logo
ಕನ್ನಡ ಸುದ್ದಿ  /  ಮನರಂಜನೆ  /  Bbk 10: ‘ನೀನು ಯಾರಿಗೆ ಚೇಲಾ ಅಂತ ಗೊತ್ತು, ಭಿಕ್ಷೆಯಿಂದ ಕ್ಯಾಪ್ಟನ್‌ ಆದೋನು ನೀನು!’ ಹೋಗೇ, ಹೋಗಲೋ ಎಂದು ಕಿತ್ತಾಡಿಕೊಂಡ ಸಂಗೀತಾ- ಸ್ನೇಹಿತ್‌

BBK 10: ‘ನೀನು ಯಾರಿಗೆ ಚೇಲಾ ಅಂತ ಗೊತ್ತು, ಭಿಕ್ಷೆಯಿಂದ ಕ್ಯಾಪ್ಟನ್‌ ಆದೋನು ನೀನು!’ ಹೋಗೇ, ಹೋಗಲೋ ಎಂದು ಕಿತ್ತಾಡಿಕೊಂಡ ಸಂಗೀತಾ- ಸ್ನೇಹಿತ್‌

Dec 06, 2023 01:23 PM IST

google News

BBK 10: ‘ನೀನು ಯಾರಿಗೆ ಚೇಲಾ ಅಂತ ಗೊತ್ತು, ಭಿಕ್ಷೆಯಿಂದ ಕ್ಯಾಪ್ಟನ್‌ ಆದೋನು ನೀನು!’ ಹೋಗೇ, ಹೋಗಲೋ ಎಂದು ಕಿತ್ತಾಡಿಕೊಂಡ ಸಂಗೀತಾ- ಸ್ನೇಹಿತ್‌

    • ಬಿಗ್‌ ಬಾಸ್‌ ಮನೆಯಲ್ಲೀಗ ಕಿತ್ತಾಟಗಳು ಅತಿರೇಕ ಎನಿಸುತ್ತಿದೆ. ಸಣ್ಣ ಸಣ್ಣ ವಿಚಾರಕ್ಕೂ ಜಗಳಗಳು ನಡೆಯುತ್ತಿವೆ.  ಬಿಗ್‌ಬಾಸ್‌ ಲೋಕ ಟಾಸ್ಕ್‌ ವೇಳೆ ಸಂಗೀತಾ ಮತ್ತು ಸ್ನೇಹಿತ್‌ ನಡುವೆ ದೊಡ್ಡ ಗಲಾಟೆಯೇ ನಡೆದಿದೆ. 
BBK 10: ‘ನೀನು ಯಾರಿಗೆ ಚೇಲಾ ಅಂತ ಗೊತ್ತು, ಭಿಕ್ಷೆಯಿಂದ ಕ್ಯಾಪ್ಟನ್‌ ಆದೋನು ನೀನು!’ ಹೋಗೇ, ಹೋಗಲೋ ಎಂದು ಕಿತ್ತಾಡಿಕೊಂಡ ಸಂಗೀತಾ- ಸ್ನೇಹಿತ್‌
BBK 10: ‘ನೀನು ಯಾರಿಗೆ ಚೇಲಾ ಅಂತ ಗೊತ್ತು, ಭಿಕ್ಷೆಯಿಂದ ಕ್ಯಾಪ್ಟನ್‌ ಆದೋನು ನೀನು!’ ಹೋಗೇ, ಹೋಗಲೋ ಎಂದು ಕಿತ್ತಾಡಿಕೊಂಡ ಸಂಗೀತಾ- ಸ್ನೇಹಿತ್‌

BBK 10: ಬಿಗ್‌ ಬಾಸ್‌ ಮನೆ ಎಂಬುದು ಒಂದು ರೀತಿ ನಿಗಿ ನಿಗಿ ಕೆಂಡ. ಅಲ್ಲಿ ಒಮ್ಮೊಮ್ಮೆ ಮನಸ್ಸುಗಳು ಶಾಂತವಾಗಿದ್ದರೂ, ಮನೆ ಮಾತ್ರ ಸದ್ದು ಗದ್ದಲದಿಂದಲೇ ಕೂಡಿರುತ್ತೆ. ಕಿತ್ತಾಟ, ಜಗಳ, ಮುನಿಸು ಎಲ್ಲವೂ ಅಲ್ಲಿ ಆಗಾಗ ಸುಳಿಯುತ್ತಲೇ ಇರುತ್ತದೆ. ಇದೀಗ ಸಂಗೀತಾ ಮತ್ತು ಸ್ನೇಹಿತ್‌ ನಡುವೆ ದೊಡ್ಡ ಜಗಳವೇ ನಡೆದಿದೆ. ಅದ್ಯಾವ ಮಟ್ಟಿಗೆ ಎಂದರೆ, ಪರಸ್ಪರರು ಹೋಗಲೇ, ಹೋಗಲೋ ಎಂದು ಕೂಗಾಡಿದ್ದಾರೆ. ಮನೆಯ ಕ್ಯಾಪ್ಟನ್‌ ಆಗಿದ್ದ ಸ್ನೇಹಿತ್, ಟಾಸ್ಕ್‌ ವಿಚಾರದಲ್ಲಿ ಸ್ವಂತ ನಿರ್ಣಯಗಳನ್ನು ತೆಗೆದುಕೊಳ್ಳುವಲ್ಲಿ ಎಡುವಿದ್ದೇ ಈ ಜಗಳಕ್ಕೆ ಕಾರಣವಾಗಿದೆ.

ಈ ವಾರ ಸ್ಪರ್ಧಿಗಳಿಗೆ ಬಿಗ್‌ ಬಾಸ್‌ ಲೋಕ ಅನ್ನೋ ವಿಶೇಷ ಟಾಸ್ಕ್‌ ನೀಡಿದ್ದರು ಬಿಗ್‌ಬಾಸ್‌. ಈ ಟಾಸ್ಕ್‌ ಅನುಸಾರ, ಗಂಧರ್ವರು ಮತ್ತು ರಕ್ಕಸರು ಎಂಬ ಎರಡು ಗುಂಪುಗಳನ್ನು ಮಾಡಲಾಗಿತ್ತು. ರಕ್ಕಸರ ಗುಂಪಿನಲ್ಲಿ ಕಾರ್ತಿಕ್, ಸಂಗೀತಾ, ತನಿಷಾ, ಅವಿನಾಶ್‌ ಎಲ್ಲರೂ ಬಗೆಬಗೆಯ ಚೇಷ್ಟೆಗಳಿಂದ ಎದುರಾಳಿ ಗಂಧರ್ವರನ್ನು ಕೆಣಕುತ್ತಿದ್ದರೆ, ಅದೇ ಗಂಧರ್ವರ ಗುಂಪಿನ ವಿನಯ್, ನಮ್ರತಾ, ತುಕಾಲಿ, ಮೈಕಲ್, ಪವಿ ಎಲ್ಲರೂ ಸಿಟ್ಟಿಗೆಳದೇ ಇರಲು ಹರಸಾಹಸ ಪಡುತ್ತಿದ್ದಾರೆ. ಈ ಟಾಸ್ಕ್‌ನ ಸಂಪೂರ್ಣ ಉಸ್ತುವಾರಿಯನ್ನು ಸ್ನೇಹಿತ್‌ಗೆ ನೀಡಲಾಗಿತ್ತು.

ನಿಯಮಾನುಸಾರ ಎಲ್ಲರೂ ಸರಿಯಾಗಿ ಆಟ ಆಡಬೇಕು. ಆದರೆ, ಅದೇ ನಿಯಮದ ಬಗ್ಗೆ ಸಂಗೀತಾ ಮತ್ತು ಸ್ನೇಹಿತ್‌ ನಡುವೆ ದೊಡ್ಡ ಮಾತಿನ ಯುದ್ಧವೇ ನಡೆದೋಯಿತು. ರೂಲ್ಸ್ ಹೇಳೋದು ನನ್ನ ಕೆಲಸ ಎಂದು ಸ್ನೇಹಿತ್‌ ಮಾತನಾಡಿದರೆ, ಮತ್ತೆ ಮತ್ತೆ ಅದೇ ರೂಲ್ಸ್ ಹೇಳುತ್ತಿದ್ದರೆ ನಾವು ಆಡೋದು ಹೆಂಗೆ? ಎಂದು ಸಂಗೀತಾ ಪ್ರಶ್ನಸಿದ್ದಾರೆ. ಏನೇ ಆಗಲಿ ನಾನು ಹೇಳ್ತೀನಿ ಎಂದಿದ್ದಾನೆ ಸ್ನೇಹಿತ್.‌ ಆತನ ಮಾತಿಗೆ ಅದಕ್ಕೆ ಬಯಾಸ್ಡ್ ಕ್ಯಾಪ್ಟನ್ ಅಂತ ಹೇಳೋದು. ಇವರಿಗೂ ಕ್ಯಾಪ್ಟನ್ ಅಂತ ಯಾರಾದರೂ ಹೇಳ್ತಾರಾ? ಎಂದು ಕಾಲೆಳೆದಿದ್ದಾರೆ ಸಂಗೀತಾ.

ಇದಕ್ಕೆ ಪ್ರತಿಯಾಗಿ ನಾನು ನನ್ನ ಶಕ್ತಿ ಮೇಲೆ ಕ್ಯಾಪ್ಟನ್ ಆಗಿರೋದು. ನೀವಲ್ಲ ನನ್ನನ್ನ ಕ್ಯಾಪ್ಟನ್ ಮಾಡಿರೋದು ಎಂದಿದ್ದಾರೆ ಸ್ನೇಹಿತ್.‌ ನಾನು ಕ್ಯಾಪ್ಟನ್‌ ಮಾಡೋದೂ ಇಲ್ಲ ಎಂದ ಸಂಗೀತಾಗೆ, ನೀನೇ ಕ್ಯಾಪ್ಟನ್ ಆಗಿಲ್ಲ. ನನ್ನ ಏನು ಕ್ಯಾಪ್ಟನ್ ಮಾಡ್ತೀಯಾ? ಹೋಗೇಲೇ ಎಂದಿದ್ದಾರೆ ಸ್ನೇಹಿತ್.‌ ಹೋಗೋಲೋ ಎಂದು ಹೇಳಿದ್ದಾರೆ ಸಂಗೀತಾ. ಒಂದು ವಾರ ಆದರೂ ಕ್ಯಾಪ್ಟನ್ ಆಗಿದ್ಯಾ ನೀನು? ಎಂದು ಸಂಗೀತಾಗೆ ಕೌಂಟರ್‌ ನೀಡಿದ್ದಾರೆ ಸ್ನೇಹಿತ್.‌ ನೀನು ಹೇಗೆ ಕ್ಯಾಪ್ಟನ್ ಆಗಿದ್ದೀಯಾ ಅಂತ ಎಲ್ಲರಿಗೂ ಗೊತ್ತು ಎಂದು ಭಿಕ್ಷೆ ಪದ ಪ್ರಯೋಗಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಯಾರು ಭಿಕ್ಷೆ ಹಾಕಿರೋದು? ನಾನು ನನ್ನ ಸಾಮರ್ಥ್ಯದ ಮೇಲೆ ಇಲ್ಲಿ ಕ್ಯಾಪ್ಟನ್ ಆಗಿರೋದು ಎಂದಿದ್ದಾರೆ ಸ್ನೇಹಿತ್‌. ಒಂದು ಹೆಜ್ಜೆ ಮುಂದೆ ಹೋದ ಸಂಗೀತಾ, ನೀನು ಯಾರಿಗೆ ಚೇಲಾ ಅಂತ ಇಲ್ಲಿ ಎಲ್ಲರಿಗೂ ಗೊತ್ತು ಎಂದಿದ್ದಾರೆ. ಇವರಿಬ್ಬರ ಮಾತುಕತೆ ವಿಪರೀತಕ್ಕೆ ಹೋಗಿದೆ. ಕಳೆದ ವಾರ ಹೋಗಬೇಕಾದವನು ಜಾಸ್ತಿ ಮಾತಾಡಬಾರದು ಎಂದಿದ್ದಾರೆ ಸಂಗೀತಾ. ಹಿಂದಿನ ವಾರ ನಾನು ಹೋಗಬೇಕಿತ್ತು ಅಂತ ಡಿಸೈಡ್ ಮಾಡೋಕೆ ನೀನ್ಯಾರು ಎಂದು ಪ್ರಶ್ನಿಸಿದ ಸ್ನೇಹಿತ್‌ಗೆ, ಭಿಕ್ಷೆ ತಗೊಂಡು ಸೇವ್ ಆಗಿರೋದು. ಈಗ ಇಲ್ಲೂ ಚೀಟಿಂಗ್ ಮಾಡೋಕೆ ಬಂದಿರೋದು. ಒಂದ್ಸಲಿ ಅಲ್ಲಿ ಬಕೆಟ್, ಇನ್ನೊಂದು ಬಾರಿ ಇಲ್ಲಿ ಬಕೆಟ್‌ ಇಬ್ಬರೂ ಪರಸ್ಪರ ಕಿತ್ತಾಡಿಕೊಂಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ