ಅಲ್ಲು ಅರ್ಜುನ್ ಫ್ಯಾನ್ಸ್ ಫುಲ್ ಖುಷ್, ಪುಷ್ಪ 2 ತಂಡದಿಂದ ಬಿಗ್ ಅಪ್‌ಡೇಟ್; ಡಿಸೆಂಬರ್‌ನಲ್ಲಿ ರಿಲೀಸ್ ಆಗ್ತಿದೆ ಬಹುನಿರೀಕ್ಷಿತ ಸಿನಿಮಾ
Oct 09, 2024 01:21 PM IST
ಲಾಕ್ಡ್, ಲೋಡೆಡ್ ವಿತ್ ಫೈರ್ - ಡಿಸೆಂಬರ್‌ನಲ್ಲಿ ರಿಲೀಸ್ ಆಗ್ತಿದೆ ಪುಷ್ಪ 2
- ಪುಷ್ಪ 2 ಚಿತ್ರದ ಬಗ್ಗೆ ಚಿತ್ರತಂಡ ಒಂದು ಅಪ್‌ಡೇಟ್ ನೀಡಿದೆ. ಬಾಕ್ಸ್ ಆಫೀಸ್ ಇತಿಹಾಸವನ್ನು ಸೃಷ್ಟಿ ಮಾಡಲು ಪುಷ್ಪಾ 2 ರೆಡಿಯಾಗಿದೆ. ಇದರಿಂದ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿಮಾನಿಗಳು ಖುಷಿಯಾಗಿದ್ದಾರೆ.
'ಪುಷ್ಪ 2: ದಿ ರೂಲ್' ಚಿತ್ರದಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ನಿರೀಕ್ಷೆಗಳು ತುಂಬಾ ಇದೆ. ಜನರು ಈ ಚಿತ್ರವನ್ನು ನೋಡಲು ಕಾತುರತೆಯಿಂದ ಕಾಯುತ್ತಿದ್ದಾರೆ. ಈ ಅದ್ಧೂರಿ ಸಾಹಸ ಚಿತ್ರವನ್ನು ಸುಕುಮಾರ್ ನಿರ್ದೇಶಿಸಿದ್ದಾರೆ. ಸೀಕ್ವೆಲ್ ಸಿನಿಮಾದ ಶೂಟಿಂಗ್ ಸುಮಾರು ಮೂರು ವರ್ಷಗಳಿಂದ ನಡೆಯುತ್ತಿದೆ. ಅಲ್ಲು ಅರ್ಜುನ್ ಅಭಿಮಾನಿಗಳು ಹಾಗೂ ಸಿನಿಪ್ರೇಮಿಗಳು ಈ ಚಿತ್ರದ ಅಪ್‌ಡೇಟ್‌ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಬಂದಿರುವ ಎರಡು ಹಾಡುಗಳಿಗೆ ಉತ್ತಮ ರೆಸ್ಪಾನ್ಸ್ ದೊರೆತಿದೆ.
ಅಲ್ಲು ಫ್ಯಾನ್ಸ್‌ಗೆ ಖುಷಿಯೋ ಖುಷಿ
ಇದೇ ವೇಳೆ ಅಕ್ಟೋಬರ್ 8ರಂದು ಪುಷ್ಪ 2 ಚಿತ್ರದ ಬಗ್ಗೆ ಚಿತ್ರತಂಡ ಅಚ್ಚರಿಯ ಅಪ್ ಡೇಟ್ ನೀಡಿದೆ. ಪುಷ್ಪ 2 ದಿ ರೂಲ್ ಚಿತ್ರದ ಫಸ್ಟ್ ಹಾಫ್ ಫೈನಲ್ ಎಡಿಟಿಂಗ್ ಮುಗಿದು ರೆಡಿಯಾಗಿದೆ ಎಂದು ಚಿತ್ರತಂಡ ಬಹಿರಂಗಪಡಿಸಿದೆ. ಪೋಸ್ಟರ್ ನಲ್ಲಿ ಅಲ್ಲು ಅರ್ಜುನ್ ಕಾಡಿನಲ್ಲಿ ಬೆಟ್ಟದ ಮೇಲೆ ನಿಂತಿರುವ ಲಾಂಗ್ ಶಾಟ್ ಇದೆ. ಇದನ್ನು ನೋಡಿ ಜನರು ಥ್ರಿಲ್ ಆಗಿದ್ದಾರೆ. ಕಪ್ಪು ಮತ್ತು ಕೆಂಪು ಬಣ್ಣದಲ್ಲಿ ಇಡೀ ಚಿತ್ರ ಕಾಣುತ್ತದೆ. ನಡುವೆ ಅಲ್ಲು ಅರ್ಜುನ್ ನಿಂತಿದ್ದಾರೆ.
ಚಿತ್ರವನ್ನು ನಿರ್ಮಿಸುತ್ತಿರುವ ಮೈತ್ರಿ ಮೂವಿ ಮೇಕರ್ಸ್, ಪುಷ್ಪ 2 ಬಾಕ್ಸ್ ಆಫೀಸ್‌ನಲ್ಲಿ ಇತಿಹಾಸವನ್ನು ಸೃಷ್ಟಿಸುತ್ತದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಿದ್ದಾರೆ. ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಬಿರುಗಾಳಿ ಎಬ್ಬಿಸಿದ ಪುಷ್ಪಾ ಚಿತ್ರದ ಇತಿಹಾಸವನ್ನು ವೀಕ್ಷಿಸಲು ಸಿದ್ಧರಾಗಿ ಎಂಬ ಸಂದೇಶವನ್ನು ಹಂಚಿಕೊಂಡಿದ್ಧಾರೆ.
ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಈ ಚಿತ್ರ ಬರೆಯಬಹುದು ಎಂದು ಊಹಿಸಲಾಗುತ್ತಿದೆ. "ಡಿಸೆಂಬರ್ 6 ರಂದು ಥಿಯೇಟರ್‌ಗೆ ಬರಲಿದೆ” ಎಂದು Xನಲ್ಲಿ ಹಂಚಿಕೊಂಡಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಹಂಚಿಕೊಂಡ ಸಂದೇಶವನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ.
ಮೈತ್ರಿ ಮೂವಿ ಮೇಕರ್ಸ್ ನೀಡಿದ ಮಾಹಿತಿ
ಖುಷಿಯಾದ ಅಭಿಮಾನಿಗಳು
ಪುಷ್ಪ 2 ಚಿತ್ರದ ಮೊದಲಾರ್ಧ ಲಾಕ್ ಆಗಿದೆ ಎಂಬ ಅಪ್‌ಡೇಟ್‌ನಿಂದ ಅಲ್ಲು ಅರ್ಜುನ್ ಅಭಿಮಾನಿಗಳು ಖುಷಿಯಾಗಿದ್ದಾರೆ . ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಪೋಸ್ಟ್‌ಗಳು ಹರಿದಾಡುತ್ತಿದೆ. ವೀ ಆರ್ ವೇಟಿಂಗ್ ಎಂದು ಹಲವರು ಕಾಮೆಂಟ್ ಮಾಡುತ್ತಿದ್ದಾರೆ. ಇದು ಬ್ಲಾಕ್ ಬಸ್ಟರ್ ಎಂದು ನಿರ್ಮಾಪಕರು ವಿಶ್ವಾಸದಿಂದ ಹೇಳುತ್ತಿರುವುದಕ್ಕೆ ಇನ್ನಷ್ಟು ಖುಷಿಯಾಗುತ್ತಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಬಿಡುಗಡೆಗೆ ಎರಡು ತಿಂಗಳ ಮುಂಚೆಯೇ ಮೊದಲಾರ್ಧ ಸಂಪೂರ್ಣ ರೆಡಿಯಾಗಿದೆ ಎಂಬ ಮಾಹಿತಿ ಸಿಕ್ಕಿದ ಜನರು ಇನ್ನಷ್ಟು ಕುತೂಹಲ ಹುಟ್ಟು ಹಾಕಿಕೊಂಡಿದ್ದಾರೆ.
ಇನ್ನು ಎರಡೇ ತಿಂಗಳು ಬಾಕಿ
ಡಿಸೆಂಬರ್ 6ಕ್ಕಾಗಿ ನಾವು ಕಾಯುತ್ತಿದ್ದೇವೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಪುಷ್ಪ 2 ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಪ್ರತ್ಯೇಕ ಘಟಕಗಳಲ್ಲಿ ಚಿತ್ರೀಕರಣ ನಡೆಯುತ್ತಿದೆ. ಇನ್ನೊಂದೆಡೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೂ ಅದೇ ವೇಗದಲ್ಲಿ ನಡೆಯುತ್ತಿದೆ. ಫಸ್ಟ್ ಹಾಫ್ ಫೈನಲ್ ಎಡಿಟಿಂಗ್ ಕೂಡ ಮುಗಿದಿದೆ. ಇನ್ನು ದ್ವಿತಿಯಾರ್ಧದಲ್ಲಿ ಚಿತ್ರೀಕರಣದ ಕೆಲ ಭಾಗ ಮಾತ್ರ ಬಾಕಿ ಇದೆಯಂತೆ.'ಪುಷ್ಪ 2' ಸೀಕ್ವೆಲ್ ಮೇಲೆ ನಿರೀಕ್ಷೆ ಹೆಚ್ಚಿದೆ. ಈ ಸಿನಿಮಾ ದಾಖಲೆ ಬರೆಯಲಿದೆ ಎಂಬ ನಿರೀಕ್ಷೆ ಇದೆ. ಈ ಚಿತ್ರಕ್ಕೆ ದೇವಿ ಶ್ರೀಪ್ರಸಾದ್ ಸಂಗೀತ ನೀಡುತ್ತಿದ್ದಾರೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದರೆ , ಫಹದ್ ಫಾಜಿಲ್ ವಿಲನ್ ಆಗಿ ನಟಿಸುತ್ತಿದ್ದಾರೆ.
ವಿಭಾಗ