ವ್ಯಕ್ತಿತ್ವದಾಟದಲ್ಲಿ ಒಳ್ಳೆಯ ವ್ಯಕ್ತಿತ್ವಕ್ಕೆ ಸಿಗದ ಜಯ; ಬಿಗ್ ಕುರುಕ್ಷೇತ್ರದಲ್ಲಿ ಆಟ ಮುಗಿಸಿದ ಧರ್ಮರಾಯ, ವೀಕ್ಷಕರ ಬೇಸರ
ಬಿಗ್ ಬಾಸ್ ಮನೆಯಿಂದ ಈ ವಾರ ಒಟ್ಟು ಏಳು ಮಂದಿ ನಾಮಿನೇಟ್ ಆಗಿದ್ದರು. ಚೈತ್ರಾ ಕುಂದಾಪುರ, ಉಗ್ರಂ ಮಂಜು, ತ್ರಿವಿಕ್ರಮ್, ಮೋಕ್ಷಿತಾ ಪೈ, ಧರ್ಮ ಕೀರ್ತಿರಾಜ್, ಗೌತಮಿ ಜಾಧವ್ ಮತ್ತು ಹನಮಂತು. ಈ ಏಳು ಜನರ ಪೈಕಿ, ಕೊನೇ ಹಂತಕ್ಕೆ ಬಂದವರು ಚೈತ್ರಾ ಮತ್ತು ಧರ್ಮ ಕೀರ್ತಿರಾಜ್. ಈ ಇಬ್ಬರಲ್ಲಿ ಧರ್ಮ ಅವರೇ ಬಿಗ್ ಕುರುಕ್ಷೇತ್ರದಿಂದ ಹಿಂದೆ ಸರಿಯಬೇಕಾಯಿತು.
Bigg Boss Kannada 11: ಬಿಗ್‌ಬಾಸ್‌ನಿಂದ ಹೊರಬಂದು, ಕಿಚ್ಚನ ವೇದಿಕೆ ಏರುತ್ತಿದ್ದಂತೆ, ಧರ್ಮ ಕೀರ್ತಿರಾಜ್ ಅವರ 50 ಪ್ಲಸ್ ದಿನದ ವಿಡಿಯೋ ಜರ್ನಿಯನ್ನು ದೊಡ್ಡ ಪರದೆ ಮೇಲೆ ಪ್ಲೇ ಮಾಡಲಾಯಿತು. ಅದು ಮುಗಿದ ಬಳಿಕ, ನೈಸ್ ಒಳ್ಳೆಯ ಕ್ಷಣಗಳ ಗುಚ್ಛ ಎಂದರು ಧರ್ಮ. ಅದಕ್ಕೆ ಉತ್ತರವಾಗಿ, ನೀವು ತುಂಬ ಒಳ್ಳೆಯವರು, ಅದಕ್ಕಾಗಿಯೇ ವಿಟಿ ಸಹ ಒಳ್ಳೆಯ ರೀತಿಯಲ್ಲಿಯೇ ಬಂದಿದೆ. ನೀವು ಮಾತನಾಡಬೇಕು, ಇನ್ನಾದರೂ ಎಲ್ಲದಕ್ಕೂ ಪ್ರತಿಕ್ರಿಯಿಸಬೇಕು ಎಂದೂ ಸುದೀಪ್, ಧರ್ಮ ಅವರಿಗೆ ಪ್ರೀತಿಯ ಸಲಹೆ ನೀಡಿ, ವೇದಿಕೆಯಿಂದ ಬೀಳ್ಕೊಟ್ಟರು. ಇತ್ತ ಬಿಗ್ ಬಾಸ್ ಅನ್ನೋ ಈ ವ್ಯಕ್ತಿತ್ವದ ಆಟದಲ್ಲಿ, ಒಳ್ಳೆಯ ವ್ಯಕ್ತಿತ್ವದ ಧರ್ಮ, ಇಷ್ಟು ಬೇಗ ಮನೆಯಿಂದ ಹೊರನಡೆದಿದ್ದಕ್ಕೆ ಅವರ ಫ್ಯಾನ್ಸ್ ಸಹ ಕೊಂಚ ಬೇಸರದಲ್ಲಿದ್ದಾರೆ.
ಏಳು ಜನರ ಪೈಕಿ ಧರ್ಮ ಔಟ್
ಈ ವಾರ ಬಿಗ್ ಬಾಸ್ ಮನೆಯಿಂದ ಒಟ್ಟು ಏಳು ಮಂದಿ ನಾಮಿನೇಟ್ ಆಗಿದ್ದರು. ಚೈತ್ರಾ ಕುಂದಾಪುರ, ಉಗ್ರಂ ಮಂಜು, ತ್ರಿವಿಕ್ರಮ್, ಮೋಕ್ಷಿತಾ ಪೈ, ಧರ್ಮ ಕೀರ್ತಿರಾಜ್, ಗೌತಮಿ ಜಾಧವ್ ಮತ್ತು ಹನಮಂತು. ಈ ಏಳು ಜನರ ಪೈಕಿ, ಕೊನೇ ಹಂತಕ್ಕೆ ಬಂದವರು ಚೈತ್ರಾ ಕುಂದಾಪುರ ಮತ್ತು ಧರ್ಮ ಕೀರ್ತಿರಾಜ್. ಈ ಇಬ್ಬರಲ್ಲಿ ಧರ್ಮ ಅವರೇ ಬಿಗ್ ಕುರುಕ್ಷೇತ್ರದಿಂದ ಹಿಂದೆ ಸರಿಯಬೇಕಾಯಿತು. ಮನೆಯಲ್ಲಿ ವೈಲೆಂಟ್ ಆಗದೇ ಇರುವುದು, ಹೆಚ್ಚು ಮಾತನಾಡದೇ ಇರುವುದೇ ಇವರ ಎಲಿಮಿನೇಷನ್‌ಗೆ ಕಾರಣ ಎಂಬುದು ಮನೆ ಮಂದಿಯ ಜತೆಗೆ ಕಿಚ್ಚನ ಓಪಿನಿಯನ್ ಕೂಡ ಆಗಿತ್ತು.
ವೀಕ್ಷಕರ ವಲಯದಿಂದ ಬೇಸರ
ಕಳೆದ ಎರಡು ವಾರಗಳ ಹಿಂದೆ ಮನೆ ಮಂದಿಯೆಲ್ಲ ಸೇರಿ ಧರ್ಮ ಕೀರ್ತಿರಾಜ್‌ಗೆ ನಾಲಾಯಕ್ ಎಂಬ ಹಣೆಪಟ್ಟಿ ಕೊಟ್ಟಿದ್ದರು. ಆವತ್ತೇ ಶೋನಿಂದ ಹೊರಹೋಗುವ ನಿರ್ಧಾರಕ್ಕೆ ಬಂದಿದ್ದರು ಧರ್ಮ. ಜತೆಗೆ ಮನೆಯಲ್ಲಿ ಏನೇ ಗಲಾಟೆ, ಕಿತ್ತಾಟ, ಕೂಗಾಟ ನಡೆದರೂ ಅಲ್ಲಿ ಅವರ ಉಪಸ್ಥಿತಿ ಇರುತ್ತಿರಲಿಲ್ಲ. ಕೊಟ್ಟ ಕೆಲಸ, ಬಿಗ್ ಬಾಸ್ ನೀಡಿದ ಟಾಸ್ಕ್, ಆಪ್ತರ ಜತೆ ಮಾತು ಇದಷ್ಟನ್ನು ಬಿಟ್ಟರೆ ಅವರ ಆ ಆಟದ ಅಗ್ರೆಷನ್ ಎಲ್ಲಿಯೂ ಕಂಡಿರಲಿಲ್ಲ. ಹೀಗಾಗಿ ವೀಕ್ಷಕ ವಲಯದಿಂದಲೂ ಈ ವಾರ ಧರ್ಮ ಅವರೇ ಹೊರಹೋಗಲಿದ್ದಾರೆ ಎಂದೇ ಎಲ್ಲರೂ ಊಹಿಸಿದ್ದರು. ಕೊನೆಗೆ ಅದೇ ನಡೆದಿದೆ.
ಸೋಷಿಯಲ್ ಮೀಡಿಯಾದಲ್ಲಿ ಹೇಗಿದೆ ಪ್ರತಿಕ್ರಿಯೆ
- ವ್ಯಕ್ತಿತ್ವದ ಆಟದಲ್ಲಿ ನಮ್ಮ ಧರ್ಮನಿಗೆ ಜಯ ಸಿಗಬೇಕಿತ್ತು
- ಟ್ರೋಫಿಗಾಗಿ ತನ್ನ ನಿಜವಾದ ವ್ಯಕ್ತಿತ್ವವನ್ನೂ ಬದಲಾಯಿಸ್ಕೊಳ್ಳದೆ ಆಡಿದ ಏಕೈಕ ಸ್ಪರ್ಧಿ ಧರ್ಮ.. ಅವರು ಬಿಗ್ ಬಾಸ್ ಟ್ರೋಫಿ ಗೆಲ್ಲದೆ ಹೋದರೂ ಜನರ ಮನಸ್ಸು ಗೆದ್ದಿದ್ದಾರೆ
- ಬಿಗ್ ಬಾಸ್ 11 ನಡೆಯುತ್ತಿದೆ ಆದರೆ ಈ ರೀತಿ ವ್ಯಕ್ತಿತ್ವ ನೋಡಿದ್ದು ಇವರೊಬ್ಬರೇ. ಬಿಗ್‌ಬಾಸ್‌ನಲ್ಲಿ ಯಾರ ಬಗ್ಗೆನೂ, ಯಾರ ಜೊತೆಯೂ, ಕೆಟ್ಟದಾಗಿ ಮಾತನಾಡದ ಮನುಷ್ಯ, ಒಳ್ಳೆಯ ವ್ಯಕ್ತಿತ್ವ. ಅದಕ್ಕೆ ಇದೂವರೆಗೂ ಸೋಷಿಯಲ್ ಮೀಡಿಯಾದಲ್ಲಿಒಂದು ಕೆಟ್ಟ ಪೋಸ್ಟ್ ಬಂದಿಲ್ಲ, ಗೊತ್ತಾಯ್ತ ಒಳ್ಳೆಯತನಕ್ಕೆ ಇರುವ ಬೆಲೆ.
- ಇಡೀ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ವ್ಯಕ್ತಿತ್ವದಲ್ಲಿ ಟ್ರೋಫಿ ಗೆದ್ದವರು ನೀವು ಮತ್ತೆ ಅನುಷಾ
- ವೋಟಿಂಗ್ ಪ್ರಕಾರ ನೋಡುವುದಾದರೆ ಗೌತಮಿ ಮತ್ತು ಚೈತ್ರಗೆ ಕಡಿಮೆ ವೋಟ್ ಬಂದಿದೆ.... ಧರ್ಮ ಅವರಿಬ್ಬರಿಗಿಂತ ಮುಂದೆ ಇದ್ದರು... ಯಾವುದು ವೋಟಿಂಗ್ ಪ್ರಕಾರ ನಡೆಯಲ್ಲ
- ಯಾರು ಹೋಗಬೇಕು ಎಂದು ಕೇಳಿದಾಗ ಐಶ್ವರ್ಯ, ಧರ್ಮ ಎಂದು ಹೇಳಿ, ಈಗ ಏನು ಗೊತ್ತಿಲ್ಲದ ಹಾಗೆ ಅಳುತಿದ್ದಾಳೆ. ಐಶ್ವರ್ಯಗೋಸ್ಕರ ಧರ್ಮ ನಾಮಿನೇಟ್ ಆದ. ಅದರ ಕೃತಜ್ಞತೆ ಕೂಡ ಇವಳಿಗಿಲ್ಲ.
- ವ್ಯಕ್ತಿತ್ವ ಬದಲಾಯಿಸದೆ ತಾವು ಹೇಗೆ ಇದ್ದಿರೋ ಹಾಗೆ ಬಿಗ್ ಬಾಸ್ ಮನೆಯಲ್ಲಿ ಇದ್ದು ಎಲ್ಲರ ಮನಸ್ಸು ಗೆದ್ದಿದ್ದೀರಿ..
- ಧರ್ಮ ಅವರ ಬಿಗ್ ಬಾಸ್ ಜರ್ನಿ ವಿಡಿಯೋ ನೋಡಿದ್ರಾ ಅದರಲ್ಲಿ ಒಂದು ಕೂಡ ಅವರ ಬಗ್ಗೆ ನೆಗೆಟಿವ್ ಮಾತು ಇಲ್ಲ. ಜಗಳ ಇಲ್ಲ. ಪ್ರತಿಯೊಬ್ಬರೂ ಕೂಡ ಧರ್ಮ ಬಗ್ಗೆ ಒಳ್ಳೆಯದನ್ನೇ ಮಾತಾಡಿದ್ದಾರೆ. ಹೊರಗಡೆ ಅಭಿಮಾನಿಗಳು ಕೂಡ ತುಂಬಾ ಸಪೋರ್ಟ್ ಮಾಡಿದ್ದಾರೆ ಆದರೂ ಕೂಡ ಧರ್ಮ ಎಲಿಮಿನೇಟ್ ಆಗತಾರೆ ಅಂದ್ರೆ ನಂಬಲಾಗುತ್ತಿಲ್ಲ..
- ಚಿನ್ನಕ್ಕೆ ಬೆಲೆ ಕಟ್ಟಲು ಆಗುತ್ತೆಯೇ? ಅದೇ ರೀತಿ ನಮ್ಮ ಧರ್ಮ.. ಬಿಗ್ಬಾಸ್ ಶೋಗೆ ಧರ್ಮ ಅಂತಹ ಚಿನ್ನವನ್ನು ಇಟ್ಟುಕೊಳ್ಳೋ ಯೋಗ್ಯತೆ ಇಲ್ಲ ಅಷ್ಟೇ
- ತುಂಬಾ ಅಳು ಬಂತು ಧರ್ಮ ಹೋಗಿದ್ದು ವೋಟ್ ಪ್ರಕಾರ ಇವರು ಕಳಿಸಿಲ್ಲ, ಅವರಿಗೆ ಇಷ್ಟ ಆದೋರನ್ನ ಇಟ್ಕೊಂಡು, ಧರ್ಮನಾ ಆಚೆ ಕಳ್ಸಿದಾರೆ.. ಹಾಗಾದರೆ ನಮ್ಮ ವೋಟ್ ಗೆ ಬೆಲೆ ಇಲ್ವಾ