logo
ಕನ್ನಡ ಸುದ್ದಿ  /  ಮನರಂಜನೆ  /  ಅಣ್ಣಯ್ಯ ಧಾರಾವಾಹಿ: ನಾಳೆಯೇ ಚಪ್ಪರ ಶಾಸ್ತ್ರ, ಮೋಸದ ಮದುವೆಯಿಂದ ಪಾರುನಾ ಕಾಪಾಡ್ತಾನಾ ಶಿವು

ಅಣ್ಣಯ್ಯ ಧಾರಾವಾಹಿ: ನಾಳೆಯೇ ಚಪ್ಪರ ಶಾಸ್ತ್ರ, ಮೋಸದ ಮದುವೆಯಿಂದ ಪಾರುನಾ ಕಾಪಾಡ್ತಾನಾ ಶಿವು

Suma Gaonkar HT Kannada

Sep 26, 2024 11:16 AM IST

google News

ಪಾರ್ವತಿನಾ ಕಾಪಾಡೋದೇ ಶಿವನ ಕೆಲಸ

    • Zee Kannada: ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಪಾರುವನ್ನು ಬೆಂಕಿಯಿಂದ ಕಾಪಾಡಿದ ಶಿವು ಈಗ ಅವಳನ್ನು ಮದುವೆ ಎಂಬ ಅಗ್ನಿ ಪರೀಕ್ಷೆಯಿಂದಲೂ ಕಾಪಾಡಬೇಕಾದ ಪ್ರಸಂಗ ಬಂದಿದೆ. ನಾಳೆಯೇ ಚಪ್ಪರ ಶಾಸ್ತ್ರ ಆರಂಭವಾಗಲಿದೆ. 
ಪಾರ್ವತಿನಾ ಕಾಪಾಡೋದೇ ಶಿವನ ಕೆಲಸ
ಪಾರ್ವತಿನಾ ಕಾಪಾಡೋದೇ ಶಿವನ ಕೆಲಸ (Zee Kannada)

ದೇವಸ್ಥಾನದಲ್ಲಿ ಮಾಡಬೇಕಿದ್ದ ದೀಪೋತ್ಸವ ನಿಂತು ಹೋಗಿದೆ. ಇದಕ್ಕೆ ಕಾರಣ ಬೇರೆ ಯಾರೂ ಅಲ್ಲ ಪಾರು ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಅದಕ್ಕೆ ಕಾರಣ ಬೇರೆ ಇದೆ. ಇದು ಅಚಾನಕ್ ಆಗಿ ನಡೆದ ಘಟನೆಯಲ್ಲ. ಬೇಕು ಎಂದೇ ಗಂಡಿನ ಕಡೆಯವರು ಮಾಡಿದ ಒಂದು ಕೆಲಸ. ಶಿವು ಪಾರು ಜೊತೆಗೂಡಿ ಮದುವೆಗೆ ಅಡ್ಡಿ ಆಗುತ್ತಾ ಇದ್ಧಾನೆ ಎನ್ನುವ ಕಾರಣಕ್ಕಾಗಿ ಅವರು ಬೇರೆ ರೀತಿಯ ಉಪಾಯ ಮಾಡಿಕೊಂಡು, ಶಿವುವನ್ನು ಕೊಲ್ಲಲು ಮಾಡಿದ ಪ್ರಯತ್ನದ ಬೆಂಕಿಯಲ್ಲಿ ಪಾರು ಸಿಲುಕುತ್ತಾಳೆ. ಅವಳನ್ನು ಕಾಪಾಡಲು ಬರಬೇಕಾದದ್ದು ಮತ್ತೆ ಶಿವು.

ಪಾರು ಪ್ರಾಣ ಶಿವು ಕೈಯ್ಯಲ್ಲಿ

ಅಷ್ಟೊಂದು ಜನ ಅಲ್ಲೇ ನಿಂತು ನೋಡುತ್ತಿದ್ದರೂ ಸಹ ಯಾರೂ ಒಳಗಡೆ ಹೋಗುವ ಪ್ರಯತ್ನ ಮಾಡುವುದಿಲ್ಲ. ಪಾರು ತಂದೆ, ಅಣ್ಣ, ಮದುವೆಯಾಗುವ ಗಂಡು ಎಲ್ಲರೂ ಅಲ್ಲೇ ಇರುತ್ತಾರೆ. ಆದರೆ ಯಾರೂ ಬೆಂಕಿಯಲ್ಲಿ ಹೋಗಿ ಅವಳನ್ನು ಹೊರತರಲು ಪ್ರಯತ್ನ ಮಾಡುವುದಿಲ್ಲ. ಆಗ ಶಿವು ಒಳಗಡೆ ಹೋಗಲು ನಿರ್ಧರಿಸುತ್ತಾನೆ. ಅವನು ಹೋಗಬೇಕು ಎಂದು ತಯಾರಿ ಮಾಡಿಕೊಂಡಾಗ ಎಲ್ಲ ತಂಗಿಯರು ಅವನನ್ನು ತಡೆಯುತ್ತಾರೆ.

ಆದರೂ ಅವನು ಈ ಸಂದರ್ಭದಲ್ಲಿ ಪಾರು ಪ್ರಾಣ ಎಷ್ಟು ಮುಖ್ಯ ಎಂಬುದನ್ನು ಅರಿತು ಒಳಗಡೆ ಓಡಿ ಹೋಗಿ, ಒಂದು ಒದ್ದೆ ಬಟ್ಟೆಯನ್ನು ಅವಳಿಗೆ ಸುತ್ತಿಕೊಂಡು ಹೊರಗಡೆ ತರುತ್ತಾನೆ. ಆದರೆ ಯಾರೂ ಅವನಿಗೆ ಧನ್ಯವಾದ ಹೇಳುವುದಿಲ್ಲ. ಮಾಡಿದ ಉಪಕಾರ ಸ್ಮರಣೆ ಮಾಡುವ ಒಂದು ವ್ಯವಧಾನವೂ ಅಲ್ಲಿ ಯಾರಿಗೂ ಇರುವುದಿಲ್ಲ. ಹೀಗಿರುವಾಗ ಮುಂದೆ ಇದು ಅಪಶಕುನ ಎಂದು ಹೇಳಿ ಗಂಡಿನ ಕಡೆಯವರು ಹೊರಟು ಹೋಗುತ್ತಾರೆ.

ಅಣ್ಣನ ನೋವು ತಾಳಲಾರದ ತಂಗಿಯರು

ಆ ಕೆಲಸ ಅಲ್ಲಿ ಅರ್ಧಕ್ಕೆ ನಿಂತು ಹೋಗುತ್ತದೆ. ಪಾರುವನ್ನು ಕರೆದುಕೊಂಡು ಮನೆಗೆ ಹೋಗಿ ಎಂದು ಅವಳ ತಂದೆ ಹೇಳುತ್ತಾನೆ. ಅದನ್ನೇ ಕೇಳಿಕೊಂಡು ಎಲ್ಲರೂ ಅಲ್ಲಿಂದ ಹೊರಡುತ್ತಾರೆ. ಇನ್ನು ಮನೆಗೆ ಬಂದ ತಕ್ಷಣ ತಂಗಿಯರು ಅಣ್ಣನಿಗೆ ಬೈತಾರೆ. ನೀನು ಯಾಕೆ ಆ ರಿಸ್ಕ್‌ ತಗೊಳ್ಬೇಕಿತ್ತು ಎಂದು ಕೇಳುತ್ತಾರೆ. ಆಗ ಅವನು ಹೇಳುತ್ತಾನೆ. ಪಾರು ನಮಗೆಲ್ಲ ಬೇಕಾದವಳು ಅವಳ ಪ್ರಾಣ ಹೋಗ್ತಾ ಇದ್ರೆ ನೋಡಿಕೊಂಡು ಕೂರೋಕೆ ಆಗೋದಿಲ್ಲ ಎಂದು. ಆಗ ಅವರಿಗೂ ಅದು ಸರಿ ಅನಿಸುತ್ತದೆ. ಆದರೆ ಅವನ ನೋವು ನೋಡಿ ಬೇಸರ ಮಾಡಿಕೊಳ್ಳುತ್ತಾರೆ.

ಮರುದಿನ ಅವನು ಮಾವನ ಮನೆಗೆ ಹೋಗುತ್ತಾನೆ. “ಪಾರು ನೀನು ಆರೋಗ್ಯವಾಗಿ ಇದೀಯಾ?” ಎಂದು ಕೇಳುತ್ತಾನೆ. ಆಗ ಅವಳು “ಹೌದು ನೀನು ಹೇಗಿದ್ದೀಯಾ?” ಎಂದು ಪ್ರಶ್ನೆ ಮಾಡುತ್ತಾಳೆ. ಆಗ ಅವನು ನಾನು ಅರಾಮಾದೆ ಎಂದು ಹೇಳುತ್ತಾನೆ. ಅದಾದ ನಂತರದಲ್ಲಿ ಅವಳ ತಂದೆ ಬಂದು “ನಾಳೆ ಚಪ್ಪರ ಪೂಜೆ ಇದೆ” ಎಂದು ಹೇಳುತ್ತಾರೆ. ಆಗ ಶಿವು ಹಾಗೂ ಪಾರು ಮುಖ ಮುಖ ನೋಡಿಕೊಳ್ಳುತ್ತಾರೆ. ಇನ್ನು ಮದುವೆ ತಪ್ಪಿಸೋದು ಹೇಗೆ ಎಂದು ಅವರಿಗೆ ಆಲೋಚನೆ ಆಗುತ್ತಾ ಇರುತ್ತದೆ.

ಝೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ