logo
ಕನ್ನಡ ಸುದ್ದಿ  /  ಮನರಂಜನೆ  /  Bastar Movie Ott: ಬಸ್ತಾರ್‌ ದಿ ನಕ್ಸಲ್‌ ಸ್ಟೋರಿ; ನಕ್ಸಲ್ ಹೋರಾಟದ ಮತ್ತೊಂದು ಮುಖ ಕಟ್ಟಿಕೊಡುವ ಸಿನಿಮಾ

Bastar Movie OTT: ಬಸ್ತಾರ್‌ ದಿ ನಕ್ಸಲ್‌ ಸ್ಟೋರಿ; ನಕ್ಸಲ್ ಹೋರಾಟದ ಮತ್ತೊಂದು ಮುಖ ಕಟ್ಟಿಕೊಡುವ ಸಿನಿಮಾ

Suma Gaonkar HT Kannada

Nov 19, 2024 05:08 PM IST

google News

ಬಸ್ತಾರ್‌ ದಿ ನಕ್ಸಲ್‌ ಸ್ಟೋರಿ

    • ಸಾವಿರಾರು ಜನರ ಸಾವಿಗೆ ಕಾರಣರಾದ ಭಾರತದ ಮಾವೋವಾದಿಗಳ (ನಕ್ಸಲರು) ಕಥೆಯನ್ನು ಬಸ್ತಾರ್‌: ದಿ ನಕ್ಸಲ್‌ ಸ್ಟೋರಿ ಹೊಂದಿದೆ. ನಕ್ಸಲ್ ಹೋರಾಟದ ಮತ್ತೊಂದು ಮುಖ ಕಟ್ಟಿಕೊಡುವ ಸಿನಿಮಾ ಇದಾಗಿದೆ. 
ಬಸ್ತಾರ್‌ ದಿ ನಕ್ಸಲ್‌ ಸ್ಟೋರಿ
ಬಸ್ತಾರ್‌ ದಿ ನಕ್ಸಲ್‌ ಸ್ಟೋರಿ

ಅದಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಸುದೀಪ್ತೋ ಸೇನ್ ನಿರ್ದೇಶನದ 'ದಿ ಕೇರಳ ಸ್ಟೋರಿ' ಚಿತ್ರ ಕಳೆದ ವರ್ಷ ಹೆಚ್ಚು ವಿವಾದಕ್ಕೀಡಾಗಿದ್ದರೂ ಸೂಪರ್ ಹಿಟ್ ಆಗಿತ್ತು. ಅದಾ ಶರ್ಮಾ ಅಭಿನಯದ ಬಸ್ತಾರ್ ನೈಜ ಘಟನೆಗಳಿಂದ ಸ್ಫೂರ್ತಿ ಪಡೆದ ಸಿನಿಮಾ. ಛತ್ತೀಸ್‌ಗಢದಲ್ಲಿ ನಕ್ಸಲ್ ಹಾವಳಿ ಬಗ್ಗೆ ಇದರಲ್ಲಿ ಕೆಲವು ಮುಖ್ಯ ಅಂಶಗಳಿವೆ. ಸಾಮಾಜಿಕ ಸಮಸ್ಯೆಯ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಈ ಸಿನಿಮಾದಿಂದ ಆಗಿದೆ. ಅದೆಷ್ಟೋ ಜನರ ನೋವಿನ ಕಥೆ ಇದರಲ್ಲಿದೆ. ನೈಜ-ಜೀವನದ ಘಟನೆಗಳು ಮತ್ತು ಪಾತ್ರಗಳಿಂದ ಸ್ಫೂರ್ತಿ ಪಡೆದ ಚಿತ್ರ ಇದಾಗಿದ್ದರು ಚಿತ್ರಮಂದಿರಗಳಲ್ಲಿ ಅಷ್ಟಾಗಿ ಯಶಸ್ವಿ ಪ್ರದರ್ಶನ ನೀಡಿರಲಿಲ್ಲ. ಆದರೆ ಒಟಿಟಿಯಲ್ಲಿ ಸಾಕಷ್ಟು ಜನ ಈ ಸಿನಿಮಾವನ್ನು ನೋಡಿದ್ದಾರೆ.

ಜನರ ಸಾವಿಗೆ ಕಾರಣರಾದ ಭಾರತದ ಮಾವೋವಾದಿಗಳ (ನಕ್ಸಲರು) ಕಥೆಯನ್ನು ಬಸ್ತಾರ್‌: ದಿ ನಕ್ಸಲ್‌ ಸ್ಟೋರಿ ಹೊಂದಿದೆ. ಛತ್ತೀಸ್‌ಗಢದಲ್ಲಿ ಪ್ರಾರಂಭವಾದ ಬಸ್ತಾರ್ ದಂಗೆಯ ಸಮಯದಲ್ಲಿ ಹಲವು ಕೋಟಿ ಮೌಲ್ಯದ ಆಸ್ತಿಯನ್ನು ನಾಶಪಡಿಸಿದ ಆರೋಪದ ಬಗ್ಗೆ ಕಥೆ ಹೆಣೆಯಲಾಗಿದೆ. ಈ ಸಿನಿಮಾವನ್ನು ನೀವು ಈಗಲೂ ಒಟಿಟಿಯಲ್ಲಿ ವೀಕ್ಷಿಸಬಹುದು.

ನೈಜ ಘಟನೆ ಆಧಾರಿತ ಸಿನಿಮಾ

'ಬಸ್ತರ್: ದಿ ನಕ್ಸಲ್ ಸ್ಟೋರಿ' ಚಿತ್ರವು 2010 ರಲ್ಲಿ ಛತ್ತೀಸ್‌ಗಢ ರಾಜ್ಯದ ಸುಕ್ಮಾದಲ್ಲಿ ನಡೆದ ಘಟನೆಯನ್ನು ಆಧರಿಸಿದೆ, ಇದರಲ್ಲಿ ನಕ್ಸಲೀಯರ ದಾಳಿಯಲ್ಲಿ 76 ಸಿಆರ್‌ಪಿಎಫ್ ಜವಾನರು ಸಾವನ್ನಪ್ಪಿದ್ದರ ಬಗ್ಗೆ ಮಾಹಿತಿ ಇದೆ. ಈ ಸಿನಿಮಾದ ಕಥೆ ನಕ್ಸಲೀಯರ ಪ್ರಾಬಲ್ಯವಿರುವ ಬಸ್ತಾರ್ ಪ್ರದೇಶದಲ್ಲಿ ನಡೆದಿದೆ. ನಕ್ಸಲೀಯರು ಈ ಪ್ರದೇಶದಲ್ಲಿ ಭಯಭೀತರಾಗಿ ಭದ್ರತಾ ಪಡೆಗಳು ಮತ್ತು ಅಧಿಕಾರಿಗಳನ್ನು ಕೊಂದಿದ್ದಾರೆ ಎಂದು ನಿರ್ಮಾಪಕರು ಈ ಚಿತ್ರದಲ್ಲಿ ತೋರಿಸಿದ್ದಾರೆ. ನಕ್ಸಲರ ಜೀವನ ಅವರ ನಡವಳಿಕೆಗಳ ಬಗ್ಗೆ ಸೂಕ್ಷ್ಮವಾದ ವಿಚಾರಗಳನ್ನು ಈ ಸಿನಿಮಾದಲ್ಲಿ ನೀಡಲಾಗಿದೆ.

ಈ ಪ್ರದೇಶದಲ್ಲಿ ನಕ್ಸಲೀಯರನ್ನು ತಡೆಯಲು ಸರ್ಕಾರವು IPS ನೀರಜಾ ಮಾಧವನ್ (ಅದಾ ಶರ್ಮಾ) ಅವರನ್ನು ನಿಯೋಜಿಸುತ್ತದೆ. ಮತ್ತೊಂದೆಡೆ, ನ್ಯಾಯವಾದಿ ನೀಲಂ ನಾಗ್ಪಾಲ್ (ಶಿಲ್ಪಾ ಶುಕ್ಲಾ) ನೀರಜಾ ನಕಲಿ ಎನ್‌ಕೌಂಟರ್‌ಗಳನ್ನು ಮಾಡಿದ್ದಾರೆ ಎಂದು ನ್ಯಾಯಾಲಯದಲ್ಲಿ ವಾದಿಸುತ್ತಾರೆ. ಈ ರೀತಿಯಾದ ಕಥಾ ಹಂದರ ಹೊಂದಿರುವ ಈ ಸಿನಿಮಾ ಥ್ರಿಲ್ಲಿಂಗ್ ಆಗಿದೆ.

ದಿ ನಕ್ಸಲ್‌ ಸ್ಟೋರಿ ಸಿನಿಮಾವು ಚಿತ್ರಮಂದಿರಗಳಲ್ಲಿ ಮಾರ್ಚ್‌ 15ರಂದು ಬಿಡುಗಡೆಯಾಗಿತ್ತು. ಸುಮಾರು 15 ಕೋಟಿ ರೂಪಾಯಿಯಲ್ಲಿ ನಿರ್ಮಿಸಿದ್ದ ಈ ಸಿನಿಮಾವು ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ 3.75 ಕೋಟಿ ಮಾತ್ರ ಗಳಿಸಿತ್ತು.

ಚಿತ್ರ: ಬಸ್ತಾರ್: ದಿ ನಕ್ಸಲ್ ಸ್ಟೋರಿ

ಬಿಡುಗಡೆ: ಮಾರ್ಚ್ 15, 2024

ತಾರಾಗಣ: ಅದಾ ಶರ್ಮಾ, ಇಂದಿರಾ ತಿವಾರಿ, ನಮನ್ ಜೈನ್, ರೈಮಾ ಸೇನ್, ಯಶಪಾಲ್ ಶರ್ಮಾ

ಸಂಗೀತ: ವಿಶಾಖ್ ಜ್ಯೋತಿ

ನಿರ್ಮಾಪಕ: ವಿಪುಲ್ ಅಮೃತಲಾಲ್ ಶಾ

ನಿರ್ದೇಶನ: ಸುದೀಪ್ತೋ ಸೇನ್

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ