Annayya Serial: ಅತ್ತಿಗೆ ಬಿಟ್ಟು ಹೋಗ್ತಾಳೆ ಎಂಬ ಮಾತು ಕೇಳಿ ಗಟ್ಟಿ ನಿರ್ಧಾರ ತೆಗೆದುಕೊಂಡ ರಾಣಿ; ಪಾರುಗೆ ಸತ್ಯ ಹೇಳ್ತಾಳಾ?
Dec 19, 2024 01:25 PM IST
ಗಟ್ಟಿ ನಿರ್ಧಾರ ತೆಗೆದುಕೊಂಡ ರಾಣಿ
- ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಹೆಚ್ಚು ದಿನ ತಮ್ಮ ಜೊತೆ ಇರೋದಿಲ್ಲ ಎಂಬ ಸತ್ಯವನ್ನು ಅರ್ಥ ಮಾಡಿಕೊಂಡ ರಾಣಿ ಈಗ ತನಗೆ ತಿಳಿದಿರುವ ಸತ್ಯವನ್ನು ಹೇಳುವ ಪ್ರಯತ್ನ ಮಾಡುತ್ತಿದ್ದಾಳೆ. ಆದರೆ ಮುಂದೇನಾಗಿದೆ ನೋಡಿ.
ಅಣ್ಣಯ್ಯ ಧಾರಾವಾಹಿಯಲ್ಲಿ ರಾಣಿ ಹಳ್ಳಿ ಹಾಗೂ ಪೇಟೆ ನಡುವಿನ ವ್ಯತ್ಯಾಸದ ಬಗ್ಗೆ ಸುಮ್ಮನೆ ಮಾತನಾಡಲು ಆರಂಭಿಸುತ್ತಾಳೆ. ಆದರೆ ಅದರ ಹಿಂದೆ ಒಂದು ಬಲವಾದ ಕಾರಣ ಇದೆ ಎಂಬುದು ನಂತರ ಗೊತ್ತಾಗುತ್ತದೆ. ಹಳ್ಳಿಯಲ್ಲಾದರೆ ತಿಪ್ಪೆಯಲ್ಲೂ ಗಿಡ ಬೆಳೆಯುತ್ತದೆ ಎಲ್ಲವೂ ಅಂದವಾಗಿ ಕಾಣಿಸುತ್ತದೆ. ಆದರೆ ಪೇಟೆಯಲ್ಲಿ ಹಾಗಲ್ಲ ಚಂದ ಇರುವ ಜಾಗವನ್ನು ನಾವೇ ಹುಡುಕಿಕೊಂಡು ಹೋಗಬೇಕಾಗಿರುತ್ತದೆ ಎಂದು ಪಾರು ಹತ್ತಿರ ಹೇಳುತ್ತಾಳೆ. ಅದು ನಿಜ ಹಾಗಂತ ನಾನು ಸಿಟಿ ಲೈಫ್‌ನ ಬೈಕ್ಕೊಳ್ಳೋದಿಲ್ಲ ಎಂದು ಹೇಳುತ್ತಾಳೆ ಪಾರು. ನಿಮಗೆ ಯಾವ ಜಾಗ ಇಷ್ಟ ಎಂದು ರಾಣಿ ಪ್ರಶ್ನೆ ಮಾಡುತ್ತಾಳೆ.
ಜಾಸ್ತಿ ಯಾವುದು ಇಷ್ಟ ಎಂದು ಕೇಳುತ್ತಾಳೆ ರಾಣಿ. ನಿಜ ಹೇಳ್ಲಾ? ಸುಳ್ ಹೇಳ್ಲಾ? ಎಂದು ಪಾರು ಕೇಳುತ್ತಾಳೆ. ಆಗ ರಾಣಿ ಸತ್ಯಕ್ಕೆ ಆಯಸ್ಸು ಜಾಸ್ತಿ. ಸುಳ್ಳಿಗೆ ಆಯಸ್ಸು ಕಡಿಮೆ ನೀವು ಏನೇ ಹೇಳೋದಿದ್ರೂ ಸತ್ಯಾನೇ ಹೇಳಿ. ಯಾಕೆಂದ್ರೆ ಸತ್ಯಕ್ಕೆ ಯಾವತ್ತೂ ಸುಳ್ಳಿಲ್ಲ ಎಂದು ಹೇಳುತ್ತಾಳೆ. “ಏನ್ ರಾಣಿ ವೇದಾಂತ ಮಾತಾಡ್ತಾ ಇದೀಯಾ?” ಎಂದು ಪಾರು ಮತ್ತೆ ಪ್ರಶ್ನೆ ಮಾಡುತ್ತಾಳೆ. ಆಗ ಎಲ್ಲವನ್ನೂ ಜೀವನ ಕಲಿಸಿಕೊಡುತ್ತದೆ ಎಂದು ರಾಣಿ ಉತ್ತರಿಸುತ್ತಾಳೆ. ನೀನು ಶಾಲೆಗೂ ಹೋಗಿಲ್ಲ ಆದರೂ ಇಷ್ಟೊಂದೆಲ್ಲ ಮಾತಾಡ್ತೀಯಲ್ಲ ಎಂದು ಕೇಳಿದಾಗ ಜೀವನವೇ ಕೆಲವು ಪಾಠ ಕಲಿಸುತ್ತದೆ ಶಾಲೆಗೆ ಹೋಗಲೇಬೇಕೆಂದೇನಿಲ್ಲ ಎನ್ನುತ್ತಾಳೆ.
ಆಡುವ ಮಾತಿನಿಂದ ಏನಾದರೂ ಬದಲಾಗುತ್ತಾ?
ಆಡುವ ಮಾತಿನಿಂದ ಸಮಸ್ಯೆ ಬಗೆಹರಿಯುತ್ತದೆ ಎಂದಾದರೆ ಮಾತಾಡಬಹುದು. ನಾನು ಆಡುವ ಮಾತಿನಿಂದ ಎಲ್ಲ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂಬ ನಂಬಿಕೆಯಿಂದ ಮಾತಾಡ್ತಾ ಇದೀನಿ ಎಂದು ಹೇಳುತ್ತಾಳೆ. ನೀನು ಏನ್ ಹೇಳ್ತಾ ಇದೀಯ ಅಂತ ಅರ್ಥಾನೆ ಆಗ್ತಾ ಇಲ್ಲ ಎಂದು ಪಾರು ಹೇಳುತ್ತಾ ಸಂಪಿಗೆ ಹೂವಿನ ಪರಿಮಳ ನೋಡುತ್ತಾಳೆ. ಆಗ ಮಿಂಚು ಹೊಡೆದಂತೆ ಪಾರು ಒಂದು ಪ್ರಶ್ನೆ ಕೇಳುತ್ತಾಳೆ. ನೀನು ಅವರ ಜೊತೆ ಎಲ್ಲಾದ್ರೂ ಹೋಗ್ತಾ ಇದೀಯ? ಅವರು ಸಿಕ್ಕಿದ್ರಾ? ಎಂದು ಪ್ರಶ್ನೆ ಮಾಡುತ್ತಾಳೆ. ಆಗ ಪಾರುಗೆ ಆಶ್ಚರ್ಯ ಆಗುತ್ತದೆ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಪಾರು ಸಿದ್ದಾರ್ಥನ ಗುಂಗಿನಲ್ಲೇ ಮುಳುಗಿದ್ದಾಳೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.