Rachitha Mahalakshmi: ಪತಿ ದಿನೇಶ್‌ ಗೋಪಾಲಸ್ವಾಮಿ ವಿರುದ್ಧ ಚೆನ್ನೈನಲ್ಲಿ ದೂರು ನೀಡಿದ ಸೂರ್ಯಕಾಂತಿ ಧಾರಾವಾಹಿ ನಟಿ ರಚಿತ ಮಹಾಲಕ್ಷ್ಮಿ
ಕನ್ನಡ ಸುದ್ದಿ  /  ಮನರಂಜನೆ  /  Rachitha Mahalakshmi: ಪತಿ ದಿನೇಶ್‌ ಗೋಪಾಲಸ್ವಾಮಿ ವಿರುದ್ಧ ಚೆನ್ನೈನಲ್ಲಿ ದೂರು ನೀಡಿದ ಸೂರ್ಯಕಾಂತಿ ಧಾರಾವಾಹಿ ನಟಿ ರಚಿತ ಮಹಾಲಕ್ಷ್ಮಿ

Rachitha Mahalakshmi: ಪತಿ ದಿನೇಶ್‌ ಗೋಪಾಲಸ್ವಾಮಿ ವಿರುದ್ಧ ಚೆನ್ನೈನಲ್ಲಿ ದೂರು ನೀಡಿದ ಸೂರ್ಯಕಾಂತಿ ಧಾರಾವಾಹಿ ನಟಿ ರಚಿತ ಮಹಾಲಕ್ಷ್ಮಿ

ಜೂನ್‌ 21 ರಾತ್ರಿ ರಚಿತ ಮಹಾಲಕ್ಷ್ಮಿ ಚೆನ್ನೈ ಮಂಗಾಡು ಪೊಲೀಸ್‌ ಠಾಣೆಗೆ ತೆರಳಿ ಪತಿ ದಿನೇಶ್‌ ಗೋಪಾಲಸ್ವಾಮಿ ವಿರುದ್ಧ ದೂರು ಸಲ್ಲಿಸಿದ್ದಾರೆ. ದಿನೇಶ್‌ ನನಗೆ ಅಸಭ್ಯ ಸಂದೇಶಗಳನ್ನು ಕಳಿಸುತ್ತಿದ್ದಾರೆ. ಜೀವ ಬೆದರಿಕೆ ಕೂಡಾ ಒಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ.

ಪತಿ ವಿರುದ್ಧ ದೂರು ನೀಡಿದ ರಚಿತ ಮಹಾಲಕ್ಷ್ಮಿ
ಪತಿ ವಿರುದ್ಧ ದೂರು ನೀಡಿದ ರಚಿತ ಮಹಾಲಕ್ಷ್ಮಿ (PC: Facebook)

ಕೆಲವರ ಜೀವನದಲ್ಲಿ ಪ್ರೀತಿಸುವಾಗ ಇರುವ ಹೊಂದಾಣಿಕೆ ಮದುವೆ ನಂತರ ಇರುವುದಿಲ್ಲ. ಸೆಲೆಬ್ರಿಟಿಗಳ ಜೀವನ ಕೂಡಾ ಇದಕ್ಕೆ ಹೊರತಾಗಿಲ್ಲ. ಪ್ರೀತಿಸಿ ಮದುವೆ ಆದ್ರೂ ಎಷ್ಟೋ ಜೋಡಿ ವಿಚ್ಚೇದನ ಪಡೆದಿವೆ. ತಮಿಳು ಕಿರುತೆರೆಯಲ್ಲಿ ಸೆಟಲ್‌ ಆಗಿರುವ ಬೆಂಗಳೂರಿನ ರಚಿತ ಮಹಾಲಕ್ಷ್ಮಿ ವೈಯಕ್ತಿಕ ಜೀವನದಲ್ಲಿ ಕೂಡಾ ಇದೇ ಸಮಸ್ಯೆ ಎದುರಾಗಿದೆ.

ಬೆಂಗಳೂರು ಹುಡುಗಿ ರಚಿತ ಮಹಾಲಕ್ಷ್ಮಿ

ಕೆಲವು ದಿನಗಳಿಂದ ಪತಿಯಿಂದ ದೂರ ವಾಸಿಸುತ್ತಿದ್ದ ರಚಿತ ಮಹಾಲಕ್ಷ್ಮಿ ಈಗ ಪತಿ ದಿನೇಶ್‌ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ರಚಿತ ಮಹಾಲಕ್ಷ್ಮಿ ಕೆರಿಯರ್‌ ಆರಂಭಿಸಿದ್ದು ಕನ್ನಡ ಕಿರುತೆರೆ ಮೂಲಕ. ಕನ್ನಡದಲ್ಲಿ ನಟಿಸಿದ್ದು ಕೆಲವೇ ಕೆಲವು ಧಾರಾವಾಹಿ ಹಾಗೂ ಸಿನಿಮಾಗಳು. ಅಷ್ಟರಲ್ಲಿ ಅವರಿಗೆ ತಮಿಳಿನಲ್ಲಿ ಉತ್ತಮ ಅವಕಾಶ ದೊರೆತ ಕಾರಣ ಚೆನ್ನೈಗೆ ಹೋದರು. ಅಲ್ಲಿ ಸಹನಟ ದಿನೇಶ್‌ ಗೋಪಾಲಸ್ವಾಮಿ ಅವರನ್ನು ಪ್ರೀತಿಸಿ ಮದುವೆಯಾದರು. ಆದರೆ ಈ ದಂಪತಿ ಈಗ ಬೇರೆ ಬೇರೆ ವಾಸಿಸುತ್ತಿದ್ದಾರೆ.

ತಮಿಳು ಧಾರಾವಾಹಿ ಸಹನಟನನ್ನು ಪ್ರೀತಿಸಿ ಮದುವೆ ಆಗಿದ್ದ ನಟಿ

ಕನ್ನಡದಲ್ಲಿ 'ಮೇಘ ಮಂದಾರ' ಧಾರಾವಾಹಿ ಮೂಲಕ ರಚಿತ ಮಹಾಲಕ್ಷ್ಮಿ ಆಕ್ಟಿಂಗ್‌ ಕರಿಯರ್‌ ಆರಂಭಿಸಿದರು. ಗೀತಾಂಜಲಿ, ಸೂರ್ಯಕಾಂತಿ, ಸುಪ್ರಭಾತ, ಸವಿಗನಸು ಸೇರಿ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 2011 ರಲ್ಲಿ ವಿಜಯ್‌ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಪಿರಿವೊಮ್‌ ಸಂದಿಪೊಮ್‌' ಧಾರಾವಾಹಿ ಮೂಲಕ ತಮಿಳಿಗೆ ಬಂದರು. 2013 ರಲ್ಲಿ ಮದುವೆ ಆದರು. ಈ ದಂಪತಿಗೆ ಮಕ್ಕಳು ಇಲ್ಲ. ಇತ್ತೀಚೆಗೆ ರಚಿತ ತಮಿಳು ಬಿಗ್‌ ಬಾಸ್‌ ಸೀಸನ್‌ 6ರಲ್ಲಿ ಕೂಡಾ ಸ್ಪರ್ಧಿಯಾಗಿ ಭಾಗವಹಿಸಿದ್ದರು.

ಜೂನ್‌ 21 ರಾತ್ರಿ ಚೆನ್ನೈ ಪೊಲೀಸ್‌ ಠಾಣೆಯಲ್ಲಿ ದೂರು

ಜೂನ್‌ 21 ರಾತ್ರಿ ರಚಿತ ಮಹಾಲಕ್ಷ್ಮಿ ಚೆನ್ನೈ ಮಂಗಾಡು ಪೊಲೀಸ್‌ ಠಾಣೆಗೆ ತೆರಳಿ ಪತಿ ದಿನೇಶ್‌ ಗೋಪಾಲಸ್ವಾಮಿ ವಿರುದ್ಧ ದೂರು ಸಲ್ಲಿಸಿದ್ದಾರೆ. ದಿನೇಶ್‌ ನನಗೆ ಅಸಭ್ಯ ಸಂದೇಶಗಳನ್ನು ಕಳಿಸುತ್ತಿದ್ದಾರೆ. ನನಗೆ ಜೀವ ಬೆದರಿಕೆ ಕೂಡಾ ಒಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ. ಕೇಸ್‌ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ರಚಿತ ಸ್ನೇಹಿತೆ, ಡಬ್ಬಿಂಗ್‌ ಕಲಾವಿದೆ ಜೀಜಿ ಕೂಡಾ ದಿನೇಶ್‌ ವಿರುದ್ಧ ದೂರು ದಾಖಲಿಸಿದ್ದಾರೆ. ಆಕೆ ಸಲಹೆ ನೀಡಿದ್ದರಿಂದಲೇ ಪತ್ನಿ ನನ್ನಿಂದ ದೂರಾದಳು ಎಂದು ದಿನೇಶ್‌ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿರುವುದಾಗಿ ಜೀಜಿ ದೂರು ನೀಡಿದ್ದಾರೆ.

ಹೆಣ್ಣು ಮಗುವನ್ನು ದತ್ತು ಪಡೆಯಲು ನಿರ್ಧರಿಸಿದ್ದ ನಟಿ

ನಾವು ಡಿವೋರ್ಸ್‌ ಪಡೆದಿಲ್ಲ, ಪುಟ್ಟ ಮನಸ್ತಾಪ ಇದೆ, ಶೀಘ್ರದಲ್ಲೇ ಎಲ್ಲವೂ ಸರಿ ಆಗಲಿದೆ ಎಂದು ದಿನೇಶ್‌ ಗೋಪಾಲಸ್ವಾಮಿ ಕೆಲವು ದಿನಗಳ ಹಿಂದೆ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಆದರೆ ಪರಿಸ್ಥಿತಿ ಕೈ ಮೀರಿದೆ. ಇಬ್ಬರೂ ಮತ್ತೆ ಒಂದಾಗುವ ಸಾಧ್ಯತೆ ತೀರಾ ಕಡಿಮೆ ಎಂದು ಕಾಲಿವುಡ್‌ ಮಾತನಾಡುತ್ತಿದೆ. ನನಗೆ ಮಗುವೊಂದನ್ನು ದತ್ತು ಪಡೆಯುವ ಆಸೆ, ಆದರೆ ಅದಕ್ಕೆ ಆರ್ಥಿಕವಾಗಿ ಇನ್ನೂ ಫಿಟ್‌ ಆಗಬೇಕು ಎಂದು ರಚಿತ ಮಹಾಲಕ್ಷ್ಮಿ ಬಿಗ್‌ ಬಾಸ್‌ನಲ್ಲಿ ಹೇಳಿಕೊಂಡಿದ್ದರು.

Whats_app_banner