Adipurush: ವಿವಾದಕ್ಕೆ ತುಪ್ಪ ಸುರಿದ ಚಿತ್ರತಂಡ, ಹನುಮಂತ ದೇವರೇ ಅಲ್ಲ ಎಂದ ಆದಿಪುರುಷ್ ಚಿತ್ರದ ಸಂಭಾಷಣೆಕಾರ; ತಿರುಗಿ ಬಿದ್ದ ಭಕ್ತರು
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ 'ಆದಿಪುರುಷ್' ಚಿತ್ರದ ಗೀತ ರಚನೆಕಾರ ಮನೋಜ್ ಮುಂತಾಶಿರ್, ''ನನ್ನ ಪ್ರಕಾರ ಹನುಮಾನ್ ದೇವರೇ ಅಲ್ಲ, ಆದ ಶ್ರೀರಾಮನ ಭಕ್ತ ಮಾತ್ರ, ಆತನ ಭಕ್ತಿಗೆ ಆ ಶಕ್ತಿ ಇದ್ದಿದ್ದರಿಂದಲೇ ನಾವೆಲ್ಲರೂ ಅವನನ್ನು ಭಗವಂತನಂತೆ ಕಾಣುತ್ತಿದ್ದೇವೆ'' ಎಂದಿದ್ದಾರೆ.
ಜೂನ್ 16 ರಂದು ತೆರೆ ಕಂಡ ಆದಿಪುರುಷ್ ಸಿನಿಮಾ ಒಂದಲ್ಲಾ ಒಂದು ವಿವಾದವನ್ನು ಮೇ ಮೇಲೆ ಎಳೆದುಕೊಳ್ಳುತ್ತಿದೆ. ಸಿನಿಮಾ ನಿರೀಕ್ಷಿತ ಮಟ್ಟಕ್ಕೆ ಯಶಸ್ವಿ ಆಗದೆ ಇರುವುದು ಪ್ರಭಾಸ್ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದೆ. ಇಷ್ಟಾದರೂ ಚಿತ್ರತಂಡ ಮಾತ್ರ ಒಂದಲ್ಲಾ ಒಂದು ಸಮಸ್ಯೆಯನ್ನು ತಾನಾಗೇ ಮೈ ಮೇಲೆ ಎಳೆದುಕೊಳ್ಳುತ್ತಿದೆ.
ಚಿತ್ರದ ಬಗ್ಗೆ ನೆಗೆಟಿವ್ ಕಾಮೆಂಟ್‌ಗಳನ್ನು ಡಿಲೀಟ್ ಮಾಡಲು ಸೋಷಿಯಲ್ ಮೀಡಿಯಾ ಅಡ್ಮಿನ್‌ಗಳಿಗೆ ಚಿತ್ರತಂಡ ಹಣದ ಆಮಿಷ ಒಡ್ಡುತ್ತಿದೆ ಎಂಬ ಕೋಪ ಒಂದೆಡೆ ಆದರೆ ಚಿತ್ರದ ಸಂಭಾಷಣೆಕಾರ ಮನೋಜ್ ಮುಂತಾಶಿರ್ ಹನುಮಂತ ದೇವರೇ ಅಲ್ಲ ಎಂದಿರುವುದು ಮತ್ತೆ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಹಿಂದೂಗಳು ಶ್ರೀರಾಮನನ್ನು ಹೇಗೆ ದೇವರಂತೆ ಪೂಜಿಸುತ್ತಿದ್ದೇವೋ, ಹನುಮಂತನನ್ನು ಕೂಡಾ ಅಷ್ಟೇ ಭಕ್ತಿಯಿಂದ ಪೂಜಿಸುತ್ತಿದ್ದೇವೆ. ಎಷ್ಟೋ ಜನರಿಗೆ ಬಜರಂಗಬಲಿ ಇಷ್ಟವಾದ ದೇವತೆ ಆಗಿದ್ದಾರೆ. ಈ ಸಮಯದಲ್ಲಿ ಸಂಗೀತ ನಿರ್ದೇಶಕ ಈ ರೀತಿ ಹೇಳಿಕೆ ನೀಡಿರುವುದು ಚಿತ್ರದ ಮೇಲಿನ ಬೇಸರದ ಭಾವನೆ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ 'ಆದಿಪುರುಷ್' ಚಿತ್ರದ ಗೀತ ರಚನೆಕಾರ ಮನೋಜ್ ಮುಂತಾಶಿರ್, ''ನನ್ನ ಪ್ರಕಾರ ಹನುಮಾನ್ ದೇವರೇ ಅಲ್ಲ, ಆದ ಶ್ರೀರಾಮನ ಭಕ್ತ ಮಾತ್ರ, ಆತನ ಭಕ್ತಿಗೆ ಆ ಶಕ್ತಿ ಇದ್ದಿದ್ದರಿಂದಲೇ ನಾವೆಲ್ಲರೂ ಅವನನ್ನು ಭಗವಂತನಂತೆ ಕಾಣುತ್ತಿದ್ದೇವೆ'' ಎಂದಿದ್ದಾರೆ. ಇದು ಉರಿಯುವ ಗಾಯಕ್ಕೆ ಉಪ್ಪು ಸುರಿದಂತೆ ಆಗಿದೆ. ಹನುಮಂತನ ಭಕ್ತರು ಈತನ ಹೇಳಿಕೆ ವಿರುದ್ಧ ತಿರುಗಿ ಬಿದ್ದಿದ್ದಾರೆ. ಚಿತ್ರತಂಡ ಪದೇ ಪದೆ ಭಕ್ತರ ಭಾವನೆಗೆ ಧಕ್ಕೆ ತರುತ್ತಿದೆ. ಚಿತ್ರತಂಡದವರನ್ನು ಸಂದರ್ಶನ ಮಾಡುವುದನ್ನು ನಿಲ್ಲಿಸಿ. ಆದಿಪುರುಷ್ ಚಿತ್ರವನ್ನು ಬ್ಯಾನ್ ಮಾಡಿ ಎಂದು ಮನವಿ ಮಾಡಿದ್ದಾರೆ. ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಆದಿಪುರುಷ್ ಸಿನಿಮಾ ವಿವಾದ ಹೆಚ್ಚುತ್ತಲೇ ಇದೆ.
ಕುರುಕ್ಷೇತ್ರ ಚಿತ್ರವನ್ನು ಬಾಹುಬಲಿಗೆ ಹೋಲಿಸಿದ್ದ ಪ್ರಭಾಸ್ ಅಭಿಮಾನಿಗಳು
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕುರುಕ್ಷೇತ್ರ' ಸಿನಿಮಾ 2019ರಲ್ಲಿ ತೆರೆ ಕಂಡಿತ್ತು. ಆಗ ಈ ಸಿನಿಮಾವನ್ನು ಟಾಲಿವುಡ್ ಹಾಗೂ ಬಾಲಿವುಡ್ ಜನರು ಬಾಹುಬಲಿ ಚಿತ್ರಕ್ಕೆ ಹೋಲಿಸಿದ್ದರು. 'ಬಾಹುಬಲಿ' ಚಿತ್ರದ ಮುಂದೆ ಕುರುಕ್ಷೇತ್ರ ಏನೂ ಇಲ್ಲವೆಂಬಂತೆ ಅಣಕಿಸಿದ್ದರು. ಆದರೆ ಈಗ ಅದೇ ತೆಲುಗು ನಟ ಪ್ರಭಾಸ್, ಹಿಂದಿ ನಿರ್ದೇಶಕ ಓಂ ರಾವುತ್ 'ಆದಿಪುರುಷ್' ಸಿನಿಮಾಗೆ ಎಂಥ ಪರಿಸ್ಥಿತಿ ಬಂದಿದೆ ನೋಡಿ. ಇದನ್ನೇ ಅಲ್ಲವೇ ಕರ್ಮ ರಿಟರ್ಟ್ಸ್ ಅನ್ನೋದು ಎಂದು ದರ್ಶನ್ ಅಭಿಮಾನಿಗಳು ಅಂದು ಟ್ರೋಲ್ ಮಾಡಿದ್ದವರಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ. ಆದಿಪುರುಷ್ ಚಿತ್ರಕ್ಕಿಂತ ನಮ್ಮ ಕುರುಕ್ಷೇತ್ರ ಸಿನಿಮಾ ನೂರು ಪಾಲು ಚೆನ್ನಾಗಿದೆ ಎನ್ನುತ್ತಿದ್ದಾರೆ.
ನೆಗೆಟಿವ್ ರಿವ್ಯೂ ಡಿಲೀಟ್ ಮಾಡಲು ಚಿತ್ರತಂಡದಿಂದ ಹಣದ ಆಮಿಷ ಆರೋಪ
'ಆದಿಪುರುಷ್' ಚಿತ್ರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನೆಗೆಟಿವ್ ಕಾಮೆಂಟ್ ಮಾಡುತ್ತಿರುವವರಿಗೆ ಚಿತ್ರತಂಡ ಹಣದ ಆಸೆ ತೋರಿಸಿ, ಕಾಮೆಂಟ್ ಡಿಲೀಟ್ ಮಾಡುವಂತೆ ಹೇಳುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಆದಿಪುರುಷ್ ಸಿನಿಮಾ ತಂಡ ಕಳೆದ ವರ್ಷ ಅಯೋಧ್ಯೆಯಲ್ಲಿ ಮೊದಲ ಬಾರಿಗೆ ಟೀಸರ್ ರಿಲೀಸ್ ಮಾಡಿತ್ತು. ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ಸಿನಿ ಪ್ರಿಯರು ಈ ಟೀಸರ್ ನೋಡಿ ಬೇಸರ ವ್ಯಕ್ತಪಡಿಸಿದ್ದರು. ರಾಮಾಯಣ ಕಥೆಯಲ್ಲಿ ಪಾತ್ರಧಾರಿಗಳನ್ನು ಚಿತ್ರಿಸಿರುವ ರೀತಿಗೆ ಎಲ್ಲರೂ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಆದಿಪುರುಷ್ ಟ್ರೋಲ್ ಮೀಮ್ಸ್ ಹರಿದಾಡುತ್ತಿವೆ.