ನಮ್ಗಿದೂ ಬೇಕಿತ್ತಾ ಮಗನೇ? ಮಂಜು- ತ್ರಿವಿಕ್ರಮ್ ಗೇಮ್‌ ಪ್ಲಾನ್‌ ಪ್ಲಾಪ್‌; ಕಿಚ್ಚನಿಂದ ತೆರೆಮರೆಯ ಇಬ್ಬರ ಒಪ್ಪಂದ ರಿವೀಲ್
ಕನ್ನಡ ಸುದ್ದಿ  /  ಮನರಂಜನೆ  /  ನಮ್ಗಿದೂ ಬೇಕಿತ್ತಾ ಮಗನೇ? ಮಂಜು- ತ್ರಿವಿಕ್ರಮ್ ಗೇಮ್‌ ಪ್ಲಾನ್‌ ಪ್ಲಾಪ್‌; ಕಿಚ್ಚನಿಂದ ತೆರೆಮರೆಯ ಇಬ್ಬರ ಒಪ್ಪಂದ ರಿವೀಲ್

ನಮ್ಗಿದೂ ಬೇಕಿತ್ತಾ ಮಗನೇ? ಮಂಜು- ತ್ರಿವಿಕ್ರಮ್ ಗೇಮ್‌ ಪ್ಲಾನ್‌ ಪ್ಲಾಪ್‌; ಕಿಚ್ಚನಿಂದ ತೆರೆಮರೆಯ ಇಬ್ಬರ ಒಪ್ಪಂದ ರಿವೀಲ್

Bigg Boss Kannada 11: ವಾರದ ಕಥೆ ಕಿಚ್ಚನ ಜೊತೆ ಶನಿವಾರದ ಪಂಚಾಯ್ತಿಯಲ್ಲಿ ಉಗ್ರಂ ಮಂಜು ಮತ್ತು ತ್ರಿವಿಕ್ರಮ್‌ ಜೋಡಿಯ ಗೇಮ್‌ ಪ್ಲಾನ್‌ ಅನ್ನು ಮನೆ ಮಂದಿ ಮುಂದೆ ರಟ್ಟು ಮಾಡಿದ್ದಾರೆ ಕಿಚ್ಚ ಸುದೀಪ್.‌ ಈ ಮೂಲಕ ಇಬ್ಬರ ಬಣ್ಣ ಬಯಲಾಗಿದೆ.

ಕಿಚ್ಚನಿಂದ ತೆರೆಮರೆಯ ಇಬ್ಬರ ಒಪ್ಪಂದ ರಿವೀಲ್
ಕಿಚ್ಚನಿಂದ ತೆರೆಮರೆಯ ಇಬ್ಬರ ಒಪ್ಪಂದ ರಿವೀಲ್

Bigg Boss Kannada 11: ನಾವು ಹೊರಗಡೆ ಹೇಗೆ ಕಾಣಿಸ್ತಿದಿವೋ ಹಾಗೇ ಇರೋಣ, ಇಬ್ಬರೂ ಸೇರಿ ಆಟ ಆಡೋಣ ಎಂದು ಬಿಗ್‌ ಬಾಸ್‌ನಲ್ಲಿ ಉಗ್ರಂ ಮಂಜು ಮತ್ತು ತ್ರಿವಿಕ್ರಮ್‌ ಮಾತನಾಡಿಕೊಂಡು, ದೊಡ್ಡ ಪ್ಲಾನ್‌ ಹಾಕಿದ್ದರು. ಆದರೆ, ಪಾಪ ಈ ವಿಷ್ಯಾ ಹೊರಗಡೆ ಎಲ್ಲೂ ಹೋಗಲ್ಲ ಎಂದೇ ಅವರು ಅಂದುಕೊಂಡಿದ್ದರು. ಆದರೆ, ವಾರದ ಕಥೆ ಕಿಚ್ಚನ ಜೊತೆ ಪಂಚಾಯ್ತಿಯಲ್ಲಿ ಗಾಸಿಪ್‌ ವಿಡಿಯೋಸ್‌ ಹೊರಬಿದ್ದಿದೆ. ಒಳಗೊಳಗೇ ಗೇಮ್‌ ಪ್ಲಾನ್‌ ಹಾಕುತ್ತಿದ್ದ ಈ ಜೋಡಿಯ ಪ್ಲಾನ್‌ ಠುಸ್‌ ಪಟಾಕಿ ಆಗಿದೆ.

ಒಟ್ಟು ಐದು ವಿಡಿಯೋ ಕ್ಲಿಪ್‌ಗಳ ಪೈಕಿ ಕೇವಲ ಎರಡು ಕ್ಲಿಪ್‌ ಮಾತ್ರ ವೀಕ್ಷಣೆಗೆ ಚಾನ್ಸ್‌ ಇತ್ತು. ಆ ಎರಡು ವಿಡಿಯೋಗಳನ್ನು ಮನೆಯ ಸದಸ್ಯರೇ ಒಮ್ಮತದ ಮೇಲೆ ಆಯ್ಕೆ ಮಾಡಬೇಕಿತ್ತು. ಅದರಂತೆ ಮೊದಲಿಗೆ ಶೋಭಾ ಶೆಟ್ಟಿ ಬಿಗ್‌ ಮನೆಗೆ ಬಂದ ಬಳಿಕ, ಉಗ್ರಂ ಮಂಜು ಜತೆಗೆ ಕೊಂಚ ಬಿರುಸಾಗಿಯೇ ವರ್ತಿಸಿದ್ದರು. ಆ ಕ್ಷಣಕ್ಕೆ ಧನರಾಜ್‌ ಮತ್ತು ಹನುಮಂತು ನಡೆಸಿದ ಕಾಮಿಡಿ ಸಂಭಾಷಣೆ ಎಲ್ಲರನ್ನು ನಗಿಸಿತ್ತು. ಎರಡನೇ ಸಂಭಾಷಣೆ ಉಗ್ರಂ ಮಂಜು ಮತ್ತು ತ್ರಿವಿಕ್ರಮ್‌ ಅವರದ್ದು. ಈ ಜೋಡಿ ನಾವಿಬ್ಬರೂ ಮನೆಯಲ್ಲಿ ಒಂದಾದರೆ, ಏನು ಬೇಕಾದರೂ ಮಾಡಬಹುದು ಎಂದು ಮಾತನಾಡಿಕೊಂಡಿತ್ತು.

ಮಂಜು- ತ್ರಿವಿಕ್ರಮ್‌ ಗಾಸಿಪ್‌ ವಿಡಿಯೋದಲ್ಲಿ ಏನಿತ್ತು

ಉಗ್ರಂ ಮಂಜು: ನಮ್ಮ ಜಿದ್ದಾಜಿದ್ದಿನಲ್ಲಿ ಮೂರು ಜನರನ್ನ ಸೆಂಟ್ರಲ್ಲಿ ಕೂರಿಸೋದನ್ನ ತಪ್ಪಿಸಿಬಿಟ್ವಿ ಅನಿಸ್ತಿದೆ.

ತ್ರಿವಿಕ್ರಮ್: ಹೌದೌದು

ತ್ರಿವಿಕ್ರಮ್: ಓಪನ್‌ ಆಗಿ ಹೇಳ್ತಿದಿನಿ, ಎಲ್ಲೋ ನಾವು ಮಿಸ್‌ ಹೊಡೆದ್ವಾ ಅಂತ?

ಉಗ್ರಂ ಮಂಜು: ಮಿಸ್‌ ಹೊಡೆದಿದ್ದು ಒಳ್ಳೆದಾಯ್ತು ಚಿನ್ನ, ಇನ್ಮೇಲೆ ಮಿಸ್‌ ಹೊಡೆದ್ರೆ ಒಳ್ಳೆದಾಗಲ್ಲ ಚಿನ್ನ

ಉಗ್ರಂ ಮಂಜು: ಏಳು ಎಂಟಾಯ್ತು, ಇನ್ನು ಕೂರೋಕಾಗಲ್ಲ..

ತ್ರಿವಿಕ್ರಮ್:‌ ಅಣ್ಣಾ ಒಂದು ವಿಷ್ಯಾ, ನನ್ನಿಂದ ಏನೇ ಇದ್ರೂನೂ, ನೈಟಲ್ಲಿ ಒಂದು ದಮ್‌ನಲ್ಲಿ ಕರೀರಿ. ಅದೇನು ಕ್ಲಿಯರ್‌ ಮಾಡಿ, ನಾನೂ ಅದೇನು ಅನ್ನೋದನ್ನು ಕ್ಲಿಯರ್‌ ಮಾಡ್ತಿನಿ.

ಉಗ್ರಂ ಮಂಜು: ಇನ್ಯಾರ ಮುಂದೆಯೂ ನಾನು ನಿಮ್ಮನ್ನ ಚಿಕ್ಕವರನ್ನಾಗಿ ಮಾಡಲ್ಲ, ನೀವು ನನ್ನ ಹಾಗೆ ಮಾಡಬೇಡಿ

ಉಗ್ರಂ ಮಂಜು: ಹಂಗಿರೋದ್ರಲ್ಲಿ, ನಾವಿಬ್ರೂ ಒಂದಾದ್ರೆ ಈ ಮನೆ ಪರಿಸ್ಥಿತಿ, ಇವರುಗಳೆಲ್ಲ ಎಲ್ಲೋಗಬಹುದು, ಏನಾಗಬೇಡ ವಿಚಾರಿಸು. ಇವರುಗಳಿಗೆ ಏನಾದ್ರೂ ಒಂದು ಕ್ಲೂ ಇದೆಯಾ?

ಉಗ್ರಂ ಮಂಜು: ಇವತ್ತು ನನ್ನ ಟೀಮ್‌ಅನ್ನ, ನಿನ್ನ ಟೀಮ್‌ಅನ್ನ ಏನು ಮಾಡಬೇಕು ಅನ್ನೋದು ನಮ್ಮಿಬ್ಬರ ಕೈಯಲ್ಲಿ ಇಲ್ವಾ?

ಉಗ್ರಂ ಮಂಜು: ಕ್ಯಾಪ್ಟನ್‌ ಯಾರಾಗಬೇಕು ಎಂಬುದನ್ನು ನಾವು ಡಿಸೈಡ್‌ ಮಾಡೋಕೆ ಆಗಲ್ವಾ?

ತ್ರಿವಿಕ್ರಮ್:‌ ಹೌದೌದು..

ತ್ರಿವಿಕ್ರಮ್: ಈ ವಾರ ಬಿಟ್ಟುಬಿಡೋಣ, ಮುಂದಿನ ವಾರದಿಂದ ಶುರು ಮಾಡೋಣ

ಉಗ್ರಂ ಮಂಜು: ಈಗಲೇ ಶುರು ಮಾಡೋಣ

ತ್ರಿವಿಕ್ರಮ್: ಬಟ್‌ ಪ್ಲಾನ್‌ ಮಾಡಿ ಆಡಬೇಕು..

ಉಗ್ರಂ ಮಂಜು: ಇಲ್ಲಾಂದ್ರೆ..

ತ್ರಿವಿಕ್ರಮ್: ನಾವು ಹೊರಗಡೆ ಹೇಗೆ ಕಾಣಿಸ್ತಿದಿವೋ ಹಾಗೇ ಇರಲಿ

ಉಗ್ರಂ ಮಂಜು: ಗೊತ್ತು ಗೊತ್ತು

ತ್ರಿವಿಕ್ರಮ್: ನನ್ನ ಮೇಲೆ ಏನೇ ಇದ್ರೂನೂ, ಧಮ್‌ ಹೊಡೆಯೋಕೆ ಕರೀರಿ ಬರ್ತಿನಿ..

ತ್ರಿವಿಕ್ರಮ್‌ ಪ್ರತಿಕ್ರಿಯೆ

ಈ ಗಾಸಿಪ್‌ ಕ್ಲಿಪ್‌ ಹೊರಬೀಳುತ್ತಿದ್ದಂತೆ, "ಅವತ್ತಿನ ಪರಿಸ್ಥಿತಿಗೆ ನಾನು ಮಂಜಣ್ಣ ಯೋಚನೆ ಮಾಡಿದ್ದು ಸರಿಯಿತ್ತು. ಅವರಿವರು ಹೇಳಿದ್ದ ಮಾತುಗಳನ್ನ ಕೇಳಿಕೊಂಡು ನಾವಿಬ್ಬರು ಜಗಳ ಆಡ್ತಿದ್ವಿ. ಒದೆ ತಿನ್ನೋದು ಯಾರೋ, ಕೂತ್ಕೊಂಡು ಮಾತಾಡೋದು ಯಾರೋ ಅನ್ನುವ ಹಾಗಾಗಿತ್ತು. ಅದಕ್ಕೆ ನಮ್ಮ ನಡುವೆ ಆ ಮಾತುಗಳು ಬಂದವು’ ಎಂದಿದ್ದಾರೆ ತ್ರಿವಿಕ್ರಮ್.‌

ಉಗ್ರಂ ಮಂಜು ಪ್ರತಿಕ್ರಿಯೆ

ಇದೇ ವಿಡಿಯೋ ಕ್ಲಿಪ್‌ಗೆ ಮಂಜು ಅವರಿಂದಲೂ ಪ್ರತಿಕ್ರಿಯೆ ಪಡೆದುಕೊಂಡರು ಸುದೀಪ್.‌ "ನಮ್ಮ ನಡುವೆಯೇ ಎರಡು ಗುಂಪು ಆಗಿದೆ ಎಂದು ಅನಿಸಿತು. ನಾಮಿನೇಷನ್‌ನಲ್ಲಿ ಇನ್ನೊಂದು ಗುಂಪಿನಿಂದ ಸೇಫ್ ಮಾಡಿಕೊಂಡು ಇನ್ನೊಂದು ವಾರ ಕಳೀಬಹುದು ಅನ್ನೋ ಥರ ಬಚಾವ್ ಆಗ್ತಿದ್ದಾರೆ. ನಾವು ಒದ್ದಾಡಿಕೊಂಡು, ಗುದ್ದಾಡಿಕೊಂಡು ಆಡ್ತೀವಿ. ಟಾಸ್ಕ್ ಆಡಿದ ಮೇಲೆ, ನಾವು ಆಡ್ತಿರ್ಲಿಲ್ವಾ ಎಂಬ ಮಾತು ಬರುತ್ತದೆ. ಹಾಗಾಗಿ ನಾವಿಬ್ಬರು ಮಾತನಾಡಿಕೊಂಡ್ವಿ. ನಾವಿಬ್ಬರೂ ಒಂದಾಗಿದ್ದೀವಿ ಅನ್ನೋದು ಮನೆಯವರಿಗೂ ಗೊತ್ತಾಗಿದೆ. ಈಗ ಇನ್ನೂ ಕ್ಲಾರಿಟಿ ಸಿಕ್ಕಿದೆ’’ ಎಂದಿದ್ದಾರೆ ಉಗ್ರಂ ಮಂಜು.

Whats_app_banner