logo
ಕನ್ನಡ ಸುದ್ದಿ  /  ಚುನಾವಣೆಗಳು  /  Exit Poll Result: ಮತದಾನೋತ್ತರ ಸಮೀಕ್ಷೆ ಖುಷಿ ತಂದಿದೆ; ಕಾಂಗ್ರೆಸ್‌ನ 1 ವರ್ಷದ ಆಡಳಿತ ಜನರಿಗೆ ತೃಪ್ತಿ ತಂದಿಲ್ಲ; ವಿಪಕ್ಷ ನಾಯಕ ಆರ್ ಅಶೋಕ್

Exit Poll Result: ಮತದಾನೋತ್ತರ ಸಮೀಕ್ಷೆ ಖುಷಿ ತಂದಿದೆ; ಕಾಂಗ್ರೆಸ್‌ನ 1 ವರ್ಷದ ಆಡಳಿತ ಜನರಿಗೆ ತೃಪ್ತಿ ತಂದಿಲ್ಲ; ವಿಪಕ್ಷ ನಾಯಕ ಆರ್ ಅಶೋಕ್

Raghavendra M Y HT Kannada

Jun 01, 2024 11:13 PM IST

google News

ಮತದಾನೋತ್ತರ ಸಮೀಕ್ಷೆ ಖುಷಿ ತಂದಿದೆ. ಕಾಂಗ್ರೆಸ್‌ನ 1 ವರ್ಷದ ಆಡಳಿತ ಜನರಿಗೆ ತೃಪ್ತಿ ತಂದಿಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.

    • ಲೋಕಸಭಾ ಚುನಾವಣೋತ್ತರ ಸಮೀಕ್ಷೆಗಳು ನಿಜವೇ ಆದರೆ ಕಾಂಗ್ರೆಸ್ ಶಾಸಕರು ಅಲ್ಲಾಡುವ ಪರಸ್ಥಿತಿಗೆ ಬರುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಮಾರ್ಮಿಕವಾಗಿ ಮಾತನಾಡಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಗೆ 20ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ ಎಂದು ಎಕ್ಸಿಟ್ ಪೋಲ್‌ಗಳು ಹೇಳಿವೆ.
ಮತದಾನೋತ್ತರ ಸಮೀಕ್ಷೆ ಖುಷಿ ತಂದಿದೆ. ಕಾಂಗ್ರೆಸ್‌ನ 1 ವರ್ಷದ ಆಡಳಿತ ಜನರಿಗೆ ತೃಪ್ತಿ ತಂದಿಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಮತದಾನೋತ್ತರ ಸಮೀಕ್ಷೆ ಖುಷಿ ತಂದಿದೆ. ಕಾಂಗ್ರೆಸ್‌ನ 1 ವರ್ಷದ ಆಡಳಿತ ಜನರಿಗೆ ತೃಪ್ತಿ ತಂದಿಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.

ಬೆಂಗಳೂರು: ಕರ್ನಾಟಕ ಲೋಕಸಭಾ ಚುನಾವಣೆಯ (Karnataka Lok sabha Election 2024) ಕುರಿತ ಮತದಾನೋತ್ತರ ಸಮೀಕ್ಷೆಗಳು (Exit Polls 2024) ಖುಷಿ ತಂದಿದೆ. ಇದನ್ನು ನಾವು ಸ್ವಾಗತಿಸುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ (R Ashok) ತಿಳಿಸಿದ್ದಾರೆ. ಲೋಕಸಭಾ ಚುನಾವಣೋತ್ತರ ಸಮೀಕ್ಷೆಗಳ ಕುರಿತು ಇಂದು (ಜೂನ್ 1, ಶನಿವಾರ) ಬೆಂಗಳೂರಿನಲ್ಲಿನ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್‌ನ ಒಂದು ವರ್ಷದ ಆಡಳಿತ ಜನರಿಗೆ ತೃಪ್ತಿ ತಂದಿಲ್ಲ. ದೇಶ ಯಾರ ಕೈಯಲ್ಲಿ ಭದ್ರ ವಾಗಿರುತ್ತದೆ ಎಂಬುದನ್ನು ಜನರು ನೋಡುತ್ತಾರೆ. ಎಂದು ಹೇಳಿದ್ದಾರೆ.

ಕರ್ನಾಟಕ ಲೋಕಸಭಾ ಚುನಾವಣೆ ಬಂದಾಗ ದೇಶಕ್ಕೆ ಒಂದು ಭದ್ರ ಬುನಾದಿ, ದೇಶದ ರಕ್ಷಣೆ ವಿಚಾರ ಬಂದಾಗ ರಾಜ್ಯದ ಎಲ್ಲಾ ಜನರು ಬಿಜೆಪಿಯನ್ನು ಬೆಂಬಲಿಸುತ್ತಾರೆ. ಹೀಗಾಗಿ ಬಹುತೇಕ ಎಲ್ಲಾ ಸಮೀಕ್ಷೆಗಳಿಗೆ ಬಿಜೆಪಿಗೆ ಸ್ಪಷ್ಟ ಬಹುಮತ ಎಂದು ತೋರಿಸಲಾಗುತ್ತಿದೆ. 2019 ರಲ್ಲಿ ಸಮೀಕ್ಷೆಗಳು ಕರ್ನಾಟಕದಲ್ಲಿ ಬಿಜೆಪಿಗೆ 21 ಸ್ಥಾನ ಬರಲಿದೆ ಅಂತ ಹೇಳಿದ್ದರು. ಆದರೆ ನಾನು 25 ಕ್ಷೇತ್ರಗಳನ್ನು ಗೆದ್ದುಕೊಂಡಿದ್ದೆವು. ಈ ಬಾರಿಯೂ ಉತ್ತಮ 20 ಪ್ಲಸ್ ಕ್ಷೇತ್ರಗಳನ್ನು ಗೆಲ್ಲುತ್ತೇವೆ. ಈ ಎಲ್ಲಾ ಕ್ರೆಡಿಟ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದು ಆರ್ ಅಶೋಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆಡಳಿತ ಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಭ್ರಷ್ಟಾಚಾರವನ್ನೇ ನೋಡಿ, ರಾಜ್ಯದಲ್ಲಿ ಹಣ ಲೂಟಿ ಮಾಡುಲಾಗುತ್ತಿದೆ. ಇಂತಹ ಲೂಟಿ ಮಾಡುವಂತ ಸರ್ಕಾರ ರಾಜ್ಯದಲ್ಲಿ ಎಂದೂ ಬಂದಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕದಲ್ಲಿ ಸಮೀಕ್ಷೆಗಳು ನಿಜವೇ ಆಗಿದ್ದರೆ ಕಾಂಗ್ರೆಸ್ ಶಾಸಕರು ಅಲ್ಲಾಡುವ ಪರಿಸ್ಥಿತಿಗೆ ಬರುತ್ತಾರೆ ಎಂದು ಮಾರ್ಮಿಕ ಮಾತುಗಳನ್ನಾಡಿದ್ದಾರೆ.

ಇಡೀ ದೇಶದಲ್ಲಿ ಕಾಂಗ್ರೆಸ್, ಡಿಕೆ ಶಿವಕುಮಾರ್ ಅವರು ಕರ್ನಾಟಕದಲ್ಲಿ ಅತಿ ಹೆಚ್ಚು ದುಡ್ಡು ಹಂಚಿದ್ದಾರೆ. ಗುಂಡಾಗಿರಿ ಮಾಡಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲೇ ಚುನಾವಣಾ ಸಮಯದಲ್ಲಿ ಇಷ್ಟೊಂದು ಹಣ ಸಿಕ್ಕಿದೆ. ಆದಾಯ ತೆರಿಗೆ ದಾಳಿಯಾದಾಗ 50 ರಿಂದ 60 ಕೋಟಿ ರೂಪಾಯಿ ಸಿಕ್ಕಿದೆ ಎಂದು ಅಶೋಕ್ ಹೇಳಿದ್ದಾರೆ.

ಕರ್ನಾಟಕದಲ್ಲಿ ಸಮೀಕ್ಷೆಗಳ ಫಲಿತಾಂಶಗಳು ಹೇಗಿವೆ?

ಎಬಿಪಿ-ಸಿವೋರ್ಟ್ ಕರ್ನಾಟಕದಲ್ಲಿ ಬಿಜೆಪಿಗೆ 23-25 ಸ್ಥಾನಗಳು ಸಿಗಲಿವೆ, ಕಾಂಗ್ರೆಸ್ 3-5 ಕ್ಷೇತ್ರಗಳಲ್ಲಿ ಗೆಲುವು ಸಾಧ್ಯತೆ ಇದೆ ಎಂದು ಹೇಳಿದೆ. ಅದೇ ರೀತಿಯ ಇಂಡಿಯಾ ಟುಡೇ ಬಿಜೆಪಿಗೆ 20-22, ಕಾಂಗ್ರೆಸ್ 3-5, ಜೆಡಿಎಸ್ 2-3 ಸ್ಥಾನಗಳ ಗಳಿಸಬಹುದು ಎಂದಿದೆ. ನ್ಯೂಸ್ 18 ಸಮೀಕ್ಷೆ ನೋಡುವುದಾದರೆ ಬಿಜೆಪಿಗೆ 21-24, ಕಾಂಗ್ರೆಸ್‌ಗೆ 3-7 ಹಾಗೂ ಜೆಡಿಎಸ್‌ಗೆ 1-2 ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎಂದು ಅಂದಾಜಿಸಿದೆ.

ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಪ್ರಕಾರ ಬಿಜೆಪಿಗೆ 23-25 ಸ್ಥಾನ, ಕಾಂಗ್ರೆಸ್‌ಗೆ 3-5, ಜೆಡಿಎಸ್‌ಗೆ 2-3 ಸ್ಥಾನ, ಇನ್ನು ರಿಪಬ್ಲಿಕ್ ಸಮೀಕ್ಷೆಯಲ್ಲಿ ಬಿಜೆಪಿಗೆ 22, ಕಾಂಗ್ರೆಸ್ 6 ಸ್ಥಾನ ಗೆಲ್ಲುವ ಸಾಧ್ಯತೆ ಇದೆ. ಸಿಎನ್‌ಎನ್‌ ಸಮೀಕ್ಷೆಯಲ್ಲಿ ಬಿಜೆಪಿ 21-23, ಕಾಂಗ್ರೆಸ್ 3-7 ಹಾಗೂ ಜೆಡಿಎಸ್ 1-3 ಸ್ಥಾನಗಳನ್ನು ಗಳಿಸುವ ನಿರೀಕ್ಷೆ ಎಂದು ಹೇಳಿದೆ. ಅದೇ ರೀತಿಯ ಜನ್ ಕಿ ಬಾತ್ ಸಮೀಕ್ಷೆ ಪ್ರಕಾರ ಬಿಜೆಪಿಗೆ 21 ರಿಂದ 23, ಕಾಂಗ್ರೆಸ್ 5 ರಿಂದ 7 ಕ್ಷೇತ್ರಗಳನ್ನು ಗೆಲ್ಲಬಹುದು ಎಂದು ಹೇಳಿವೆ.

ಈ ಎಲ್ಲಾ ಸಮೀಕ್ಷೆಗಳನ್ನು ಗಮಿಸಿದಾಗ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 20 ಪ್ಲಸ್ ಗೆಲ್ಲೋದು ಪಕ್ಕಾ ಅಂತ ಎಲ್ಲಾ ಸಮೀಕ್ಷೆಗಳು ಹೇಳುತ್ತಿದೆ. ಇತ್ತ ಕಾಂಗ್ರೆಸ್ ತನ್ನ ಸ್ಥಾನಗಳನ್ನು 3 ರಿಂದ 5ಕ್ಕೆ ಹೆಚ್ಚಿಸಿಕೊಳ್ಳಬಹುದು ಎಂದು ಹೇಳಿವೆ. ಹಾಗಾದರೆ ಆಡಳಿತಾರೂಢ ಕಾಂಗ್ರೆಸ್ ನಾಯಕರ ಲೆಕ್ಕಾಚಾರ ಉಲ್ಣಾ ಆಯಿತೇ? ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಪಕ್ಷದ ನಾಯಕ ಎಡವಿದ್ದು ಎಲ್ಲಿ ಅನ್ನೋದನ್ನು ನೋಡೋಣ.

ಗಮನಿಸಿ: ಚುನಾವಣೆ ಫಲಿತಾಂಶ ಎಕ್ಸಿಟ್‌ ಪೋಲ್ ಸಂಖ್ಯೆಗಳಿಗಿಂತ ಭಿನ್ನವಾಗಿ ಇರಬಹುದು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ