logo
ಕನ್ನಡ ಸುದ್ದಿ  /  ಮನರಂಜನೆ  /  Rashmika Mandanna: ಮೋಸ ಮಾಡಿದ ಮ್ಯಾನೇಜರ್‌ನನ್ನು ಕೆಲಸದಿಂದ ವಜಾಗೊಳಿಸಿದ ವಿಚಾರವಾಗಿ ಸ್ಪಷ್ಟನೆ ನೀಡಿದ ರಶ್ಮಿಕಾ ಮಂದಣ್ಣ

Rashmika Mandanna: ಮೋಸ ಮಾಡಿದ ಮ್ಯಾನೇಜರ್‌ನನ್ನು ಕೆಲಸದಿಂದ ವಜಾಗೊಳಿಸಿದ ವಿಚಾರವಾಗಿ ಸ್ಪಷ್ಟನೆ ನೀಡಿದ ರಶ್ಮಿಕಾ ಮಂದಣ್ಣ

HT Kannada Desk HT Kannada

Jun 23, 2023 06:50 AM IST

google News

ರಶ್ಮಿಕಾ ಮಂದಣ್ಣ

  • ಮ್ಯಾನೇಜರ್‌ ಬಗ್ಗೆ ಹರಿದಾಡುತ್ತಿರುವ ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡುವ ಸಲುವಾಗಿ ಹರಿದಾಡುತ್ತಿರುವ ವಿಚಾರಕ್ಕೆ ಫುಲ್‌ ಸ್ಟಾರ್‌ ಇಡುವ ಕಾರಣ ಈ ಹೇಳಿಕೆ ಬಿಡುಗಡೆ ಮಾಡಲಾಗುತ್ತಿದೆ ಎಂದು ರಶ್ಮಿಕಾ ಹೆಸರಿನಲ್ಲಿ ಹೇಳಿಕೆ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌ನಲ್ಲೇ ಹೆಚ್ಚು ಬ್ಯುಸಿ ಇದ್ದಾರೆ. ಹೊಸ ಹೊಸ ಸಿನಿಮಾಗಳಲ್ಲಿ ಅವರಿಗೆ ಅವಕಾಶ ಹುಡುಕಿ ಬರುತ್ತಿವೆ. ಪ್ರತಿದಿನ ಹೈದರಾಬಾದ್‌, ಚೆನ್ನೈ, ಮುಂಬೈಗೆ ಪ್ರಯಾಣ ಮಾಡುತ್ತಿದ್ದಾರೆ. ಈ ನಡುವೆ ರಶ್ಮಿಕಾ ಮಂದಣ್ಣ ತಮ್ಮ ಮ್ಯಾನೇಜರ್‌ ಕುರಿತು ಹರಿದಾಡುತ್ತಿರುವ ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಬಹಳ ದಿನಗಳಿಂದ ರಶ್ಮಿಕಾ ಮಂದಣ್ಣ ಅವರಿಗೆ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಆಕೆಗೆ 80 ಲಕ್ಷ ರೂಪಾಯಿ ಮೋಸ ಮಾಡಿದ್ದು ಕೋಪಗೊಂಡ ರಶ್ಮಿಕಾ ಆತನನ್ನು ಕೆಲಸದಿಂದ ತೆಗೆದಿದ್ದಾರೆ ಎಂದು ಇತ್ತೀಚೆಗೆ ಸುದ್ದಿ ಆಗಿತ್ತು. ಈ ವಿಚಾರ ವೈರಲ್‌ ಆಗಿತ್ತು. ಆದರೆ ರಶ್ಮಿಕಾ ಈ ವಿಚಾರವಾಗಿ ಪ್ರತಿಕ್ರಿಯಿಸಿರಲಿಲ್ಲ. ಮ್ಯಾನೇಜರ್‌ ವಿರುದ್ಧ ಯಾವುದೇ ದೂರು ದಾಖಲಾಗಿರುವ ವಿಚಾರದ ಬಗ್ಗೆ ಕೂಡಾ ಮಾಹಿತಿ ಇರಲಿಲ್ಲ. ಇದೀಗ ರಶ್ಮಿಕಾ ಈ ಸಂಬಂಧ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.

ಕೆಲವು ದಿನಗಳಿಂದ ರಶ್ಮಿಕಾ ಮ್ಯಾನೇಜರ್‌ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ. ಆದರೆ ಇದು ಸತ್ಯಕ್ಕೆ ದೂರವಾದದ್ದು. ರಶ್ಮಿಕಾ ಅವರ ಮ್ಯಾನೇಜರ್‌ ಆಕೆ ಬಳಿ ಚರ್ಚಿಸಿ ಕೆಲಸ ಬಿಟ್ಟಿದ್ದಾರೆ. ಅದಕ್ಕೆ ಅವರದ್ದೇ ವೈಯಕ್ತಿಕ ಕಾರಣಗಳಿವೆ. ಈಗಲೂ ಇಬ್ಬರ ನಡುವೆ ಉತ್ತಮ ರಿಲೇಶನ್‌ಶಿಪ್‌ ಇದೆ. ಮ್ಯಾನೇಜರ್‌ ಬಗ್ಗೆ ಹರಿದಾಡುತ್ತಿರುವ ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡುವ ಸಲುವಾಗಿ ಹರಿದಾಡುತ್ತಿರುವ ವಿಚಾರಕ್ಕೆ ಫುಲ್‌ ಸ್ಟಾರ್‌ ಇಡುವ ಕಾರಣ ಈ ಹೇಳಿಕೆ ಬಿಡುಗಡೆ ಮಾಡಲಾಗುತ್ತಿದೆ ಎಂದು ರಶ್ಮಿಕಾ ಹೆಸರಿನಲ್ಲಿ ಹೇಳಿಕೆ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಈ ಸ್ಟೇಟ್‌ಮೆಂಟನ್ನು ರಶ್ಮಿಕಾ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳದೆ ಇರುವುದು ಮತ್ತೆ ಅನುಮಾನಕ್ಕೆ ಕಾರಣವಾಗಿದೆ.

ರಶ್ಮಿಕಾ ಸದ್ಯಕ್ಕೆ ಹಿಂದಿಯ ಅನಿಮಲ್‌, ತೆಲುಗಿನ ಪುಷ್ಪ 2 ಹಾಗೂ ರೈಂಬೋ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅನಿಮಲ್‌ ಸಿನಿಮಾ ಇತ್ತೀಚೆಗೆ ಶೂಟಿಂಗ್‌ ಮುಗಿದಿದ್ದು ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ಬ್ಯುಸಿ ಇದೆ.

ರಶ್ಮಿಕಾ ಬಿಡುಗಡೆ ಮಾಡಿದ್ದಾರೆ ಎನ್ನಲಾದ ಹೇಳಿಕೆ

ಇನ್ನಷ್ಟು ಮನರಂಜನೆ ಸುದ್ದಿಗಳು

ಆದಿಪುರುಷ್‌ ಸಿನಿಮಾ ಬ್ಯಾನ್‌ ಅರ್ಜಿ ವಿಚಾರಣೆ ಜೂನ್‌ 30ಕ್ಕೆ ಮುಂದೂಡಿಕೆ; ದೆಹಲಿ ಹೈಕೋರ್ಟ್‌ ಬುಧವಾರ ಹೇಳಿದ್ದಿಷ್ಟು

ಆದಿಪುರುಷ್‌ ಸಿನಿಮಾ ಪ್ರದರ್ಶನಕ್ಕೆ ಅನುವು ಮಾಡಿಕೊಡದೆ ಬ್ಯಾನ್‌ ಮಾಡಬೇಕು, ಅಥವಾ ಚಿತ್ರದಲ್ಲಿ ಆಕ್ಷೇಪಾರ್ಹ ಡೈಲಾಗ್‌ಗಳು ಹಾಗೂ ದೃಶ್ಯಗಳನ್ನು ತೆಗೆಯಬೇಕು ಎಂದು ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತಾ ಎನ್ನುವವರು ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ, ನ್ಯಾಯಾಲಯ ಬುಧವಾರ ಅರ್ಜಿ ವಿಚಾರಣೆ ನಡೆಸಿದೆ. ಈ ಚಿತ್ರವು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ. ಆದ್ದರಿಂದ ಈ ಅರ್ಜಿಯ ವಿಚಾರಣೆಯನ್ನು ಶೀಘ್ರವಾಗಿ ನಡೆಸುವಂತೆ ಹಿಂದೂ ಸೇನೆಯ ಪರ ವಕೀಲರು ಮನವಿ ಮಾಡಿದ್ದರು. ಪೂರ್ತಿ ಮಾಹಿತಿಗೆ ಈ ಲಿಂಕ್‌ ಒತ್ತಿ.

ಪತಿ ದಿನೇಶ್‌ ಗೋಪಾಲಸ್ವಾಮಿ ವಿರುದ್ಧ ಚೆನ್ನೈನಲ್ಲಿ ದೂರು ನೀಡಿದ ಸೂರ್ಯಕಾಂತಿ ಧಾರಾವಾಹಿ ನಟಿ ರಚಿತ ಮಹಾಲಕ್ಷ್ಮಿ

ಜೂನ್‌ 21 ರಾತ್ರಿ ರಚಿತ ಮಹಾಲಕ್ಷ್ಮಿ ಚೆನ್ನೈ ಮಂಗಾಡು ಪೊಲೀಸ್‌ ಠಾಣೆಗೆ ತೆರಳಿ ಪತಿ ದಿನೇಶ್‌ ಗೋಪಾಲಸ್ವಾಮಿ ವಿರುದ್ಧ ದೂರು ಸಲ್ಲಿಸಿದ್ದಾರೆ. ದಿನೇಶ್‌ ನನಗೆ ಅಸಭ್ಯ ಸಂದೇಶಗಳನ್ನು ಕಳಿಸುತ್ತಿದ್ದಾರೆ. ನನಗೆ ಜೀವ ಬೆದರಿಕೆ ಕೂಡಾ ಒಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ. ಕೇಸ್‌ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ರಚಿತ ಬಗ್ಗೆ ಪೂರ್ತಿ ತಿಳಿಯಲು ಈ ಲಿಂಕ್‌ ಒತ್ತಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ