ಕನ್ನಡ ಸುದ್ದಿ  /  ಕ್ರಿಕೆಟ್  /  ವಿರಾಟ್ ಕೊಹ್ಲಿ ಟೆಸ್ಟ್ ಸರಣಿಯಿಂದ ಹಿಂದೆ ಸರಿಯಲು ಕಾರಣ ಬಹಿರಂಗ; ಲಂಡನ್​ನಲ್ಲಿ ಅನುಷ್ಕಾ ಹೆರಿಗೆ, ಹರ್ಷ್ ಗೋಯೆಂಕಾ ಸುಳಿವು

ವಿರಾಟ್ ಕೊಹ್ಲಿ ಟೆಸ್ಟ್ ಸರಣಿಯಿಂದ ಹಿಂದೆ ಸರಿಯಲು ಕಾರಣ ಬಹಿರಂಗ; ಲಂಡನ್​ನಲ್ಲಿ ಅನುಷ್ಕಾ ಹೆರಿಗೆ, ಹರ್ಷ್ ಗೋಯೆಂಕಾ ಸುಳಿವು

Anushka Sharma Virat Kohli : ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಯಿಂದ ವಿರಾಟ್ ಕೊಹ್ಲಿ ಹಿಂದೆ ಸರಿಯಲು ಕಾರಣ ಬಹಿರಂಗಗೊಂಡಿದೆ. ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವುದು ನಿಜ ಎನ್ನುವ ಸುದ್ದಿ ವರದಿಯಾಗಿದೆ.

ವಿರಾಟ್ ಕೊಹ್ಲಿ ಟೆಸ್ಟ್ ಸರಣಿಯಿಂದ ಹಿಂದೆ ಸರಿಯಲು ಕಾರಣ ಬಹಿರಂಗ; ಲಂಡನ್​ನಲ್ಲಿ ಅನುಷ್ಕಾ ಹೆರಿಗೆ
ವಿರಾಟ್ ಕೊಹ್ಲಿ ಟೆಸ್ಟ್ ಸರಣಿಯಿಂದ ಹಿಂದೆ ಸರಿಯಲು ಕಾರಣ ಬಹಿರಂಗ; ಲಂಡನ್​ನಲ್ಲಿ ಅನುಷ್ಕಾ ಹೆರಿಗೆ

ಭಾರತ ತಂಡದ ಸೂಪರ್ ಸ್ಟಾರ್ ಬ್ಯಾಟರ್​ ವಿರಾಟ್ ಕೊಹ್ಲಿ (Virat Kohli) ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಯಿಂದ (India vs England) ಹಿಂದೆ ಸರಿಯಲು ಕಾರಣ ಏನೆಂಬುದು ಇದೀಗ ಬಹಿರಂಗಗೊಂಡಿದೆ. ವಿರಾಟ್ ಮತ್ತು ಅನುಷ್ಕಾ ಶರ್ಮಾ ದಂಪತಿ (Virat Kohli - Anushka Sharma) ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಈ ಹಿಂದೆ ವರದಿಯಾಗಿದ್ದ ಸುದ್ದಿಗಳು ಈಗ ನಿಜವಾಗಿವೆ. ಈ ಬಗ್ಗೆ ಸ್ಟಾರ್​​ ದಂಪತಿಗಳು ಅಧಿಕೃತವಾಗಿ ದೃಢಪಡಿಸದಿದ್ದರೂ ಉನ್ನತ ಮೂಲಗಳು ತಿಳಿಸಿವೆ. ಮಗುವಿಗೆ ಜನ್ಮ ನೀಡಲು ದಿನಾಂಕ, ಸ್ಥಳ ನಿರ್ಧರಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮಗುವಿನ ನಿರೀಕ್ಷೆಯಲ್ಲಿರುವ ಕಾರಣಕ್ಕಾಗಿಯೇ ವಿರಾಟ್ ಕೊಹ್ಲಿ ಇಂಗ್ಲೆಂಡ್ ಎದುರಿನ ಐದು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರ ಬಿದ್ದಿದ್ದಾರೆ. ವೈಯಕ್ತಿಕ ಕಾರಣ ನೀಡಿ ಸರಣಿಯಿಂದ ಹಿಂದೆ ಸರಿದಿದ್ದ ಕೊಹ್ಲಿ, ಎರಡನೇ ಬಾರಿಗೆ ತಂದೆಯಾಗಲಿದ್ದಾರೆ ಎನ್ನಲಾಗಿದೆ. ಅಲ್ಲದೆ, ಬಿಸಿಸಿಐ ವಿರಾಟ್ ಕೊಹ್ಲಿ ಗೌಪ್ಯತೆ ಕಾಪಾಡುವಂತೆ ಮನವಿ ಮಾಡಿತ್ತು. ಗೆಳೆಯ ಎಬಿ ಡಿವಿಲಿಯರ್ಸ್ ತನ್ನ ಯೂಟ್ಯೂಟ್​ ಚಾನೆಲ್​ನಲ್ಲಿ ಇದೇ ವಿಚಾರವನ್ನು ಬಹಿರಂಗಪಡಿಸಿದ್ದರು. ಆದರೆ ಇದಾದ ಕೆಲವೇ ದಿನಗಳ ನಂತರ ನಾನು ದೊಡ್ಡ ಪ್ರಮಾದ ಮಾಡಿದೆ ಎಂದಿದ್ದರು.

ಲಂಡನ್​ನಲ್ಲಿ ಎರಡನೇ ಮಗುವಿಗೆ ಜನ್ಮ

ಅನುಷ್ಕಾ ಶರ್ಮಾ ಅವರು ಲಂಡನ್‌ನಲ್ಲಿ ಇನ್ನು ಕೆಲವೇ ದಿನಗಳಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ತನ್ನ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ. ಅಲ್ಲದೆ, ಕೊಹ್ಲಿ ಮತ್ತು ಅನುಷ್ಕಾ ದಂಪತಿ ಎರಡನೇ ಮಗುವಿನ ನಿರೀಕ್ಷೆಯ ಕುರಿತು ಸುಳಿವು ಕೊಟ್ಟಿದ್ದಾರೆ. ಅಚ್ಚರಿ ಅಂದರೆ ಪೋಸ್ಟ್​​​ನಲ್ಲಿ ಇಬ್ಬರ ಹೆಸರನ್ನೂ ಉಲ್ಲೇಖಿಸಿಲ್ಲ. ಆದರೆ ಅವರೇ ಎನ್ನುವಂತ ಸುಳಿವು ಕೊಟ್ಟಿದ್ದಾರೆ.

ಪೋಸ್ಟ್​ನಲ್ಲಿ ಏನಿದೆ?

ಪೋಸ್ಟ್​​ನಲ್ಲಿ ಹೀಗೆ ಬರೆಯಲಾಗಿದೆ ನೋಡಿ... ಇನ್ನೇನು ಕೆಲವೇ ದಿನಗಳಲ್ಲಿ ಹೊಸ ಮಗು ಜನಿಸಲಿದೆ! ಆ ಮಗು ಭಾರತೀಯ ಕ್ರಿಕೆಟ್​ ಅನ್ನು ತಂದೆಯಂತೆ ಮತ್ತಷ್ಟು ಉನ್ನತ ಹಂತಕ್ಕೆ ಕೊಂಡೊಯ್ಯುತ್ತದೆ ಎಂದು ನಾನು ಭಾವಿಸುತ್ತೇವೆ. ಅಥವಾ ಆ ಮಗು ತಾಯಿಯಂತೆ ಸಿನಿಮಾ ತಾರೆಯಾಗುವುದೇ? ಎಂದು ಬರೆದಿದ್ದಾರೆ. #MadeInIndia #ToBeBornInLondon ಎಂಬ ಹ್ಯಾಶ್​ಟ್ಯಾಗ್​ಗಳನ್ನು ಬಳಸಿದ್ದಾರೆ. ಆದರೆ ಈ ಸುದ್ದಿ ಎಷ್ಟು ಸತ್ಯ ಎಂಬುದರ ಕುರಿತು ಇನ್ನಷ್ಟೇ ಮಾಹಿತಿ ಬರಬೇಕಿದೆ.

ಇದು ಸುಳ್ಳು ಎಂದಿದ್ದ ಎಬಿಡಿ

ಮತ್ತೊಂದೊಡೆ ಎಬಿ ಡಿವಿಲಿಯರ್ಸ್ ಇದೇ ಸುದ್ದಿ ಹೇಳಿದ್ದರು. ತನ್ನ ಯೂಟ್ಯೂಬ್ ಚಾನೆಲ್​ನಲ್ಲಿ ನನಗೆ ತಿಳಿದ ಮಾಹಿತಿ ಪ್ರಕಾರ ವಿರಾಟ್ ತನ್ನ ಕುಟುಂಬದೊಂದಿಗೆ ಸಮಯ ಕಳೆಯಲು ಬಯಸಿದ್ದಾರೆ. ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದಕ್ಕಿಂತ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಅವರ ನಿರ್ಧಾರ ಗೌರವಿಸಬೇಕು. ಹೀಗಾಗಿ ಇಂಗ್ಲೆಂಡ್ ಸರಣಿಯಿಂದ ಹೊರಗುಳಿದರು ಎಂದು ಎಬಿಡಿ ಹೇಳಿದ್ದರು. ಆದರೆ​ ಈ ಹೇಳಿಕೆ ಕೆಲವೇ ದಿನಗಳಲ್ಲಿ ನಾನು ಹೇಳಿದ್ದು ಸುಳ್ಳು ಎಂದು ಹೇಳಿದ್ದರು.

ಹರ್ಷ್ ಗೋಯೆಂಕಾ ಪೋಸ್ಟ್
ಹರ್ಷ್ ಗೋಯೆಂಕಾ ಪೋಸ್ಟ್

IPL_Entry_Point