logo
ಕನ್ನಡ ಸುದ್ದಿ  /  ಕ್ರಿಕೆಟ್  /  Wpl 2024: ಮಹಿಳಾ ಪ್ರೀಮಿಯರ್‌ ಲೀಗ್‌ 2ನೇ ಆವೃತ್ತಿ; ತಂಡಗಳು ಉಳಿಸಿಕೊಂಡಿರುವ ಆಟಗಾರ್ತಿಯರ ಪಟ್ಟಿ ಹೀಗಿದೆ

WPL 2024: ಮಹಿಳಾ ಪ್ರೀಮಿಯರ್‌ ಲೀಗ್‌ 2ನೇ ಆವೃತ್ತಿ; ತಂಡಗಳು ಉಳಿಸಿಕೊಂಡಿರುವ ಆಟಗಾರ್ತಿಯರ ಪಟ್ಟಿ ಹೀಗಿದೆ

Jayaraj HT Kannada

Oct 19, 2023 04:22 PM IST

google News

ಮುಂಬೈ ಇಂಡಿಯನ್ಸ್ ತಂಡವು ಮಹಿಳಾ ಪ್ರೀಮಿಯರ್ ಲೀಗ್ 2023ರ ಟ್ರೋಫಿ ಗೆದ್ದು ಸಂಭ್ರಮಿಸಿದ ಕ್ಷಣ

    • Women’s Premier League (WPL) 2024: ಡಬ್ಲ್ಯೂಪಿಎಲ್‌ನ ಹೊಸ ಆವೃತ್ತಿಗೆ ಮಹಿಳಾ ಕ್ರಿಕೆಟಿಗರು ದಿನ ಎಣಿಸುತ್ತಿದ್ದಾರೆ. WPL 2024 ಟೂರ್ನಿ ಆರಂಭಕ್ಕೂ ಮುನ್ನವೇ ಫ್ರಾಂಚೈಸಿಗಳು ಕೆಲವು ಆಟಗಾರ್ತಿಯರಿಗೆ ಸಿಹಿ ಬಡಿಸಿದ್ದು, ಇನ್ನೂ ಕೆಲವರನ್ನು ತಂಡದಿಂದ ಬಿಡುಗಡೆಗೊಳಿಸಿ ಕಹಿಸುದ್ದಿ ನೀಡಿದೆ.
ಮುಂಬೈ ಇಂಡಿಯನ್ಸ್ ತಂಡವು ಮಹಿಳಾ ಪ್ರೀಮಿಯರ್ ಲೀಗ್ 2023ರ ಟ್ರೋಫಿ ಗೆದ್ದು ಸಂಭ್ರಮಿಸಿದ ಕ್ಷಣ
ಮುಂಬೈ ಇಂಡಿಯನ್ಸ್ ತಂಡವು ಮಹಿಳಾ ಪ್ರೀಮಿಯರ್ ಲೀಗ್ 2023ರ ಟ್ರೋಫಿ ಗೆದ್ದು ಸಂಭ್ರಮಿಸಿದ ಕ್ಷಣ (WPL/Twitter)

ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ನ (Womens Premier League 2023) ಚೊಚ್ಚಲ ಆವೃತ್ತಿಯು ಭರ್ಜರಿ ಯಶಸ್ಸು ಪಡೆಯಿತು. ಇದೀಗ ಮಹಿಳಾ ಪ್ರೀಮಿಯರ್ ಲೀಗ್ (WPL)ನ ಎರಡನೇ ಆವೃತ್ತಿಯ ಸಮಯ. ಡಬ್ಲ್ಯೂಪಿಎಲ್‌ 2024ರ ಋತುವಿಗೂ ಮುನ್ನ ಟೂರ್ನಿಯಲ್ಲಿ ಆಡುತ್ತಿರುವ ಫ್ರಾಂಚೈಸಿಗಳು ಕೆಲವು ಆಟಗಾರ್ತಿಯರನ್ನು ರಿಟೈನ್‌ ಮಾಡಿಕೊಂಡಿವೆ.

ಮೊದಲ ಸೀಸನ್‌ನಲ್ಲಿ ಆಡಿದ್ದ ಎಲ್ಲಾ ಐದು ಫ್ರಾಂಚೈಸಿಗಳಿಗೂ ಆಟಗಾರರನ್ನು ಉಳಿಸಿಕೊಳ್ಳಲು 2023ರ ಅಕ್ಟೋಬರ್ 15ರಂದು ಕೊನೆಯ ದಿನ ನಿಗದಿಪಡಿಸಲಾಗಿತ್ತು. ಅದರಂತೆಯೇ ತಂಡಗಳು ರಿಟೈನ್‌ ಮಾಡಿಕೊಂಡ ಹಾಗೂ ಬಿಡುಗಡೆಗೊಳಿಸಿದ ಆಟಗಾರ್ತಿಯರ ಪಟ್ಟಿಯನ್ನು ಡಬ್ಲ್ಯೂಪಿಎಲ್‌ ಬಿಡುಗಡೆಗೊಳಿಸಿದೆ. 21 ವಿದೇಶಿ ಕ್ರಿಕೆಟಿಗರು ಸೇರಿದಂತೆ 60 ಆಟಗಾರರನ್ನು ಐದು ಫ್ರಾಂಚೈಸಿಗಳು ಉಳಿಸಿಕೊಂಡಿವೆ. ಅತ್ತ 29 ಆಟಗಾರ್ತಿಯರನ್ನು ತಂಡದಿಂದ ರಿಲೀಸ್ ಮಾಡಲಾಗಿದೆ.

ಎಲ್ಲಾ ಐದು WPL ಫ್ರಾಂಚೈಸಿಗಳು ತಂಡದಲ್ಲಿ ಉಳಿಸಿಕೊಂಡ ಮತ್ತು ಬಿಡುಗಡೆಗೊಳಿಸಿದ ಆಟಗಾರ್ತಿಯರ ಪಟ್ಟಿ ಹೀಗಿದೆ

ಡೆಲ್ಲಿ ಕ್ಯಾಪಿಟಲ್ಸ್ (DC)

  • ಉಳಿಸಿಕೊಂಡಿರುವ ಆಟಗಾರರು: ಆಲಿಸ್ ಕ್ಯಾಪ್ಸೆ*, ಅರುಂಧತಿ ರೆಡ್ಡಿ, ಜೆಮಿಮಾ ರೋಡ್ರಿಗಸ್, ಜೆಸ್ ಜೊನಾಸೆನ್*, ಲಾರಾ ಹ್ಯಾರಿಸ್*, ಮರಿಜಾನ್ ಕಪ್*, ಮೆಗ್ ಲ್ಯಾನಿಂಗ್*, ಮಿನ್ನು ಮಣಿ, ಪೂನಂ ಯಾದವ್, ರಾಧಾ ಯಾದವ್, ಶಫಾಲಿ ವರ್ಮಾ, ಶಿಖಾ ಪಾಂಡೆ, ಸ್ನೇಹಾ ದೀಪ್ತಿ, ತಾನಿಯಾ, ಟಿಟಾಸ್ ಸಾಧು
  • ಬಿಡುಗಡೆಯಾದ ಆಟಗಾರರು: ಅಪರ್ಣಾ ಮೊಂಡಲ್, ಜಸಿಯಾ ಅಖ್ತರ್, ತಾರಾ ನಾರ್ರಿಸ್*

ಗುಜರಾತ್ ಜೈಂಟ್ಸ್ (GG)

  • ಉಳಿಸಿಕೊಂಡಿರುವ ಆಟಗಾರರು: ಆಶ್ಲೀಗ್ ಗಾರ್ಡ್ನರ್*, ಬೆತ್ ಮೂನಿ*, ದಯಾಲನ್ ಹೇಮಲತಾ, ಹರ್ಲೀನ್ ಡಿಯೋಲ್, ಲಾರಾ ವೊಲ್ವಾರ್ಡ್*, ಶಬ್ನಮ್ ಶಕಿಲ್, ಸ್ನೇಹ ರಾಣಾ, ತನುಜಾ ಕನ್ವರ್
  • ಬಿಡುಗಡೆಯಾದ ಆಟಗಾರರು: ಅನ್ನಾಬೆಲ್ ಸದರ್ಲ್ಯಾಂಡ್*, ಅಶ್ವನಿ ಕುಮಾರಿ, ಜಾರ್ಜಿಯಾ ವೇರ್ಹ್ಯಾಮ್*, ಹರ್ಲಿ ಗಾಲಾ, ಕಿಮ್ ಗಾರ್ತ್*, ಮಾನ್ಸಿ ಜೋಶಿ, ಮೋನಿಕಾ ಪಟೇಲ್, ಪರುಣಿಕಾ ಸಿಸೋಡಿಯಾ, ಸಬ್ಬಿನೇನಿ ಮೇಘನಾ, ಸೋಫಿಯಾ ಡಂಕ್ಲೆ*, ಸುಷ್ಮಾ ವರ್ಮಾ

ಮುಂಬೈ ಇಂಡಿಯನ್ಸ್ (MI)

  • ಉಳಿಸಿಕೊಂಡಿರುವ ಆಟಗಾರ್ತಿಯರು: ಅಮನ್ಜೋತ್ ಕೌರ್, ಅಮೆಲಿಯಾ ಕೆರ್*, ಕ್ಲೋಯ್ ಟ್ರಯಾನ್*, ಹರ್ಮನ್‌ಪ್ರೀತ್ ಕೌರ್, ಹೇಲಿ ಮ್ಯಾಥ್ಯೂಸ್*, ಹುಮೈರಾ ಕಾಜಿ, ಇಸಾಬೆಲ್ಲೆ ವಾಂಗ್*, ಜಿಂಟಿಮಣಿ ಕಲಿತಾ, ನಟಾಲಿ ಸಿವರ್*, ಪೂಜಾ ವಸ್ತ್ರಾಕರ್, ಪ್ರಿಯಾಂಕಾ ಬಾಲಾ, ಸೈಕಾ ಇಶಾಕ್, ಯಾಸ್ತಿಕಾ ಭಾಟಿಯಾ
  • ಬಿಡುಗಡೆಯಾದ ಆಟಗಾರರು: ಧಾರಾ ಗುಜ್ಜರ್, ಹೀದರ್ ಗ್ರಹಾಂ*, ನೀಲಂ ಬಿಷ್ಟ್, ಸೋನಮ್ ಯಾದವ್

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)

  • ಉಳಿಸಿಕೊಂಡಿರುವ ಆಟಗಾರ್ತಿಯರು: ಆಶಾ ಶೋಬನಾ, ದಿಶಾ ಕಸತ್, ಎಲ್ಲಿಸ್ ಪೆರ್ರಿ*, ಹೆದರ್ ನೈಟ್*, ಇಂದ್ರಾಣಿ ರಾಯ್, ಕನಿಕಾ ಅಹುಜಾ, ರೇಣುಕಾ ಸಿಂಗ್, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಸ್ಮೃತಿ ಮಂಧಾನ, ಸೋಫಿ ಡಿವೈನ್*
  • ಬಿಡುಗಡೆಯಾದ ಆಟಗಾರರು: ಡೇನೆ ವ್ಯಾನ್ ನೀಕರ್ಕ್*, ಎರಿನ್ ಬರ್ನ್ಸ್*, ಕೋಮಲ್ ಝಂಜಾದ್, ಮೇಗನ್ ಶಟ್*, ಪೂನಮ್ ಖೇಮ್ನಾರ್, ಪ್ರೀತಿ ಬೋಸ್, ಸಹನಾ ಪವಾರ್

ಯುಪಿ ವಾರಿಯರ್ಜ್ (UPW)

  • ಉಳಿಸಿಕೊಂಡಿರುವ ಆಟಗಾರ್ತಿಯರು: ಅಲಿಸ್ಸಾ ಹೀಲಿ*, ಅಂಜಲಿ ಸರ್ವಾಣಿ, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್*, ಕಿರಣ್ ನವಗಿರೆ, ಲಾರೆನ್ ಬೆಲ್*, ಲಕ್ಷ್ಮಿ ಯಾದವ್, ಪಾರ್ಶವಿ ಚೋಪ್ರಾ, ರಾಜೇಶ್ವರಿ ಗಾಯಕ್‌ವಾಡ್, ಎಸ್ ಯಶಸ್ರಿ, ಶ್ವೇತಾ ಸೆಹ್ರಾವತ್, ಸೋಫಿ ಎಕ್ಲೆಸ್ಟನ್*, ತಹ್ಲಿಯಾ*
  • ಬಿಡುಗಡೆಯಾದ ಆಟಗಾರರು: ದೇವಿಕಾ ವೈದ್ಯ, ಶಬ್ನಿಮ್ ಇಸ್ಮಾಯಿಲ್*, ಶಿವಾಲಿ ಶಿಂಧೆ, ಸಿಮ್ರಾನ್ ಶೇಖ್

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ