logo
ಕನ್ನಡ ಸುದ್ದಿ  /  ಮನರಂಜನೆ  /  ಚಾನೆಲ್ ಹಾಗೂ ನನ್ನ ನಡುವೆ ಯಾವುದೇ ಘರ್ಷಣೆ ಆಗಿಲ್ಲ; ಎಕ್ಸ್ ಮೂಲಕ ಪ್ರತಿಕ್ರಿಯೆ ನೀಡಿದ ನಟ ಕಿಚ್ಚ ಸುದೀಪ್

ಚಾನೆಲ್ ಹಾಗೂ ನನ್ನ ನಡುವೆ ಯಾವುದೇ ಘರ್ಷಣೆ ಆಗಿಲ್ಲ; ಎಕ್ಸ್ ಮೂಲಕ ಪ್ರತಿಕ್ರಿಯೆ ನೀಡಿದ ನಟ ಕಿಚ್ಚ ಸುದೀಪ್

Suma Gaonkar HT Kannada

Oct 15, 2024 01:45 PM IST

google News

ಎಕ್ಸ್ ಮೂಲಕ ಪ್ರತಿಕ್ರಿಯೆ ನೀಡಿದ ನಟ ಕಿಚ್ಚ ಸುದೀಪ್

    • ಕಿಚ್ಚ ಸುದೀಪ್ ಬಿಗ್‌ ಬಾಸ್‌ ನಿರೂಪಣೆಯನ್ನು ಮುಂದಿನ ಸೀಸನ್‌ನಿಂದ ಮಾಡೋದಿಲ್ಲ ಎಂದು ಎಕ್ಸ್‌ನಲ್ಲಿ ಸ್ವತಃ ತಿಳಿಸಿದ್ದರು. ಹೀಗಿರುವಾಗ ಅವರು ಹನ್ನೊಂದು ಸೀಸನ್‌ವರೆಗೂ ನಿರೂಪಣೆ ಮಾಡಿ ಈಗ ಯಾಕೆ ನಿಲ್ಲಿಸುತ್ತಿದ್ದಾರೆ? ಅವರಿಗೆ ಅವಮಾನ ಆಗಿದೆ ಎಂದೆಲ್ಲ ಪೋಸ್ಟ್‌ಗಳು ಹರಿದಾಡುತ್ತಿತ್ತು. 
ಎಕ್ಸ್ ಮೂಲಕ ಪ್ರತಿಕ್ರಿಯೆ ನೀಡಿದ ನಟ ಕಿಚ್ಚ ಸುದೀಪ್
ಎಕ್ಸ್ ಮೂಲಕ ಪ್ರತಿಕ್ರಿಯೆ ನೀಡಿದ ನಟ ಕಿಚ್ಚ ಸುದೀಪ್

ಕಿಚ್ಚ ಸುದೀಪ್ ಬಿಗ್‌ ಬಾಸ್‌ ನಿರೂಪಣೆಯನ್ನು ಮುಂದಿನ ಸೀಸನ್‌ನಿಂದ ಮಾಡೋದಿಲ್ಲ ಎಂದು ಎಕ್ಸ್‌ನಲ್ಲಿ ಸ್ವತಃ ತಿಳಿಸಿದ್ದರು. ಹೀಗಿರುವಾಗ ಅವರು ಹನ್ನೊಂದು ಸೀಸನ್‌ವರೆಗೂ ನಿರೂಪಣೆ ಮಾಡಿ ಈಗ ಯಾಕೆ ನಿಲ್ಲಿಸುತ್ತಿದ್ದಾರೆ. ಇದಕ್ಕೆ ಕಾರಣ ಅವರಿಗೆ ಅವಮಾನ ಆಗಿದೆ ಎಂದು ಹಲವಾರು ಪೋಸ್ಟ್‌ ಹರಿದಾಡುತ್ತಿತ್ತು. ಆದರೆ ಈ ಬಗ್ಗೆ ಮತ್ತೆ ಇದೀಗ ಕಿಚ್ಚ ಸುದೀಪ್‌ ಅವರು ಸ್ಪಷ್ಟನೆ ನೀಡಿದ್ದಾರೆ. ತಾನು ಯಾಕೆ ಬಿಗ್‌ ಬಾಸ್‌ ನಿರೂಪಣೆ ಮಾಡುತ್ತಿಲ್ಲ ಎಂಬುದನ್ನು ತಿಳಿಸಿಲ್ಲ. ಆದರೆ ಯಾವುದೇ ಅವಮಾನ ಆಗಿಲ್ಲ ಎಂಬುದನ್ನು ಅವರು ಇಲ್ಲಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆಧಾರವಿಲ್ಲದೆ ಹರಿದಾಡುತ್ತಿರುವ ಪೋಸ್ಟ್‌ಗಳೆಲ್ಲ ಸುಳ್ಳು ಎಂದು ಹೇಳಿದ್ದಾರೆ. ಈ ಮೂಲಕ ಅವರು ಕಲರ್ಸ್‌ ಹಾಗೂ ತಮ್ಮ ಅನುಬಂಧ ಹೇಗಿದೆ ಎಂಬುದನ್ನೂ ತಿಳಿಸಿದ್ದಾರೆ.

ಹಾಗಾದ್ರೆ ಕಿಚ್ಚ ಸುದೀಪ್ ಹೇಳಿದ್ದೇನು?

ಅವರು ಎಕ್ಸ್‌ನಲ್ಲಿ ನೀಡಿರುವ ಪ್ರತಿಕ್ರಿಯ ಪ್ರಕಾರ ನನ್ನ ನಿರ್ಧಾರದ ನಂತರ ನೀವು ತೋರಿಸಿದ ಪ್ರೀತಿ ಬೆಂಬಲಕ್ಕೆ ಧನ್ಯವಾದ. ಚಾನಲ್ ಹಾಗೂ ನನ್ನ ನಡುವೆ ಯಾವುದೇ ಘರ್ಷಣೆ ಆಗಿಲ್ಲ. ಈ ಬಗ್ಗೆ ಬರ್ತಿರೋ ವೀಡಿಯೋಗಳು ಪ್ರತಿಕ್ರಿಯೆಗಳೆಲ್ಲಾ ಆಧಾರ ರಹಿತ. ನನಗೆ ಅಗೌರವ ಆಗಿದೆ ಎಂಬ ಪದವನ್ನ ಇದಕ್ಕೆ ಸೇರಿಸೋದು ತಪ್ಪು. ಈ ಸಮಸ್ಯೆಯ ಸುತ್ತಲಿನ ಯಾವುದೇ ಊಹೆಗಳು ಆಧಾರ ರಹಿತವಾಗಿದೆ. ಕಲರ್ಸ್ ಜೊತೆಗೆ ನನ್ನ ಬಾಂಧವ್ಯ ಚೆನ್ನಾಗಿದೆ.ನಮ್ಮ ನಡುವೆ ಏನೂ ಆಗಿಲ್ಲ. ಬಿಗ್ ಬಾಸ್ ಡೈರೆಕ್ಟರ್ ಪ್ರಕಾಶ್ ಬಹಳ ಟ್ಯಾಲೆಂಟೇಡ್. ಅವರು ಯಾವಾಗಲೂ ನನ್ನ ಗೌರವದಿಂದ ನಡೆಸಿಕೊಳ್ತಾರೆ. ನಾನು ಅವರ ಬಗ್ಗೆ ತುಂಬಾ ಗೌರವ ಹೊಂದಿದ್ದೇನೆ. ನಾನು ಕೆಲಸ ಮಾಡ್ತಿರೋ ತಂಡದ ಬಗ್ಗೆ ಅನಗತ್ಯ ಆರೋಪಗಳನ್ನ ನಾನು ಸಹಿಸುವುದಿಲ್ಲ. ಹೀಗಾಗಿ ಇದು ನನ್ನ ಪ್ರತಿಕ್ರಿಯೆ ಆಗಿರುತ್ತದೆ ಎಂದು ಸುದೀಪ್ ಸ್ಪಷ್ಟನೆ ನೀಡಿದ್ದಾರೆ.

ಕಿಚ್ಚ ಸುದೀಪ್‌ ನೀಡಿದ ಪ್ರಕ್ರಿಯೆ ಹೀಗಿದೆ

ಈ ಹಿಂದೆ ಏನಾಗಿತ್ತು?
ಸಾಮಾಜಿಕ ಜಾಲತಾಣಗಳಲ್ಲಿ ಕಿಚ್ಚ ಸುದೀಪ್ ಅವರಿಗೆ ಅವಮಾನ ಆಗಿದೆ. ಆ ಕಾರಣಕ್ಕಾಗಿ ಅವರು ತಾನು ಇನ್ನು ಮುಂದಿನ ದಿನಗಳಲ್ಲಿ ನಿರೂಪಣೆ ಮಾಡುವುದಿಲ್ಲ ಎಂದು ಹೇಳಿದ್ದಾರೆ ಎಂಬ ವಿಡಿಯೋಗಳು ಹಾಗೂ ಕೆಲವು ಟ್ರೋಲ್‌ ಪೇಜ್‌ಗಳಲ್ಲಿ ಪೋಸ್ಟ್‌ಗಳು ಹರಿದಾಡುತ್ತಿದ್ದವು. ಆ ಕಾರಣ ಕಿಚ್ಚ ಸುದೀಪ್‌ ಈ ರೀತಿ ಸ್ಪಷ್ಟನೆ ನೀಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ