logo
ಕನ್ನಡ ಸುದ್ದಿ  /  ಮನರಂಜನೆ  /  ಬಾಕ್ಸ್‌ ಆಫೀಸ್‌ನಲ್ಲಿ 420 ಕೋಟಿ ಗಳಿಕೆ ಕಂಡು ಸೂಪರ್‌ ಹಿಟ್‌ ಆದ ಚಿತ್ರ ಶೀಘ್ರದಲ್ಲಿ ಒಟಿಟಿಗೆ ಎಂಟ್ರಿ

ಬಾಕ್ಸ್‌ ಆಫೀಸ್‌ನಲ್ಲಿ 420 ಕೋಟಿ ಗಳಿಕೆ ಕಂಡು ಸೂಪರ್‌ ಹಿಟ್‌ ಆದ ಚಿತ್ರ ಶೀಘ್ರದಲ್ಲಿ ಒಟಿಟಿಗೆ ಎಂಟ್ರಿ

Dec 09, 2024 02:37 PM IST

google News

ಬಾಕ್ಸ್‌ ಆಫೀಸ್‌ನಲ್ಲಿ 400 ಕೋಟಿ ಗಳಿಕೆ ಕಂಡು ಸೂಪರ್‌ ಹಿಟ್‌ ಆದ ಚಿತ್ರ ಶೀಘ್ರದಲ್ಲಿ ಒಟಿಟಿಗೆ ಎಂಟ್ರಿ

    • Bhool Bhulaiyaa 3 OTT Release: ಇತ್ತೀಚೆಗಷ್ಟೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ, ಕಲೆಕ್ಷನ್‌ ವಿಚಾರದಲ್ಲಿ ಮೋಡಿ ಮಾಡಿದ್ದ ಬಾಲಿವುಡ್‌ನ ಭೂಲ್‌ ಭುಲ್ಲಯ್ಯ 3 ಸಿನಿಮಾ ಇದೀಗ ಒಟಿಟಿಗೆ ಆಗಮಿಸುವ ಸನಿಹದಲ್ಲಿದೆ. ಅನೀಸ್‌ ಬಾಜ್ಮಿ ನಿರ್ದೇಶನದ ಈ ಚಿತ್ರದಲ್ಲಿ ಕಾರ್ತಿಕ್‌ ಆರ್ಯನ್‌ ನಾಯಕನಾಗಿ ನಟಿಸಿದ್ದಾರೆ.
ಬಾಕ್ಸ್‌ ಆಫೀಸ್‌ನಲ್ಲಿ 400 ಕೋಟಿ ಗಳಿಕೆ ಕಂಡು ಸೂಪರ್‌ ಹಿಟ್‌ ಆದ ಚಿತ್ರ ಶೀಘ್ರದಲ್ಲಿ ಒಟಿಟಿಗೆ ಎಂಟ್ರಿ
ಬಾಕ್ಸ್‌ ಆಫೀಸ್‌ನಲ್ಲಿ 400 ಕೋಟಿ ಗಳಿಕೆ ಕಂಡು ಸೂಪರ್‌ ಹಿಟ್‌ ಆದ ಚಿತ್ರ ಶೀಘ್ರದಲ್ಲಿ ಒಟಿಟಿಗೆ ಎಂಟ್ರಿ

Bhool Bhulaiyaa 3 OTT Release: ದೀಪಾವಳಿ ಹಬ್ಬದ ಪ್ರಯುಕ್ತ ಬಾಲಿವುಡ್‌ನಲ್ಲಿ ಈ ವರ್ಷದ ಬಿಗ್ಗೆಸ್ಟ್‌ ಕ್ಲಾಷ್‌ ಘಟಿಸಿತ್ತು. ಬಿಗ್‌ ಬಜೆಟ್‌ನ ಎರಡು ಬಹುನಿರೀಕ್ಷಿತ ಸಿನಿಮಾಗಳಾದ ಭೂಲ್‌ ಭುಲ್ಲಯ್ಯ 3 ಮತ್ತು ಸಿಂಗಂ ಅಗೇನ್‌ ಸಿನಿಮಾಗಳು ನವೆಂಬರ್‌ 1ರಂದು ಬಿಡುಗಡೆ ಆಗಿದ್ದವು. ಭೂಲ್‌ ಭುಲ್ಲಯ್ಯ 3 ಸಿನಿಮಾ ಈ ಹಿಂದಿನ ಭೂಲ್‌ ಭುಲ್ಲಯ್ಯ ಚಿತ್ರದ ಮುಂದುವರಿದ ಭಾಗವಾದರೆ, ಅದೇ ರೀತಿ ಸಿಂಗಮ್‌ ಅಗೇನ್‌ ಸಿನಿಮಾ ಸಹ ಈ ಹಿಂದಿನ ಸಿಂಗಮ್ ಚಿತ್ರದ‌ ಮುಂದುವರಿದ ಭಾಗವಾಗಿತ್ತು.

ಬಹುತಾರಾಗಣದ ಈ ಎರಡು ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲೂ ಮೋಡಿ ಮಾಡಿದ್ದವು. ಆ ಪೈಕಿ ಭೂಲ್‌ ಭುಲ್ಲಯ್ಯ ಸಿನಿಮಾ, ಸಿಂಗಂ ಚಿತ್ರಕ್ಕಿಂತ ಒಂದು ಕೈ ಮೇಲಿತ್ತು. ಈಗ ಈ ಎರಡು ಸಿನಿಮಾಗಳ ಪೈಕಿ ಭೂಲ್‌ ಭುಲ್ಲಯ್ಯ ಸಿನಿಮಾ ಒಟಿಟಿಗೆ ಅಂಗಳಕ್ಕೆ ಆಗಮಿಸಲು ಸಜ್ಜಾಗಿದೆ. ಇನ್ನೇನು ಶೀಘ್ರದಲ್ಲಿಯೇ ನೆಟ್‌ಫ್ಲಿಕ್ಸ್‌ ಒಟಿಟಿ ಅಂಗಳಕ್ಕೆ ಎಂಟ್ರಿ ಕೊಡಲಿದೆ.

ಭೂಲ್ ಭುಲ್ಲಯ್ಯ 3 ಸಿನಿಮಾ ಈ ವರ್ಷದ ನಾಲ್ಕನೇ ಅತಿ ಹೆಚ್ಚು ಗಳಿಕೆ ಕಂಡ ಹಾರರ್  ಕಾಮಿಡಿ ಸಿನಿಮಾವಾಗಿದೆ. ಗಲ್ಲಾಪೆಟ್ಟಿಗೆಯಲ್ಲಿ 420 ಕೋಟಿ ರೂ. ಗಳಿಸಿರುವ ಈ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್, ವಿದ್ಯಾ ಬಾಲನ್, ತೃಪ್ತಿ ಡಿಮ್ರಿ ಮತ್ತು ಮಾಧುರಿ ದೀಕ್ಷಿತ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಆದಾಗ್ಯೂ, ಈ ಚಿತ್ರವು ಇದೇ ಡಿಸೆಂಬರ್‌ನಲ್ಲಿಯೇ ಒಟಿಟಿಗೆ ಪದಾರ್ಪಣೆ ಮಾಡಲು ಸಜ್ಜಾಗಿದೆ ಎನ್ನಲಾಗುತ್ತಿದೆ.

ನೆಟ್‌ಫ್ಲಿಕ್ಸ್‌ ಒಟಿಟಿಗೆ ಭೂಲ್‌ ಭುಲ್ಲಯ್ಯ

ನವೆಂಬರ್‌ 1ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಸಿನಿಮಾ ಎಲ್ಲ ಅಂದುಕೊಂಡಂತೆ ಆಗಿದ್ದರೆ, 2025ರಲ್ಲಿ ರಿಲೀಸ್‌ ಆಗಲಿದೆ ಎಂದೇ ಹೇಳಲಾಗಿತ್ತು. ಆದರೆ, ಇದೀಗ ಲೇಟೆಸ್ಟ್‌ ಮಾಹಿತಿ ಪ್ರಕಾರ ಈ ಸಿನಿಮಾ ಇದೇ ತಿಂಗಳಲ್ಲಿ ಒಟಿಟಿಗೆ ಆಗಮಿಸಲಿದೆ ಎನ್ನಲಾಗುತ್ತಿದೆ. ಡಿಸೆಂಬರ್‌ 27ರಂದು ಈ ಸಿನಿಮಾ ನೆಟ್‌ಫ್ಲಿಕ್ಸ್‌ಗೆ ಬರುವ ಸಾಧ್ಯತೆಗಳಿವೆ.  

ಈ ವರ್ಷ ಹಾರರ್‌ ಕಾಮಿಡಿ ಶೈಲಿಯ ಚಿತ್ರಗಳು ಬಾಕ್ಸ್‌ ಆಫೀಸ್‌ನಲ್ಲಿ ಯಶಸ್ಸು ಗಳಿಸಿವೆ.  ಸ್ತ್ರೀ 2 ಮತ್ತು ಮುಂಜ್ಯ ಚಿತ್ರಗಳು ಕಮರ್ಷಿಯಲ್‌ ಆಗಿ ಹಿಟ್‌ ಆಗಿವೆ. ಭೂಲ್ ಭುಲ್ಲಯ್ಯ 3 ಸಹ ಬ್ಲಾಕ್ ಬಸ್ಟರ್ ಆಗಿದೆ. ಅನೀಸ್ ಬಾಜ್ಮಿ ಅಭಿನಯದ ಈ ಚಿತ್ರದಲ್ಲಿ ಕಾರ್ತಿಕ್ ಆರ್ಯನ್, ವಿದ್ಯಾ ಬಾಲನ್, ತೃಪ್ತಿ ಡಿಮ್ರಿ ಮತ್ತು ಮಾಧುರಿ ದೀಕ್ಷಿತ್ ನಟಿಸಿದ್ದಾರೆ.

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ