logo
ಕನ್ನಡ ಸುದ್ದಿ  /  ಮನರಂಜನೆ  /  ಕೋಟಿ ಸಿನಿಮಾ ಖಳನಾಯಕ ‘ದಿನೂ ಸಾವ್ಕಾರ್’ ಫಸ್ಟ್‌ ಲುಕ್‌ ರಿಲೀಸ್‌; ಡಾಲಿ ಧನಂಜಯ್ ಎದುರು ರಮೇಶ್‌ ಇಂದಿರಾ ಅಬ್ಬರ

ಕೋಟಿ ಸಿನಿಮಾ ಖಳನಾಯಕ ‘ದಿನೂ ಸಾವ್ಕಾರ್’ ಫಸ್ಟ್‌ ಲುಕ್‌ ರಿಲೀಸ್‌; ಡಾಲಿ ಧನಂಜಯ್ ಎದುರು ರಮೇಶ್‌ ಇಂದಿರಾ ಅಬ್ಬರ

May 05, 2024 02:05 PM IST

google News

ಕೋಟಿ ಸಿನಿಮಾ ಖಳನಾಯಕ ‘ದಿನೂ ಸಾವ್ಕಾರ್’ ಫಸ್ಟ್‌ ಲುಕ್‌ ರಿಲೀಸ್‌; ಡಾಲಿ ಧನಂಜಯ್ ಎದುರು ರಮೇಶ್‌ ಇಂದಿರಾ ಅಬ್ಬರ

    • ‌ಡಾಲಿ ಧನಂಜಯ್ ನಾಯಕನಾಗಿ ನಟಿಸುತ್ತಿರುವ ಕೋಟಿ ಸಿನಿಮಾದಿಂದ ಖಳನ ಮೊದಲ ಲುಕ್‌ ಅನಾವರಣವಾಗಿದೆ. ರಮೇಶ್‌ ಇಂದಿರಾ ಖಡಕ್‌ ಖಳನಾಗಿ ಎಂಟ್ರಿಯಾಗಿದ್ದಾರೆ. 
ಕೋಟಿ ಸಿನಿಮಾ ಖಳನಾಯಕ ‘ದಿನೂ ಸಾವ್ಕಾರ್’ ಫಸ್ಟ್‌ ಲುಕ್‌ ರಿಲೀಸ್‌; ಡಾಲಿ ಧನಂಜಯ್ ಎದುರು ರಮೇಶ್‌ ಇಂದಿರಾ ಅಬ್ಬರ
ಕೋಟಿ ಸಿನಿಮಾ ಖಳನಾಯಕ ‘ದಿನೂ ಸಾವ್ಕಾರ್’ ಫಸ್ಟ್‌ ಲುಕ್‌ ರಿಲೀಸ್‌; ಡಾಲಿ ಧನಂಜಯ್ ಎದುರು ರಮೇಶ್‌ ಇಂದಿರಾ ಅಬ್ಬರ

Kotee Dinu Saavkaar Look: ಡಾಲಿ ಧನಂಜಯ್‌ ನಾಯಕನಾಗಿ ನಟಿಸುತ್ತಿರುವ ಕೋಟಿ ಸಿನಿಮಾ ಇತ್ತೀಚೆಗಷ್ಟೇ ಟೀಸರ್‌ ಮೂಲಕ ಎಲ್ಲರ ಮುಂದೆ ಬಂದು ನಿಂತಿತ್ತು. ಪರಮೇಶ್ವರ ಗುಂಡ್ಕಲ್‌ ನಿರ್ದೇಶನದ ಮೊದಲ ಸಿನಿಮಾ ಇದಾಗಿದ್ದು, ಈಗಾಗಲೇ ಒಂದಷ್ಟು ಕುತೂಹಲದ ಜತೆಗೆ ಚಿತ್ರದ ಟೀಸರ್‌ ಹೊರಬಂದಿತ್ತು. ಈಗ ಇದೇ ಚಿತ್ರದ ಖಳನ ಫಸ್ಟ್‌ ಲುಕ್ ಅನಾವರಣವಾಗಿದೆ. ಸಪ್ತ ಸಾಗರದಾಚೆ ಎಲ್ಲೋ ಚಿತ್ರದಲ್ಲೂ ಖಳನಾಗಿ ಮಿಂಚು ಹರಿಸಿದ್ದ ರಮೇಶ ಇಂದಿರಾ, ಕೋಟಿ ಅಖಾಡದಲ್ಲೂ ಅಬ್ಬರಿಸಲು ಸಜ್ಜಾಗಿದ್ದಾರೆ.

ಬೆಳ್ಳಗೆ ನೆರೆತ ಕೂದಲು, ಗಡ್ಡ, ಮೀಸೆ, ಕುತ್ತಿಗೆಗೊಂದು ಚೈನು, ಬಾಯಲ್ಲೊಂದು ಸಿಗರೇಟು, ಕಣ್ಣಲ್ಲಿ ಯಾರದೋ ಜೀವನವನ್ನು ಬುಡಮೇಲು ಮಾಡುವ ಸಂಚು. ದಿನೂ ಸಾವ್ಕಾರ್‌ ಪಾತ್ರಕ್ಕೆ ನಟ ರಮೇಶ್‌ ಇಂದಿರಾ ಹೊಸದೊಂದು ಎನರ್ಜಿ ತಂದಂತೆ ಕಾಣಿಸುತ್ತಿದೆ ಎಂದರೆ ಅದರಲ್ಲಿ ಅತಿಶಯೋಕ್ತಿ ಇಲ್ಲ.

ಕೋಟಿ ಸಿನಿಮಾದ ಟೀಸರ್‌ ಬಿಡುಗಡೆ ಆದಾಗಿಂದ ಖಳನಾಯಕ ದಿನೂ ಸಾವ್ಕಾರ್‌ ಪಾತ್ರದ ಬಗ್ಗೆ ಕುತೂಹಲ ಹೆಚ್ಚಾಗುತ್ತಲೇ ಹೋಗಿದೆ. ಸಾವ್ಕಾರ್‌ ಮತ್ತು ಕೋಟಿಯ ಟಕ್ಕರ್‌ ನೋಡುವುದಕ್ಕೆ ಇದು ಅತೀವ ಆಸಕ್ತಿಯನ್ನು ಹುಟ್ಟುಹಾಕಿರುವುದಂತೂ ಸತ್ಯ. ಅದಕ್ಕೆ ಕಾರಣ ಸಾವ್ಕಾರ್‌ ಪಾತ್ರದಲ್ಲಿ ರಮೇಶ್‌ ಇಂದಿರಾ ಕಾಣಿಸಿಕೊಂಡಿರುವ ರೀತಿ.

ಬಿಡುಗಡೆ ಆಗಿದ್ದ ಟೀಸರ್‌ನಲ್ಲಿ ಜೋರಾಗಿ ಮಳೆ ಸುರಿಯುತ್ತಿರುವಾಗ, ಹುಡುಗರೆಲ್ಲಾ ಕೊಡೆ ಹಿಡಿದಿರುವಾಗ ಕಾರಿಂದ ಇಳಿಯುತ್ತಿರುವ ದಿನೂ ಸಾವ್ಕಾರ್‌ ಗತ್ತು ನೋಡುಗರನ್ನು ಆಕರ್ಷಿಸಿತ್ತು. ಈಗ ಸಿನಿಮಾಗಳಲ್ಲಿ ಖಳರು ಹೇಗೆ ತಮ್ಮನ್ನು ಆಕರ್ಷಿಸುತ್ತಾರೆ ಎಂಬ ಬಗ್ಗೆ ಕೋಟಿ ಚಿತ್ರದ ಬರಹಗಾರ ಮತ್ತು ನಿರ್ದೇಶಕರೂ ಆಗಿರುವ ಪರಮೇಶ್ವರ್‌ ಗುಂಡ್ಕಲ್‌ ಸೋಶಿಯಲ್‌ ಮೀಡಿಯಾದಲ್ಲಿ ಅಕ್ಷರರೂಪಕ್ಕೆ ಇಳಿಸಿದ್ದಾರೆ.

ಪರಮೇಶ್ವರ ಗುಂಡ್ಕಲ್‌ ಪೋಸ್ಟ್‌

“ಸುಯೋಧನ ಇಲ್ಲದ ಮಹಾಭಾರತ ಇಲ್ಲ. ರಾವಣನಿಲ್ಲದ ರಾಮಾಯಣವಿಲ್ಲ. ಮನಸ್ಸಿನ ಆಳದಲ್ಲಿ ಹುದುಗಿರುವ ಆಸೆಗಳನ್ನು ಈ ಪಾತ್ರಗಳು ನಮಗೆ ಭೇಟಿ ಮಾಡಿಸುತ್ತವೆ. ಇಷ್ಟ ಇಲ್ಲ ಎಂದು ಎಷ್ಟೇ ಹೇಳಿದರೂ ಖಳನಾಯಕರ ಪಾತ್ರಕ್ಕೆ ಅದೇನೋ ಸೆಳೆತ ಇದೆ. ಇಲ್ಲದಿದ್ದರೆ ರಾವಣನ ಲಂಕೆ ಸುಭಿಕ್ಷವಾಗಿತ್ತು ಎಂದು ಓದಿದಾಗ ಯಾಕೆ ಖುಷಿಯಾಗಬೇಕು? ಸುಯೋಧನ ಮತ್ತು ಕರ್ಣನ ನಡುವಿನ ಗೆಳೆತನವನ್ನು ನೋಡಿ ಯಾಕೆ ನಾವು ಭಾವುಕರಾಗಬೇಕು?

ಕತೆಯನ್ನು ಮುಂದೆ ತೆಗೆದುಕೊಂಡು ಹೋಗುವವನು, ನಾಯಕನ ಮೌಲ್ಯಗಳನ್ನು ಪ್ರಶ್ನಿಸುವವನು, ಕತೆಗೊಂದು ಎನರ್ಜಿ ಕೊಡುವವನು ಖಳನಾಯಕ!ʼ ಎಂದು ಬರೆದುಕೊಂಡಿದ್ದಾರೆ ಪರಮ್.

ಸ್ವಲ್ಪ ಅನ್‌ ಸ್ಟೇಬಲ್!

ತಮ್ಮ ಸಿನಿಮಾದ ಖಳನಟನ ಪಾತ್ರವನ್ನು ಅವರು ವಿವರಿಸಿರುವ ರೀತಿಯಿಂದ ಈ ಪಾತ್ರದ ಸುತ್ತ ಇರುವ ಎಕ್ಸೈಟ್ಮೆಂಟ್‌ ಇನ್ನಷ್ಟು ಜಾಸ್ತಿಯಾಗಿದೆ. ಕೋಟಿಯ ಖಳನಾಯಕನ ಹೆಸರು ದಿನೂ ಸಾವ್ಕಾರ್.‌ ರಣತಂತ್ರದಲ್ಲಿ ಎತ್ತಿದ ಕೈ. ಬುದ್ಧಿವಂತ. ಸ್ವಲ್ಪ ಅನ್‌ ಸ್ಟೇಬಲ್.‌ ತಾನು ಹೇಳಿದ್ದನ್ನು ಎಲ್ಲರೂ ಕೇಳಬೇಕು ಎಂದುಕೊಂಡಿರುವ ವ್ಯಕ್ತಿ. ಮಾತು ಕೇಳದವರನ್ನು ಕೇಳಿಸುತ್ತೇನೆ ಎನ್ನುವುದನ್ನು ನಂಬಿದವನು. ಸಿಕ್ಕಾಪಟ್ಟೆ ಮಜಾ ಕೊಡುವ ಪಾತ್ರ ದಿನೂ ಸಾವ್ಕಾರ್‌ದು . ರಮೇಶ್‌ ಇಂದಿರಾ ಈ ಪಾತ್ರವನ್ನು ನಿಭಾಯಿಸಿದ ರೀತಿ ನೋಡಿ ನಾನು ಆಲ್ಮೋಸ್ಟ್‌ ಗಾಬರಿಯಾಗಿದ್ದೇನೆ. ಇದೇ ಜೂನ್‌ 14ರಂದು ಕೋಟಿ ಸಿನಿಮಾ ಬಿಡುಗಡೆ ಆಗಲಿದೆ" ಎಂದು ಅವರು ಬರೆದಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ