Bigg Boss Kannada 11: ಬಿಗ್ ಬಾಸ್ ಸಾಮ್ರಾಜ್ಯಕ್ಕೆ ಉಗ್ರಂ ಮಂಜು ಅಧಿಪತಿ; ಪ್ರಜೆಗಳನ್ನು ಹುರಿದು ಮುಕ್ಕಿದ ನಿಕೃಷ್ಟ ಮಹಾರಾಜ
Nov 25, 2024 10:33 AM IST
ಬಿಗ್ ಬಾಸ್ ಸಾಮ್ರಾಜ್ಯವಾಗಿ ಬದಲಾದ ಬಿಗ್ ಬಾಸ್ ಮನೆ
- Bigg Boss Kannada 11: ಈ ವಾರ ಬಿಗ್‌ಬಾಸ್ ಸಾಮ್ರಾಜ್ಯ ಎಂಬ ಪರಿಕಲ್ಪನೆಯಲ್ಲಿ ಇಡೀ ಮನೆಯನ್ನು ಬದಲಿಸಲಾಗಿದೆ. ಅದರಂತೆ, ಆ ಸಾಮ್ರಾಜ್ಯದ ಅಧಿಪತಿಯಾಗಿ ಈ ವಾರದ ಕ್ಯಾಪ್ಟನ್ ಉಗ್ರಂ ಮಂಜು ಅಧಿಕಾರ ಕೈಗೆತ್ತಿಕೊಂಡಿದ್ದಾರೆ. ಅಧಿಕಾರ ಸಿಕ್ಕಿದ್ದೇ ತಡ, ಮನೆಮಂದಿಯನ್ನು ಕೈಗೊಂಬೆಯಂತೆ ಆಡಿಸುತ್ತಿದ್ದಾರೆ.
Bigg Boss Kananda 11: ಬಿಗ್ ಬಾಸ್‌ನಲ್ಲಿ ಈ ವಾರ ಕಪಟಿ ಮಹಾರಾಜನ ಆಳ್ವಿಕೆ ನಡೆಯಲಿದೆ. ಅಂದರೆ, ಈ ವಾರ ಬಿಗ್‌ಬಾಸ್ ಸಾಮ್ರಾಜ್ಯ ಎಂಬ ಪರಿಕಲ್ಪನೆಯಲ್ಲಿ ಇಡೀ ಮನೆಯನ್ನು ಬದಲಿಸಲಾಗಿದೆ. ಅದರಂತೆ, ಆ ಸಾಮ್ರಾಜ್ಯದ ಅಧಿಪತಿಯಾಗಿ ಈ ವಾರದ ಕ್ಯಾಪ್ಟನ್ ಉಗ್ರಂ ಮಂಜು ಅಧಿಕಾರ ಕೈಗೆತ್ತಿಕೊಂಡಿದ್ದಾರೆ. ಅಧಿಕಾರ ಸಿಕ್ಕಿದ್ದೇ ತಡ, ಮನೆಮಂದಿಯನ್ನು ಕೈಗೊಂಬೆಯಂತೆ ಆಡಿಸುತ್ತಿದ್ದಾರೆ. ರಾಜನ ಆಳ್ವಿಕೆಗೆ ಮನೆ ಮಂದಿಯೂ ಬೇಸತ್ತಿದ್ದಾರೆ.
ಬಿಗ್ ಬಾಸ್ ಸಾಮ್ರಾಜ್ಯ
"ಈ ವಾರ ಬಿಗ್ ಬಾಸ್ ಮನೆ, ಬಿಗ್ ಬಾಸ್ ಸಾಮ್ರಾಜ್ಯವಾಗಿದೆ. ಈ ಸಾಮ್ರಾಜ್ಯದ ಮಹಾರಾಜ ಮಂಜು" ಎಂದು ಬಿಗ್ ಬಾಸ್ ಘೋಷಣೆ ಮಾಡುತ್ತಿದ್ದಂತೆ, ವೇಷಭೂಷಣ ಬದಲಿಸಿಕೊಂಡು ಬಂದ ಮಂಜು, ಸಿಂಹಾಸನ ಅಲಂಕರಿಸಿದ್ದಾರೆ. ಮನೆಯ ಮಹಿಳಾ ಸದಸ್ಯರು ಸೀರೆಯಲ್ಲಿ ಕಂಡರೆ, ಪುರುಷ ಸ್ಪರ್ಧಿಗಳು ಸಾಂಪ್ರದಾಯಿಕ ಉಡುಗೆಯಲ್ಲಿ ಎದುರಾಗಿದ್ದಾರೆ. ಎಲ್ಲರೂ ಒಟ್ಟಾಗಿ ಮಹಾರಾಜನಿಗೆ ಕಿರೀಟ ತೊಡಿಸಿದ್ದಾರೆ. ಆರತಿ ಮಾಡಿ, ರಾಜಾಧಿ ರಾಜಾ ಎಂದೆಲ್ಲ ಸಂಬೋಧಿಸಿ ಘೋಷಣೆ ಕೂಗಿದ್ದಾರೆ.
ಕಪಟಿ ರಾಜನಾಗಿ ಉಗ್ರಂ ಮಂಜು
ಈ ರಾಜ ಕಪಟಿ, ನಿಕೃಷ್ಟ, ಕೊಂಚ ಒರಟ ಎಂಬುದನ್ನೂ ಬಿಗ್ ಬಾಸ್ ಹೇಳಿದ್ದಾರೆ. ಅದರಂತೆ ಪಾತ್ರವನ್ನು ಮೈಮೇಲೆ ಎಳೆದುಕೊಂಡ ಉಗ್ರಂ ಮಂಜು, ತಮ್ಮ ರೋಷಾವೇಷವನ್ನು ಪ್ರದರ್ಶಿಸಲು ಶುರು ಮಾಡಿದ್ದಾರೆ. ಮೊದಲಿಗೆ ಚೈತ್ರಾ ಕುಂದಾಪುರ ಅವರ ಬಾಯಿಗೆ ಆಲೂಗಡ್ಡೆ ಇಟ್ಟು ಬಾಯಿ ಮುಚ್ಚಿಸಿದ್ದಾರೆ. ಧನರಾಜ್ ಆಚಾರ್, ಗೌತಮಿ ಜಾಧವ್ ಸೇರಿ ಮನೆಯ ಇನ್ನೂ ಹಲವರಿಗೆ 50 ಬಸ್ಕಿಯ ಶಿಕ್ಷೆ ನೀಡಿದ್ದಾರೆ. ಮಹಾರಾಜ ಉಗ್ರಂ ಮಂಜು ಪಾದದ ಬಳಿ ಕೈಯಿಟ್ಟು ಬಗ್ಗಿ ನಿಲ್ಲುವ ಶಿಕ್ಷೆಯೂ ಧನರಾಜ್‌ಗೆ ಸಿಕ್ಕಿದೆ.
ರಾಜನ ವಿರುದ್ಧ ತಿರುಗಿ ಬಿದ್ದ ಪ್ರಜೆಗಳ
ಪ್ರಜೆಗಳು ಪ್ರಜೆಗಳಾಗಿ ಇರಬೇಕು, ಯಾರಿಗೂ ಮಧ್ಯಾಹ್ನದ ಉಪಹಾರ ಇಲ್ಲ ಎಂದೂ ರಾಜ ಆದೇಶ ನೀಡಿದ್ದಾನೆ. ರಾಜನ ಈ ಆದೇಶಕ್ಕೆ ಮನೆಯ ಸದಸ್ಯರು ಖಂಡನೆ ವ್ಯಕ್ತಪಡಿಸಿದ್ದಾರೆ. ನಮ್ಮನ್ನ ಏನು ಅಂದುಕೊಂಡಿದ್ದಾನೆ ಈ ರಾಜ, ಅವನು ಹೇಳಿದಂತೆ ನಾವು ಕೇಳಬೇಕಾ ಎಂದು ಗಾರ್ಡನ್ ಏರಿಯಾದಲ್ಲಿ ಗೆಳೆಯ ಹನಮಂತು ಜತೆಗೆ ಧನರಾಜ್ ಆಚಾರ್ ಚರ್ಚೆ ನಡೆಸಿ, ರಾಜನ ದಬ್ಬಾಳಿಕೆ ವಿರುದ್ಧ ಸಂಚು ರೂಪಿಸುತ್ತಿದ್ದಾರೆ. ಸದ್ಯ ರಾಜನ ಈ ದಬ್ಬಾಳಿಕೆಗೆ ಮನೆ ಮಂದಿ ರೋಸಿ ಹೋಗಿದ್ದಾರೆ. ಈ ರಾಜನ ಅಬ್ಬರ ಹೇಗಿರಲಿದೆ ಎಂಬ ವಿವರ ಇಂದು ರಾತ್ರಿ ಗೊತ್ತಾಗಲಿದೆ.
ಏಳು ಜನರ ಪೈಕಿ ಧರ್ಮ ಔಟ್
ಈ ವಾರ ಬಿಗ್ ಬಾಸ್ ಮನೆಯಿಂದ ಒಟ್ಟು ಏಳು ಮಂದಿ ನಾಮಿನೇಟ್ ಆಗಿದ್ದರು. ಚೈತ್ರಾ ಕುಂದಾಪುರ, ಉಗ್ರಂ ಮಂಜು, ತ್ರಿವಿಕ್ರಮ್, ಮೋಕ್ಷಿತಾ ಪೈ, ಧರ್ಮ ಕೀರ್ತಿರಾಜ್, ಗೌತಮಿ ಜಾಧವ್ ಮತ್ತು ಹನಮಂತು. ಈ ಏಳು ಜನರ ಪೈಕಿ, ಕೊನೇ ಹಂತಕ್ಕೆ ಬಂದವರು ಚೈತ್ರಾ ಕುಂದಾಪುರ ಮತ್ತು ಧರ್ಮ ಕೀರ್ತಿರಾಜ್. ಈ ಇಬ್ಬರಲ್ಲಿ ಧರ್ಮ ಅವರೇ ಬಿಗ್ ಕುರುಕ್ಷೇತ್ರದಿಂದ ಹಿಂದೆ ಸರಿಯಬೇಕಾಯಿತು. ಮನೆಯಲ್ಲಿ ವೈಲೆಂಟ್ ಆಗದೇ ಇರುವುದು, ಹೆಚ್ಚು ಮಾತನಾಡದೇ ಇರುವುದೇ ಇವರ ಎಲಿಮಿನೇಷನ್‌ಗೆ ಕಾರಣ ಎಂಬುದು ಮನೆ ಮಂದಿಯ ಜತೆಗೆ ಕಿಚ್ಚನ ಓಪಿನಿಯನ್ ಕೂಡ ಆಗಿತ್ತು.