ಇಂದು ತೆರೆಗೆ ಬರ್ತಿದೆ ಶ್ರೀಲಂಕಾ ಖ್ಯಾತ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಬಯೋಪಿಕ್ 800
Oct 06, 2023 06:30 AM IST
ಅಕ್ಟೋಬರ್ 6 ರಂದು ಮುತ್ತಯ್ಯ ಮುರಳೀಧರನ್ ಬಯೋಪಿಕ್ 800 ತೆರೆಗೆ
ಮುತ್ತಯ್ಯ ಮುರಳೀಧರನ್ ವೃತ್ತಿ ಜೀವನದಲ್ಲಿ 800 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಕಾರಣದಿಂದಲೇ ಈ ಬಯೋಪಿಕ್‌ಗೆ '800' ಎಂದು ಹೆಸರಿಡಲಾಗಿದೆ. ಈ ಸಾಧನೆ ಮಾಡಿರುವ ಏಕೈಕ ಬೌಲರ್ ಎನ್ನುವ ಖ್ಯಾತಿ ಕೂಡಾ ಮುತ್ತಯ್ಯ ಮುರಳೀಧರನ್ ಹೆಸರಿನಲ್ಲಿದೆ.
ಶ್ರೀಲಂಕಾ ಖ್ಯಾತ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಬಯೋಪಿಕ್ ಇಂದು ತೆರೆ ಕಾಣುತ್ತಿದೆ. ಬಹು ನಿರೀಕ್ಷಿತ ಸಿನಿಮಾ ನೋಡಲು ಕ್ರಿಕೆಟ್ ಹಾಗೂ ಸಿನಿಪ್ರಿಯರು ಕಾಯುತ್ತಿದ್ದಾರೆ. ಖ್ಯಾತ ತಮಿಳು ನಟ ವಿಜಯ್ ಸೇತುಪತಿ, ಮುತ್ತಯ್ಯ ಮುರಳೀಧರನ್ ಪಾತ್ರದಲ್ಲಿ ನಟಿಸಬೇಕಿತ್ತು. ಆದರೆ ಆರಂಭದಲ್ಲೇ ಅವರು ಈ ಚಿತ್ರದಿಂದ ಹಿಂದೆ ಸರಿದಿದ್ದರು.
2020ರಲ್ಲಿ ಅನೌನ್ಸ್ ಆಗಿದ್ದ ಸಿನಿಮಾ
2020ರಲ್ಲಿ ಮುತ್ತಯ್ಯ ಮುರಳೀಧರ್ ಸಿನಿಮಾ ಅನೌನ್ಸ್ ಆಗಿತ್ತು. ಪೋಸ್ಟರ್ ಕೂಡಾ ಸದ್ದು ಮಾಡಿತ್ತು. ತಾನು ಈ ಸಿನಿಮಾದಲ್ಲಿ ನಟಿಸುವುದಾಗಿ ವಿಜಯ್ ಸೇತುಪತಿ ಹೇಳಿದ್ದರು. ಈ ಸಿನಿಮಾದ ಭಾಗವಾಗಿ ಆಯ್ಕೆ ಆಗಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಕೂಡಾ ಪೋಸ್ಟ್ ಹಂಚಿಕೊಂಡಿದ್ದರು. ಆದರೆ ನಂತರ ಕಾರಣಾಂತರಗಳಿಂದ ವಿಜಯ್ ಸೇತುಪತಿ, ಮುತ್ತಯ್ಯ ಮುರಳೀಧರನ್ ಪಾತ್ರದಲ್ಲಿ ನಾನು ನಟಿಸುತ್ತಿಲ್ಲ ಎಂದಿದ್ದರು.
ವೃತ್ತಿ ಜೀವನದಲ್ಲಿ 800 ವಿಕೆಟ್‌ಗಳನ್ನು ಪಡೆದಿರುವ ಮುತ್ತಯ್ಯ ಮುರಳೀಧರನ್
ಇದೀಗ ಸಿನಿಮಾ ರಿಲೀಸ್ ಆಗುತ್ತಿದೆ. ಕ್ರಿಕೆಟ್ ಲೋಕದ ಅತ್ಯುತ್ತಮ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ವೃತ್ತಿ ಜೀವನದಲ್ಲಿ 800 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಕಾರಣದಿಂದಲೇ ಈ ಬಯೋಪಿಕ್‌ಗೆ 800 ಎಂದು ಹೆಸರಿಡಲಾಗಿದೆ. ಈ ಸಾಧನೆ ಮಾಡಿರುವ ಏಕೈಕ ಬೌಲರ್ ಎನ್ನುವ ಖ್ಯಾತಿ ಕೂಡಾ ಮುತ್ತಯ್ಯ ಮುರಳೀಧರನ್ ಹೆಸರಿನಲ್ಲಿದೆ. ಈ ಅದ್ಭುತ ಕ್ರಿಕೆಟಿಗನ ಸಿನಿಮಾ ಇಂದು ತೆರೆಗೆ ಬರುತ್ತಿದೆ. ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್ ಸಾಕಷ್ಟು ಗಮನ ಸೆಳೆದಿದೆ. ಸಿನಿಮಾ ನೋಡಲು ಎಲ್ಲರೂ ಕಾತರರಾಗಿದ್ದಾರೆ.
ಮುತ್ತಯ್ಯ ಮುರಳೀಧರನ್ ಪಾತ್ರದಲ್ಲಿ ಮಧುರ್ ಮಿತ್ತಲ್
ಬಡ ಕುಟುಂಬದಿಂದ ಬಂದ ಮುತ್ತಯ್ಯ ಮುರಳೀಧರನ್ ಬಾಲ್ಯದಿಂದಲೂ ಕ್ರಿಕೆಟರ್ ಆಗಬೇಕೆಂದು ಕನಸು ಕಂಡವರು. ಸಿನಿಮಾದಲ್ಲಿ ಮುತ್ತಯ್ಯ ಮುರಳೀಧರನ್ ಬಾಲ್ಯ, ಕ್ರಿಕೆಟರ್ ಆಗಲು ಅವರು ಪಟ್ಟ ಶ್ರಮ, ವಿವಾದ, ವೈಯಕ್ತಿಕ ಬದುಕನ್ನು ತೋರಿಸಲಾಗಿದೆ. 800 ಚಿತ್ರವನ್ನು ಮೂವಿ ಟ್ರೈನ್ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿ ಎಂಎಸ್ ಶ್ರೀಪತಿ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಮಧುರ್ ಮಿತ್ತಲ್, ಮುತ್ತಯ್ಯ ಮುರಳೀಧರನ್ ಪಾತ್ರ ಮಾಡಿದ್ದಾರೆ. ಅವರ ಪತ್ನಿ ಪಾತ್ರವನ್ನು ಮಹಿಮಾ ನಂಬಿಯಾರ್ ಅಭಿನಯಿಸಿದ್ದಾರೆ. ಚಿತ್ರದ ಹಾಡುಗಳಿಗೆ ಗಿಬ್ರನ್ ಸಂಗೀತ ನೀಡಿದ್ದಾರೆ. 800 ಸಿನಿಮಾ ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಇಂದು (ಅ.6) ರಿಲೀಸ್ ಆಗುತ್ತಿದೆ.
ಇನ್ನಷ್ಟು ಮನರಂಜನೆ ಸುದ್ದಿಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ