logo
ಕನ್ನಡ ಸುದ್ದಿ  /  ಮನರಂಜನೆ  /  Ashika Rangnath 2nd Tamil Film: ಮೆಚ್ಚಿನ ಹೀರೋ ಜೊತೆ 2ನೇ ತಮಿಳು ಚಿತ್ರ..ಮುಹೂರ್ತದ ಫೋಟೋಸ್‌ ಹಂಚಿಕೊಂಡ ಪಟಾಕಿ ಪೋರಿ

Ashika Rangnath 2nd Tamil film: ಮೆಚ್ಚಿನ ಹೀರೋ ಜೊತೆ 2ನೇ ತಮಿಳು ಚಿತ್ರ..ಮುಹೂರ್ತದ ಫೋಟೋಸ್‌ ಹಂಚಿಕೊಂಡ ಪಟಾಕಿ ಪೋರಿ

HT Kannada Desk HT Kannada

Sep 15, 2022 09:10 PM IST

ಆಶಿಕಾ ರಂಗನಾಥ್‌ ಎರಡನೇ ತಮಿಳು ಸಿನಿಮಾ ಮುಹೂರ್ತದ ಫೋಟೋಗಳು

    • ''ನನ್ನ ಮುಂದಿನ ತಮಿಳು ಸಿನಿಮಾದ ಮುಹೂರ್ತ ನೆರವೇರಿದೆ. ಇದು ಬಹಳ ಎಕ್ಸೈಟ್‌ ಹಾಗೂ ಸ್ಪೆಷಲ್‌. ಏಕೆಂದರೆ ನನ್ನ ಮೆಚ್ಚಿನ ನಟರಲ್ಲಿ ಸಿದ್ದಾರ್ಥ್‌ ಕೂಡಾ ಒಬ್ಬರು. ಅವರು ನಟಿಸಿರುವ 'ಬೊಮ್ಮರಿಲ್ಲು' ಹಾಗೂ 'ನುವಸ್ತಾವಂಟೆ ನೇನೊದ್ದಂಟಾನ' ಚಿತ್ರವನ್ನು ಎಷ್ಟು ಸಾರಿ ನೋಡಿದ್ದೇನೆ ಎಂದು ಲೆಕ್ಕವೇ ಇಲ್ಲ ಎಂದು ಆಶಿಕಾ ರಂಗನಾಥ್ ಬರೆದುಕೊಂಡಿದ್ದಾರೆ.
ಆಶಿಕಾ ರಂಗನಾಥ್‌ ಎರಡನೇ ತಮಿಳು ಸಿನಿಮಾ ಮುಹೂರ್ತದ ಫೋಟೋಗಳು
ಆಶಿಕಾ ರಂಗನಾಥ್‌ ಎರಡನೇ ತಮಿಳು ಸಿನಿಮಾ ಮುಹೂರ್ತದ ಫೋಟೋಗಳು (PC: Ashika Rangnath Facebook)

ಸ್ಯಾಂಡಲ್‌ವುಡ್‌ ನಟಿ ಆಶಿಕಾ ರಂಗನಾಥ್‌ ಈಗ ತಮಿಳು ಚಿತ್ರರಂಗದಲ್ಲಿ ಕೂಡಾ ಬ್ಯುಸಿಯಾಗಿದ್ದಾರೆ. ಕಳೆದ ವರ್ಷ ಆಶಿಕಾ ತಮ್ಮ ಮೊದಲ ಸಿನಿಮಾವನ್ನು ಅನೌನ್ಸ್‌ ಮಾಡಿದ್ದರು. ಈ ಸಿನಿಮಾ ಚಿತ್ರೀಕರಣ ಇನ್ನೂ ಸಾಗುತ್ತಿದೆ. ಅಷ್ಟರಲ್ಲೇ ಆಕೆ ಎರಡನೇ ತಮಿಳು ಚಿತ್ರಕ್ಕೆ ಸಹಿ ಹಾಕಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮಲಯಾಳಂನ ಮಂಜುಮ್ಮೆಲ್‌ ಬಾಯ್ಸ್‌ ಸಿನಿಮಾ ನಿಜಕ್ಕೂ ಚೆನ್ನಾಗಿದೆಯಾ? ಅಥವಾ ಬರೀ ಹೈಪಾ? ಹೀಗಿದೆ ಚಿತ್ರ ವಿಮರ್ಶೆ

ಕೋಟಿ ಸಿನಿಮಾ ಖಳನಾಯಕ ‘ದಿನೂ ಸಾವ್ಕಾರ್’ ಫಸ್ಟ್‌ ಲುಕ್‌ ರಿಲೀಸ್‌; ಡಾಲಿ ಧನಂಜಯ್ ಎದುರು ರಮೇಶ್‌ ಇಂದಿರಾ ಅಬ್ಬರ

Sathyam: ಸತ್ಯಂ ಚಿತ್ರದಲ್ಲಿ ತುಳುನಾಡ ದೈವದ ಕಥೆ; ಸೆನ್ಸಾರ್‌ ಪಾಸ್‌, ಶೀಘ್ರದಲ್ಲಿ ಚಿತ್ರಮಂದಿರದಲ್ಲಿ ‘ಗಣಪ’ನ ಸಿನಿಮಾ

Kangaroo Review: ಕ್ರೈಂ ಥ್ರಿಲ್ಲರ್‌ನಲ್ಲಿ ಮೇಳೈಸಿದ ಹಾರರ್‌ ಅನುಭವ! ಕಾಂಗರೂ ಚಿತ್ರದಲ್ಲಿ ಕಾಡಲಿದೆ ಕರುಳು ಬಳ್ಳಿಯ ಕಥೆ

ಆಶಿಕಾ ರಂಗನಾಥ್‌ ತಮ್ಮ ಮೆಚ್ಚಿನ ಹೀರೋ ಜೊತೆ ಎರಡನೇ ತಮಿಳು ಸಿನಿಮಾ ಮಾಡುತ್ತಿದ್ದಾರೆ. ತಮಿಳಿನ ಖ್ಯಾತ ನಟ ಸಿದ್ದಾರ್ಥ್‌, ಆಶಿಕಾ ಮೆಚ್ಚಿನ ನಟರಲ್ಲಿ ಒಬ್ಬರಂತೆ. ಈ ವಿಚಾರವನ್ನು ಅವರೇ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಜೊತೆಗೆ ಹೊಸ ಚಿತ್ರದ ಮುಹೂರ್ತದ ಫೋಟೋಗಳನ್ನು ಕೂಡಾ ಹಂಚಿಕೊಂಡಿದ್ದಾರೆ. ''ನನ್ನ ಮುಂದಿನ ತಮಿಳು ಸಿನಿಮಾದ ಮುಹೂರ್ತ ನೆರವೇರಿದೆ. ಇದು ಬಹಳ ಎಕ್ಸೈಟ್‌ ಹಾಗೂ ಸ್ಪೆಷಲ್‌. ಏಕೆಂದರೆ ನನ್ನ ಮೆಚ್ಚಿನ ನಟರಲ್ಲಿ ಸಿದ್ದಾರ್ಥ್‌ ಕೂಡಾ ಒಬ್ಬರು. ಅವರು ನಟಿಸಿರುವ 'ಬೊಮ್ಮರಿಲ್ಲು' ಹಾಗೂ 'ನುವಸ್ತಾವಂಟೆ ನೇನೊದ್ದಂಟಾನ' ಚಿತ್ರವನ್ನು ಎಷ್ಟು ಸಾರಿ ನೋಡಿದ್ದೇನೆ ಎಂದು ಲೆಕ್ಕವೇ ಇಲ್ಲ. ಈ ಬ್ಯೂಟಿಫುಲ್‌ ಪ್ರಾಜೆಕ್ಟ್‌ನಲ್ಲಿ ನಟಿಸಲು ಅವಕಾಶ ನೀಡಿದ್ದಕ್ಕೆ ಇಡೀ ಚಿತ್ರತಂಡಕ್ಕೆ ಧನ್ಯವಾದಗಳು. ಮುಂದಿನ ಅಪ್‌ಡೇಟ್‌ ಶೀಘ್ರದಲ್ಲೇ ನೀಡುತ್ತೇನೆ'' ಎಂದು ಆಶಿಕಾ ರಂಗನಾಥ್ ಬರೆದುಕೊಂಡಿದ್ದಾರೆ.

ಆಶಿಕಾ ಪೋಸ್ಟ್‌ ನೋಡಿ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಶ್ರದ್ಧಾ ಶ್ರೀನಾಥ್‌, ರಾಪರ್‌ ಅಲೋಕ್‌, ನಿಶ್ವಿಕಾ ನಾಯ್ಡು, ದಿಯಾ ಖ್ಯಾತಿಯ ಖುಷಿ ರವಿ, ಆಶಿಕಾ ಸಹೋದರಿ ಅನುಷಾ ರಂಗನಾಥ್‌ ಹಾಗೂ ಇನ್ನಿತರರು ಆಶಿಕಾಗೆ ಅಭಿನಂದನೆ ತಿಳಿಸಿದ್ದಾರೆ. ಇನ್ನೂ ಕೆಲವರು ತಮಿಳು ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿ ಕಮೆಂಟ್‌ ಮಾಡುತ್ತಿದ್ದಾರೆ.

ಕಳೆದ ವರ್ಷ ತಮ್ಮ ಹುಟ್ಟುಹಬ್ಬದ ದಿನದಂದು ಆಶಿಕಾ ಮೊದಲ ತಮಿಳು ಚಿತ್ರವನ್ನು ಅನೌನ್ಸ್‌ ಮಾಡಿದ್ದರು. ಈ ಚಿತ್ರದಲ್ಲಿ ಆಶಿಕಾ ಕಬಡ್ಡಿ ಆಟಗಾರ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ''ಇದು ಕೌಟುಂಬಿಕ ಮನರಂಜನೆ ಇರುವ ಸಿನಿಮಾ, ಸೋಷಿಯಲ್‌ ಮೀಡಿಯಾದಲ್ಲಿ ವರ್ಕೌಟ್‌ ಫೋಟೋಗಳನ್ನು ನೋಡಿದ ಚಿತ್ರತಂಡ ಸ್ಪೋರ್ಟ್ಸ್‌ ಆಧಾರಿತ ಚಿತ್ರಕ್ಕೆ ನಾನೇ ಹೊಂದುತ್ತೇನೆ ಎಂದು ನಿರ್ಧರಿಸಿ ನನ್ನನ್ನು ಸಂಪರ್ಕಿಸಿದೆ. ಇನ್ನು ನಾನು ತಮಿಳು ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ನಾನು ಯಾವತ್ತಿಗೂ ಕನ್ನಡ ಹುಡುಗಿ, ಇಲ್ಲಿ ಮಾಡಬೇಕಿರುವುದು ಸಾಕಷ್ಟಿದೆ. ತಮಿಳು ಚಿತ್ರರಂಗವು ಕನ್ನಡ ನಟಿಯನ್ನು ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿರುವುದು ನಮ್ಮೆಲ್ಲರಿಗೂ ಸಂತೋಷದ ವಿಚಾರ ಎಂದು ಅಭಿಮಾನಿಗಳು ಹೆಮ್ಮೆ ಪಡುತ್ತಿದ್ದಾರೆ'' ಎಂದು ಆಶಿಕಾ ಪ್ರತಿಕ್ರಿಯಿಸಿದ್ದರು.

ಆಶಿಕಾ ರಂಗನಾಥ್‌, ಕನ್ನಡದ 'O2' ಹಾಗೂ ಸಿಂಪಲ್‌ ಸುನಿ ಅವರ 'ಗತವೈಭವ' ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಜೊತೆಗೆ ಎರಡು ತಮಿಳು ಸಿನಿಮಾಗಳು ಅವರ ಕೈಯಲ್ಲಿವೆ. 'ರೇಮೊ' ಸಿನಿಮಾ ಕೆಲಸಗಳು ಮುಗಿದಿದ್ದು ಬಿಡುಗಡೆಗೆ ಸಿದ್ಧವಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು