ಮಾರ್ಟಿನ್ ಓಟಿಟಿ ರಿಲೀಸ್: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಪ್ಯಾನ್ ಇಂಡಿಯಾ ಸಿನಿಮಾವನ್ನು ಆನ್‌ಲೈನ್‌ನಲ್ಲಿ ನೋಡಬಯಸುವಿರಾ?
Martin movie OTT release date: ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಇದೇ ಸಮಯದಲ್ಲಿ ಮಾರ್ಟಿನ್ ಮೂವಿ ಓಟಿಟಿಯಲ್ಲಿ ಯಾವಾಗ ಬಿಡುಗಡೆಯಾಗುತ್ತದೆ? ಯಾವ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಕಾಣಲಿದೆ ಎಂಬ ಕುತೂಹಲ ಓಟಿಟಿ ವೀಕ್ಷಕರಲ್ಲಿ ಕಾಡುತ್ತಿದೆ.
Martin movie OTT release date: ಧ್ರುವ ಸರ್ಜಾ ನಟನೆಯ ಕನ್ನಡ ಸಿನಿಮಾ ಮಾರ್ಟಿನ್ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಕಳೆದ ನಾಲ್ಕು ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಕೋಟ್ಯಾಂತರ ಗಳಿಕೆ ಮಾಡುತ್ತ ಸಾಗುತ್ತಿದೆ. ಮೊದಲ ನಾಲ್ಕು ದಿನ ಸುಮಾರು 16.90 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಸಿನಿಮಾದ ಬಜೆಟ್‌ಗೆ ಹೋಲಿಸಿದರೆ ಆರಂಭಿಕ ಗಳಿಕೆ ನೀರಸ ಎನ್ನಬಹುದು. ಇದೇ ಸಮಯದಲ್ಲಿ ಈ ಸಿನಿಮಾದ ಆನ್‌ಲೈನ್ ಸ್ಟ್ರೀಮಿಂಗ್ ಕುರಿತೂ ಒಟಿಟಿ ಪ್ರೇಕ್ಷಕರಲ್ಲಿ ಕುತೂಹಲವಿದೆ.
ಮಾರ್ಟಿನ್ ಸಿನಿಮಾ ಒಟಿಟಿ ಬಿಡುಗಡೆ ವಿವರ
ಧ್ರುವ ಸರ್ಜಾ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ಕನ್ನಡ ಮಾತ್ರವಲ್ಲದೆ ಬಂಗಾಳಿ, ಹಿಂದಿ, ತಮಿಳು, ತೆಲುಗು, ಕೊರಿಯನ್, ಅರೇಬಿಕ್, ಚೈನೀಸ್, ಸ್ಪ್ಯಾನಿಷ್, ರಷ್ಯನ್, ಜಪಾನೀಸ್, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಲೆಫ್ಟಿನೆಂಟ್ ಬ್ರಿಗೇಡಿಯರ್‌ವೊಬ್ಬರು ತಾನ್ಯಾರು ಎಂಬ ಗೊಂದಲದಲ್ಲಿ ಇರುವುದು, ಭಾರತ ಮತ್ತು ಪಾಕಿಸ್ತಾನದ ನಡುವಿನ ವಿಚಾರಗಳು, ಸಾಹಸಗಳ ಕಥೆಯನ್ನು ಮಾರ್ಟಿನ್ ಹೊಂದಿದೆ. ಈ ವರ್ಷದ ಬ್ಲಾಕ್‌ಬಸ್ಟರ್ ಸಿನಿಮಾವಾಗುವ ನಿರೀಕ್ಷೆ ಇತ್ತು. ಆದರೆ, ಈ ಚಿತ್ರ ಪ್ರೇಕ್ಷಕರ ನಿರೀಕ್ಷೆ ಮುಟ್ಟಿಲ್ಲ ಅನ್ನೋದು ನಿಜ.
ಈ ಚಿತ್ರದಲ್ಲಿ ಧ್ರುವ ಸರ್ಜಾ, ಅನ್ವೇಶಿ ಜೈನ್, ವೈಭವಿ ಶಾಂಡಿಲ್ಯ, ನಾಥನ್ ಜೋನ್ಸ್, ಜಾರ್ಜಿಯಾ ಆಂಡ್ರಿಯಾನಿ, ಆರಾಶ್ ಶಾ, ನಿಕಿತಿನ್ ಧೀರ್, ಚಿಕ್ಕಣ್ಣ ಮತ್ತು ಸುಕೃತಾ ವಾಗ್ಲೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಎಪಿ ಅರ್ಜುನ್ ನಿರ್ದೇಶನದ ಈ ಚಿತ್ರವನ್ನು 100 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ಉದಯ್ ಕೆ ಮೆಹ್ತಾ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಮಾರ್ಟಿನ್ ಸಿನಿಮಾ ಯಾವ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ದೊಡ್ಡ ಬಜೆಟ್‌ನ ಸಿನಿಮಾವಾಗಿರುವುದರಿಂದ ಈ ಸಿನಿಮಾದ ದೇಶ-ವಿದೇಶದ ಮಾರುಕಟ್ಟೆಯ ಹಂಚಿಕೆ, ಟಿವಿ ರೈಟ್ಸ್, ಒಟಿಟಿ ರೈಟ್ಸ್ ಕುರಿತು ಸಾಕಷ್ಟು ಒಪ್ಪಂದಗಳು, ಡೀಲ್‌ಗಳು ನಡೆದಿರುತ್ತವೆ. ವರದಿಗಳ ಪ್ರಕಾರ ಮಾರ್ಟಿನ್ ಸಿನಿಮಾದ ಒಟಿಟಿ ಹಕ್ಕುಗಳನ್ನು ಝೀ5 ಪಡೆದುಕೊಂಡಿದೆ. ಜನಪ್ರಿಯ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 4-6 ವಾರಗಳ ಬಳಿಕ ಆನ್‌ಲೈನ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತವ. ಇದೇ ರೀತಿ, ಮಾರ್ಟಿನ್ ಕೂಡ ಒಂದರಿಂದ ಒಂದೂವರೆ ತಿಂಗಳಲ್ಲಿ ಓಟಿಟಿಯಲ್ಲಿ ಬಿಡುಗಡೆಯಾಗುವ ಸೂಚನೆಯಿದೆ.
ವಾಸವಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಉದಯ್ ಕೆ ಮೆಹ್ತಾ ಅವರು ನಿರ್ಮಿಸಿದ, ಎ.ಪಿ.ಅರ್ಜುನ್ ನಿರ್ದೇಶನದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ನಾಯಕರಾಗಿ ನಟಿಸಿದ ಈ ಚಿತ್ರದ ಆಡಿಯೋ ಹಕ್ಕು ಈಗಾಗಲೇ 9 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಈಗಾಗಲೇ ವಿತರಣೆ ಹಕ್ಕುಗಳಿಂದಲೂ ಒಂದಿಷ್ಟು ಕೋಟಿ ಸಂಗ್ರಹಿಸುವ ಸೂಚನೆಯಿದೆ. ಒಟ್ಟಾರೆ 100 ಕೋಟಿ ರೂಪಾಯಿ ಬಜೆಟ್‌ನ ಚಿತ್ರಕ್ಕೆ ಒಟ್ಟು 100 ಕೋಟಿ ರೂಪಾಯಿ ಸಂಗ್ತಹಿಸುವ ಸವಾಲು ಇದೆ. ಮುಂದಿನ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಹೆಚ್ಚಿನ ಪ್ರೇಕ್ಷಕರನ್ನು ಸೆಳೆದರೆ ಚಿತ್ರದ ಗಳಿಕೆ ಹೆಚ್ಚಬಹುದು. ಈ ವಾರಾಂತ್ಯದಲ್ಲಿ ಪ್ರಮುಖ ಕನ್ನಡ ಸಿನಿಮಾಗಳ ಬಿಡುಗಡೆ ಇಲ್ಲದೆ ಇರುವುದರಿಂದ ಗಳಿಕೆಗೆ ಇನ್ನಷ್ಟು ಅವಕಾಶ ಮಾರ್ಟಿನ್‌ಗಿದೆ.