ಹೋಟೆಲ್‌ನವರ ಮುಂದೆ ತಾಂಡವ್-ಶ್ರೇಷ್ಠಾ ಬಂಡವಾಳ ಬಯಲು, ಪೊಲೀಸರಿಗೆ ಸುದ್ದಿ ಮುಟ್ಟಿಸಲು ಮುಂದಾದ ಓನರ್; ಭಾಗ್ಯಲಕ್ಷ್ಮೀ ಧಾರಾವಾಹಿ
Nov 23, 2024 01:23 PM IST
ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್ 22ರ ಎಪಿಸೋಡ್‌ನಲ್ಲಿ ಪೊಲೀಸರಿಗೆ ಹೇಳದಂತೆ ಹೋಟೆಲ್ ಓನರ್‌ಗೆ ಮನವಿ ಮಾಡುತ್ತಿರುವ ತಾಂಡವ್
Bhagyalakshmi Kannada Serial: ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್ 22ರ ಎಪಿಸೋಡ್‌ನಲ್ಲಿ ಭಾಗ್ಯಾ ಮನೆಗೆ ವಾಪಸಾಗುತ್ತಾಳೆ. ಮತ್ತೊಂದೆಡೆ ಶ್ರೇಷ್ಠಾ ಹಾಗೂ ತಾಂಡವ್ ಗಂಡ ಹೆಂಡತಿ ಅಲ್ಲ ಎಂಬ ನಿಜ ಹೋಟೆಲ್‌ನವರಿಗೆ ತಿಳಿಯುತ್ತದೆ. ಇಬ್ಬರನ್ನೂ ಪೊಲೀಸರಿಗೆ ಹಿಡಿದುಕೊಡಲು ಓನರ್ ಮುಂದಾಗುತ್ತಾರೆ.
Bhagyalakshmi Kannada Serial: ಹೋಗುವಾಗ ಇದ್ದ ಮನಸ್ಸು ವಾಪಸ್ ಬರುವಾಗ ಇರುವುದಿಲ್ಲ ಎಂದು ಕುಸುಮಾ ಬಳಿ ಫಕೀರ ಹೇಳಿದ್ದ ಮಾತು ನಿಜವಾಗಿದೆ. ಭಾಗ್ಯಾಗೆ ಎಲ್ಲಾ ಸತ್ಯ ತಿಳಿದಾಗಿದೆ. ತನ್ನ ಮುಂದೆಯೇ ಗಂಡ , ಮತ್ತೊಂದು ಹುಡುಗಿಗೆ ಐ ಲವ್ ಯೂ, ನೀನೇ ನನ್ನ ನಿಜವಾದ ಹೆಂಡತಿ ಎಂದು ಹೇಳಿದ್ದು ಭಾಗ್ಯಾ ಮನಸ್ಸನ್ನು ಕದಡಿದೆ. ಇದೇ ನೋವಿನಿಂದ ಭಾಗ್ಯಾ ದೇವರ ಸನ್ನಿಧಿಯಲ್ಲಿ ನೋವು ತೋಡಿಕೊಳ್ಳುತ್ತಾಳೆ.
ತಪ್ಪು ಮಾಡಿದರೂ ದರ್ಪ ತೋರುವ ಶ್ರೇಷ್ಠಾ
ಇತ್ತ ತಾಂಡವ್ ಹಾಗೂ ಶ್ರೇಷ್ಠಾ ರಾತ್ರಿ ಕುಡಿದ ಮತ್ತಿನಲ್ಲಿ ಮಾತನಾಡುವ ಮಾತುಗಳನ್ನು ಕೇಳಿ ಸಹನಾ ಆಶ್ಚರ್ಯ ವ್ಯಕ್ತಪಡಿಸುತ್ತಾಳೆ. ಹಾಗಾದ್ರೆ ನೀವು ಗಂಡ ಹೆಂಡತಿ ಅಲ್ವಾ. ಇದು ಮದುವೆ ಆಗಿರುವವರಿಗೆ ಆಯೋಜಿಸಿದಿರುವ ಪಾರ್ಟಿ, ನೀವು ಬೇರೆ ಯಾರನ್ನೋ ಕರೆದುಕೊಂಡು ಬರಲು ಹೇಗೆ ಸಾಧ್ಯ? ಪ್ರಶ್ನಿಸುತ್ತಾಳೆ. ಹೌದು ನಾವು ಗಂಡ ಹೆಂಡತಿ ಅಲ್ಲ, ಏನೀಗ? ನಿನ್ನ ಕೈಲಿಂದ ಏನು ಮಾಡಲು ಸಾಧ್ಯ ಎಂದು ತಾಂಡವ್ ಹಾಗೂ ಶ್ರೇಷ್ಠಾ ಸಹನಾಗೆ ಏಕ ವಚನದಲ್ಲಿ ಪ್ರಶ್ನಿಸುತ್ತಾರೆ. ಇದರಿಂದ ಕೋಪಗೊಂಡ ಸಹನಾ, ವಿಚಾರವನ್ನು ಹೋಟೆಲ್ ಓನರ್‌ಗೆ ಮುಟ್ಟಿಸುತ್ತಾಳೆ.
ಮರುದಿನ ಹೋಟೆಲ್ ಓನರ್ ತಮ್ಮ ಸಿಬ್ಬಂದಿ ಜೊತೆ ತಾಂಡವ್-ಶ್ರೇಷ್ಠಾ ಇದ್ದ ಸ್ಥಳಕ್ಕೆ ಬರುತ್ತಾರೆ. ನೀವು ಗಂಡ ಹೆಂಡತಿ ಅಲ್ಲದಿದ್ದರೆ ಇಲ್ಲಿಗೆ ಏಕೆ ಬಂದ್ರಿ? ಬೇರೆಯವರನ್ನೂ ನಂಬದ ರೀತಿ ಮಾಡಿಬಿಟ್ರಿ. ನಿಮ್ಮಂಥವರನ್ನು ಸುಮ್ಮನೆ ಬಿಟ್ಟರೆ ಆಗುವುದಿಲ್ಲ, ಪೊಲೀಸರಿಗೆ ದೂರು ನೀಡುತ್ತೇವೆ ಎಂದು ಪೊಲೀಸ್ ಠಾಣೆಗೆ ಕರೆ ಮಾಡುವ ಪ್ರಯತ್ನ ಮಾಡುತ್ತಾರೆ. ಇದರಿಂದ ತಾಂಡವ್-ಶ್ರೇಷ್ಠಾಗೆ ಭಯವಾಗುತ್ತದೆ. ಅಷ್ಟಾದರೂ ಶ್ರೇಷ್ಠಾ ಮಾತ್ರ, ನಾವಿಬ್ಬರೂ ಒಬ್ಬರಿಗೊಬ್ಬರು ಇಷ್ಟಪಟ್ಟಿದ್ದೇವೆ, ಮುಂದೆ ಮದುವೆಯೂ ಆಗುತ್ತೇವೆ, ಎಂದು ದರ್ಪದಿಂದ ಹೇಳುತ್ತಾಳೆ. ಕದ್ದು ಇಂಥ ಕೆಲಸ ಮಾಡಿದ್ದೂ ಅಲ್ಲದೆ ದರ್ಪದಿಂದ ಮಾತನಾಡುತ್ತಿದ್ದೀರ ಎಂದು ಹೋಟೆಲ್ ಓನರ್ ಶ್ರೇಷ್ಠಾಳನ್ನು ಪ್ರಶ್ನಿಸುತ್ತಾರೆ. ಸರ್ ಇಷ್ಟಕ್ಕೆಲ್ಲಾ ಪೊಲೀಸ್ ಏಕೆ? ನಿನ್ನೆಯಿಂದ ಎಷ್ಟೆಲ್ಲಾ ಖರ್ಚಾಗಿದೆಯೋ ಅಷ್ಟು ಹಣವನ್ನು ನಾನು ಕೊಡುತ್ತೇನೆ ಎನ್ನುತ್ತಾನೆ.
ತಾಂಡವ್‌ಗೆ ಮತ್ತೊಂದು ಆಯ್ಕೆ ನೀಡಿದ ಹೋಟೆಲ್ ಓನರ್
ಇದೆನ್ನೆಲ್ಲಾ ನಾನು ದುಡ್ಡಿಗಾಗಿ ಮಾಡುತ್ತಿಲ್ಲ, ನಮ್ಮ ಹೋಟೆಲ್‌ಗೆ ಒಂದು ಪ್ರತಿಷ್ಠೆ ಇದೆ. ಅದನ್ನೆಲ್ಲಾ ನೀವು ಹಾಳು ಮಾಡುವ ಪ್ರಯತ್ನ ಮಾಡಿದ್ದೀರಿ ನಿಮ್ಮನ್ನು ಸುಮ್ಮನೆ ಬಿಡುವ ಮಾತೇ ಇಲ್ಲ ಎಂದು ಓನರ್ ಹೇಳುತ್ತಾರೆ. ತಾಂಡವ್ ಪದೇ ಪದೆ ಮನವಿ ಮಾಡುವುದಕ್ಕೆ ಪ್ರತಿಕ್ರಿಯಿಸಿದ ಓನರ್, ಸರಿ ಹಾಗಾದರೆ ಬಿಟ್ಟುಬಿಡುತ್ತೇನೆ. ಆದರೆ ನಿಮ್ಮ ಹೆಂಡತಿಗೆ ಕರೆ ಮಾಡಿ, ಅವರು ನಿಮ್ಮನ್ನು ಬಿಡಿ ಎಂದರೆ ಖಂಡಿತ ಬಿಟ್ಟುಕಳಿಸುತ್ತೇವೆ ಎನ್ನುತ್ತಾರೆ. ಇದನ್ನು ಕೇಳಿ ತಾಂಡವ್‌ಗೆ ಗಾಬರಿಯಾಗುತ್ತದೆ. ಭಾಗ್ಯಾಗೆ ಕರೆ ಮಾಡಿ ನಡೆದ ವಿಚಾರವನ್ನು ತಿಳಿಸಿ , ನನ್ನನ್ನು ಬಿಡಿಸು ಎಂದು ಕೇಳುವ ಧೈರ್ಯ ತಾಂಡವ್‌ಗೆ ಇಲ್ಲ, ಪೊಲೀಸ್ ಸ್ಟೇಷನ್‌ಗೆ ಹೋಗುವ ಧೈರ್ಯವೂ ಇಲ್ಲ.
ಇತ್ತ ಮನೆಯಲ್ಲಿ ಕುಸುಮಾ, ಭಾಗ್ಯಾ ಮನೆ ಬಿಟ್ಟು ಹೋಗುವಂತೆ ಕನಸು ಕಾಣುತ್ತಾಳೆ. ನಿನ್ನ ಅಕ್ಕನಿಗೆ ಕಾಲ್ ಮಾಡು ಎನ್ನುತ್ತಾಳೆ. ಅವಳ ನಂಬರ್ ಸ್ವಿಚ್ ಆಫ್ ಬರುತ್ತಿದೆ ಎಂದಾಗ ಗಾಬರಿಯಾಗುತ್ತಾಳೆ. ಆಗ ಪೂಜಾ, ಸುಂದ್ರಿ, ಧರ್ಮರಾಜ್ ಎಲ್ಲರೂ ಕುಸುಮಾಗೆ ಧೈರ್ಯ ಹೇಳುತ್ತಾರೆ. ಬೆಳಗಿನ ಜಾವ ಭಾಗ್ಯಾ ಮನೆಗೆ ವಾಪಸಾಗುತ್ತಾಳೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ತಾಂಡವ್, ಭಾಗ್ಯಾಗೆ ಕರೆ ಮಾಡುತ್ತಾನಾ? ಭಾಗ್ಯಾ, ತಾಂಡವ್‌ನನ್ನು ಬಿಡಿಸುತ್ತಾಳಾ? ಮನೆಗೆ ಬರುವ ಭಾಗ್ಯಾ ಅತ್ತೆ ಹಾಗೂ ಮನೆಯವರ ಬಳಿ ಹೇಗೆ ನಡೆದುಕೊಳ್ಳುತ್ತಾಳೆ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್