Bollywood actor on Kantara: 'ಕಾಂತಾರ 2'ರಲ್ಲಿ ನನಗೂ ಅವಕಾಶ ಕೊಡಿ, ನಾನಂತೂ ನಿಮ್ಮ ಪಕ್ಕ ಬಂದು ಕುಳಿತುಬಿಡುತ್ತೇನೆ ಎಂದ ಬಾಲಿವುಡ್ ನಟ
ಖ್ಯಾತ ಎಂಟರ್‌ಟೈನ್ಮೆಂಟ್ ಮೀಡಿಯಾ ಪಿಂಕ್‌ವಿಲ್ಲಾ ಇತ್ತೀಚೆಗೆ ವರ್ಷಾಂತ್ಯದ ಸಂವಾದ ಕಾರ್ಯಕ್ರಮ ಏರ್ಪಡಿಸಿ ಖ್ಯಾತ ಗಣ್ಯರಿಗೆ ಆಹ್ವಾನಿಸಿತ್ತು. ಈ ಸಂವಾದ ಕಾರ್ಯಕ್ರಮದಲ್ಲಿ ಬಾಲಿವುಡ್ ಗಣ್ಯರಾದ ಮೃಣಾಲ್ ಠಾಕೂರ್, ವಿದ್ಯಾ ಬಾಲನ್,ಆಯುಷ್ಮಾನ್ ಖುರಾನಾ, ಅನಿಲ್ ಕಪೂರ್ , ರಿಷಬ್ ಶೆಟ್ಟಿ, ಅದ್ವಿಶೇಷ್ ಸೇರಿದಂತೆ ಇನ್ನಿತರರು ಭಾವಹಿಸಿದ್ದರು.
ರಿಷಬ್ ಶೆಟ್ಟಿ ಎಂದರೆ ಯಾರು ಎಂದು ತಿಳಿಯದ ಜನರೆಲ್ಲಾ ಈಗ ಅವರ ಸಿನಿಮಾ ನೋಡಿ ಹೊಗಳುತ್ತಿದ್ದಾರೆ. 'ಕಾಂತಾರ' ಸಿನಿಮಾ ರಿಷಬ್ ಶೆಟ್ಟಿ ಅವರಿಗೆ ಡಿವೈನ್ ಸ್ಟಾರ್ ಪಟ್ಟ ತಂದು ಕೊಟ್ಟಿದೆ. ಸ್ಯಾಂಡಲ್‌ವುಡ್, ತೆಲುಗು ಚಿತ್ರರಂಗದ ಜೊತೆಗೆ ಬಾಲಿವುಡ್ ಮಂದಿ ಕೂಡಾ ರಿಷಬ್ ಅವರ ಸಂದರ್ಶನ ಮಾಡಲು ಕಾಯುತ್ತಿವೆ. ನಮಗೂ ಒಂದು ಸಿನಿಮಾ ಮಾಡಿಕೊಡಿ ಎಂದು ಡಿಮ್ಯಾಂಡ್ ಮಾಡುತ್ತಿದ್ದಾರೆ. ಆದರೆ ರಿಷಬ್ ಮಾತ್ರ ಸ್ಯಾಂಡಲ್‌ವುಡ್ ಬಿಟ್ಟು ಬರುವುದಿಲ್ಲ ಎಂದು ಹೇಳುತ್ತಲೇ ಇದ್ದಾರೆ.
ಈ ನಡುವೆ ಖ್ಯಾತ ಬಾಲಿವುಡ್ ನಟರೊಬ್ಬರು, ನನಗೂ ನಿಮ್ಮ ಸಿನಿಮಾದಲ್ಲಿ ನಟಿಸುವ ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ. ದೇಶದ ಖ್ಯಾತ ಎಂಟರ್‌ಟೈನ್ಮೆಂಟ್ ಮೀಡಿಯಾ ಪಿಂಕ್‌ವಿಲ್ಲಾ ಇತ್ತೀಚೆಗೆ ವರ್ಷಾಂತ್ಯದ ಸಂವಾದ ಕಾರ್ಯಕ್ರಮ ಏರ್ಪಡಿಸಿ ಖ್ಯಾತ ಗಣ್ಯರಿಗೆ ಆಹ್ವಾನಿಸಿತ್ತು. ಈ ಸಂವಾದ ಕಾರ್ಯಕ್ರಮದಲ್ಲಿ ಬಾಲಿವುಡ್ ಗಣ್ಯರಾದ ಮೃಣಾಲ್ ಠಾಕೂರ್, ವಿದ್ಯಾ ಬಾಲನ್,ಆಯುಷ್ಮಾನ್ ಖುರಾನಾ, ಅನಿಲ್ ಕಪೂರ್ , ರಿಷಬ್ ಶೆಟ್ಟಿ, ಅದ್ವಿಶೇಷ್ ಸೇರಿದಂತೆ ಇನ್ನಿತರರು ಭಾವಹಿಸಿದ್ದರು. ಈ ಕಾರ್ಯಕ್ರಮದಲ್ಲಿ 'ಕಾಂತಾರ' ಸೇರಿದಂತೆ 2022ರ ಅತ್ಯುತ್ತಮ ಸಿನಿಮಾಗಳ ಬಗ್ಗೆ ಸಂವಾದ ನಡೆಯಿತು.
'ಕಾಂತಾರ' ಜನರಿಗೆ ಬಹಳ ಇಷ್ಟವಾಗಿದೆ. ಇಂತಹ ಕಥೆಗಳನ್ನೇ ಜನರು ಹೆಚ್ಚು ಇಷ್ಟಪಟ್ಟು ನೋಡುತ್ತಿದ್ದಾರೆ. ಈ ಸಿನಿಮಾ ಆ ನೆಲದ ಮೂಲ ಕತೆ, ಜನರು ತಮ್ಮ ಮನಸ್ಸಿಗೆ ಹತ್ತಿರವಾದ ಕಥೆಗಳಿರುವ ಸಿನಿಮಾಗಳನ್ನು ನೋಡಲು ಬಯಸುತ್ತಾರೆ. ಹೊಸ ಪ್ರಯೋಗಳನ್ನು ಎಲ್ಲರೂ ಮೆಚ್ಚುತ್ತಿದ್ದಾರೆ ಎಂದು ಆಯುಷ್ಮಾನ್ ಖುರಾನಾ ಹೇಳಿದರು. ನಂತರ ಮಾತನಾಡಿದ ಖ್ಯಾತ ನಟ ಅನಿಲ್ ಕಪೂರ್, ''ನಾನು ಈಗಾಗಲೇ ಒಂದು ಕನ್ನಡ ಚಿತ್ರದಲ್ಲಿ ನಟಿಸಿದ್ದೇನೆ. ನನಗೂ ನಿಮ್ಮ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿ ಎಂದರು. 'ಕಾಂತಾರ 2' ಚಿತ್ರದ ಪ್ರಸ್ತಾಪ ಆದಾಗಲೂ ಕೂಡಾ ಅನಿಲ್ ಕಪೂರ್, ನನ್ನನ್ನು ಮರೆಯಲೇಬೇಡಿ, ನಾನಂತೂ ಬಂದು ನಿಮ್ಮ ಪಕ್ಕದಲ್ಲೇ ಕುಳಿತುಬಿಡುತ್ತೇನೆ'' ಎಂದಿದ್ದಾರೆ, ಇದಕ್ಕೆ ರಿಷಬ್ ಶೆಟ್ಟಿ ನಗುವಿನ ಮೂಲಕ ಉತ್ತರಿಸಿದ್ದಾರೆ.
1982 ರಲ್ಲಿ ತೆರೆ ಕಂಡ 'ಪಲ್ಲವಿ ಅನುಪಲ್ಲವಿ' ಚಿತ್ರದಲ್ಲಿ ಅನಿಲ್ ಕಪೂರ್ ನಾಯಕನಾಗಿ ನಟಿಸಿದ್ದರು. ವೇಣೂಸ್ ಪಿಕ್ಚರ್ಸ್ ಬ್ಯಾನರ್ ಅಡಿ ಗೋವಿಂದರಾಜನ್ ಈ ಚಿತ್ರವನ್ನು ನಿರ್ಮಿಸಿದ್ದರು. ಚಿತ್ರಕ್ಕೆ ಮಣಿರತ್ನಂ ಕಥೆ ಬರೆದು ನಿರ್ದೇಶಿಸಿದ್ದರು. ಚಿತ್ರದಲ್ಲಿ ಅನಿಲ್ ಕಪೂರ್ ಜೊತೆಗೆ ಲಕ್ಷ್ಮಿ, ಕಿರಣ್ ವಿರಾಲೆ, ಮಾಸ್ಟರ್ ರೋಹಿತ್ ಹಾಗೂ ಇನ್ನಿತರರು ನಟಿಸಿದ್ದರು. ಮ್ಯೂಸಿಕ್ ಮೆಸ್ಟ್ರೋ ಇಳಯರಾಜ ಸಂಗೀತ ನೀಡಿದ್ದ ಈ ಚಿತ್ರದ ಹಾಡುಗಳು ಇಂದಿಗೂ ಬಹಳ ಫೇಮಸ್.
ಮತ್ತಷ್ಟು ಮನರಂಜನೆ ಸುದ್ದಿಗಳು
ಸೌದಿ ಪ್ರವಾಸೋದ್ಯಮ ಇಲಾಖೆಯಿಂದ ಆಹ್ವಾನಿಸಲ್ಪಟ್ಟ ಶ್ವೇತಾ ಪ್ರಸಾದ್...ಟ್ರಿಪ್ ಅನುಭವ ಹಂಚಿಕೊಂಡ ರಾಧಾ ಮಿಸ್
ಆರು ದಿನಗಳ ಕಾಲ ಸೌದಿ ಅರೇಬಿಯಾದಲ್ಲಿ ಕಳೆದ ದಿನಗಳನ್ನು ಮರೆಯಲಾಗದು. ಈ ಪ್ರವಾಸ ನನಗೆ ಒಂದು ಹೊಸ ಅನುಭವ ನೀಡಿದೆ. ಅಲ್ಲಿನ ರಿಯಾದ್, ಅಲುಲಾ, ಜೆಡಾ ಮೂರು ಹೆಸರಾಂತ ನಗರಗಳಿಗೆ ಭೇಟಿ ನೀಡಿ ಬಂದೆ. ರಿಯಾದ್‌ನಲ್ಲಿ ಸೌದಿ ಅರೇಬಿಯಾದ ಅತಿ ಎತ್ತರದ ಕಟ್ಟಡ ಕಿಂಗ್ ಡಂ ಟವರ್‌ಗೆ ಭೇಟಿ ನೀಡಿದ್ದೆ. ಪೂರ್ತಿ ಸ್ಟೋರಿ ಓದಲು ಈ ಲಿಂಕ್ ಒತ್ತಿ.
ಘಟನೆಯಿಂದ ನಮ್ಮೆಲ್ರಿಗೂ ಅವಮಾನವಾಗಿದೆ ಅಂದ್ರು ಶಿವಣ್ಣ.. ಕರ್ಮ ಯಾರನ್ನೂ ಬಿಡೊಲ್ಲ ಎಂದ ಧನ್ವೀರ್
ಹೊಸಪೇಟೆಯಲ್ಲಿ ನಡೆದ ಘಟನೆ ನೋಡಿ ನನ್ನ ಮನಸ್ಸಿಗೆ ಬಹಳ ಬೇಸರವಾಗಿದೆ. ಯಾರು ಮಾಡಿದ್ದರೂ ಇದು ದೊಡ್ಡ ತಪ್ಪು. ಕಲಾವಿದರೆಲ್ಲಾ ಒಂದೇ ಕುಟುಂಬಕ್ಕೆ ಸೇರಿದವರು. ಈ ಮಾತನ್ನು ಅಪ್ಪಾಜಿ ಕೂಡಾ ಆಗ್ಗಾಗ್ಗೆ ಹೇಳುತ್ತಿದ್ದರು. ಒಬ್ಬರಿಗೆ ಅವಮಾನ ಆದರೆ ಉಳಿದವರಿಗೂ ಅವಮಾನ ಆದಂತೆ. ಯಾರೂ ಈ ರೀತಿ ಮಾಡಬೇಡಿ, ಎಲ್ಲರನ್ನೂ ಒಂದೇ ರೀತಿ ನೋಡಿ ಸಂಪೂರ್ಣ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ.