logo
ಕನ್ನಡ ಸುದ್ದಿ  /  ಮನರಂಜನೆ  /  Adipurush: ಆದಿಪುರುಷ್‌ ಸಿನಿಮಾ ಬ್ಯಾನ್‌ ಅರ್ಜಿ ವಿಚಾರಣೆ ಜೂನ್‌ 30ಕ್ಕೆ ಮುಂದೂಡಿಕೆ; ದೆಹಲಿ ಹೈಕೋರ್ಟ್‌ ಬುಧವಾರ ಹೇಳಿದ್ದಿಷ್ಟು

Adipurush: ಆದಿಪುರುಷ್‌ ಸಿನಿಮಾ ಬ್ಯಾನ್‌ ಅರ್ಜಿ ವಿಚಾರಣೆ ಜೂನ್‌ 30ಕ್ಕೆ ಮುಂದೂಡಿಕೆ; ದೆಹಲಿ ಹೈಕೋರ್ಟ್‌ ಬುಧವಾರ ಹೇಳಿದ್ದಿಷ್ಟು

Rakshitha Sowmya HT Kannada

Jun 22, 2023 02:25 PM IST

google News

ಆದಿಪುರುಷ್‌ ಬ್ಯಾನ್‌ ಮಾಡುವಂತೆ ಬಂದ ಅರ್ಜಿ ವಿಚಾರಣೆ ಮುಂದೂಡಿದ ಕೋರ್ಟ್

  • ಸಿನಿಮಾ ಪ್ರದರ್ಶನಕ್ಕೆ ಅನುವು ಮಾಡಿಕೊಡದೆ ಬ್ಯಾನ್‌ ಮಾಡಬೇಕು, ಅಥವಾ ಚಿತ್ರದಲ್ಲಿ ಆಕ್ಷೇಪಾರ್ಹ ಡೈಲಾಗ್‌ಗಳು ಹಾಗೂ ದೃಶ್ಯಗಳನ್ನು ತೆಗೆಯಬೇಕು ಎಂದು ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತಾ ಎನ್ನುವವರು ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ, ನ್ಯಾಯಾಲಯ ಬುಧವಾರ ಅರ್ಜಿ ವಿಚಾರಣೆ ನಡೆಸಿದೆ.

ಆದಿಪುರುಷ್‌ ಬ್ಯಾನ್‌ ಮಾಡುವಂತೆ ಬಂದ ಅರ್ಜಿ ವಿಚಾರಣೆ ಮುಂದೂಡಿದ ಕೋರ್ಟ್
ಆದಿಪುರುಷ್‌ ಬ್ಯಾನ್‌ ಮಾಡುವಂತೆ ಬಂದ ಅರ್ಜಿ ವಿಚಾರಣೆ ಮುಂದೂಡಿದ ಕೋರ್ಟ್

ಜೂನ್‌ 16 ರಂದು ತೆರೆ ಕಂಡ ಓಂ ರಾವುತ್‌ ನಿರ್ದೇಶನದ 'ಆದಿಪುರುಷ್‌' ಸಿನಿಮಾ 5 ದಿನಗಳಲ್ಲಿ 395 ಕೋಟಿ ಕಲೆಕ್ಷನ್‌ ಮಾಡಿದೆ. ಸುಮಾರು 600 ಕೋಟಿ ರೂಪಾಯಿ ವೆಚ್ಚದಲ್ಲಿ ಸಿನಿಮಾ ತಯಾರಾಗಿದ್ದು, ಹಾಕಿದ ಬಂಡವಾಳವನ್ನು ಪಡೆದು ಲಾಭ ಮಾಡುವುದು ಅನುಮಾನ ಎನ್ನಲಾಗುತ್ತಿದೆ. ಚಿತ್ರವನ್ನು ಬ್ಯಾನ್‌ ಮಾಡಲು ಕೆಲವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ಸದ್ಯಕ್ಕೆ ಚಿತ್ರತಂಡಕ್ಕೆ ತಾತ್ಕಾಲಿಕವಾಗಿ ರಿಲೀಫ್‌ ಸಿಕ್ಕಿದೆ.

ಸಿನಿಮಾ ಕಥೆ ಆಗಲೀ, ಪಾತ್ರಗಳಾಗಳೀ ಯಾವುದೂ ರಾಮಾಯಣದಂತೆ ಕಾಣುತ್ತಿಲ್ಲ. ಪೌರಾಣಿಕ ಸಿನಿಮಾ ನೋಡಲು ಹಾಲಿವುಡ್‌ ಚಿತ್ರದಂತೆ ಕಾಣುತ್ತಿದೆ. ಒಂದು ಪಾತ್ರವೂ ರಾಮಾಯಣದ ಯಾವುದೇ ಪಾತ್ರಗಳಿಗೆ ಹೋಲುತ್ತಿಲ್ಲ, ಕಥೆ ಪಾತ್ರಗಳು ಎಲ್ಲವನ್ನೂ ತಿರುಚಲಾಗಿದೆ. ಈ ಸಿನಿಮಾ ಪ್ರದರ್ಶನಕ್ಕೆ ಅನುವು ಮಾಡಿಕೊಡದೆ ಬ್ಯಾನ್‌ ಮಾಡಬೇಕು, ಅಥವಾ ಚಿತ್ರದಲ್ಲಿ ಆಕ್ಷೇಪಾರ್ಹ ಡೈಲಾಗ್‌ಗಳು ಹಾಗೂ ದೃಶ್ಯಗಳನ್ನು ತೆಗೆಯಬೇಕು ಎಂದು ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತಾ ಎನ್ನುವವರು ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ, ನ್ಯಾಯಾಲಯ ಬುಧವಾರ ಅರ್ಜಿ ವಿಚಾರಣೆ ನಡೆಸಿದೆ. ಈ ಚಿತ್ರವು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ. ಆದ್ದರಿಂದ ಈ ಅರ್ಜಿಯ ವಿಚಾರಣೆಯನ್ನು ಶೀಘ್ರವಾಗಿ ನಡೆಸುವಂತೆ ಹಿಂದೂ ಸೇನೆಯ ಪರ ವಕೀಲರು ಮನವಿ ಮಾಡಿದ್ದರು.

ಆದರೆ ನ್ಯಾಯಾಲಯವು ಸದ್ಯಕ್ಕೆ ಅರ್ಜಿ ವಿಚಾರಣೆ ನಡೆಸಲು ನಿರಾಕರಿಸಿದೆ. 'ಆದಿಪುರುಷ್‌' ಸಿನಿಮಾ ಈಗಷ್ಟೇ ರಿಲೀಸ್‌ ಆಗಿದೆ. ಇಷ್ಟು ಬೇಗ ಏಕೆ, ಜೂನ್‌ 30 ರಂದು ಅರ್ಜಿ ವಿಚಾರಣೆ ಮಾಡೋಣ ಎಂದಿದೆ. ಮುಂದಿನ ಅರ್ಜಿ ವಿಚಾರಣೆಗೆ ಇನ್ನೂ 8 ದಿನಗಳ ಕಾಲ ಬಾಕಿ ಇದೆ. ಇದು ಚಿತ್ರತಂಡಕ್ಕೆ ರಿಲೀಫ್‌ ನೀಡಿದೆ. ಅಲ್ಲಿವರೆಗೂ ಸಿನಿಮಾ ಎಷ್ಟು ಲಾಭ ಮಾಡಲಿದೆ ಎಂದು ಕಾದು ನೋಡಬೇಕು.

ಆದಿಪುರುಷ್‌ ಸಿನಿಮಾ ಕುರಿತ ಮತ್ತಷ್ಟು ಸುದ್ದಿಗಳು

ವಿವಾದಕ್ಕೆ ತುಪ್ಪ ಸುರಿದ ಚಿತ್ರತಂಡ, ಹನುಮಂತ ದೇವರೇ ಅಲ್ಲ ಎಂದ ಆದಿಪುರುಷ್‌ ಚಿತ್ರದ ಸಂಭಾಷಣೆಕಾರ; ತಿರುಗಿ ಬಿದ್ದ ಭಕ್ತರು

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ 'ಆದಿಪುರುಷ್‌' ಚಿತ್ರದ ಗೀತ ರಚನೆಕಾರ ಮನೋಜ್‌ ಮುಂತಾಶಿರ್‌, ''ನನ್ನ ಪ್ರಕಾರ ಹನುಮಾನ್‌ ದೇವರೇ ಅಲ್ಲ, ಆದ ಶ್ರೀರಾಮನ ಭಕ್ತ ಮಾತ್ರ, ಆತನ ಭಕ್ತಿಗೆ ಆ ಶಕ್ತಿ ಇದ್ದಿದ್ದರಿಂದಲೇ ನಾವೆಲ್ಲರೂ ಅವನನ್ನು ಭಗವಂತನಂತೆ ಕಾಣುತ್ತಿದ್ದೇವೆ'' ಎಂದಿದ್ದಾರೆ. ಇದು ಉರಿಯುವ ಗಾಯಕ್ಕೆ ಉಪ್ಪು ಸುರಿದಂತೆ ಆಗಿದೆ. ಹನುಮಂತನ ಭಕ್ತರು ಈತನ ಹೇಳಿಕೆ ವಿರುದ್ಧ ತಿರುಗಿ ಬಿದ್ದಿದ್ದಾರೆ. ಪೂರ್ತಿ ಸ್ಟೋರಿ ಓದಲು ಈ ಲಿಂಕ್‌ ಒತ್ತಿ.

ಕನ್ನಡದ ಕುರುಕ್ಷೇತ್ರ ಚಿತ್ರವನ್ನು ಬಾಹುಬಲಿಗೆ ಹೋಲಿಸಿದ್ದ ಪ್ರಭಾಸ್‌ ಅಭಿಮಾನಿಗಳು; ಕರ್ಮ ರಿಟರ್ನ್ಸ್‌ ಎಂದ ದರ್ಶನ್‌ ಫ್ಯಾನ್ಸ್‌

ದರ್ಶನ್‌ ನಟನೆಯ 'ಕುರುಕ್ಷೇತ್ರ' ಸಿನಿಮಾ 2019ರಲ್ಲಿ ತೆರೆ ಕಂಡಿತ್ತು. ಈ ಚಿತ್ರವನ್ನು ತೆಲುಗು, ಬಾಲಿವುಡ್‌ ಜನರು ಬಾಹುಬಲಿಗೆ ಹೋಲಿಸಿದ್ದರು. 'ಬಾಹುಬಲಿ' ಚಿತ್ರದ ಮುಂದೆ ಕುರುಕ್ಷೇತ್ರ ಏನೂ ಇಲ್ಲವೆಂಬಂತೆ ಅಣಕಿಸಿದ್ದರು. ಆದರೆ ಈಗ ಅದೇ ತೆಲುಗು ನಟ, ಹಿಂದಿ ನಿರ್ದೇಶಕನ 'ಆದಿಪುರುಷ್‌' ಸಿನಿಮಾಗೆ ಇಂಥ ಪರಿಸ್ಥಿತಿ ಬಂದಿದೆ. ಇದನ್ನೇ ಅಲ್ಲವೇ ಕರ್ಮ ರಿಟರ್ನ್ಸ್‌ ಅನ್ನೋದು ಎಂದು ದರ್ಶನ್‌ ಅಭಿಮಾನಿಗಳು ತಕ್ಕ ಉತ್ತರ ಕೊಟ್ಟಿದ್ದಾರೆ. ಪೂರ್ತಿ ಸ್ಟೋರಿಗೆ ಈ ಲಿಂಕ್‌ ಒತ್ತಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ