logo
ಕನ್ನಡ ಸುದ್ದಿ  /  Lifestyle  /  Best Sources Of Calcium

Best sources of calcium: ಹಾಲಿನಲ್ಲಿ ಮಾತ್ರವಲ್ಲ ಈ ಆಹಾರಗಳಲ್ಲೂ ಇದೆ ಹೇರಳ ಕ್ಯಾಲ್ಸಿಯಂ.. ನಿಮ್ಮ ಮಕ್ಕಳಿಗೆ ಯಾವುದು ಇಷ್ಟ ನೋಡಿ

HT Kannada Desk HT Kannada

Mar 17, 2023 09:57 PM IST

ಹಾಲನ್ನು ಹೊರತುಪಡಿಸಿ ಇತರ ಆಹಾರಗಳಲ್ಲೂ ಇದೆ ಹೇರಳ ಕ್ಯಾಲ್ಸಿಯಂ

    • ಕ್ಯಾಲ್ಸಿಯಂ ಹಾಲಿನಲ್ಲಿ ಮಾತ್ರ ಇರುತ್ತದೆ ಎಂದು ಕೆಲವರು ಮಕ್ಕಳಿಗೆ ಹೆಚ್ಚು ಹೆಚ್ಚು ಹಾಲು ಕೊಡುತ್ತಾರೆ. ಆದರೆ ಹಾಲಿನಲ್ಲಿ ಮಾತ್ರವಲ್ಲ, ನಾನಾ ಆಹಾರಗಳಲ್ಲಿ ಕ್ಯಾಲ್ಸಿಯಂ ಅಂಶವಿದೆ. ಇದನ್ನು ವಿವಿಧ ರೂಪದಲ್ಲಿ ನೀವೂ ಹಾಗೂ ಮಕ್ಕಳು ಸೇವಿಸಬಹುದು.
ಹಾಲನ್ನು ಹೊರತುಪಡಿಸಿ ಇತರ ಆಹಾರಗಳಲ್ಲೂ ಇದೆ ಹೇರಳ ಕ್ಯಾಲ್ಸಿಯಂ
ಹಾಲನ್ನು ಹೊರತುಪಡಿಸಿ ಇತರ ಆಹಾರಗಳಲ್ಲೂ ಇದೆ ಹೇರಳ ಕ್ಯಾಲ್ಸಿಯಂ (PC: Freepik)

ದೇಹದ ಅಂಗಾಗಗಳು ಸರಾಗವಾಗಿ ಕಾರ್ಯ ನಿರ್ವಹಿಸಲು ಕ್ಯಾಲ್ಸಿಯಂನಂತ ಪೋಷಕಾಂಶ ಬಹಳ ಅಗತ್ಯವಾಗಿದೆ. ಮೂಳೆಗಳು ಮತ್ತು ಸ್ನಾಯುಗಳನ್ನು ಬಲಪಡಿಸಲು ಕ್ಯಾಲ್ಸಿಯಂ ಉಪಯುಕ್ತವಾಗಿದೆ. ಇದು ದೇಹದಲ್ಲಿ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸುತ್ತದೆ, ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಸಾಕಷ್ಟು ಕ್ಯಾಲ್ಸಿಯಂ ನಿಮ್ಮ ಹಲ್ಲುಗಳನ್ನು ಬಲಪಡಿಸುತ್ತದೆ. ಇದು ಸ್ನಾಯು ನೋವನ್ನು ಸಹ ಗುಣಪಡಿಸುತ್ತದೆ. ತೂಕವನ್ನು ಕಳೆದುಕೊಳ್ಳುವ ನಿಮ್ಮ ಪ್ರಯತ್ನಗಳಲ್ಲಿ ಕ್ಯಾಲ್ಸಿಯಂ ಕೂಡಾ ಸಹಾಯಕವಾಗಿದೆ.

ಟ್ರೆಂಡಿಂಗ್​ ಸುದ್ದಿ

Vitamin D Deficiency: ವಿಟಮಿನ್‌ ಡಿ ಕೊರತೆಯಿಂದ ಕಾಡಬಹುದು ಫ್ಯಾಟಿ ಲಿವರ್‌ ಸಮಸ್ಯೆ, ಸಮತೋಲಿತ ಆಹಾರ ಸೇವನೆಗೆ ನೀಡಿ ಒತ್ತು

Vampire Facials: ವಾಂಪೈರ್‌ ಫೇಶಿಯಲ್‌ ಮಾಡಿಸೋದ್ರಿಂದ ಎಚ್‌ಐವಿ ಸೋಂಕು ಹರಡಬಹುದು ಎಚ್ಚರ, ಸೌಂದರ್ಯಕ್ಕಿಂತ ಆರೋಗ್ಯ ಮುಖ್ಯ ಮರಿಬೇಡಿ

Nail Health: ಉಗುರಿನ ಬಣ್ಣ-ಆಕಾರ ಬದಲಾದ್ರೆ ನಿರ್ಲಕ್ಷ್ಯ ಮಾಡ್ಬೇಡಿ, ಈ ಆರೋಗ್ಯ ಸಮಸ್ಯೆಗಳನ್ನು ಸೂಚಿಸಬಹುದು ಗಮನಿಸಿ

Travel Tips: ಬೇಸಿಗೆಯಲ್ಲಿ ಪ್ರವಾಸ ಮಾಡುವವರು ತಪ್ಪದೇ ಪಾಲಿಸಬೇಕಾದ ಮಹತ್ವದ ಸಲಹೆಗಳಿವು

ಪೌಷ್ಟಿಕತಜ್ಞೆ ಅಂಜಲಿ ಮುಖರ್ಜಿ ಅವರು ದೇಹದ ಕ್ಯಾಲ್ಸಿಯಂ ಅಗತ್ಯತೆಗಳು ಮತ್ತು ಕ್ಯಾಲ್ಸಿಯಂನ ಆಹಾರ ಮೂಲಗಳನ್ನು ವಿವರಿಸುತ್ತಾರೆ. ಮಕ್ಕಳ ಆಹಾರದಲ್ಲಿ ಸಾಕಷ್ಟು ಕ್ಯಾಲ್ಸಿಯಂ ಇದ್ದರೆ, ಅವರ ಬೆಳವಣಿಗೆಯು ಸಾಮಾನ್ಯವಾಗಿರುತ್ತದೆ. ಮಕ್ಕಳ ಮೂಳೆಗಳು ಬಲಿಷ್ಠವಾಗಿದ್ದರೆ ಜೀವನ ಪರ್ಯಂತ ಅವರಿಗೆ ಮೂಳೆ ಸಂಬಂಧಿ ಕಾಯಿಲೆಗಳು ಕಾಡುವುದಿಲ್ಲ. ಕ್ಯಾಲ್ಸಿಯಂ ಹಾಲಿನಲ್ಲಿ ಮಾತ್ರ ಇರುತ್ತದೆ ಎಂದು ಕೆಲವರು ಮಕ್ಕಳಿಗೆ ಹೆಚ್ಚು ಹೆಚ್ಚು ಹಾಲು ಕೊಡುತ್ತಾರೆ. ಆದರೆ ಹಾಲಿನಲ್ಲಿ ಮಾತ್ರವಲ್ಲ, ನಾನಾ ಆಹಾರಗಳಲ್ಲಿ ಕ್ಯಾಲ್ಸಿಯಂ ಅಂಶವಿದೆ. ಇದನ್ನು ವಿವಿಧ ರೂಪದಲ್ಲಿ ನೀವೂ ಹಾಗೂ ಮಕ್ಕಳು ಸೇವಿಸಬಹುದು.

ಕಪ್ಪು ಎಳ್ಳು : ಕಪ್ಪು ಎಳ್ಳಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಬಿ ಕಾಂಪ್ಲೆಕ್ಸ್ ಮತ್ತು ಆರೋಗ್ಯಕರ ಕೊಬ್ಬುಗಳಿವೆ. ಮಕ್ಕಳಿಗೆ ಎಳ್ಳಿನ ಉಂಡೆಗಳನ್ನು ತಯಾರಿಸಿ ನೀಡುವ ಮೂಲಕ ಅವರ ದೇಹಕ್ಕೆ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ನೀಡಬಹುದು. ಹಿರಿಯರು ಕೂಡಾ ಇದನ್ನು ತಿನ್ನಬಹುದು.

ಮೊಸರು: ಮೊಸರು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಮನೆಯಲ್ಲಿ ಯಾವಾಗಲೂ ಮೊಸರು ಲಭ್ಯವಿದ್ದರೆ ಮಕ್ಕಳಿಗೆ ಕ್ಯಾಲ್ಸಿಯಂ ದೊರೆಯುತ್ತದೆ. ಮೊಸರನ್ನದ ರೂಪದಲ್ಲಿ ಮಕ್ಕಳಿಗೆ ಮೊಸರು ತಿನ್ನಲು ಪ್ರೋತ್ಸಾಹಿಸಬೇಕು.

ದ್ವಿದಳ ಧಾನ್ಯಗಳು: ರಾಜ್ಮಾ, ಕಾಬೂಲಿ ಕಡಲೆ, ಕಡಲೆ ಮತ್ತು ಅಲಸಂದೆಯಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಇವುಗಳನ್ನು ಟೊಮ್ಯಾಟೋ ಮತ್ತು ಈರುಳ್ಳಿಯೊಂದಿಗೆ ಬೇಯಿಸಿ ಅನ್ನ ಅಥವಾ ಚಪಾತಿಯೊಂದಿಗೆ ನಿಮ್ಮ ಮಕ್ಕಳಿಗೆ ನೀಡಬಹುದು.

ತರಕಾರಿಗಳು: ಮೆಂತ್ಯ, ಕೋಸುಗಡ್ಡೆ, ಲೆಟ್ಯೂಸ್‌, ಪಾಲಕ್‌, ಮೂಲಂಗಿಗಳಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಪುದೀನಾ ಮತ್ತು ಕೊತ್ತಂಬರಿ ಸೊಪ್ಪು ಸಹ ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ. ಪುದೀನಾ ಮತ್ತು ಕೊತ್ತಂಬರಿ ಚಟ್ನಿಯನ್ನು ನೀವು ಆಗಾಗ್ಗೆ ಮಾಡಿದರೆ ಸ್ಯಾಂಡ್‌ವಿಚ್‌, ದೋಸೆ ಅಥವಾ ಫ್ರೈಡ್‌ ರೈಸ್‌ನೊಂದಿಗೆ ಮಕ್ಕಳಿಗೆ ನೀಡಬಹುದು.

ಡ್ರೈ ನಟ್ಸ್‌ ಹಾಗೂ ಫ್ರೂಟ್ಸ್‌: ವಾಲ್‌ನಟ್ಸ್‌, ಅಂಜೂರದ ಹಣ್ಣುಗಳು, ಖರ್ಜೂರಗಳು, ಏಪ್ರಿಕಾಟ್‌ಗಳು ಕ್ಯಾಲ್ಸಿಯಂ ಹೊಂದಿರುತ್ತದೆ. ಇದರಲ್ಲಿ ಪ್ರೋಟೀನ್ ಹಾಗೂ ಆರೋಗ್ಯಕರ ಕೊಬ್ಬುಗಳು ಮತ್ತು ವಿಟಮಿನ್‌ಗಳು ಕೂಡಾ ಇವೆ. ಇವುಗಳನ್ನು ಆಗಾಗ್ಗೆ ಮಕ್ಕಳಿಗೆ ಸ್ನಾಕ್ಸ್‌ ರೂಪದಲ್ಲಿ ನೀಡುವುದರಿಂದ ಮಕ್ಕಳ ಮೂಳೆ ಹಾಗೂ ಹಲ್ಲುಗಳು ಗಟ್ಟಿಯಾಗುತ್ತವೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು