logo
ಕನ್ನಡ ಸುದ್ದಿ  /  ಮನರಂಜನೆ  /  ಲೇಡಿ ಸೂಪರ್‌ ಸ್ಟಾರ್‌ ನಯನತಾರಾ ವಿರುದ್ಧ ದೂರು ದಾಖಲಿಸಿದ ನಟ ಧನುಷ್; 10 ಕೋಟಿ ಪರಿಹಾರಕ್ಕಾಗಿ ಬೇಡಿಕೆ

ಲೇಡಿ ಸೂಪರ್‌ ಸ್ಟಾರ್‌ ನಯನತಾರಾ ವಿರುದ್ಧ ದೂರು ದಾಖಲಿಸಿದ ನಟ ಧನುಷ್; 10 ಕೋಟಿ ಪರಿಹಾರಕ್ಕಾಗಿ ಬೇಡಿಕೆ

Suma Gaonkar HT Kannada

Nov 27, 2024 02:14 PM IST

google News

ಲೇಡಿ ಸೂಪರ್‌ ಸ್ಟಾರ್‌ ನಯನತಾರಾ ವಿರುದ್ಧ ದೂರು ದಾಖಲಿಸಿದ ನಟ ಧನುಷ್

    • ಲೇಡಿ ಸೂಪರ್‌ ಸ್ಟಾರ್‌ ನಯನತಾರಾ ಅವರ ಜೀವನಾಧಾರಿತ ಡಾಕ್ಯುಮೆಂಟ್ರಿ "ನಯನತಾರಾ: ಬಿಯಾಂಡ್ ದಿ ಫೇರಿ ಟೇಲ್" ತೆರೆಗೆ ಬರುವ ಮೊದಲೇ ದೂರು ದಾಖಲಾಗಿದೆ. ನಟ ಧನುಷ್‌ ಸಿನಿಮಾದ ಹಾಡು ಹಾಗೂ ವಿಡಿಯೋ ಬಳಕೆ ಮಾಡಿಕೊಂಡಿರುವುದಕ್ಕಾಗಿ ಪರಿಹಾರ ಕೇಳಿದ್ದಾರೆ.
ಲೇಡಿ ಸೂಪರ್‌ ಸ್ಟಾರ್‌ ನಯನತಾರಾ ವಿರುದ್ಧ ದೂರು ದಾಖಲಿಸಿದ ನಟ ಧನುಷ್
ಲೇಡಿ ಸೂಪರ್‌ ಸ್ಟಾರ್‌ ನಯನತಾರಾ ವಿರುದ್ಧ ದೂರು ದಾಖಲಿಸಿದ ನಟ ಧನುಷ್

ವಿಘ್ನೇಶ್ ಶಿವನ್ ನಿರ್ದೇಶನದ ಮತ್ತು ತಾವು ಮತ್ತು ವಿಜಯ್ ಸೇತುಪತಿ ಅವರು ಇತ್ತೀಚೆಗೆ ಬಿಡುಗಡೆಯಾದ ಸಾಕ್ಷ್ಯಚಿತ್ರದಲ್ಲಿ ‘ನಾನುಮ್ ರೌಡಿ ದಾನ್’ ವೀಡಿಯೊಗಳು ಮತ್ತು ಹಾಡುಗಳನ್ನು ಬಳಸಿಕೊಳ್ಳಲಾಗಿದೆ. ಆ ಕಾರಣಕ್ಕಾಗಿ ನಟ ಧನುಷ್‌ ಅವರು ದೂರು ದಾಖಲಿಸಲು ಮುಂದಾಗಿದ್ದಾರೆ. ನಯನತಾರಾ ನಿಜ ಜೀವನದ ಘಟನೆಗಳ ಕುರಿತು ‘ನಯನತಾರಾ: ಬಿಯಾಂಡ್ ದಿ ಫೇರಿ ಟೇಲ್’ ಎಂಬ ಡಾಕ್ಯುಮೆಂಟರಿ ಮಾಡಲಾಗಿದೆ. ಇಲ್ಲಿ ಕೆಲವು ಹಾಡು ಹಾಗೂ ವಿಡಿಯೋಗಳನ್ನು ಬಳಕೆ ಮಾಡಲಾಗಿದೆ. 

ಸಿನಿಮಾ ನಿರ್ಮಾಣ ಕಂಪನಿ ರೌಡಿ ಪಿಕ್ಚರ್ಸ್ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ. 'ನಾನುಮ್ ರೌಡಿ ದಾನ್' ನಟ ಧನುಷ್ ಅವರ ವಂಡರ್‌ಬಾರ್ ಫಿಲ್ಮ್ಸ್, ಚಲನಚಿತ್ರದ ದೃಶ್ಯಗಳನ್ನು ಬಳಸಿದ್ದಕ್ಕಾಗಿ ನಯನತಾರಾ, ಅವರ ನಿರ್ದೇಶಕ-ಪತಿ ವಿಘ್ನೇಶ್ ಶಿವನ್ ಮತ್ತು ಅವರ ರೌಡಿ ಪಿಕ್ಚರ್ಸ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಮದ್ರಾಸ್ ಹೈಕೋರ್ಟ್‌ನಲ್ಲಿ ಸಿವಿಲ್ ದಾವೆ ಹೂಡಿದ್ದಾರೆ. ಅನುಮತಿ ಇಲ್ಲದೆ ವಿಡಿಯೋ ಹಾಗೂ ಹಾಡುಗಳನ್ನು ಬಳಕೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. 

ತಮ್ಮ ಮುಂಬರುವ ನೆಟ್‌ಫ್ಲಿಕ್ಸ್ ಡಾಕ್ಯುಮೆಂಟರಿಯಲ್ಲಿ ಕೆಲವು ಕ್ಲಿಪ್‌ಗಳನ್ನು ಅನಧಿಕೃತವಾಗಿ ಬಳಸಿದ್ದಕ್ಕಾಗಿ ಧನುಷ್ ಅವರು ನಯನತಾರಾ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ ಎಂದು ನಯನತಾರಾ ತಮ್ಮ ಬಹಿರಂಗ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 

10 ಕೋಟಿ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದ ಅವರು ಚಿತ್ರದ ಹಾಡುಗಳು ಮತ್ತು ದೃಶ್ಯಗಳ ಬಳಕೆಗೆ ಅನುಮತಿ ನೀಡಲು ನಿರಾಕರಿಸಿದ್ದರು ಎಂಬುದು ತಿಳಿದು ಬಂದಿದೆ. ನೆಟ್‌ಫ್ಲಿಕ್ಸ್ ಭಾರತದಲ್ಲಿ ತನ್ನ ಕಂಟೆಂಟ್ ಹೂಡಿಕೆಗಳನ್ನು ವರದಿ ಮಾಡುವ ಸಂಸ್ಥೆಯಾದ ಲಾಸ್ ಗಟೋಸ್ ಪ್ರೊಡಕ್ಷನ್ ಸರ್ವಿಸಸ್ ಇಂಡಿಯಾ ಎಲ್‌ಎಲ್‌ಪಿ ಮುಂಬೈನಲ್ಲಿ ನೆಲೆಸಿರುವುದರಿಂದ, ಲೆಟರ್ಸ್ ಪೇಟೆಂಟ್‌ನ ಷರತ್ತು 12ರ ಅಡಿಯಲ್ಲಿ ವುಂಡರ್‌ಬಾರ್ ಫಿಲ್ಮ್ಸ್ ಹೈಕೋರ್ಟ್‌ಗೆ ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಲಾಗಿದೆ.

ಮದ್ರಾಸ್ ಹೈಕೋರ್ಟಿನ ಪ್ರಾದೇಶಿಕ ನ್ಯಾಯವ್ಯಾಪ್ತಿಯೊಳಗೆ ಇತರರೊಂದಿಗೆ ಕಂಪನಿಯ ಮೇಲೂ ಮೊಕದ್ದಮೆ ಹೂಡಲು ವಕೀಲರಾದ ಗೌತಮ್ ಎಸ್. ರಾಮನ್ ಮತ್ತು ಮೈತ್ರೇಯಿ ಕಾಂತಸ್ವಾಮಿ ಶರ್ಮಾ ಅವರ ಮೂಲಕ ಸಲ್ಲಿಸಲಾದ ಅರ್ಜಿಯನ್ನು ಬುಧವಾರ (ನವೆಂಬರ್ 27, 2024) ನ್ಯಾಯಮೂರ್ತಿ ಅಬ್ದುಲ್ ಖುದ್ದೋಸ್ ಅವರ ಮುಂದೆ ವಿಚಾರಣೆಗೆ ನೀಡಲಾಗಿದೆ. 

 

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ