logo
ಕನ್ನಡ ಸುದ್ದಿ  /  ಮನರಂಜನೆ  /   Manchu Manoj 2nd Marriage: ಎರಡನೇ ಮದುವೆಗೆ ಸಿದ್ಧರಾದ ಮಂಚು ಮನೋಜ್‌... ದಿನಾಂಕ ಫಿಕ್ಸ್‌ ಮಾಡಿದ ಕುಟುಂಬ

Manchu Manoj 2nd Marriage: ಎರಡನೇ ಮದುವೆಗೆ ಸಿದ್ಧರಾದ ಮಂಚು ಮನೋಜ್‌... ದಿನಾಂಕ ಫಿಕ್ಸ್‌ ಮಾಡಿದ ಕುಟುಂಬ

HT Kannada Desk HT Kannada

Feb 26, 2023 09:58 AM IST

google News

ಮಂಚು ಮನೋಜ್‌ ಹಾಗೂ ಭೂಮಾ ಮೌನಿಕಾ ಮದುವೆ ದಿನಾಂಕ ಫಿಕ್ಸ್‌

    • ಮೋಹನ್‌ ಬಾಬು ಕುಟುಂಬ ಹಾಗೂ ಭೂಮಾ ನಾಗಿರೆಡ್ಡಿ ಕುಟುಂಬ ಮೊದಲಿನಿಂದಲೂ ಬಹಳ ಆತ್ಮೀಯರಾಗಿದ್ದು ಮಂಚು ಹಾಗೂ ಭೂಮಿಕಾ ಕೂಡಾ ಬಹಳ ದಿನಗಳಿಂದ ಪರಿಚಯ. ಜೊತೆಗೆ ಇಬ್ಬರೂ ಮೊದಲ ಮದುವೆ ಸಂಬಂಧದಿಂದ ಹೊರ ಬಂದಿದ್ದಾರೆ. ಆದ್ದರಿಂದ ಇಬ್ಬರ ಪರಿಚಯ ಪ್ರೇಮಕ್ಕೆ ತಿರುಗಿ ಈಗ ಮದುವೆವರೆಗೂ ಬಂದು ನಿಂತಿದೆ ಎಂದು ಟಾಲಿವುಡ್‌ ಮೂಲಗಳು ತಿಳಿಸಿವೆ.
ಮಂಚು ಮನೋಜ್‌ ಹಾಗೂ ಭೂಮಾ ಮೌನಿಕಾ ಮದುವೆ ದಿನಾಂಕ ಫಿಕ್ಸ್‌
ಮಂಚು ಮನೋಜ್‌ ಹಾಗೂ ಭೂಮಾ ಮೌನಿಕಾ ಮದುವೆ ದಿನಾಂಕ ಫಿಕ್ಸ್‌

ತೆಲುಗು ಚಿತ್ರರಂಗದ ಖ್ಯಾತ ನಟ ಮೋಹನ್‌ ಬಾಬು ಪುತ್ರ ಮಂಚು ಮನೋಜ್‌ ಸದ್ಯಕ್ಕೆ ಟಾಲಿವುಡ್‌ನಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಅವರ ಕಮ್‌ ಬ್ಯಾಕ್‌ ಮತ್ತು ಮದುವೆ. ಮಂಚು ಮನೋಜ್‌ ಭೂಮಿಕಾ ಎಂಬುವರನ್ನು ಪ್ರೀತಿಸುತ್ತಿದ್ದು ಕುಟುಂಬಸ್ಥರು ಮದುವೆ ದಿನಾಂಕ ಫೈನಲ್‌ ಮಾಡಿದ್ದಾರೆ ಎನ್ನಲಾಗಿದೆ. ಮನೋಜ್‌ಗೆ ಇದು ಎರಡನೇ ಮದುವೆ.

ಮಂಚು ಮನೋಜ್‌ ತಾವು ಪ್ರೀತಿಸುತ್ತಿದ್ದ ಪ್ರಣತಿ ರೆಡ್ಡಿ ಎಂಬುವರನ್ನು 2015ರಲ್ಲಿ ಮದುವೆಯಾಗಿದ್ದರು. ಆದರೆ 4 ವರ್ಷಗಳಲ್ಲೇ ಈ ಸಂಬಂಧ ಮುರಿದುಬಿತ್ತು. 2019 ರಲ್ಲಿ ಮಂಚು ಮನೋಜ್‌ ಹಾಗು ಪ್ರಣತಿ ರೆಡ್ಡಿ ಡಿವೋರ್ಸ್‌ ಪಡೆದರು. ಇದೀಗ ಮನೋಜ್‌, ಹಿರಿಯ ನಟ ಭೂಮಾ ನಾಗಿರೆಡ್ಡಿ ಅವರ ಪುತ್ರಿ ಮೌನಿಕಾ ಅವರನ್ನು ಪ್ರೀತಿಸುತ್ತಿದ್ದ ಅವರನ್ನೇ ಎರಡನೇ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಈ ಜೋಡಿ ಅನೇಕ ಬಾರಿ ಮಾಧ್ಯಮಗಳ ಕಣ್ಣಿಗೆ ಕಾಣಿಸಿಕೊಂಡಿದ್ದರು. ಇದೀಗ ಮನೆಯವರು ಸೇರಿ ಇಬ್ಬರ ಮದುವೆಗೆ ಡೇಟ್‌ ಫಿಕ್ಸ್‌ ಮಾಡಿದ್ದಾರೆ ಎನ್ನಲಾಗಿದೆ.

ಮಂಚು ಮನೋಜ್‌ ಹಾಗೂ ಮೌನಿಕಾ ಅವರ ಮದುವೆ ಮಾರ್ಚ್‌ 3 ರಂದು ಹೈದರಾಬಾದ್‌ನಲ್ಲಿ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಆದರೆ ಈ ವಿಚಾರವಾಗಿ ಮೋಹನ್‌ ಬಾಬು ಕುಟುಂಬವಾಗಲೀ, ಭೂಮಾ ನಾಗಿರೆಡ್ಡಿ ಕುಟುಂಬವಾಗಲೀ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಮೂಲಗಳ ಪ್ರಕಾರ ಮಾರ್ಚ್‌ 3 ರಂದು ಇಬ್ಬರ ಮದುವೆ ಖಂಡಿತ ನಡೆಯಲಿದೆ. ಶೀಘ್ರದಲ್ಲೇ ಅಧಿಕೃತವಾಗಿ ಘೋಷಣೆ ಮಾಡಬಹುದು ಅಥವಾ ಸರಳವಾಗಿ ಯಾರಿಗೂ ಹೇಳದಂತೆ ಮದುವೆ ನೆರವೇರಿಸುವ ಸಾಧ್ಯತೆ ಕೂಡಾ ಇದೆ ಎನ್ನಲಾಗಿದೆ.

ಮತ್ತೊಂದೆಡೆ ಭೂಮಾ ಮೌನಿಕಾ ಅವರಿಗೂ ಇದು ಎರಡನೇ ಮದುವೆ ಎನ್ನಲಾಗುತ್ತಿದೆ. ಮೋಹನ್‌ ಬಾಬು ಕುಟುಂಬ ಹಾಗೂ ಭೂಮಾ ನಾಗಿರೆಡ್ಡಿ ಕುಟುಂಬ ಮೊದಲಿನಿಂದಲೂ ಬಹಳ ಆತ್ಮೀಯರಾಗಿದ್ದು ಮಂಚು ಹಾಗೂ ಭೂಮಿಕಾ ಕೂಡಾ ಬಹಳ ದಿನಗಳಿಂದ ಪರಿಚಯ. ಜೊತೆಗೆ ಇಬ್ಬರೂ ಮೊದಲ ಮದುವೆ ಸಂಬಂಧದಿಂದ ಹೊರ ಬಂದಿದ್ದಾರೆ. ಆದ್ದರಿಂದ ಇಬ್ಬರ ಪರಿಚಯ ಪ್ರೇಮಕ್ಕೆ ತಿರುಗಿ ಈಗ ಮದುವೆವರೆಗೂ ಬಂದು ನಿಂತಿದೆ ಎಂದು ಟಾಲಿವುಡ್‌ ಮೂಲಗಳು ತಿಳಿಸಿವೆ.

ಮಂಚು ಮನೋಜ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಸುಮಾರು 4 ವರ್ಷಗಳಿಂದ ಸಿನಿಮಾದಿಂದ ದೂರ ಉಳಿದಿದ್ದ ಅವರು, ಇತ್ತೀಚೆಗಷ್ಟೇ ಅಹಂ ಬ್ರಹ್ಮಾಸ್ಮಿ ಹಾಗೂ ವಾಟ್ ದಿ ಫಿಶ್‌ ಎಂಬ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. 2018 ರಲ್ಲಿ ಆಪರೇಷನ್‌ 2019 ಎಂಬ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದು ಬಿಟ್ಟರೆ ಮನೋಜ್‌ ಹೊಸ ಸಿನಿಮಾ ಅನೌನ್ಸ್‌ ಮಾಡಿರಲಿಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ