ಕನ್ನಡ ಸುದ್ದಿ  /  ಮನರಂಜನೆ  /  ಆದಾ ಶರ್ಮಾ ನಟನೆಯ ಬಸ್ತಾರ್‌ ದಿ ನಕ್ಸಲ್‌ ಸ್ಟೋರಿ ಒಟಿಟಿ ಬಿಡುಗಡೆ ದಿನಾಂಕ ಪ್ರಕಟ; ಮನೆಯಲ್ಲೇ ನೋಡಿ ನಕ್ಸಲ್‌ ಹಿಂಸಾಚಾರದ ಸಿನಿಮಾ

ಆದಾ ಶರ್ಮಾ ನಟನೆಯ ಬಸ್ತಾರ್‌ ದಿ ನಕ್ಸಲ್‌ ಸ್ಟೋರಿ ಒಟಿಟಿ ಬಿಡುಗಡೆ ದಿನಾಂಕ ಪ್ರಕಟ; ಮನೆಯಲ್ಲೇ ನೋಡಿ ನಕ್ಸಲ್‌ ಹಿಂಸಾಚಾರದ ಸಿನಿಮಾ

Bastar The Naxal Story OTT Release Date: ಬಸ್ತಾರ್: ದಿ ನಕ್ಸಲ್‌ ಸ್ಟೋರಿ ಸಿನಿಮಾವು ಮಾರ್ಚ್‌ 15ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾ ಇದೀಗ ಒಟಿಟಿಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಜಾಗತಿಕವಾಗಿ 3.75 ಕೋಟಿ ರೂಪಾಯಿ ಗಳಿಸಿದ್ದ ಈ ಸಿನಿಮಾದ ಒಟಿಟಿ ಬಿಡುಗಡೆ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ಆದಾ ಶರ್ಮಾ ನಟನೆಯ ಬಸ್ತಾರ್‌ ದಿ ನಕ್ಸಲ್‌ ಸ್ಟೋರಿ ಒಟಿಟಿ ಬಿಡುಗಡೆ ದಿನಾಂಕ ಪ್ರಕಟ
ಆದಾ ಶರ್ಮಾ ನಟನೆಯ ಬಸ್ತಾರ್‌ ದಿ ನಕ್ಸಲ್‌ ಸ್ಟೋರಿ ಒಟಿಟಿ ಬಿಡುಗಡೆ ದಿನಾಂಕ ಪ್ರಕಟ (Screengrab from YouTube/Sunshine Pictures)

ಬೆಂಗಳೂರು: ಬಸ್ತಾರ್‌: ದಿ ನಕ್ಸಲ್‌ ಸ್ಟೋರಿ ಸಿನಿಮಾವು ಚಿತ್ರಮಂದಿರಗಳಲ್ಲಿ ಮಾರ್ಚ್‌ 15ರಂದು ಬಿಡುಗಡೆಯಾಗಿತ್ತು. ಸುಮಾರು 15 ಕೋಟಿ ರೂಪಾಯಿಯಲ್ಲಿ ನಿರ್ಮಿಸಿದ್ದ ಈ ಸಿನಿಮಾವು ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ 3.75 ಕೋಟಿ ಮಾತ್ರ ಗಳಿಸಿತ್ತು. ಚಿತ್ರಮಂದಿರಗಳಲ್ಲಿ ಈ ಸಿನಿಮಾವನ್ನು ನೋಡಿಲ್ಲದೆ ಇರುವವರು ಇದೀಗ ಒಟಿಟಿಯಲ್ಲಿ ನೋಡಲು ಪ್ಲ್ಯಾನ್‌ ಮಾಡಬಹುದು.

ಟ್ರೆಂಡಿಂಗ್​ ಸುದ್ದಿ

ದಿ ಕೇರಲ್‌ ಸ್ಟೋರಿ ಸಿನಿಮಾ ನಿರ್ಮಿಸಿದವರು ಬಸ್ತಾರ್‌: ದಿ ನಕ್ಸಲ್‌ ಸ್ಟೋರಿಯನ್ನು ನಿರ್ಮಿಸಿದ್ದಾರೆ. ಈ ಸಿನಿಮಾದಲ್ಲಿ ಆದಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸುದಿಪ್ತೊ ಸೇನ್‌ ನಿರ್ಮಾಣದ ಈ ಸಿನಿಮಾವನ್ನು ವಿಪುಲ್‌ ಅಮೃತುಲ್‌ ಶಾ ನಿರ್ಮಿಸಿದ್ದರು.

ಸಾವಿರಾರು ಜನರ ಸಾವಿಗೆ ಕಾರಣರಾದ ಭಾರತದ ಮಾವೋವಾದಿಗಳ (ನಕ್ಸಲರು) ಕಥೆಯನ್ನು ಬಸ್ತಾರ್‌: ದಿ ನಕ್ಸಲ್‌ ಸ್ಟೋರಿ ಹೊಂದಿದೆ. ಛತ್ತೀಸ್‌ಗಢದಲ್ಲಿ ಪ್ರಾರಂಭವಾದ ಬಸ್ತಾರ್ ದಂಗೆಯ ಸಮಯದಲ್ಲಿ ಹಲವು ಕೋಟಿ ಮೌಲ್ಯದ ಆಸ್ತಿಯನ್ನು ನಾಶಪಡಿಸಿದ ಆರೋಪವನ್ನು ಈ ಬಂಡಾಯ ಗುಂಪು ಹೊಂದಿದೆ.

ಬಸ್ತಾರ್‌: ದಿ ನಕ್ಸಲ್‌ ಸ್ಟೋರಿ ವಿಮರ್ಶೆ

ಈ ಸಿನಿಮಾದ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಿ ಪ್ರೆಸ್‌ ಜರ್ನಲ್‌ನ ರೋಹಿತ್‌ ಭಟ್ನಾಕರ್‌ ಈ ಸಿನಿಮಾವನ್ನು "ಥ್ರಿಲ್, ಸಾಹಸ ಮತ್ತು ನಾಟಕದಿಂದ ದೂರವಿರುವ ಸ್ಲೋಪಿ ಡಾಕ್ಯುಡ್ರಾಮಾ" ಎಂದು ಹೇಳಿದ್ದಾರೆ. ಇಂಡಿಯಾ ಟುಡೇಯ ಝಿನಿಯಾ ಬಂಡೋಪಾದ್ಯಯ ಈ ಸಿನಿಮಾವನ್ನು "ಯಾವುದೇ ಸೂಕ್ಷ್ಮ ವ್ಯತ್ಯಾಸವಿಲ್ಲದೆ ಇರುವ ಸಂವೇದನೆ ಹೊಂದಿರುವ ಅತ್ಯಂತ ಸರಳ ಚಿತ್ರ" ಎಂದು ಹೇಳಿದ್ದಾರೆ.

ರೆಡಿಫ್‌ನ ದೀಪಾ ಗಹ್ಲೂಟ್‌ ಪ್ರಕಾರ ಈ ಸಿನಿಮಾವು "ಬುಲೆಟ್‌ ಪಾಯಿಂಟ್‌ಗಳು ಮತ್ತು ಸ್ಟಿರಿಯೋಟೈಪ್‌ಗಳು ಈ ಸಿನಿಮಾದ ಚಲನೆಯನ್ನು ಕಡಿಮೆ ಮಾಡಲು ಪ್ರಯತ್ನಿಸಿದೆ" ಎಂದು ಹೇಳಿದ್ದಾರೆ. ಟೈಮ್ಸ್‌ ಆಫ್‌ ಇಂಡಿಯಾದ ಅಭಿಷೇಕ್‌ ಶ್ರೀವಾಸ್ತವ ಅವರು "ಈ ಸಿನಿಮಾವು ಕಠಿಣವಾದ ಅಪರಾಧ ಡ್ರಾಮಾ" ಎಂದು ಹೇಳಿದ್ದಾರೆ.

ಬಸ್ತಾರ್‌: ದಿ ನಕ್ಸಲ್‌ ಸ್ಟೋರಿ ಒಟಿಟಿಯಲ್ಲಿ ಬಿಡುಗಡೆ

ಝೀ5 ಒಟಿಟಿಯಲ್ಲಿ ಇದೇ ಮೇ 17ರಂದು ಬಸ್ತಾರ್‌ ದಿ ನಕ್ಸಲ್‌ ಸ್ಟೋರಿ ಸಿನಿಮಾವು ಬಿಡುಗಡೆಯಾಗಲಿದೆ. "ದೇಶವನ್ನು ಎರಡು ಭಾಗಗಳಾಗಿ ಮಾಡಿರುವ ಆಂತರಿಕ ಯುದ್ಧ, ನಕ್ಸಲ್‌ ಹಿಂಸಾಚಾರದ ಭೀಕರ ಕಥೆಯನ್ನು ವೀಕ್ಷಿಸಿ" ಎಂದು ಝೀ5 ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಡೇಟ್‌ ನೀಡಿದೆ.

ಒಟಿಟಿಯಲ್ಲಿ ಇನ್ಯಾವ ಸಿನಿಮಾಗಳಿವೆ?

ಒಟಿಟಿಯಲ್ಲಿ ಈಗಾಗಲೇ ಬಿಡುಗಡೆಯಾಗಿರುವ ಮಂಜುಮ್ಮೇಲ್‌ ಬಾಯ್ಸ್‌ ಮತ್ತು ಆವೇಶಂ ಚಲನಚಿತ್ರಗಳು ಸಿನಿರಸಿಕರಿಂದ ಮೆಚ್ಚುಗೆ ಪಡೆದಿವೆ. ಇದೇ ಸಮಯದಲ್ಲಿ ಬಿಡುಗಡೆಯಾದ ಸೈತಾನ್‌ ಸಿನಿಮಾ ಸಾಕಷ್ಟು ಜನರಿಗೆ ಇಷ್ಟವಾಗಿಲ್ಲ.

ಇತ್ತೀಚಿನ ಮನರಂಜನೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

IPL_Entry_Point