Bigg Boss Kannada 11: ಹಾಫ್ ಸೆಂಚುರಿ ಬಾರಿಸಿದ ಬಿಗ್ ಬಾಸ್ ಸ್ಪರ್ಧಿಗಳು; 50 ದಿನಗಳಲ್ಲಿ ಆಗಿದ್ದೇನು, ಸೃಷ್ಟಿಯಾದ ವಿವಾದಗಳೇನು?
Nov 21, 2024 12:52 PM IST
ಹಾಫ್ ಸೆಂಚುರಿ ಬಾರಿಸಿದ ಬಿಗ್ ಬಾಸ್ ಸ್ಪರ್ಧಿಗಳು
- ಬಿಗ್ ಬಾಸ್ ಸೀಸನ್ 11: 50 ದಿನಗಳನ್ನು ಪೂರೈಸಿದೆ. ಇಷ್ಟು ದಿನಗಳಲ್ಲಿ ನಾನಾ ರೀತಿಯ ಬದಲಾವಣೆಗಳು ಹಾಗೂ ಎಷ್ಟೋ ವಿವಾದಗಳು ನಡೆದಿದೆ. ಜನರು ನೋಡಿ ಖುಷಿ ಪಟ್ಟದ್ದೂ ಇದೆ. ಬಿಗ್ ಬಾಸ್ ಶೋಗೆ ಬೈದದ್ದೂ ಇದೆ. 50 ದಿನಗಳ ಹೈಲೈಟ್ಸ್ ಇಲ್ಲಿದೆ.
ಈ ಬಾರಿ ಬಿಗ್ ಬಾಸ್ ಆರಂಭವಾದಾಗ ಒಟ್ಟು 17 ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಹೋಗಿದ್ದರು. ಅದರಲ್ಲಿ ಈಗ ಕೆಲವರು ಎಲಿಮಿನೇಟ್ ಆಗಿ ಮನೆಗೆ ಹೋದರೆ. ಇನ್ನೊಂದಿಬ್ಬರನ್ನು ಬಿಗ್ ಬಾಸ್ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಸ್ಪರ್ಧೆಯಿಂದ ಹೊರಹಾಕಲಾಗಿದೆ. 50 ದಿನಗಳಲ್ಲಿ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಬದಲಾವಣೆ ಹಾಗೂ ಬೆಳವಣಿಗೆಗಳಾಗಿದೆ ಆ ಕುರಿತು ಕೆಲವು ಮಾಹಿತಿಗಳು ಇಲ್ಲಿದೆ ಗಮನಿಸಿ.
ಮೊದಲ ಎಲಿಮಿನೇಷನ್ ಯಮುನಾ: ಬಿಗ್ ಬಾಸ್ ಆರಂಭವಾದಾಗ ಮೊದಲು ಎಲಿಮಿನೇಟ್ ಆಗಿದ್ದು ಯಮುನಾ. ಇವರು ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಹಲವು ಕಡೆ ಸಂದರ್ಶನ ನೀಡಿದ್ದಾರೆ. ನಾನೊಬ್ಬ ಖಡಕ್ ಸ್ಪರ್ಧಿ ಆದರೂ ಮೊದಲ ವಾರದಲ್ಲೇ ಹೊರ ಬರುವಂತಾಯಿತು ಎಂದು ಹೇಳಿದ್ದಾರೆ.
ಲಾಯರ್ ಜಗದೀಶ್ ಎಲಿಮಿನೇಷನ್: ಲಾಯರ್ ಜಗದೀಶ್ ಮನೆಯೊಳಗಡೆ ಹೋದಾಗಿನಿಂದಲೂ ಒಬ್ಬೊರನ್ನು ಕೆಣಕುತ್ತಲೇ ಇದ್ದರು. ಮಹಿಳಾ ಸ್ಪರ್ಧಿಗಳ ವಿರುದ್ಧ ಮಾತನಾಡಿದ ಕಾರಣ ಅವರನ್ನು ಮನೆಯಿಂದ ಆಚೆ ಹಾಕಲಾಗಿದೆ.
ಬಿಗ್ ಬಾಸ್ ಮನೆಯಿಂದ ರಂಜಿತ್ ಔಟ್: ಬಿಗ್ ಬಾಸ್ ಮನೆಯಲ್ಲಿ ಲಾಯರ್ ಜಗದೀಶ್ ಹಾಗೂ ರಂಜಿತ್ ಇಬ್ಬರನ್ನೂ ಒಂದೇ ವಾರದಲ್ಲಿ ಮನೆಯಿಂದ ಹೊರಗಡೆ ಕಳಿಸಿದ್ದಾರೆ. ದೈಹಿಕ ಹಲ್ಲೆ ಮಾಡಿದ ಆರೋಪದ ಮೇಲೆ ರಂಜಿತ್ ಅವರನ್ನು ಬಿಗ್ ಬಾಸ್‌ನಿಂದ ಆಚೆ ಕಳಿಸಲಾಯಿತು.
ನಿರೂಪಣೆಗೆ ಬಾರದ ಕಿಚ್ಚ ಸುದೀಪ್: ಕಿಚ್ಚ ಸುದೀಪ್ ಅವರು ಮಾತೃವಿಯೋಗದ ನೋವಿನಿಂದ ಆ ಸಂದರ್ಭದಲ್ಲಿ ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆ ಮಾಡಲು ಸಾಧ್ಯಾವಾಗಲಿಲ್ಲ. ಆ ಸಮಯದಲ್ಲಿ ವಾರಾಂತ್ಯಕ್ಕೆ ಬೇರೆ ಪ್ಲ್ಯಾನ್ ಮಾಡಲಾಗಿತ್ತು.
ಬಿಗ್ ಬಾಸ್ ಮನೆಯಲ್ಲಿ ಯೋಗರಾಜ್ ಭಟ್: ಬಿಗ್ ಬಾಸ್ ಮನೆಯ ಒಂದು ವಾರಾಂತ್ಯದಲ್ಲಿ ಶನಿವಾರ ಯೋಗರಾಜ್ ಭಟ್ ಅವರು ಬಂದು ಪಂಚಾಯ್ತಿ ನಡೆಸಿ, ಸುದೀಪ್ ಅವರ ತಾಯಿ ತೀರಿಹೋದ ವಿಚಾರವನ್ನು ಹಂಚಿಕೊಂಡಿದ್ದರು.
ಪಂಚಾಯ್ತಿ ನಡೆಸಿಕೊಟ್ಟ ಸೃಜನ್ ಲೋಕೇಶ್: ಬಿಗ್ ಬಾಸ್ ಮನೆಯಲ್ಲಿ ರವಿವಾರದಂದು ನಡೆಯುವ ಪಂಚಾಯ್ತಿಯನ್ನು ಒಂದು ವಾರ ಸೃಜನ್ ಲೋಕೇಶ್ ಅವರು ಸುದೀಪ್ ಅವರ ಅನುಪಸ್ಥಿತಿಯಲ್ಲಿ ನಡೆಸಿಕೊಟ್ಟಿದ್ದರು.
ಇದನ್ನೂ ಓದಿ: Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ರಜತ್ ರಂಪಾಟ; ಗೋಲ್ಡ್ ಸುರೇಶ್‌ಗೆ ಬೈದು ಬೀಪ್ ಹಾಕಿಸಿಕೊಂಡ ಹೊಸ ಸ್ಪರ್ಧಿ
ಬಿಗ್ ಬಾಸ್ ಮನೆಯಲ್ಲಿ ರಾಜಕೀಯದಾಟ: ಬಿಗ್ ಬಾಸ್ ಮನೆಯಲ್ಲಿ ಒಟ್ಟು ಎರಡು ರಾಜಕೀಯ ಪಕ್ಷಗಳನ್ನು ಮಾಡಲಾಗಿತ್ತು. ನಂತರ ಓಟಿಂಗ್ ನಡೆಸಿಕೊಡಲು ವೀಕ್ಚಕರನ್ನೇ ಬಿಗ್ ಬಾಸ್ ಮನೆಯೊಳಗಡೆ ಕಳಿಸಿಕೊಡಲಾಗಿತ್ತು.
ಬಿಗ್ ಬಾಸ್ ಸ್ಪರ್ಧಿಗಳಿಗೆ ಮನೆಯಿಂದ ಬಂತು ಲೆಟರ್: ಬಿಗ್ ಬಾಸ್ ಬೇರೆ ಸೀಸನ್‌ಗಳಲ್ಲಿ ಸ್ಪರ್ಧಿಗಳಿಗೆ ತಡವಾಗಿ ಮನೆಯಿಂದ ಪತ್ರ ಬರುತ್ತಿತ್ತು. ಆದರೆ ಈ ಬಾರಿ ಸ್ಪರ್ಧಿಗಳಿಗೆ ಬಹಳ ಬೇಗ ಪತ್ರ ನೀಡಲಾಗಿದೆ. ಧನರಾಜ್ ತಮ್ಮ ಮಗುವಿನ ಧ್ವನಿ ಕೇಳಿ ಅತ್ತಿದ್ದಾರೆ.
ತನಗೆ ತಾನೇ ಪೂಜೆ ಮಾಡಿಕೊಂಡ ಚೈತ್ರಾ ಕುಂದಾಪುರ: ಚೈತ್ರಾ ಕುಂದಾಪುರ ಅವರು ತಮಗೆ ತಾವೇ ಪೂಜೆ ಮಾಡಿಕೊಂಡ ಸುದ್ದಿಯೊಂದು ಸಖತ್ ಟ್ರೋಲ್ ಆಗಿತ್ತು. ಆದರೆ ನಂತರದಲ್ಲಿ ಅವರು ಅದು ತನಗೆ ತಾನು ದೃಷ್ಟಿ ತೆಗೆದುಕೊಂಡಿರುವುದು ಎಂದು ಸ್ಪಷ್ಟನೆ ನೀಡಿದ್ದಾರೆ.
ಅಧಿಕ ಟಿಆರ್ ಪಿ: ಈ ಬಾರಿ ಕಳೆದೆಲ್ಲ ಬಾರಿಗಿಂತ ಹೆಚ್ಚಿನ ಟಿಆರ್‌ಪಿ ದಾಖಲಾಗಿತ್ತು. 9.9 ಟಿಆರ್‌ಪಿ ಪಡೆದುಕೊಂಡು ಕಳೆದ ಎಲ್ಲಾ ದಾಖಲೆಗಳನ್ನು ಮುರಿದಿತ್ತು
ಹನುಮಂತ ಎಂಟ್ರಿ: ಬಿಗ್ ಬಾಸ್ ಮನೆಯಿಂದ ಜಗದೀಶ್ ಹೋದ ನಂತರದಲ್ಲಿ ಟಿಆರ್‌ಪಿ ಕುಸಿತ ಕಂಡಿತ್ತು. ಅದಾದ ನಂತರದಲ್ಲಿ ಹನುಮಂತನನ್ನು ಬಿಗ್ ಬಾಸ್ ಮನೆಗೆ ಕರೆಸಲಾಯಿತು. ಹನುಮಂತ ಬಿಗ್ ಬಾಸ್ ಮನೆಗೆ ಬಂದಾಗಿನಿಂದಲೂ ಜನರ ಆಸಕ್ತಿ ಹೆಚ್ಚಾಗಿದೆ.
ಟಾಸ್ಕ್‌ನಲ್ಲಿ ಕಿತ್ತಾಟ: ಪ್ರತಿ ಬಾರಿ ಇರುವಂತೆ ಈ ಬಾರಿಯೂ ಟಾಸ್ಕ್‌ನಲ್ಲಿ ಕಿತ್ತಾಟಗಳಿತ್ತು. ಮೋಕ್ಷಿತಾ, ಉಗ್ರಂ ಮಂಜು, ಗೌತಮಿ ಗುಂಪಿನ ಬಗ್ಗೆ ಚರ್ಚೆ ಕೂಡ ಆಗಿತ್ತು
ಧರ್ಮ, ಅನುಷಾ, ಐಶ್ವರ್ಯ ಕಹಾನಿ: ಈ ಮೂರು ಜನರ ನಡುವೆ ಟ್ರೈಯಾಂಗಲ್ ಲವ್ ಸ್ಟೋರಿ ಬೆಳೆದಿತ್ತು. ಅನಷಾ ಹಾಗೂ ಧರ್ಮ ಈ ಹಿಂದಿನಿಂದಲೇ ಸ್ನೇಹಿತರಾಗಿದ್ದರು ಎಂದು ಸುದ್ದಿ ಹಬ್ಬಿತ್ತು.
ವೈಲ್ಡ್ ಕಾರ್ಡ್ ಸ್ಪರ್ಧಿಗಳು: ಶೋಭಾ ಶೆಟ್ಟಿ ಹಾಗೂ ರಜತ್ ಈ ಎರುಡ ಸ್ಪರ್ಧಿಗಳು ಈಗ ಮೆನೆಗೆ ಎಂಟ್ರಿಕೊಟ್ಟಿದ್ದಾರೆ. ಆಟ ಈಗ ಇನ್ನೊಂದು ರೀತಿಯಲ್ಲಿ ತೆರೆದುಕೊಳ್ಳುತ್ತಿದೆ
ಇದುವರೆಗೆ ಎಲಿಮಿನೇಟ್ ಆಗಿರುವ ಸ್ಪರ್ಧಿಗಳು - ಯಮುನಾ, ಜಗದೀಶ್, ರಂಜಿತ್, ಹಂಸ, ಮಾನಸಾ, ಅನುಷಾ. ಈ ಐವತ್ತು ದಿನಗಳಲ್ಲಿ ಎಷ್ಟು ಬೆಳವಣಿಗೆಗಳಾಗಿದೆಯೋ ಇದರ ಎರಡು ಪಟ್ಟು ಆಟದ ಮಜ ಹೆಚ್ಚುವುದು ಇನ್ನುಳಿದ 50 ದಿನಗಳಲ್ಲಿ.