ಸತ್ಯದ ಹೊಸ್ತಿಲಿಗೆ ಬಂದು ನಿಂತ ಸೀತಾ ರಾಮ ಧಾರಾವಾಹಿ; ಸಿಹಿ ಜನ್ಮ ರಹಸ್ಯ ಬಯಲು ಮಾಡಿದ ಚಾಂದಿನಿ
ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿ ಹುಟ್ಟಿನ ಗುಟ್ಟು ಇನ್ನೇನು ಬಯಲಾಗಲಿದೆ ಎನ್ನುವಷ್ಟರಲ್ಲಿಯೇ ಅಚ್ಚರಿಯ ಬೆಳವಣಿಗೆಗಳು ನಡೆಯುತ್ತಿವೆ. ಕಥೆ ಕವಲುಗಳ ರೂಪ ಪಡೆದುಕೊಳ್ಳುತ್ತಿದೆ. ಭಾರ್ಗವಿ ಕೈಗೆ ಹೊಸ ಅಸ್ತ್ರವೂ ಇದೀಗ ಸಿಕ್ಕಂತಾಗಿದೆ.
Seetha Rama Serial: ಮಗುವಿನ ವಿಚಾರದ ಬಗ್ಗೆ ಡಾ. ಅನಂತಲಕ್ಷ್ಮೀ ಅವರನ್ನು ಭೇಟಿ ಮಾಡಿದ್ದಾರೆ ರಾಮ್ ಮತ್ತು ಶ್ಯಾಮ್. ನಮ್ಮ ಮಗು ಎಲ್ಲಿದೆ, ಯಾರ ಬಳಿ ಇದೆ ಎಂದೆಲ್ಲ ಪ್ರಶ್ನೆ ಮಾಡುತ್ತಿದ್ದಂತೆ, ತಾಳ್ಮೆ ಕಳೆದುಕೊಂಡ ಅನಂತಲಕ್ಷ್ಮೀ, ಆ ಬಗ್ಗೆ ನನಗೆ ಏನನ್ನೂ ಕೇಳಬೇಡಿ. ಇದಕ್ಕಿಂತ ಹೆಚ್ಚಾದರೆ ನಾನು ಪೊಲೀಸ್ ಠಾಣೆಗೆ ಹೋಗಬೇಕಾಗುತ್ತದೆ ಎಂದು ಶ್ಯಾಮ್ಗೆ ಎಚ್ಚರಿಕೆ ಸಂದೇಶ ರವಾನಿಸಿ, ಅಲ್ಲಿಂದ ತೆರಳಿದ್ದಾರೆ. ಇತ್ತ ರಾಮ್ಗೆ ಏನ್ ಆಗ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ಶ್ಯಾಮ್ ಮೂಕನಾಗಿ ನಿಂತಿದ್ದಾನೆ. ಲಾಯರ್ಗೆ ಫೋನ್ ಮಾಡಿ, ಡಾಕ್ಟರ್ ವಿರುದ್ಧವೇ ಕಾನೂನು ಅಸ್ತ್ರ ಪ್ರಯೋಗಿಸುತ್ತಿದ್ದಾನೆ ರಾಮ್.
ಇತ್ತ ಹಬ್ಬದ ನಿಮಿತ್ತ ರಾಮ್ ಮನೆಗೆ ಸೀತಾಳ ಅಣ್ಣ ಮತ್ತು ಅತ್ತಿಗೆಯಾ ಗಮನವಾಗಿದೆ. ಅವರಿಬ್ಬರ ಜೊತೆಗೆ ಮಾತಿಗಿಳಿದಿದ್ದಾಳೆ ಭಾರ್ಗವಿ. ಶತಾಯ ಗತಾಯ ಅವರ ಬಾಯಿಂದ ಅನಂತಲಕ್ಷ್ಮೀ ವಿಚಾರವನ್ನು ಹೊರಗೆಳೆಯಬೇಕು ಎಂದು ಒತ್ತಿ ಒತ್ತಿ ಡಾಕ್ಟರ್ ಬಗ್ಗೆ ಕೇಳಿದ್ದಾರೆ. ಆದರೆ ಭಾರ್ಗವಿ ಮಾತಿಗೆ ಇಬ್ಬರೂ ತುಟಿ ಬಿಚ್ಚಿಲ್ಲ. ಭಾರ್ಗವಿಯ ಈ ಮಾತನ್ನು ಸೀತಾಳ ಕಿವಿಗೂ ಬಿದ್ದಿದೆ. ಇದೇ ವೇಳೆ ಭಾರ್ಗವಿ ನನ್ನ ಹಳೇ ವಿಷಯವನ್ನು ಕೆದಕದೇ ಬಿಡಲ್ಲ. ನಾನೇ ನೇರವಾಗಿ ಎಲ್ಲ ವಿಚಾರಗಳನ್ನು ರಾಮ್ಗೆ ಹೇಳಿಬಿಡಬೇಕು ಎಂದು ಮನಸಿನಲ್ಲಿಯೇ ಹೇಳಿಕೊಂಡಿದ್ದಾಳೆ ಸೀತಾ.
ಶಾಲಿನಿ- ಚಾಂದಿನಿ ಮಾತುಕತೆ
ಇತ್ತ ಚಾಂದಿನಿ, ಜೀಜು ಶ್ಯಾಮ್ ಇಲ್ಲದ ಸಮಯ ನೋಡಿಕೊಂಡು ಅಕ್ಕ ಶಾಲಿನಿ ಮನೆಗೆ ಬಂದಿದ್ದಾಳೆ. ಅಕ್ಕನ ಬಳಿ ನಾನಿನ್ನೂ ರಾಮನ ನೆನಪಿನಲ್ಲಿಯೇ ಇದ್ದೇನೆ ಎಂದಿದ್ದಾಳೆ. ಇದೇ ವೇಳೆ ರಾಮ ಮತ್ತು ಸೀತಾ ಮದುವೆ ಬಗ್ಗೆ ಅಕ್ಕ ಶಾಲಿನಿ ಮುಂದೆ ಮಾತಿಗಿಳಿದಿದ್ದಾಳೆ ಚಾಂದಿನಿ. ಯಾರದೋ ಮಗುವಿಗೆ ತಂದೆಯಾಗಿ ಹಾಯಾಗಿದ್ದಾನೆ ಎಂದಿದ್ದಾಳೆ ಚಾಂದಿನಿ. ನನ್ನಲ್ಲಿ ಕಾಣದೇ ಇರೋದು ಆ ಆರು ವರ್ಷದ ಮಗುವಿನ ತಾಯಿಯಲ್ಲಿ ಆ ರಾಮ್ ಏನನ್ನು ಕಂಡನೋ ಗೊತ್ತಿಲ್ಲ ಎಂದು ರಾಮ್ ಬಗ್ಗೆ ಹೇಳಿದ್ದಾಳೆ.
ಪತ್ರ ರಹಸ್ಯ ಬಿಚ್ಚಿಟ್ಟ ಚಾಂದಿನಿ
ಮುಂದುವರಿದು, ಎಷ್ಟೇ ಆದರೂ ಸೀತಾ ನಿನಗೆ ಹಳೇ ಪರಿಚಯ ಅಲ್ಲವಾ ಎಂದು ಶಾಲಿನಿಗೆ ಹೇಳಿದ್ದಾಳೆ ಚಾಂದಿನಿ. ಚಾಂದಿನಿಯ ಈ ಮಾತು ಶಾಲಿನಿಗೆ ಗೊಂದಲ ಆಗಿದೆ. ಸೀತಾ ನಿನಗೆ ಪತ್ರ ಬರೆದಿದ್ದಳು. ಅದು ನಮ್ಮ ಮನೆಗೆ ಬಂದಿತ್ತು. ಅದನ್ನು ನಾನೇ ನೋಡಿದ್ದೇನೆ ಎಂದಿದ್ದಾಳೆ. ಆ ಪತ್ರದ ಗುಟ್ಟನ್ನು ಹೇಳಬೇಕು ಎನ್ನುವಷ್ಟರಲ್ಲಿಯೇ ಶ್ಯಾಮ್ ಬಂದಿದ್ದಾನೆ. ಆತನ ಆಗಮನ ಆಗುತ್ತಿದ್ದಂತೆ, ಚಾಂದಿನಿ ಬಚ್ಚಿಟ್ಟುಕೊಂಡಿದ್ದಾಳೆ.
ಭಾರ್ಗವಿಗೆ ಸಿಕ್ತು ಹೊಸ ಅಸ್ತ್ರ
ಇತ್ತ ಸುಲೋಚನಾ ಮತ್ತು ಸೀತಾ ಮಾತನ್ನು ಮರೆಯಲ್ಲಿ ನಿಂತ ಸಾಧನಾ ಕೇಳಿಸಿಕೊಂಡಿದ್ದಾಳೆ. ಶ್ಯಾಮ್ ಮಗಳನ್ನ ಹುಡುಕ್ತಾ ಹುಡುಕ್ತಾ ನಿನ್ನ ಮಗಳನ್ನ ನೀನು ಕಳೆದುಕೊಳ್ತಿಯಾ ಎಂದು ಸುಲೋಚನಾ ಹೇಳಿದ್ದಾಳೆ. ಇದು ಸಾಧನಾ ಕಿವಿಗೂ ಬಿದ್ದಿದೆ. ಅಲ್ಲಿ ನಡೆದಿದ್ದನ್ನು ಯತಾವತ್ತಾಗಿ ಭಾರ್ಗವಿ ಮುಂದೆ ಹೇಳಿದ್ದಾಳೆ. ಈ ಮಾತು ಭಾರ್ಗವಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ. ಸಾಧನಾ ಮತ್ತು ಭಾರ್ಗವಿಯ ಮಾತುಕತೆಯನ್ನು ಅಲ್ಲೇ ಇದ್ದ ಸಿಹಿ ಸಹ ಕೇಳಿಸಿಕೊಂಡಿದ್ದಾಳೆ. ಒಟ್ಟಿನಲ್ಲಿ ಸಿಹಿಯ ಹುಟ್ಟಿನ ರಹಸ್ಯ ಮತ್ತಷ್ಟು ಕಗ್ಗಂಟಾಗುತ್ತಲೇ ಹೋಗುತ್ತಿದೆ.
ಸೀತಾ ರಾಮ ಧಾರಾವಾಹಿ ಪಾತ್ರವರ್ಗ
ನಿರ್ದೇಶಕ: ಮಧುಸೂಧನ್
ಗಗನ್ ಚಿನ್ನಪ್ಪ: ಶ್ರೀರಾಮ (ನಾಯಕ)
ವೈಷ್ಣವಿ ಗೌಡ: ಸೀತಾ (ನಾಯಕ)
ರೀತು ಸಿಂಗ್: ಸಿಹಿ (ಸೀತಾ ಮಗಳು)
ಮೇಘಶ್ಯಾಮ- ನಾಗಾರ್ಜುನ್ ಬಿ.ಆರ್
ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)
ಭಾರ್ಗವಿ: ಪೂಜಾ ಲೋಕೇಶ್ (ಶ್ರೀರಾಮನ ಚಿಕ್ಕಮ್ಮ)
ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್ ದೇಸಾಯಿ (ಶ್ರೀರಾಮನ ತಾತ)
ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)
ವಿಕಾಸ್ ಕಾರ್ಗೋಡ್: ಲಾಯರ್ ರುದ್ರಪ್ರತಾಪ್
ಸತೀಶ್ ಚಂದ್ರ: ಚರಣ್. ಡಿ
ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್ (ಶ್ರೀರಾಮನ ಚಿಕ್ಕಪ್ಪ)
ಜಯದೇವ್ ಮೋಹನ್: ಸತ್ಯಜೀತ್ (ಶ್ರೀರಾಮನ ಚಿಕ್ಕಪ್ಪ)
ವಿಭಾಗ