ಅಣ್ಣಯ್ಯ ಧಾರಾವಾಹಿ: ಮದುವೆಗೂ ಮುನ್ನ ಪಾರು ಹೆಸರು ಬದಲಾವಣೆ; ಈ ಮದುವೆ ನಡೆಯೋದಿಲ್ಲ ಎಂದ ರಶ್ಮಿ
ಕನ್ನಡ ಸುದ್ದಿ  /  ಮನರಂಜನೆ  /  ಅಣ್ಣಯ್ಯ ಧಾರಾವಾಹಿ: ಮದುವೆಗೂ ಮುನ್ನ ಪಾರು ಹೆಸರು ಬದಲಾವಣೆ; ಈ ಮದುವೆ ನಡೆಯೋದಿಲ್ಲ ಎಂದ ರಶ್ಮಿ

ಅಣ್ಣಯ್ಯ ಧಾರಾವಾಹಿ: ಮದುವೆಗೂ ಮುನ್ನ ಪಾರು ಹೆಸರು ಬದಲಾವಣೆ; ಈ ಮದುವೆ ನಡೆಯೋದಿಲ್ಲ ಎಂದ ರಶ್ಮಿ

ಪಾರು ಮುಖ ನೋಡಿದರೆ ತಿಳಿಯುತ್ತೆ ಅವಳಿಗೆ ಎಷ್ಟು ಬೇಸರ ಆಗಿದೆ ಎಂದು. ಆದರೆ ಅಜ್ಜಿ ಮಾತ್ರ ಯಾವುದನ್ನೂ ಲೆಕ್ಕಿಸದೇ ಅವಳಿಗೆ ಬೇಸರ ಆಗುವ ಇನ್ನಷ್ಟು ಸಂಗತಿಗಳನ್ನು ಹೇಳುತ್ತಿದ್ದಾರೆ. ಅವರ ಮನೆಯಲ್ಲಿ ಪಾರು ಮುಂದೆ ಹೇಗೆ ಬಾಳ್ವೆ ಮಾಡ್ತಾಳೋ ಏನೋ? ಎಂಬ ಚಿಂತೆ ಪಾರ್ವತಿಯ ಅಮ್ಮನಿಗೆ ಆಗ್ತಾ ಇದೆ.

ಮದುವೆಗೂ ಮುನ್ನ ಪಾರು ಹೆಸರು ಬದಲಾವಣೆ
ಮದುವೆಗೂ ಮುನ್ನ ಪಾರು ಹೆಸರು ಬದಲಾವಣೆ (ಝೀ ಕನ್ನಡ)

ಪಾರುಗೆ ಬಳೆ ಶಾಸ್ತ್ರ ನಡೆಯುತ್ತಿದೆ. ಆದರೆ ಅವಳಿಗೆ ಇದು ಒಂದು ಚೂರು ಇಷ್ಟ ಇಲ್ಲ. ಇನ್ನು ಇತ್ತ ಸೋಮೇಗೌಡ ಸ್ನಾನ ಮಾಡಿ ರೆಡಿಯಾಗುತ್ತಾ ಇರುತ್ತಾನೆ. ಸೋಮೆಗೌಡ ಹೇಳಿದಂತೆ ಎಲ್ಲ ಕೆಲಸಗಳನ್ನು ಮಾಡಿಕೊಡುವುದೇ ಒಂದು ದೊಡ್ಡ ಕೆಲಸ ಶಿವುಗಾಗಿರುತ್ತದೆ. ಅವನನ್ನು ಕೆಲಸದ ಆಳಿನಂತೆ ಕಾಣುತ್ತಾ ಇರುತ್ತಾನೆ. ಇದು ಅವನ ತಂಗಿಯರಿಗೆ ಒಂದು ಸ್ವಲ್ಪವೂ ಇಷ್ಟ ಇರೋದಿಲ್ಲ. ಆದ್ರೆ ಏನೂ ಮಾಡೋಕಾಗಲ್ಲ. ಅವನು ಹೇಳಿದ ಹಾಗೆ ಕೇಳಲೇಬೇಕಾದ ಪ್ರಸಂಗ ಎದುರಾಗಿರುತ್ತದೆ.

ಶಿವುಗೆ ಸೋಮೇಗೌಡನ ಕಾಟ

ಇನ್ನು ತಲೆ ಒಣಗಿಸಲು ಹೇಳುತ್ತಾನೆ. ಆಗ ಶಿವು ತಲೆನಾ ಟವೆಲ್ ತೆಗೆದುಕೊಂಡು ವರೆಸಲು ಮುಂದಾಗುತ್ತಾನೆ. ಆಗ ಸೋಮೇಗೌಡನಿಗೆ ಭಯವಾಗುತ್ತದೆ. "ಬೇಡ ನೀನು ನನ್ನ ತಲೆ ಮಾತ್ರ ಮುಟ್ಬೇಡ" ಎಂದು ಸೋಮೇಗೌಡ ಹೇಳುತ್ತಾನೆ. ಯಾಕೆಂದರೆ ಅವನಿಗೆ ಶಿವು ಮೇಲೆ ನಂಬಿಕೆ ಇರುವುದಿಲ್ಲ. ಮತ್ತೆ ಇವನೆಲ್ಲಾದರೂ ತಲೆ ಒರೆಸುವ ನೆಪದಲ್ಲಿ ತನ್ನ ಕತ್ತಿಗೆ ಇನ್ನಷ್ಟು ನೋವು ಮಾಡುತ್ತಾನೋ ಎಂಬ ಭಯ ಇರುತ್ತದೆ. ಆ ಭಯಕ್ಕಾಗಿ ಅವನು. ನೀನು ಡ್ರೈಯರ್ ತೆಗೆದುಕೊ. ಡ್ರೈಯರ್ ತೆಗೆದುಕೊಂಡು ನಂತರ ಅದರಲ್ಲಿ ನನ್ನ ತಲೆ ಕೂದಲನ್ನು ಒಣಗಿಸು ಎಂದು ಹೇಳುತ್ತಾನೆ.

ಪಾರ್ವತಿಗೆ ಮರುನಾಮಕರಣ

ಆದರೆ ಅದನ್ನೆಲ್ಲ ಶಿವುಗೆ ಉಪಯೋಗಿಸಿ ತಿಳಿದಿರುವುದಿಲ್ಲ. ಅವನು ಸೋಮೇಗೌಡ ಹೇಳಿದಂತೆ ಮಾಡುತ್ತಾ ಇರುತ್ತಾನೆ. ಇನ್ನು ಇತ್ತ ಅಜ್ಜಿ “ನಮ್ಮ ಕಡೆ ಒಂದು ಸಂಪ್ರದಾಯವಿದೆ ಅದೇನೆಂದರೆ ಮದುವೆಯಾಗಿ ಬರುವ ಹೆಣ್ಣಿಗೆ ನಾವು ಹೆಸರು ಬದಲಿಸುತ್ತೇವೆ” ಎಂದು ಹೇಳುತ್ತಾರೆ. ಆ ಮಾತನ್ನು ಕೇಳಿ ಪಾರುಗೆ ತುಂಬಾ ಬೇಸರ ಆಗುತ್ತದೆ. ಅಷ್ಟೇ ಅಲ್ಲ ತಾವಿಟ್ಟ ಹೆಸರನ್ನು ಬದಲಾಯಿಸುತ್ತಾರೆ ಎಂದರೆ ತಂದೆ, ತಾಯಿಗೂ ಬೇಸರ ಆಗೇ ಆಗುತ್ತದೆ. ಇಲ್ಲೂ ಅದೇ ರೀತಿ ಆಗಿದೆ.

ಅದಾದ ನಂತರ ಬಳೆ ಶಾಸ್ತ್ರಕ್ಕೆ ಹಾಡು ಹೇಳುತ್ತಾ ಇರುತ್ತಾರೆ. ಹಾಡಿನ ಸ್ವರ ತುಂಬಾ ಗಟ್ಟಿಯಾಗಿ ದೊಡ್ಡದಾಗಿ ಕೇಳಿಸುತ್ತಾ ಇರುತ್ತದೆ. ಅಲ್ಲಿ ಅಕ್ಕಪಕ್ಕದಲ್ಲಿ ಯಾರು ಮಾತಾಡಿದರೂ ಕೇಳಿಸುವುದಿಲ್ಲ. ಅಷ್ಟು ದೊಡ್ಡದಾಗಿ ಕೇಳಿಸುತ್ತಾ ಇರುತ್ತದೆ. ಆಗ ರಶ್ಮಿ ಮತ್ತು ರಮ್ಯಾ ಮಾತಾಡಿಕೊಳ್ಳುತ್ತಾ ಇರುತ್ತಾರೆ. ಅವರೂ ದೊಡ್ಡದಾಗಿ ಈ ಮದುವೆ ನಡೆಯೋದಿಲ್ಲ ಎಂದು ಹೇಳುವಾಗ ಹಾಡು ನಿಂತು ಬಿಡುತ್ತದೆ. ಆ ಮಾತು ಎಲ್ಲರಿಗೂ ದೊಡ್ಡದಾಗಿ ಕೇಳಿಸಿದೆ.

ಝೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

Whats_app_banner