ನನ್ನನ್ನು ಜಯ ಅಮಿತಾಬ್ ಬಚ್ಚನ್ ಅನ್ನಬೇಡಿ, ಜಯ ಬಚ್ಚನ್ ಅನ್ನಿ ಸಾಕು; ಪಾರ್ಲಿಮೆಂಟ್‌ನಲ್ಲಿ ಅಮಿತಾಬ್ ಬೇಡವೆಂದ ಜಯ ಬಚ್ಚನ್
Jul 30, 2024 11:27 AM IST
ಪಾರ್ಲಿಮೆಂಟ್‌ನಲ್ಲಿ ಜಯ ಬಚ್ಚನ್
- Jaya Amitabh Bachchan in parliament: ರಾಜ್ಯಸಭೆಯ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಅವರು ಜಯ ಅಮಿತಾಬ್ ಬಚ್ಚನ್ ಎಂದು ಕರೆದಾಗ ನನ್ನ ಹೆಸರನ್ನು ಹಾಗೆ ಕರೆಯಬೇಡಿ ಜಯ ಬಚ್ಚನ್ ಹೇಳಿದ್ದಾರೆ.
ಬೆಂಗಳೂರು: ನಟಿ- ರಾಜಕಾರಣಿ ಜಯ ಬಚ್ಚನ್ ಅವರು ನಿನ್ನೆ ಪಾರ್ಲಿಮೆಂಟ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯಸಭೆಯ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಅವರು ಜಯ ಅಮಿತಾಬ್ ಬಚ್ಚನ್ ಎಂದು ಕರೆದಾಗ ಆ ಮಧ್ಯದ ಹೆಸರು ಇಲ್ಲಿ ಅಗತ್ಯವಿಲ್ಲ. ನನಗೆ ನನ್ನದೇ ಆದ ಐಡೆಂಟೆಟಿ ಇದೆ ಎಂದು ಹೇಳಿದ್ದಾರೆ.
ಸೋಮವಾರ ಪಾರ್ಲಿಮೆಂಟ್ ಸೆಸನ್‌ನಲ್ಲಿ ಮಾತನಾಡಲು ಹರಿವಂಶ್ ಅವರು "ಶ್ರೀಮತಿ ಜಯ ಬಚ್ಚನ್ ಜೀ ಪ್ಲೀಸ್... " ಎಂದು ಕರೆದಾಗ ಅದಕ್ಕೆ ಜಯ ಬಚ್ಚನ್ ಹೀಗೆಂದು ಪ್ರತಿಕ್ರಿಯೆ ನೀಡಿದ್ದಾರೆ. "ಸರ್, ನನ್ನನ್ನು ಜಯ ಬಚ್ಚನ್ ಎಂದು ಕರೆದರೆ ಸಾಕು" ಎಂದರು.
“ಯೇ ಜೋ ಹೈಂ ಕುಚ್ ನಯಾ ತಾರಿಕಾ ಹೈಂ ಕಿ ಮಹಿಳಾಯೇನ್ ಅಪ್ನಿ ಪತಿ ಕೇ ನಾಮ್ ಸೇ ಜಾನಿ ಜಾಯೇ. ಉಂಕ ಕೋಇ ಆಸ್ತಿತ್ವ ನಹೀ। ಉಂಕಿ ಕೋಯಿ ಉಪಲಬ್ಧ ಹೈ ನಹೀ ಹೈ, ಅಪ್ನೇ ಮೇ ಔರ್ ಆಸ್ತಿತ್ವ ನಹೀ ಹೈ. ಯೇ ಜೋ ನಯಾ ಶುರು ಹುವಾ ಹೇ, ನಾನು… (ಹೆಂಗಸರು ತಮ್ಮ ಗಂಡನ ಹೆಸರಿನಿಂದ ಗುರುತಿಸಲ್ಪಡಬೇಕು ಎಂಬ ಹೊಸ ವಿಧಾನಗಳು ಇವೆ. ಮಹಿಳೆಯರಿಗೆ ಯಾವುದೇ ಗುರುತು ಇಲ್ಲ. ಅವರು ಯಾವುದೇ ಸಾಧನೆ ಮಾಡುವುದಿಲ್ಲ. ಅವರಿಗೆ ಸ್ವಂತ ಗುರುತಿಲ್ಲ. ಇದು ವಿಷಯ, ಇದನ್ನು ನೆನಪಿಸಿದೆ" ಎಂದು ಅವರು ಹೇಳಿದ್ದಾರೆ.
ಇವರು ನೀಡಿರುವ ಪ್ರತಿಕ್ರಿಯೆ ಅಭಿಮಾನಿಗಳಿಗೆ ಖುಷಿ ನೀಡಿದೆ. "ಧೈರ್ಯವಂತೆ" ಎಂದು ಕೆಲವರು ಕರೆದಿದ್ದಾರೆ. "ಯಾಕೆ ಅಮಿತಾಬ್ ಬಚ್ಚನ್ ಅವರ ಹೆಸರು ಈಕೆಯ ಹೆಸರಲ್ಲಿ ಸೇರಿಸಬೇಕು. ಈ ರೀತಿ ಬಹುತೇಕ ಕಡೆ ಆಗುತ್ತಿದೆ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. "ಅವರ ಮಾತಿನಲ್ಲಿ ಯಾವುದೇ ತಪ್ಪಿಲ್ಲ" ಎಂದು ಇನ್ನು ಕೆಲವರು ಕಾಮೆಂಟ್ ಮಾಡಿದ್ದಾರೆ.
"ಇಂದಿನ ಜನರು ಹೀಗ್ಯಾಕೆ ವರ್ತಿಸುತ್ತಿದ್ದಾರೆ. ಎಲ್ಲಾದರೂ ಈ ಹೇಳಿಕೆಯನ್ನು ಜಯ ಬಚ್ಚನ್ ಹೊರತುಪಡಿಸಿ ಬೇರೆ ಯಾರಾದರೂ ನೀಡಿದ್ದರೆ ಬೆಂಬಲಿಸುತ್ತಿದ್ದರು. ಆಕೆ ಬಚ್ಚನ್ ಆಗುವ ಮೊದಲು ಯಶಸ್ವಿ ನಟಿಯಾಗಿದ್ದಳು. ಈಗ ಎಲ್ಲರೂ ಆಕೆಯನ್ನು ಬಚ್ಚನ್ ಹೆಸರಲ್ಲಿಯೇ ಗುರುತಿಸುತ್ತಿದ್ದಾರೆ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ನನ್ನ ಅಜ್ಜಿ ನನ್ನ ಸ್ಪೂರ್ತಿ ಎಂದು ನವ್ಯಾ ನವೇಲಿ ನಂದಾ 2021ರಲ್ಲಿ ಒಮ್ಮೆ ಹೇಳಿದ್ದರು. "ನನಗೆ ಅಜ್ಜಿ ಎಂದರೆ ತುಂಬಾ ಇಷ್ಟ. ಕೆಲಸಕ್ಕೆ ಸಂಬಂಧಪಟ್ಟ ಅಥವಾ ವೈಯಕ್ತಿಕ ಸಲಹೆಗಳನ್ನು ಆಕೆಯಿಂದ ಪಡೆಯುವೆ. ನೇರವಾಗಿ ಯಾವುದೇ ಮುಲಾಜಿಲ್ಲದೆ ಅಭಿಪ್ರಾಯ ಹೇಳುತ್ತಾರೆ. ಆಕೆ ಭಾವೋದ್ರಿಕ್ತ ವಿಷಯಗಳಿಗೂ ಬಗ್ಗದೆ ಪ್ರತಿಕ್ರಿಯೆ ನೀಡುತ್ತಾರೆ. ಯಾವುದೇ ಫಿಲ್ಟರ್ ಇಲ್ಲದೆ ನೇರವಾಗಿ ಮಾತನಾಡುತ್ತಾರೆ" ಎಂದು ತನ್ನ ಅಜ್ಜಿಯನ್ನು ನವ್ಯ ನವೇಲಿ ನಂದಾ ಹೊಗಳಿದ್ದರು.
ಜಯ ಬಚ್ಚನ್ ಕುರಿತು
ಜಯ ಬಚ್ಚನ್ ಅವರು 1948ರ ಏಪ್ರಿಲ್ 9ರಂದು ಬಂಗಾಳಿ ಕುಟುಂಬದಲ್ಲಿ ಜನಿಸಿದರು. ಇವರು ಪುಣೆಯ ಫಿಲ್ಮ್ ಆಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಷನ್‌ನಲ್ಲಿ ಪದವಿ ಪಡೆದಿದ್ದಾರೆ. ಸತ್ಯಜಿತ್ ರೇ ಅವರ ಬಂಗಾಳಿ ಸಿನಿಮಾ ಮಹಾನಗರ್‌ನಲ್ಲಿ ತನ್ನ 15ನೇ ವಯಸ್ಸಿನಲ್ಲಿ ನಟಿಸಿದ್ದರು. ಇದಾದ ಬಳಿಕ ಗುಡಡಿ, ಉಪಹಾರ್, ಜೈ ಜವಾನ್ ಜೈ ಮಕಾನ್, ಧಾನ್ಯ ಮಹೆ, ಜಾನಿ ದಿವಾನಿ, ಬಾವರ್ಚಿ, ಪರಿಚಯ್, ಬನ್ಸಿ ಬಿರ್ಜು, ಪಿಯಾ ಕಾ ಘರ್, ಅನ್ನದಾತ, ಏಕ್ ನಜಾರ್, ಸಮಾಧಿ, ಕೋಶಿಶ್, ಶೋರ್, ಗಾಯಗ್ ಔರ್ ಗೋರಿ, ಅನಾಮಿಕ, ಪಾಗನ್, ಝಂಜೀರ್, ಅಭಿಮಾನ್, ದಿಲ್ ದಿವಾನ್, ಕೋರಾ ಕಗಾಜ್, ದೋಸ್ರಿ ಸೀತಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚಿನ ರಾಕಿ ಔರ್ ರಾಣಿ ಕ ಪ್ರೇಮ್ ಕಹಾನಿಯಲ್ಲೂ ಇವರು ನಟಿಸಿದ್ದರು.