಂಡಿಯನ್ಸ್ -ಬೆಂಗಳೂರು

ಫೆಬ್ರವರಿ 26 - ಯುಪಿ ವಾರಿಯರ್ಸ್ vs ಡೆಲ್ಲಿ ಕ್ಯಾಪಿಟಲ್ಸ್ -ಬೆಂಗಳೂರು

ಫೆಬ್ರವರಿ 27 - ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಜೈಂಟ್ಸ್ -ಬೆಂಗಳೂರು

ಫೆಬ್ರವರಿ 28 - ಮುಂಬೈ ಇಂಡಿಯನ್ಸ್ vs ಯುಪಿ ವಾರಿಯರ್ಸ್ -ಬೆಂಗಳೂರು

ಫೆಬ್ರವರಿ 29 - ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಡೆಲ್ಲಿ ಕ್ಯಾಪಿಟಲ್ಸ್ -ಬೆಂಗಳೂರು

ಮಾರ್ಚ್ 1 - ಯುಪಿ ವಾರಿಯರ್ಸ್ vs ಗುಜರಾತ್ ಜೈಂಟ್ಸ್ -ಬೆಂಗಳೂರು

ಮಾರ್ಚ್ 2 - ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್ -ಬೆಂಗಳೂರು

ಮಾರ್ಚ್ 3 - ಗುಜರಾತ್ ಜೈಂಟ್ಸ್ vs ಡೆಲ್ಲಿ ಕ್ಯಾಪಿಟಲ್ಸ್ -ಬೆಂಗಳೂರು

ಮಾರ್ಚ್ 4 - ಯುಪಿ ವಾರಿಯರ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು -ಬೆಂಗಳೂರು

ಮಾರ್ಚ್ 5 - ಡೆಲ್ಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್ -ದೆಹಲಿ

ಮಾರ್ಚ್ 6 - ಗುಜರಾತ್ ಜೈಂಟ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು -ದೆಹಲಿ

ಮಾರ್ಚ್ 7 - ಯುಪಿ ವಾರಿಯರ್ಸ್ vs ಮುಂಬೈ ಇಂಡಿಯನ್ಸ್ -ದೆಹಲಿ

ಮಾರ್ಚ್ 8 - ಡೆಲ್ಲಿ ಕ್ಯಾಪಿಟಲ್ಸ್ vs ಯುಪಿ ವಾರಿಯರ್ಸ್ -ದೆಹಲಿ

ಮಾರ್ಚ್ 9 - ಮುಂಬೈ ಇಂಡಿಯನ್ಸ್ vs ಗುಜರಾತ್ ಜೈಂಟ್ಸ್ -ದೆಹಲಿ

ಮಾರ್ಚ್ 10 - ಡೆಲ್ಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು -ದೆಹಲಿ

ಮಾರ್ಚ್ 11 - ಗುಜರಾತ್ ಜೈಂಟ್ಸ್ vs ಯುಪಿ ವಾರಿಯರ್ಸ್‌ -ದೆಹಲಿ

ಮಾರ್ಚ್ 12 - ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು -ದೆಹಲಿ

ಮಾರ್ಚ್ 13 - ಡೆಲ್ಲಿ ಕ್ಯಾಪಿಟಲ್ಸ್ vs ಗುಜರಾತ್ ಜೈಂಟ್ಸ್‌ -ದೆಹಲಿ

ಮಾರ್ಚ್ 15 - ಎಲಿಮಿನೇಟರ್ -ದೆಹಲಿ

ಮಾರ್ಚ್ 17 - ಫೈನಲ್ -ದೆಹಲಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ