logo
ಕನ್ನಡ ಸುದ್ದಿ  /  ಮನರಂಜನೆ  /  ಗ್ಯಾಂಗ್‌ಸ್ಟಾರ್‌ ಲಾರೆನ್ಸ್ ಬಿಷ್ಣೋಯ್‌ಗೆ ಮಾತುಕತೆಯ ಆಹ್ವಾನ ನೀಡಿದ ಸಲ್ಮಾನ್‌ ಖಾನ್‌ ಮಾಜಿ ಪ್ರೇಯಸಿ ಸೋಮಿ ಅಲಿ

ಗ್ಯಾಂಗ್‌ಸ್ಟಾರ್‌ ಲಾರೆನ್ಸ್ ಬಿಷ್ಣೋಯ್‌ಗೆ ಮಾತುಕತೆಯ ಆಹ್ವಾನ ನೀಡಿದ ಸಲ್ಮಾನ್‌ ಖಾನ್‌ ಮಾಜಿ ಪ್ರೇಯಸಿ ಸೋಮಿ ಅಲಿ

Praveen Chandra B HT Kannada

Oct 17, 2024 11:33 AM IST

google News

ಲಾರೆನ್ಸ್ ಬಿಷ್ಣೋಯ್‌ಗೆ ಮಾತುಕತೆಯ ಆಹ್ವಾನ ನೀಡಿದ ಸಲ್ಮಾನ್‌ ಖಾನ್‌ ಮಾಜಿ ಪ್ರೇಯಸಿ ಸೋಮಿ ಅಲಿ

    • ಸಲ್ಮಾನ್‌ ಖಾನ್‌ನ ಮಾಜಿ ಪ್ರೇಯಸಿ ನಟಿ ಸೋಮಿ ಆಲಿ ಅವರು ಲಾರೆನ್ಸ್ ಬಿಷ್ಣೋಯ್‌ಗೆ ಸೂಪರ್‌ಸ್ಟಾರ್‌ನ ಹಿಂದಿನ ಕೃತ್ಯಗಳನ್ನು ಕ್ಷಮಿಸುವಂತೆ ಕೇಳಿಕೊಂಡಿದ್ದಾರೆ. ಬನ್ನಿ ಈ ಕುರಿತು ಝೂಮ್‌ ಕಾಲ್‌ನಲ್ಲಿ ಮಾತನಾಡೋಣ ಎಂದಿದ್ದಾರೆ.
 ಲಾರೆನ್ಸ್ ಬಿಷ್ಣೋಯ್‌ಗೆ ಮಾತುಕತೆಯ ಆಹ್ವಾನ ನೀಡಿದ ಸಲ್ಮಾನ್‌ ಖಾನ್‌ ಮಾಜಿ ಪ್ರೇಯಸಿ ಸೋಮಿ ಅಲಿ
ಲಾರೆನ್ಸ್ ಬಿಷ್ಣೋಯ್‌ಗೆ ಮಾತುಕತೆಯ ಆಹ್ವಾನ ನೀಡಿದ ಸಲ್ಮಾನ್‌ ಖಾನ್‌ ಮಾಜಿ ಪ್ರೇಯಸಿ ಸೋಮಿ ಅಲಿ

ಸಲ್ಮಾನ್‌ ಖಾನ್‌ನ ಮಾಜಿ ಪ್ರೇಯಸಿ ಸೋಮಿ ಅಲಿ ಗ್ಯಾಂಗ್‌ಸ್ಟಾರ್‌ ಲಾರೇನ್ಸ್‌ ಬಿಷ್ಣೋಯ್‌ನನ್ನು ಝೂಮ್‌ ಕಾಲ್‌ ಮೂಲಕ ಮಾತುಕತೆಗೆ ಆಹ್ವಾನಿಸಿದ್ದರೆ. ನಟಿಯಾಗಿದ್ದ ಸೋಮಿ ಬಳಿಕ ಮಹಿಳಾ ಹಕ್ಕುಗಳ ಹೋರಾಟಗಾರ್ತಿಯಾಗಿ ಬದಲಾಗಿದ್ದರು. ಸದ್ಯ ಅಮೆರಿಕದಲ್ಲಿರುವ ಈಕೆ ಸೋಷಿಯಲ್‌ ಮೀಡಿಯಾದಲ್ಲಿ ಲಾರೆನ್ಸ್‌ನನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ. ಲಾರೆನ್ಸ್‌ ಈಗ ಸಬರ್‌ಮತಿ ಸೆಂಟ್ರಲ್‌ ಜೈಲಿನಲ್ಲಿದ್ದಾನೆ.

ಲಾರೆನ್ಸ್‌ಗೆ ನೇರ ಸಂದೇಶ ಕಳುಹಿಸಿದ ಸೋಮಿ

ಇತ್ತೀಚೆಗೆ ಸೋಮಿ ತನ್ನ ಇನ್‌ಸ್ಟಾಗ್ರಾಂ ಮೂಲಕ ಲಾರೆನ್ಸ್‌ಗೆ ನೇರ ಸಂದೇಶ ಕಳುಹಿಸಿದ್ದಾರೆ. ಲಾರೆನ್ಸ್‌ ಫೋಟೋ ಜತೆ ಹೀಗೆ ಬರೆದಿದ್ದಾರೆ. "ಇದು ಲಾರೆನ್ಸ್‌ ಬಿಷ್ಣೋಯ್‌ಗೆ ನೇರ ಸಂದೇಶ: ನಮಸ್ಕಾರಗಳು, ಲಾರೆನ್ಸ್ ಸಹೋದರ. ನೀವು ಜೈಲಿನಿಂದಲೂ ಜೂಮ್ ಕರೆಗಳನ್ನು ಮಾಡುತ್ತೀರಿ ಎಂದು ನಾನು ಕೇಳಿದ್ದೇನೆ ಮತ್ತು ನೋಡಿದ್ದೇನೆ. ಹಾಗಾಗಿ ನಾನು ನಿಮ್ಮೊಂದಿಗೆ ಕೆಲವು ವಿಷಯಗಳನ್ನು ಚರ್ಚಿಸಲು ಬಯಸುತ್ತೇನೆ. ದಯವಿಟ್ಟು ಅದನ್ನು ಹೇಗೆ ಮಾಡಬಹುದು ಎಂದು ಹೇಳಿ. ರಾಜಸ್ಥಾನವು ಜಗತ್ತಿನಲ್ಲೇ ನನ್ನ ಅತ್ಯಂತ ನೆಚ್ಚಿನ ಸ್ಥಳವಾಗಿದೆ. ನಾನು ಪ್ರಾರ್ಥನೆಗಾಗಿ ನಿಮ್ಮ ದೇಗುಲಕ್ಕೆ ಬರಲು ಬಯಸುವೆ. ಆದರೆ, ಅದಕ್ಕಿಂತ ಮೊದಲು ಝೂಮ್‌ ಕಾಲ್‌ನಲ್ಲಿ ಮಾತನಾಡಲು ಬಯಸುವೆ. ಖಂಡಿತಾ ನನ್ನನ್ನು ನಂಬಿ, ಈ ಚಾಟ್‌ ನಿನ್ನ ಒಳಿತಿಗಾಗಿಯೂ ಆಗಿದೆ. ನಿಮ್ಮ ಮೊಬೈಲ್‌ ಸಂಖ್ಯೆ ನೀಡಿ. ನಾನು ಕೃತಜ್ಞಳಾಗಿರುವೆ. ಧನ್ಯವಾದ" ಎಂದು ಸೋಮಿ ಸಂದೇಶ ಕಳುಹಿಸಿದ್ದಾರೆ.

ಬಿಷ್ಣೋಯ್‌ ಸಮುದಾಯಕ್ಕೂ ಮನವಿ

ಸೋಮಿ ಅಲಿ ಮತ್ತು ಸಲ್ಮಾನ್‌ ಖಾನ್‌ 1999ರಲ್ಲಿ ಸಂಬಂಧ ಕಡಿದುಕೊಂಡಿದ್ದರು. ಬಳಿಕ ಈಕೆ ಮುಂಬೈನಿಂದ ಅಮೆರಿಕಕ್ಕೆ ಶಿಫ್ಟ್‌ ಆಗಿದ್ದರು. ಸಂಬಂಧ ಹಾಳಾಗಿದ್ದರೂ, ಬ್ರೇಕಪ್‌ ಆಗಿದ್ದರೂ ಇವರು ಸಲ್ಮಾನ್‌ ಖಾನ್‌ನನ್ನು ಹಲವು ಬಾರಿ ಸಮರ್ಥಿಸಿಕೊಂಡಿದ್ದರು. ಇದೇ ಮೇ ತಿಂಗಳಿನಲ್ಲಿ ಸೋಮಿ ಹಿಂದೂಸ್ತಾನ್‌ ಟೈಮ್ಸ್‌ಗೆ ಸಂದರ್ಶನ ನೀಡಿದಾಗ ಹೀಗೆ ಹೇಳಿದ್ದರು. "ನೀವು ಯಾರನ್ನಾದರೂ ಕೊಲ್ಲಲು ಪ್ರಯತ್ನಿಸುತ್ತಿದ್ದರೆ, ಗುಂಡು ಹಾರಿಸಿದರೆ ನೀವು ಮೇರೆ ಮೀರಿದ್ದೀರಿ ಎಂದು ಅರ್ಥ. ನಾನು ಬೇಟೆಯನ್ನು ಕ್ರೀಡೆಯಾಗಿ ಒಪ್ಪಲಾರೆ. ಆದರೆ, ಈ ಘಟನೆ ನಡೆದು ಹೋಗಿದೆ. 1998ರಲ್ಲಿ ಸಲ್ಮಾನ್‌ ಚಿಕ್ಕವನಾಗಿದ್ದ. ನಾನು ಬಿಷ್ಣೋಯ್‌ ಸಮುದಾಯದ ಮುಖ್ಯಸ್ಥರನ್ನು ಸಲ್ಮಾನ್‌ಖಾನ್‌ರನ್ನು ಕ್ಷಮಿಸುವಂತೆ ವಿನಂತಿಸಿಕೊಳ್ಳುತ್ತೇನೆ. ಅವನು ತಪ್ಪು ಮಾಡಿದ್ದರೆ ಅವನ ಪರವಾಗಿ ನಾನು ಕ್ಷಮೆ ಯಾಚಿಸುತ್ತೇನೆ" ಎಂದು ಹೇಳಿದ್ದರು.

"ಯಾರೊಬ್ಬರನ್ನೂ ಕೊಲ್ಲುವುದು ಸರಿಯಲ್ಲ. ಅದು ಸಲ್ಮಾನ್‌ ಖಾನ್‌ ಆಗಿರಲಿ, ಸಾಮಾನ್ಯ ವ್ಯಕ್ತಿಯಾಗಿರಲಿ. ನ್ಯಾಯ ಬೇಕಾದರೆ ನ್ಯಾಯಾಲಯದ ಮೊರೆ ಹೋಗಬೇಕು. ನನಗೆ ಅಮೆರಿಕದಂತೆ ಭಾರತದ ನ್ಯಾಯಾಂಗ ವ್ಯವಸ್ಥೆ ಮತ್ತು ವಕೀಲರ ಮೇಲೆ ಸಂಪೂರ್ಣ ನಂಬಿಕೆ ಇದೆ. ಸಲ್ಮಾನ್‌ ಖಾನ್‌ಗೆ ಹಾನಿ ಮಾಡುವುದರಿಂದ ಮೃತಪಟ್ಟ ಕೃಷ್ಣ ಮೃಗ ಮರಳಿ ಬರುವುದಿಲ್ಲ. ದಯವಿಟ್ಟು ಕ್ಷಮಿಸಿ. ಆಗಿರುವುದು ಆಗಿದೆ, ಎಂದು ಬಿಷ್ಣೋಯ್‌ ಸಮುದಾಯಕ್ಕೆ ನಾನು ಮನವಿ ಮಾಡಲು ಬಯಸುವೆ" ಎಂದು ಅವರು ಹೇಳಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ