Adipurush Part 2: ಬರಲಿದ್ಯಾ ಆದಿಪುರುಷ್ 2: ಓಂ ರಾವುತ್ ಪ್ಲ್ಯಾನ್ ಏನಿತ್ತು, ನಿರ್ದೇಶಕರಿಗೆ ಪ್ರಭಾಸ್ ಹೇಳಿದ್ದೇನು,ಇಲ್ಲಿದೆ ಡೀಟೆಲ್ಸ್
Jun 23, 2023 02:24 PM IST
ಆದಿಪುರುಷ್ ಸೀಕ್ವೆಲ್‌ಗೆ ಪ್ಲಾನ್ ಮಾಡಿದ್ದ ನಿರ್ದೇಶಕ ಓಂ ರಾವುತ್
- ಆದಿಪುರುಷ್ ರಾಮಾಯಣ ಆಧರಿಸಿದ ಚಿತ್ರ. ರಾಮಾಯಣದ ಕಥೆಯನ್ನು ಒಂದೇ ಸೀಕ್ವೆಲ್‌ನಲ್ಲಿ ಹೇಳಲು ಸಾಧ್ಯವಿಲ್ಲ. ಆದ್ದರಿಂದ ಓಂ ರಾವುತ್ ಈ ಸಿನಿಮಾವನ್ನು 2 ಭಾಗಗಳಾಗಿ ತೆರೆಗೆ ತರಲು ಪ್ಲಾನ್ ಮಾಡಿ ಎಲ್ಲಾ ತಂತ್ರಜ್ಞರನ್ನು ಒಪ್ಪಿಸಿದ್ದರಂತೆ.
'ಆದಿಪುರುಷ್' ಸೃಷ್ಟಿಸಿದ ಅವಾಂತರಗಳು ಒಂದಲ್ಲಾ ಎರಡಲ್ಲ. ರಾಮಾಯಣ ಚಿತ್ರವನ್ನು ವಿಭಿನ್ನವಾಗಿ ತೋರಿಸಲು ಹೊಗಿ ವಿಚಿತ್ರವಾಗಿದೆ ಎಂದು ಜನರು ಚಿತ್ರದ ಬಗ್ಗೆ ನೆಗೆಟಿವ್ ಮಾತುಗಳನ್ನಾಡುತ್ತಿದ್ದಾರೆ. ಪ್ರಭಾಸ್ ಸಿನಿಮಾಗಳನ್ನು ನೋಡಲು ಜನರು ಮುಗಿಬೀಳುತ್ತಾರೆ. ಆದರೆ ಟಿಕೆಟ್ ಬೆಲೆ ಕಡಿಮೆ ಇದ್ರೂ ಜನರು ಚಿತ್ರಮಂದಿರದತ್ತ ಬರುತ್ತಿಲ್ಲ.
ಇದನ್ನೂ ಓದಿ: ಪ್ಲಾಸ್ಟಿಕ್ ಸರ್ಜರಿ ಮೂಲಕ ಇಡೀ ದೇಹವನ್ನು ಬದಲಿಸಿಕೊಂಡಿದ್ದಾರೆ ಎಂದವರಿಗೆ ಹನ್ಸಿಕಾ ಮೋಟ್ವಾನಿ ನೀಡಿದ ಬಿಂದಾಸ್ ಉತ್ತರ ಇದು
ಇದೆಲ್ಲದರ ನಡುವೆ ಸಿನಿಮಾವನ್ನು ಬ್ಯಾನ್ ಮಾಡುವಂತೆ ವಿವಿಧ ಸಂಘಟನೆಗಳು, ಒತ್ತಾಯ ಮಾಡುತ್ತಿವೆ. ಅಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಸಿಯೇಷನ್ ಕೂಡಾ ಇತ್ತೀಚೆಗೆ ಪ್ರಧಾನಿ ಮೋದಿಗೆ ಪತ್ರ ಬರೆದು ಸಿನಿಮಾವನ್ನು ಬ್ಯಾನ್ ಮಾಡುವಂತೆ ಮನವಿ ಮಾಡಿದ್ದರು. ಸಿನಿಮಾ ದೃಶ್ಯಗಳ ವಿಡಿಯೋ, ಫೋಟೋಗಳನ್ನು ಬಳಸಿ ಫನ್ನಿ ಮೀಮ್ಸ್ ಮಾಡಲಾದ ವೈರಲ್ ಆಗುತ್ತಿದೆ. ಇದೆಲ್ಲರ ನಡುವೆ ಆದಿಪುರುಷ್ 2 ಕೂಡಾ ಬರ್ತಿದೆ ಅನ್ನೋ ಗುಸು ಗುಸು ಕೇಳಿ ಬರ್ತಿದೆ. ಇದು ಪ್ರಭಾಸ್ ಅಭಿಮಾನಿಗಳಿಗೆ ಖುಷಿ ನೀಡಿದರೂ, ಬೇರೆಯವರಿಗೆ ಶಾಕ್ ಆಗಿದೆ. ಮೊದಲ ಸಿನಿಮಾ ಸೃಷ್ಟಿಸಿದ ಅವಾಂತರಗಳು ಇಷ್ಟು, ಇನ್ನು ಸೀಕ್ವೆಲ್ ಯಾವ ರೀತಿ ಇರುತ್ತೋ ಎಂದು ಯೋಚಿಸುತ್ತಿದ್ದಾರೆ.
ಮೋಸ ಮಾಡಿದ ಮ್ಯಾನೇಜರ್‌ನನ್ನು ಕೆಲಸದಿಂದ ವಜಾಗೊಳಿಸಿದ ವಿಚಾರವಾಗಿ ಸ್ಪಷ್ಟನೆ ನೀಡಿದ ರಶ್ಮಿಕಾ ಮಂದಣ್ಣ
ಆದರೆ ವಿಷಯವೇ ಬೇರೆ. ಆದಿಪುರುಷ್ ರಾಮಾಯಣ ಆಧರಿಸಿದ ಚಿತ್ರ. ರಾಮಾಯಣದ ಕಥೆಯನ್ನು ಒಂದೇ ಸೀಕ್ವೆಲ್‌ನಲ್ಲಿ ಹೇಳಲು ಸಾಧ್ಯವಿಲ್ಲ. ಆದ್ದರಿಂದ ಓಂ ರಾವುತ್ ಈ ಸಿನಿಮಾವನ್ನು 2 ಭಾಗಗಳಾಗಿ ತೆರೆಗೆ ತರಲು ಪ್ಲಾನ್ ಮಾಡಿ ಎಲ್ಲಾ ತಂತ್ರಜ್ಞರನ್ನು ಒಪ್ಪಿಸಿದ್ದರಂತೆ. ಪ್ರಭಾಸ್‌ಗೆ ಕೂಡಾ ಕಾಲ್‌ಶೀಟ್ ಕೇಳಿದ್ದರಂತೆ. ಆದರೆ ಪ್ರಭಾಸ್, ಸೀಕ್ವೆಲ್‌ಗೆ ಒಪ್ಪಲಿಲ್ಲ ಎಂಬ ಸುದ್ದಿ ಈಗ ಬೆಳಕಿಗೆ ಬಂದಿದೆ. ಒಂದು ವೇಳೆ ಪ್ರಭಾಸ್ ಒಪ್ಪಿದ್ದರೆ ನಿಜಕ್ಕೂ ಸಿನಿಮಾಗೆ ಭಾರೀ ಲಾಸ್ ಆಗುತ್ತಿತ್ತು. ಜೊತೆಗೆ ದೇಶದಲ್ಲಿ ಇದೇ ವಿಚಾರವಾಗಿ ಮತ್ತಷ್ಟು ವಿರೋಧ ವ್ಯಕ್ತವಾಗುತ್ತಿತ್ತು ಎಂದು ಸಿನಿಪ್ರಿಯರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಪತಿ ದಿನೇಶ್ ಗೋಪಾಲಸ್ವಾಮಿ ವಿರುದ್ಧ ಚೆನ್ನೈನಲ್ಲಿ ದೂರು ನೀಡಿದ ಸೂರ್ಯಕಾಂತಿ ಧಾರಾವಾಹಿ ನಟಿ ರಚಿತ ಮಹಾಲಕ್ಷ್ಮಿ
400 ಕೋಟಿ ಕ್ಲಬ್ ಸೇರಿದ ಆದಿಪುರುಷ್
ಇಷ್ಟು ನೀರಸ ಪ್ರತಿಕ್ರಿಯೆ ಇರುವ ಸಿನಿಮಾ ಎಷ್ಟು ಲಾಭ ಮಾಡಿದೆ ಎಂದು ಲೆಕ್ಕಾಚಾರ ಮಾಡುತ್ತಿದ್ದಾರೆ. ಆದರೆ ಸಿನಿಮಾ ಇನ್ನೂ ಹಾಕಿದ ಬಂಡವಾಳ ಪಡೆದಿದೆಯೋ ಇಲ್ಲವೋ ಯಾರಿಗೂ ಗೊತ್ತಿಲ್ಲ. ಸಿನಿಮಾ ಭಾರೀ ಕಲೆಕ್ಷನ್ ಮಾಡಿದೆ ಎಂದು ಕೆಲವರು ಹೇಳಿದರೂ ಇನ್ನೂ ಕೆಲವರು ಇಲ್ಲ, ಇದು ಚಿತ್ರತಂಡ ಹೇಳುತ್ತಿರುವ ಸುಳ್ಳು ಎನ್ನುತ್ತಿದ್ದಾರೆ. ಮಾಹಿತಿಗಳು ಪ್ರಕಾರ ಇದುವರೆಗೂ ಸಿನಿಮಾ ವಿಶ್ವಾದ್ಯಂತ ಕಲೆಕ್ಷನ್ ಮಾಡಿರುವುದು 400 ಕೋಟಿ ರೂಪಾಯಿ ಮಾತ್ರ. ಜೊತೆಗೆ ವಿತರಣೆ , ಸ್ಯಾಟಲೈಟ್ ಹಕ್ಕು ಸೇರಿ 100 ಕೋಟಿ ಆಗಲೇ ದೊರೆತಿದೆ. ಆದರೆ ಸಿನಿಮಾಗೆ 600 ಕೋಟಿ ರೂಪಾಯಿ ಖರ್ಚಾಗಿದ್ದು ಮುಂದಿನ ದಿನಗಳಲ್ಲಿ ಎಷ್ಟು ಲಾಭ ಮಾಡಲಿದೆ ಕಾದು ನೋಡಬೇಕು.