Annayya Serial: ಶಿವು ಬದುಕಲ್ಲಿ ತಂಗಾಳಿ ಬೀಸುವ ಹೊತ್ತಲ್ಲಿ, ಪಾರು ಬದುಕಿನಲ್ಲಿ ಬಿರುಗಾಳಿ; ನಿಜ ಹೇಳ್ತಾನಾ ಅಣ್ಣಯ್ಯ?
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ಶಿವು ಬದುಕಲ್ಲಿ ತಂಗಾಳಿ ಬೀಸುವ ಹೊತ್ತಲ್ಲಿ, ಪಾರು ಬದುಕಿನಲ್ಲಿ ಬಿರುಗಾಳಿ; ನಿಜ ಹೇಳ್ತಾನಾ ಅಣ್ಣಯ್ಯ?

Annayya Serial: ಶಿವು ಬದುಕಲ್ಲಿ ತಂಗಾಳಿ ಬೀಸುವ ಹೊತ್ತಲ್ಲಿ, ಪಾರು ಬದುಕಿನಲ್ಲಿ ಬಿರುಗಾಳಿ; ನಿಜ ಹೇಳ್ತಾನಾ ಅಣ್ಣಯ್ಯ?

ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಹಾಗೂ ಪಾರು ಎಂದೂ ನೆಮ್ಮದಿಯಿಂದ ಇದ್ದ ದಿನವೇ ಇಲ್ಲ. ಇಂದಾದರೂ ಎಲ್ಲವನ್ನೂ ಮರೆತು ಚೆನ್ನಾಗಿರಬೇಕು ಎಂದುಕೊಂಡರೆ ಅದೂ ಆಗುತ್ತಿಲ್ಲ. ಈಗ ಏನಾಗಿದೆ ನೋಡಿ.

ಪಾರು ಬದುಕಿನಲ್ಲಿ ಬಿರುಗಾಳಿ
ಪಾರು ಬದುಕಿನಲ್ಲಿ ಬಿರುಗಾಳಿ

ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ದಿನೇ ದಿನೇ ಸಿದ್ದಾರ್ಥ್‌ ಬಗ್ಗೆ ಯೋಚನೆ ಮಾಡಿ ಕೊರಗುತ್ತಿದ್ದಾಳೆ. ಅವಳ ಬದುಕಿನಲ್ಲಿ ನೆಮ್ಮದಿಯೇ ಇಲ್ಲ ಎಂಬಂತಾಗಿದೆ. ಯಾಕೆ ನಾನು ಇಲ್ಲಿದ್ದೇನೆ ಎಂಬ ಪ್ರಶ್ನೆಗೆ ಒಮ್ಮೊಮ್ಮೆ ಅವಳ ಬಳಿಯೇ ಉತ್ತರ ಇರೋದಿಲ್ಲ. ಹಾಗಾಗಿ ಅವಳಿಗೆ ನಿದ್ದೆ ಕೂಡ ಬರುತ್ತಿಲ್ಲ. ಶಿವು ಮತ್ತು ಪಾರು ಇಬ್ಬರೂ ಈಗ ತೋಟಕ್ಕೆ ಬಂದಿದ್ದಾರೆ. ತೋಟದ ನಡುವಲ್ಲಿ ಶಿವು ಪಾರುಗಾಗಿ ಅವಳ ಖುಷಿಯನ್ನು ಕಾಣುವುದಕ್ಕಾಗಿ ಒಂದು ಉಯ್ಯಾಲೆ ಕಟ್ಟಿಕೊಟ್ಟಿದ್ದಾನೆ.

ಆದರೆ ಪಾರು ಆ ಉಯ್ಯಾಲೆಯಲ್ಲಿ ಮೊದಲು ಖುಷಿಯಿಂದ ಕೂತು ಅಲ್ಲೇ ನಿದ್ರೆ ಮಾಡಿದರೂ ಸಹ ಒಮ್ಮೆಲೆ ಬೆಚ್ಚಿ ಬೀಳುತ್ತಾಳೆ. ತಕ್ಷಣ ಎದ್ದು ಬಿಡುತ್ತಾಳೆ. ಆಗ ಅಣ್ಣಯ್ಯ “ಏನಾಯ್ತು ಪಾರು? ಯಾಕೆ ಎದ್ಬಿಟ್ಟೆ? ನಾನೇ ಗಾಳಿ ಬೀಸ್ತಾ ಇರೋದು” ಎಂದು ಅವನು ಹೇಳುತ್ತಾನೆ. ಆಗ ಪಾರು ಎದ್ದು “ತಂಗಾಳಿ ಅಲ್ಲ ಮಾವ ನನ್ನ ಬದುಕಲ್ಲಿ ಬಿರುಗಾಳಿನೇ ಬೀಸ್ತಾ ಇದೆ” ಎಂದು ಹೇಳುತ್ತಾಳೆ. ಅವಳ ಮಾತನ್ನು ಕೇಳಿ ಶಿವುಗೆ ಮತ್ತೆ ತಲೆಬಿಸಿ ಆರಂಭವಾಗಿದೆ. ಅವಳು ಯಾವ ವಿಚಾರವನ್ನು ಕೆದಕಬಾರದು ಎಂದು ಶಿವು ಅಂದುಕೊಂಡಿರುತ್ತಾನೋ, ಅದೇ ವಿಚಾರವನ್ನು ಈಗ ಅವಳು ಹೇಳುತ್ತಿದ್ದಾಳೆ.

"ಮಾವ ನೀನು ಸಿಟಿಗೆ ಹೋಗಿದ್ಯಲ್ಲ ಅಲ್ಲಿ ನಿನಗೆ ಸಿದ್ದಾರ್ಥ್‌ ಬಗ್ಗೆ ಏನಾದ್ರೂ ವಿಷಯ ಗೊತ್ತಾಯ್ತಾ? ಅಂತ ಕೇಳುತ್ತಾಳೆ. ಆಗ ಏನು ಉತ್ತರ ಕೊಡಬೇಕು ಎಂದು ಅರ್ಥ ಆಗದೆ ಮತ್ತೆ ಆಸ್ಪತ್ರೆಯಲ್ಲಿ ಆ ಡಾಕ್ಟರ್‌ ಹೇಳಿದ ಮಾತುಗಳನ್ನು ನೆನಪು ಮಾಡಿಕೊಳ್ಳುತ್ತಾನೆ. ಆಗಲೂ ಅವನಿಗೆ ಸತ್ಯ ಹೇಳಬೇಕು ಎಂದು ಅನಿಸುವುದಿಲ್ಲ. ಇಲ್ಲ ನನಗೆ ಸಿದ್ದಾರ್ಥ್‌ ಬಗ್ಗೆ ಯಾವ ಸುಳಿವೂ ಸಿಗಲಿಲ್ಲ. ನಾನು ಅವರ ಮನೆ ಹತ್ತಿರವೂ ಹೋಗಿದ್ದೆ ಎನ್ನುತ್ತಾನೆ.

ಅಣ್ಣಯ್ಯ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

Whats_app_banner