logo
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ಶಿವು ಪ್ರೀತಿಸುತ್ತಿದ್ದ ಆ ಹುಡುಗಿ ಯಾರು? ಪಾರು ಬಳಿ ಸತ್ಯ ಬಿಚ್ಚಿಡುತ್ತಿದ್ದಾಳೆ ರಾಣಿ

Annayya Serial: ಶಿವು ಪ್ರೀತಿಸುತ್ತಿದ್ದ ಆ ಹುಡುಗಿ ಯಾರು? ಪಾರು ಬಳಿ ಸತ್ಯ ಬಿಚ್ಚಿಡುತ್ತಿದ್ದಾಳೆ ರಾಣಿ

Suma Gaonkar HT Kannada

Dec 18, 2024 09:23 AM IST

google News

ಶಿವು ಪ್ರೀತಿಸುತ್ತಿದ್ದ ಆ ಹುಡುಗಿ ಯಾರು

    • Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ರಾಣಿ ತುಂಬಾ ದಿನದಿಂದ ತನ್ನೊಳಗೇ ಮುಚ್ಚಿಟ್ಟುಕೊಂಡಿದ್ದ ಸಾಕಷ್ಟು ವಿಷಯವನ್ನು ಪ್ರಸ್ತಾಪ ಮಾಡುತ್ತಾಳೆ. ಪಾರುಗೆ ಅವಳ ಮಾತುಗಳನ್ನು ತಡೆದುಕೊಳ್ಳುವ ಶಕ್ತಿ ಇರೋದಿಲ್ಲ. 
ಶಿವು ಪ್ರೀತಿಸುತ್ತಿದ್ದ ಆ ಹುಡುಗಿ ಯಾರು
ಶಿವು ಪ್ರೀತಿಸುತ್ತಿದ್ದ ಆ ಹುಡುಗಿ ಯಾರು

ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಮತ್ತು ರಾಣಿ ಇಬ್ಬರ ನಡುವೆ ಮಾತುಕತೆ ಏರ್ಪಟ್ಟಿದೆ. ಪಾರು ಹಾಗೂ ರಾಣಿ ಇಬ್ಬರೂ ಹೊಲಕ್ಕೆ ಹೋಗಿದ್ದಾರೆ. ಮೊದಲು ಪಾರು ತಾನು ವಿದೇಶಕ್ಕೆ ಹೋಗುವ ಸಲುವಾಗಿ ಬೇಕಾದ ಎಲ್ಲ ತಯಾರಿಗಳನ್ನು ಮಾಡಿಕೊಳ್ಳುತ್ತಾ ಇರುತ್ತಾಳೆ. ತನ್ನ ಬಟ್ಟೆಗಳನ್ನು ಪ್ಯಾಕ್ ಮಾಡಿಕೊಳ್ಳುತ್ತಾಳೆ. ಆದರೆ ರಾಣಿ ಹಾಗೂ ಮನೆಯ ಇತರ ಯಾವ ತಂಗಿಯರಿಗೂ ಅತ್ತಿಗೆ ತಮ್ಮನ್ನು ಬಿಟ್ಟು ಹೋಗುವುದು ಇಷ್ಟ ಇರುವುದಿಲ್ಲ. ಹೀಗಿರುವಾಗ ಅವಳಿಗೆ ತುಂಬಾ ಬೇಸರ ಆಗುತ್ತದೆ. ಅದೇ ಕಾರಣಕ್ಕೆ ರಾಣಿ ತಾನು ಮಾತಾಡಲೇಬೇಕು ಎಂದುಕೊಂಡು ಬಂದಿದ್ದಾಳೆ.

ಹೊಲದಲ್ಲಿ ಮಾತುಕಥೆ

ಪಾರು ಹತ್ತಿರ ಬಂದು “ಅತ್ತಿಗೆ ನಾನು ನಿಮ್ಮ ಜೊತೆ ಸ್ವಲ್ಪ ಸಮಯ ಮಾತಾಡಬೇಕು” ಎಂದು ಹೇಳುತ್ತಾಳೆ. ನಂತರ ಪಾರು ಕೂಡ ಮಾತಾಡಿದರಾಯ್ತು ಎಂದುಕೊಂಡು ಅವಳ ಜೊತೆ ಹೋಗುತ್ತಾಳೆ. ಆದರೆ ಈ ಮನೆಯಲ್ಲಿ ಮಾತಾಡಿದರೆ ಇನ್ಯಾರಿಗಾದರೂ ವಿಷಯ ಗೊತ್ತಾಗಿ ನೋವಾಗುತ್ತದೆ ಎಂದು ಅಂದುಕೊಂಡು ಅವಳು ಪಾರುವನ್ನು ಹೊಲಕ್ಕೆ ಕರೆದುಕೊಂಡು ಹೋಗುತ್ತಾಳೆ.

ಸಿದ್ದಾರ್ಥ್‌ ಬಗ್ಗೆ ಪ್ರಶ್ನೆ ಮಾಡಿದ ರಾಣಿ
ಸಿದ್ದಾರ್ಥ್‌ ಬಗ್ಗೆ ರಾಣಿಗೆ ವಿಷಯ ಗೊತ್ತಿದೆ ಎಂಬುದು ಪಾರುಗೆ ತಿಳಿದಿರುವುದಿಲ್ಲ. ಅವಳು ಆಲೋಚನೆ ಮಾಡಿಯೂ ಇರಲಿಲ್ಲ. ಆದರೆ ರಾಣಿಯ ಮೊದಲ ಮಾತೇ “ಅವರು ಸಿಕ್ಕಿದ್ರಾ ಅತ್ಗೆ?” ಎಂದಾಗಿರುತ್ತದೆ. “ಅವರು ಅಂದ್ರೆ ಯಾರು?” ಎಂದು ಬೇಕು ಎಂದೇ ಪ್ರಶ್ನೆ ಮಾಡುತ್ತಾಳೆ ಪಾರು. ಆಗ ಸಿದ್ದಾರ್ಥ್‌ ಎಂದು ನೇರಾನೇರವಾಗಿ ಉತ್ತರಿಸುತ್ತಾಳೆ ರಾಣಿ. ಆ ನಂತರ ಪಾರು ಮಾತು ನಿಂತು ಹೋಗುತ್ತದೆ. ರಾಣಿ ಹೇಳ್ತಾಳೆ “ನೀವೋಂದೇ ಅಲ್ಲ ಅತ್ಗೆ ನಮ್ಮಣ್ಣ ಕೂಡ ಒಂದು ಹುಡುಗಿನಾ ಪ್ರೀತಿ ಮಾಡಿದ್ದ” ಎಂದು. ಆಗ ಪಾರು ಯಾರು ಆ ಹುಡುಗಿ ಎಂದು ಕೇಳುತ್ತಾಳೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.

ಅಣ್ಣಯ್ಯ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಪಾರು ಸಿದ್ದಾರ್ಥನ ಗುಂಗಿನಲ್ಲೇ ಮುಳುಗಿದ್ದಾಳೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ