logo
ಕನ್ನಡ ಸುದ್ದಿ  /  ಮನರಂಜನೆ  /  Meena Come Back To Shoot: ಪತಿ ಅಗಲಿ ಬಹಳ ದಿನಗಳ ನಂತರ ಮತ್ತೆ ಶೂಟಿಂಗ್‌ ಹಾಜರು..ವಿಡಿಯೋ ಹಂಚಿಕೊಂಡ ಮೀನಾ

Meena come back to shoot: ಪತಿ ಅಗಲಿ ಬಹಳ ದಿನಗಳ ನಂತರ ಮತ್ತೆ ಶೂಟಿಂಗ್‌ ಹಾಜರು..ವಿಡಿಯೋ ಹಂಚಿಕೊಂಡ ಮೀನಾ

HT Kannada Desk HT Kannada

Dec 25, 2022 07:28 AM IST

ಶೂಟಿಂಗ್‌ ಸೆಟ್‌ನಲ್ಲಿ ಮೀನಾ

    • ಬಹಳ ದಿನಗಳ ನಂತರ ನಿಮ್ಮ ಪೋಸ್ಟ್‌ ನೋಡಿ ಖುಷಿ ಆಯ್ತು, ನಾವಂತೂ ನಿಮ್ಮ ಒಂದು ವಿಡಿಯೋ ಅಥವಾ ಪೋಸ್ಟ್‌ಗಾಗಿ ಕಾಯುತ್ತಿದ್ದೆವು. ಜೀವನದಲ್ಲಿ ಕಷ್ಟದ ಹಿಂದೆ ಮತ್ತೆ ಖುಷಿಯ ದಿನಗಳು ಬಂದೇ ಬರುತ್ತದೆ. ಎಲ್ಲವನ್ನೂ ಮರೆತು ಮುಂದೆ ಸಾಗಿ ಎಂದು ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ.
ಶೂಟಿಂಗ್‌ ಸೆಟ್‌ನಲ್ಲಿ ಮೀನಾ
ಶೂಟಿಂಗ್‌ ಸೆಟ್‌ನಲ್ಲಿ ಮೀನಾ (PC: meenasagar16 Instagram)

Meena come back to shoot: ಮೀನಾ (Meena), ಬಹುಭಾಷಾ ನಟಿಯಾಗಿ ಹೆಸರು ಮಾಡಿರುವ ಚೆಲುವೆ. ಕನ್ನಡ, ತಮಿಳು, ತೆಲುಗು, ಮಲಯಾಳಂನ ಅನೇಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದ ಮೀನಾ, ನಾಯಕಿಯಾಗಿ ಕೂಡಾ ಸಕ್ಸಸ್‌ ಕಂಡಿದ್ದಾರೆ. ಒಂದು ಕಾಲದಲ್ಲಿ ಬಹುತೇಕ ಎಲ್ಲಾ ಭಾಷೆಯ ಸ್ಟಾರ್‌ ನಟರೊಂದಿಗೆ ಹೀರೋಯಿನ್‌ ಆಗಿ ನಟಿಸಿದ್ದ ಮೀನಾ ಈಗ ಪೋಷಕ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಅಂದಿಗೂ, ಇಂದಿಗೂ ಅವರಿಗೆ ಬೇಡಿಕೆ ಕಡಿಮೆ ಆಗಿಲ್ಲ.

ಟ್ರೆಂಡಿಂಗ್​ ಸುದ್ದಿ

ಗಾಯಗೊಂಡ ನಟಿ ಐಶ್ವರ್ಯಾ ರೈ ಕೈಬಿಟ್ಟು ನಡೆಯಲೊಪ್ಪದ ಆರಾಧ್ಯ ಬಚ್ಚನ್‌; ಮಗಳೆಂದರೆ ಹೀಗಿರಬೇಕು ಅಂದ್ರು ಫ್ಯಾನ್ಸ್‌

Cannes: ಚಿನ್ನದ ಬಣ್ಣದ ಉಡುಗೆಯಲ್ಲಿ ಆಸ್ಕರ್‌ ಟ್ರೋಫಿ ರೀತಿ ಕಾಣಿಸ್ತಾರಂತೆ ಶೋಭಿತಾ ಧೂಳಿಪಾಲ, ನಿಮಗೂ ಹಾಗೇ ಕಾಣಿಸ್ತಾರ ನೋಡಿ

ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅದೃಷ್ಟ ಕಣ್ರೋ, ಅಪಶಕುನ ಅಲ್ಲ; ಐಪಿಎಲ್‌ನಲ್ಲಿ ಆರ್‌ಸಿಬಿ ಹೊಸ ಅಧ್ಯಾಯ, ತುಚ್ಛ ಪದ ಬಳಸಿದವರಿಗೆ ಚಾಟಿಯೇಟು

Bhagyalakshmi Serial: 10ನೇ ತರಗತಿ ಪಾಸ್‌ ಆದ ಖುಷಿಗೆ ಮೊದಲ ದಿನವೇ ಕೆಲಸಕ್ಕೆ ತಡವಾಗಿ ಹೊರಟ ಭಾಗ್ಯಾ, ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

ಕೆಲವು ದಿನಗಳ ಹಿಂದಷ್ಟೇ ಮೀನಾ ಬದುಕಲ್ಲಿ ದೊಡ್ಡ ದುರಂತ ನಡೆದಿದೆ. ಮೀನಾ, ಬಹಳ ಪ್ರೀತಿಸುತ್ತಿದ್ದ ತಮ್ಮ ಪತಿ ವಿದ್ಯಾ ಸಾಗರ್‌ ಅವರನ್ನು ಕಳೆದುಕೊಂಡಿದ್ದಾರೆ. ಈ ಘಟನೆಯಿಂದ ಮೀನಾ ಶಾಕ್‌ಗೆ ಒಳಗಾಗಿದ್ದರು. ಸಿನಿಮಾಗಳಿಂದ ದೂರ ಇದ್ದು ಮನೆಯಲ್ಲೇ ಉಳಿದಿದ್ದರು. ಇದೀಗ ಮೀನಾ, ತಮ್ಮ ಪತಿ ಅಗಲಿಕೆ ನೋವಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಮೀನಾ ಕುಟುಂಬ, ಸ್ನೇಹಿತರು, ಸಹ ಕಲಾವಿದರು ಆಕೆಯನ್ನು ಮೊದಲಿನ ಸ್ಥಿತಿಗೆ ತರಲು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಇದೀಗ ಬಹಳ ದಿನಗಳ ನಂತರ ಮತ್ತೆ ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ. ಮೀನಾ, ಶೂಟಿಂಗ್‌ ಸೆಟ್‌ನಲ್ಲಿ ಮೇಕಪ್‌ ಮಾಡಿಕೊಳ್ಳುತ್ತಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದೊಂದು ಜಾಹೀರಾತಿನ ಚಿತ್ರೀಕರಣವಾಗಿದ್ದು ಈ ವಿಡಿಯೋವನ್ನು ಸ್ವತ: ಮೀನಾ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೋ ನೋಡಿ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ''ಬಹಳ ದಿನಗಳ ನಂತರ ನಿಮ್ಮ ಪೋಸ್ಟ್‌ ನೋಡಿ ಖುಷಿ ಆಯ್ತು, ನಾವಂತೂ ನಿಮ್ಮ ಒಂದು ವಿಡಿಯೋ ಅಥವಾ ಪೋಸ್ಟ್‌ಗಾಗಿ ಕಾಯುತ್ತಿದ್ದೆವು. ಜೀವನದಲ್ಲಿ ಕಷ್ಟದ ಹಿಂದೆ ಮತ್ತೆ ಖುಷಿಯ ದಿನಗಳು ಬಂದೇ ಬರುತ್ತದೆ. ಎಲ್ಲವನ್ನೂ ಮರೆತು ಮುಂದೆ ಸಾಗಿ'' ಎಂದು ಮನವಿ ಮಾಡುತ್ತಿದ್ದಾರೆ.

ಮೀನಾ ಎರಡನೇ ಮದುವೆ ಗಾಸಿಪ್

ಈ ನಡುವೆ, ನಟಿ ಮೀನಾ ಎರಡನೇ ಮದುವೆ ಆಗಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ತಮಿಳು ಚಿತ್ರರಂಗದಲ್ಲಿ ಮಾತ್ರವಲ್ಲದೆ, ಇಡೀ ದಕ್ಷಿಣ ಭಾರತಾದ್ಯಂತ ಹರಿದಾಡುತ್ತಿದೆ. ಮೀನಾ ಅವರಿಗೆ ಎರಡನೇ ಮದುವೆ ಆಗಲು ಇಷ್ಟವಿಲ್ಲದಿದ್ದರೂ, ಮಗಳು ನೈನಿಕಾ, ಪೋಷಕರು ಹಾಗೂ ಆತ್ಮೀಯರ ಒತ್ತಡಕ್ಕೆ ಮಣಿದು ಮದುವೆಗೆ ಒಪ್ಪಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಮೀನಾ, ಎರಡನೇ ಮದುವೆಯಾಗಲು ಒಪ್ಪಿರುವುದು ನಿಜವೇ ಆದಲ್ಲಿ, ಆ ವ್ಯಕ್ತಿ ಯಾರು ಎಂಬ ಪ್ರಶ್ನೆ ಕೂಡಾ ಎದುರಾಗಿದೆ. ತಮ್ಮ ಕುಟುಂಬದ ಆತ್ಮೀಯ ವ್ಯಕ್ತಿಯೊಬ್ಬರನ್ನು ಮೀನಾ ಎರಡನೇ ಮದುವೆ ಆಗಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಸುದ್ದಿ ಬಗ್ಗೆ ಮೀನಾ ಆಗಲೀ, ಆಕೆಯ ಕುಟುಂಬದವರಾಗಲೀ ಅಧಿಕೃತವಾಗಿ ಅನೌನ್ಸ್‌ ಮಾಡಿಲ್ಲ.

ಶ್ವಾಸಕೋಶದ ಸೋಂಕಿಗೆ ಒಳಗಾಗಿ ಮೃತಪಟ್ಟಿದ್ದ ವಿದ್ಯಾಸಾಗರ್‌

ಮೀನಾ ಪತಿ ವಿದ್ಯಾಸಾಗರ್‌ ಹಲವು ವರ್ಷಗಳಿಂದ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದು ಅದಕ್ಕೆ ಸಂಬಂಧಿಸಿದಂತೆ ನಿಯಮಿತ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು. ಆದರೆ, ಕೋವಿಡ್‌ ಸೋಂಕು ತಗುಲಿದ ನಂತರ ಶ್ವಾಸಕೋಶ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿತ್ತು. ಇದಕ್ಕಾಗಿ ಶ್ವಾಸಕೋಶ ಕಸಿ ಮಾಡುವ ವಿಚಾರವಾಗಿ ವೈದ್ಯರೊಂದಿಗೆ ಮಾತುಕತೆ ಕೂಡಾ ಆಗಿತ್ತು. ಶ್ವಾಸಕೋಶ ಕಸಿಗೆ ಮೆದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ ವ್ಯಕ್ತಿಯ ಶ್ವಾಸಕೋಶವೇ ಬೇಕಿತ್ತು. ಆದರೆ, ಆ ರೀತಿಯ ದಾನಿ ಸಿಗದ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆ ದಿನಾಂಕ ಮುಂದೂಡಲಾಯ್ತು. ಅಲ್ಲಿವರೆಗೂ ಔಷಧದ ಮೂಲಕ ಗುಣಪಡಿಸಲು ವೈದ್ಯರು ಮುಂದಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾ ಸಾಗರ್‌ ಜೂನ್‌ 28 ರಂದು ಆಸ್ಪತ್ರೆಯಲ್ಲಿ ನಿಧನರಾದರು.

ಮೀನಾ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಸದ್ಯದಲ್ಲೇ ಮೀನಾ, 'ದೃಶ್ಯಂ 3' ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಜಿತು ಜೋಸೆಫ್‌, ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕನ್ನಡದಲ್ಲೂ ದೃಶ್ಯಂ ಸರಣಿ ಯಶಸ್ಸುಗೊಂಡಿದ್ದು ಕನ್ನಡ ಸಿನಿಪ್ರಿಯರು ಕೂಡಾ 3ನೇ ಭಾಗಕ್ಕೆ ಕಾಯುತ್ತಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ