ಅಣ್ಣಯ್ಯ ಧಾರಾವಾಹಿ: ಅಣ್ಣಯ್ಯನಿಗೀಗ ಅಗ್ನಿ ಪರೀಕ್ಷೆ; ಪ್ರಾಮಾಣಿಕ ಶಿವುವನ್ನೇ ಪ್ರಶ್ನಿಸಿದ ಪಾರು, ಮನೆಯವರ ಆಸೆ ನಿರಾಸೆ
Oct 16, 2024 10:53 AM IST
ಮೊದಲ ರಾತ್ರಿಯಂದು ಪಾರು ಆಡಿದ ಮಾತಿಗೆ ಕಣ್ಣೀರು ಹಾಕಿದ ಶಿವು
- ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಪಾರು ತನ್ನ ನಿಜ ರೂಪ ತೋರಿಸಿದ್ದಾಳೆ. ಶಿವು ಎಷ್ಟೇ ಒಳ್ಳೆದನ್ನು ಮಾಡಿದ್ರೂ ಅವಳು ಮಾತ್ರ ಅದ್ಯಾವುದನ್ನೂ ಒಪ್ಪುತ್ತಿಲ್ಲ. ಮತ್ತೆ ಶಿವುಗೇ ಬೈಯ್ಯುತ್ತಿದ್ದಾಳೆ. ಅವಳನ್ನು ನೋಡಿ ಶಿವು ಕಂಗಾಲಾಗಿದ್ದಾನೆ.
ಶಿವು ಎಂತಹ ಪರಿಸ್ಥಿತಿಯಲ್ಲಿ ಸಿಲುಕಿದ್ದಾನೆ ಎಂದರೆ ಅವನಿಗೆ ಈಗ ತನ್ನ ಮನದ ನೋವನ್ನು ಹಂಚಿಕೊಳ್ಳಲೂ ಯಾರೂ ಇಲ್ಲ. ಯಾಕೆ ಈ ರೀತಿ ಆಯ್ತು ಎಂದು ಪ್ರಶ್ನೆ ಮಾಡಿಕೊಂಡರೆ ಅವನ ಬಳಿಯೂ ಉತ್ತರವೂ ಇಲ್ಲ. ಶಿವು ಎಷ್ಟೇ ಕಷ್ಟಪಟ್ಟು ಪಾರ್ವತಿಯನ್ನು ಕಾಪಾಡಿದರೂ ಅವಳು ಮಾತ್ರ ತನ್ನ ಮಾವ ಶಿವುಗೆ ಗೌರವ ಕೊಡುತ್ತಿಲ್ಲ. ಮದುವೆಯ ಎಲ್ಲಾ ಶಾಸ್ತ್ರಗಳು ಮುಗಿದ ಮೇಲೆ ಕೊನೆಯಲ್ಲಿ ರಾತ್ರಿ ಅವರಿಬ್ಬರ ಮೊದಲ ರಾತ್ರಿಗಾಗಿ ಅಲಂಕಾರ ಮಾಡಿದ ಕೋಣೆಯೊಳಗಡೆ ಪಾರುವನ್ನು ತಂದು ಬಿಟ್ಟಿದ್ದಾರೆ. ಅದಕ್ಕೂ ಮುನ್ನವೇ ಶಿವು ಆ ಕೋಣೆಯಲ್ಲಿ ಇರುತ್ತಾನೆ. ಇನ್ನು ಪಾರುವನ್ನು ಅವನ ತಂಗಿಯರೆಲ್ಲ ಸೇರಿ ತಂದು ಬಿಡುತ್ತಾರೆ.
ಅಣ್ಣಯ್ಯನ ಕಷ್ಟ ಕೇಳೋರು ಯಾರು?
ಅವನಿಗೆ ಎಷ್ಟು ಸಂಕಟ ಆಗುತ್ತಿದೆ ಎಂದರೆ ಒಂದು ಕ್ಷಣ ಅಲ್ಲಿಂದ ಓಡಿ ಹೋಗಬೇಕು ಎಂದು ಎನಿಸುವಷ್ಟು ಕಷ್ಟ ಆಗುತ್ತಿತ್ತು. ಆದರೂ ಅವನು ಈಗ ಎಲ್ಲಿಗೂ ಹೋಗುವ ಹಾಗಿಲ್ಲ. ಎಲ್ಲವೂ ಓಕೆ ಆದ್ರೆ ಈ ಶಾಸ್ತ್ರ ಮಾಡೋ ಅವಶ್ಯಕತೆ ಇರ್ಲಿಲ್ಲ ಎಂದು ಅವನು ಹೇಳುತ್ತಾನೆ. ಆದರೆ ಅದನ್ನು ಯಾರೂ ಕೇಳೋದಿಲ್ಲ. ಸುಮ್ಮನಿರು ನೀನು ಎಂದು ಪಕ್ಕದ ಮನೆ ಲೀಲಾ ಹೇಳುತ್ತಾ, ಪಾರುವನ್ನು ಒಳಗಡೆ ಬಿಟ್ಟು ಹೋಗ್ತಾರೆ. ಇನ್ನು ಕೋಣೆಯ ಬಾಗಿಲು ಹಾಕಿದ ತಕ್ಷಣ ಪಾರು ತನ್ನ ನಿಜ ರೂಪ ತೋರಿಸುತ್ತಾಳೆ. “ಯಾಕೆ ಮಾವ? ಈ ರೀತಿ ಮಾಡಿದ್ರಿ. ನಿಮ್ಮ ಉದ್ದೇಶ ಬೇರೆನೇ ಇತ್ತು ಅಲ್ವ?” ಎಂದು ಶಿವುನಾ ಪ್ರಶ್ನೆ ಮಾಡುತ್ತಾಳೆ.
ಕೋಪ ಮಾಡಿಕೊಂಡ ಪಾರು ಆಡಿದ ಮಾತು ಸರಿಯಲ್ಲ
ತನ್ನ ಕೈಯ್ಯಲ್ಲಿ ಕೊಟ್ಟಿದ್ದ ಹಾಲಿನ ಲೋಟದಲ್ಲಿದ್ದ ಹಾಲನ್ನೆಲ್ಲಾ ನೆಲಕ್ಕೆ ಚೆಲ್ಲುತ್ತಾಳೆ. ಇನ್ನು ಶಿವು ಅವಳು ಕೇಳಿದ ಪ್ರಶ್ನೆಗೆ ಉತ್ತರ ನೀಡಬೇಕು ಎನ್ನುವಷ್ಟರಲ್ಲಿ ಅವಳು ಮತ್ತೆ ತನ್ನದೇ ಮಾತನ್ನು ಮುಂದುವರೆಸುತ್ತಾಳೆ. “ತಾಳಿ ಕಟ್ಟಿದ ತಕ್ಷಣ ನಾನು ನಿನ್ನ ಹೆಂಡ್ತಿ ಆಗ್ತೀನಿ ಅಂತ ನೀನು ಅಂದುಕೊಂಡಿದ್ರೆ ಅದು ನಿನ್ನ ಮುಟ್ಟಾಳತನ. ನಾನು ಯಾವತ್ತಿದ್ರೂ ಸಿದ್ದಾರ್ಥ್‌ಗೆ ಸೇರಿದವಳು. ಇಲ್ಲ, ಯಾವ್ದೇ ಕಾರಣಕ್ಕೂ ನಾನು ನಿನ್ನ ಜೊತೆ ಬದ್ಕೋದಕ್ಕೆ ಸಾಧ್ಯ ಇಲ್ಲ, ಸಾಧ್ಯ ಇಲ್ಲ, ಸಾಧ್ಯ ಇಲ್ಲ” ಎಂದು ಕೂಗಿ ಹೇಳುತ್ತಾಳೆ.
ಝೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.